ಮೆಸೊ ಅಮೆರಿಕಾದ ಮಯಾ ಲಿಪಿ:ಅಪ್ಪಾಜಿರಾಯರ ಸರಣಿ | ||||
ಎಚ್. ಶೇಷಗಿರಿರಾವ್ | ||||
ಇತ್ತೀಚೆಗೆ ಸ್ಯಾನ್‌ಬಾರ್ಟ ಲೂ ನಲ್ಲಿ ಉತ್ಖನನದಿಂದ ನಾಜೂಕಾದ ಮ್ಯೂರಲ್‌ಗಳು ದೊರೆತಿವೆ. ಅವುಗಳಿಗೆ ಸಂಬಂಧಿಸಿದ ಬರಹಗಳು ಸುಮಾರು ಕ್ರಿ. ಪೂ. ೧೦೦ ಇಸ್ವಿಯವು. ಅದೂ ಅಲ್ಲದೆ ಇನ್ನೊಂದು ಪ್ರದೇಶದಲ್ಲಿ ಕ್ರಿಪೂ. ೩೦೦ ರಲ್ಲಿ ದೊರೆತಿವೆ. ಅದೇ ನಿಖರವಾದ ಅತಿ ಹಳೆಯ ಮೆಸೊ ಅಮೇರಿಕಾದಲ್ಲಿ ದೊರೆತ ಮಯಾ ಲಿಪಿ..ಆದರೆ ಅವುಗಳನ್ನು ಪೂರ್ಣ ಓದಲಾಗಿರಲಿಲ್ಲ. ಇತ್ತೀಚಿನ ಕೆಲವು ಪ್ರಮುಖ ಶೋಧಗಳಿಂದ ಪರಿಸ್ಥಿತಿ ಪೂರ್ಣ ಬದಲಾಯಿತು.ಹಲವು ಮ್ಯೂರಲ್ ವರ್ಣ ಚಿತ್ರಗಳು ಮತ್ತು ಕೆಲವು ಲಿಪಿಗಳು ದೊರೆತವು. ಅವು ಚಿತ್ರಗಳಿಗೆ ಸಂಬಂಧಿಸಿದವು. ಶತಮಾನಗಳವರಗೆ ನಿಗೂಢವಾಗಿದ್ದ ಮಯಾ ಲಿಪಿಯು ಇತ್ತೀಚೆಗೆ ವೈಜ್ಞಾನಿಕ ಬೆಳವಣಿಗೆಯಿಂದ ಅರ್ಥೈಸುವಿಕೆಯ ಹಂತ ತಲುಪಿದೆ. ಇದರಿಂದ ಮಯಾ ಲಿಪಿಯ ಸಂರಚನೆಯ ಬಗ್ಗೆ ಮಾಹಿತಿ ದೊರತಿರುವುದಲ್ಲದೇ ಸಾಮಾಜಿಕ, ರಾಜಕೀಯ, ಕಲಾತ್ಮಕ ಮತ್ತು ಐತಿಹಾಸಿಕ ಮಜಲುಗಳ ಮೇಲೆ ಬೆಳಕು ಚೆಲ್ಲಿದೆ. ಮಯಾನರ ಚಿತ್ರ ಲಿಪಿಯು ಪ್ರಪಂಚದಲ್ಲೇ ಅತ್ಯಂತ ಎದ್ದು ಕಾಣುವ ಮತ್ತು ಸಂಕೀರ್ಣ ಲಿಪಿ. ನೂರಾರು ಮಾನವ, ಪ್ರಾಣಿಗಳ ಮಾನವಾತೀತ ಮತ್ತು ಅಸ್ಪಷ್ಟವಾದ ಅನನ್ಯ ಸಂಕೇತ ಮತ್ತು ಚಿತ್ರಲಿಪಿಗಳನ್ನುಹೊಂದಿದೆ.ಇವು ಚಿತ್ರಲಿಪಿಗಳು ಅಥವ ಭಾವಲಿಪಿಗಳೂ ಆಗಿವೆ. ಅದರಿಂದ ಪದ, ಪದ ಸಮೂಹ ಮತ್ತು ವಾಕ್ಯಗಳನ್ನು ಪ್ರತಿನಿಧಿಸಬಹುದು. ಅವರು ಅಂದುಕೊಂಡದ್ದನ್ನೆಲ್ಲಾ ಬರಹ ರೂಪದಲ್ಲಿ ಇಳಿಸಲು ಶಕ್ತರಾಗಿದ್ದರು. ಮಯಾ ನಾಗರೀಕತೆಯು ಕ್ರಿ. ಪೂ. ೨೫೦ ರಲ್ಲಿ ಪ್ರಾರಂಭವಾಯಿತು. ಅದನ್ನು ಐತಿಹಾಸಿಕವಾಗಿ ನಾಲ್ಕುಭಾಗಗಳಾಗಿ ವಿಂಗಡಿಸುವರು. ಪ್ರಾಚೀನ, ಪ್ರಿಕ್ಲಾಸಿಕ್, ಕ್ಲಾಸಿಕ್ ಮತ್ತು ಪೋಸ್ಟ್‌ಕ್ಲಾಸಿಕ್ ಅವಧಿ. ಕ್ಲಾಸಿಕ್‌ಪೂರ್ವ ಅವಧಿ ೭೦೦ BC ಯಲ್ಲಿ ಪ್ರಾರಂಭವಾಯಿತು. ಆಗಲೇ ತಮ್ಮ ಹಿಂದಿನವರಾದ ಒಲ್ಮೆಕ್‌ಜನಾಂಗದವರಂತೆ ಬೃಹತ್ ಕಲ್ಲಿನ ದೇಗುಲ ಕಟ್ಟ ತೊಡಗಿದರು.ಅದರಲ್ಲಿನ ಬರಹಗಳೀ ಉತ್ತರ ಮತ್ತು ದಕ್ಷಿಣ ಅಮೇರಿಕಾದ ಆದಿ ಲಿಪಿಗಳು. ಮಯಾ ಭಾಷೆ ಏಕತ್ರವಾಗಿರಲಿಲ್ಲ ಅದರಲ್ಲಿ ವಿಭಿನ್ನ ರಾಜ್ಯಗಳ, ಭಾಷೆಗಳ ಮತ್ತು ಪರಸ್ಪರ ಸಂಬಂಧವಿರುವ ಧಾರ್ಮಿಕ ಸಂಸ್ಕೃತಿಗಳು ಒಳಗೊಂಡಿವೆ. ಅನೇಕ ಮಯಾ ಭಾಷೆಗಳಲ್ಲಿ ಕೇವಲ ೨-೩ ಮಾತ್ರ ಬರಹ ರೂಪ ಪಡೆದಿದ್ದವು ಚಒಲನ್ ಮತ್ತು ಟ್ಜೆಲ್ಟಲಾನ್ ಭಾಷೆಗಳ ಜನರೇ ಮಯಾ ಲಿಪಿಯ ಮೂಲ ಅನ್ವೇಷಕರು ಎನ್ನಲಾಗಿದೆ, ಆದರೂ ಕೆಲವು ಕಡೆ ಎರಡೂ ರೀತಿಯ ಚಿತ್ರ ಲಿಪಿಗಳು ಒಟ್ಟೊಟ್ಟಿಗೆ ಇರುವುದು ಸಂಶೋಧಕರಿಗೆ ಅಚ್ಚರಿ ಮೂಡಿಸಿವೆ. ಮಯಾ ಸಂಸ್ಕೃತಿಯ ನಾಶಕ್ಕೆ ಹಾಗೂ ಲಿಪಿಗಳ ಅರ್ಥೈಸುವಿಕೆಗೆ ಸಹಾಯ ಮಾಡಿದವನು ಬಿಷಪ್ ಸಿಯಾಗೊ ಡಿ ಲಂಡಾ. ಅವನು ಸ್ಪೇನಿನ ಪಾದ್ರಿ. ಅವನ ಮೂಲೋದ್ದೇಶ ಮಯಾ ನಾಗರೀಕತೆಯ ಸರ್ವನಾಶ ಮಾಡುವುದು. ಅವನ ಪ್ರಕಾರ ಮಯಾಬರಹ ಸೈತಾನನದು. ಕ್ರಿಶ್ಚಿಯನ್ ಧರ್ಮಪ್ರಚಾರವೇ ಜೀವನದ ಗುರಿಯಾಗಿದ್ದ ಅವನಿಗೆ ಸ್ಥಳೀಯ ಧಾರ್ಮಿಕ ನಂಬಿಕೆಗಳನ್ನು ಬುಡ ಮೇಲು ಮಾಡಿ ಅದರ ಕುರುಹುಗಳ ನಾಶ ಮಾಡುವುದೇ ಮುಖ್ಯ ಉದ್ದೇಶವಾಗಿತ್ತು. ಹಾಗಾಗಿ ಪವಿತ್ರ ಲಿಪಿಗಳಿರುವ ಎಲ್ಲ ಪುಸ್ತಕಗಳನ್ನು ಸುಟ್ಟು ಹಾಕಿದ. ಮಯಾ ಲಿಪಿಗಳು ನೋಡಲು ಜಾಲರಿಯಲ್ಲಿರುವ ಚೌಕಾಕಾರದ ಮನೆಯಂತೆ ಕಾಣುವವು.ಪ್ರತಿ ಚೌಕವು ಒಂದು ಪದಾಂಶ. ಫ್ರತಿ ಚೌಕದಲ್ಲಿ ಐದು ಪದಾಂಶಗಳು ಇರುತ್ತವೆ.ಅದು ಒಂದು ಪದವಾಗಿರುವುದು. ಮಯಾ ಬರಹವು ಸಿಲ್ಲೆಬಿಕ್, ಅದರಲ್ಲಿ ಸುಮಾರು ೫೫೦ ಚಿತ್ರಲಿಪಿಗಳು ಇವೆ. ಅವು ಪೂರ್ಣ ಪದವನ್ನು ಪ್ರತಿನಿಧಿಸುತ್ತವೆ ಮತ್ತು ೧೫೦ ಸಿಲೊಗ್ರಾಮ್ (ಅವು ಅಕ್ಷರಗಳನ್ನು ಪ್ರತಿನಿಧಿಸುತ್ತವೆ.) ಮತ್ತು ಸುಮಾರು ೧೦೦ ಗ್ಲಿಫ್‌ಗಳು ಅವು ಸ್ಥಳನಾಮ ತಿಳಿಸುವ ಮತ್ತು ದೇವರ ಹೆಸರಿನ ಸೂಚಕಳು. ಸುಮಾರು ೩೦೦ ಗ್ಲಿಫ್‌ಗಳ ಸಾಮಾನ್ಯವಾಗಿ ಬಳಕೆಯಲ್ಲಿ ಇದ್ದವು.. ಅನೇಕ ಅಕ್ಷರಗಳನ್ನು ಒಂದೆ ಗ್ಲಿಫ್‌ನಿಂದ ಪ್ರತಿನಿಧಿಸಬಹುದು.ಲಿಪಿಗಳನ್ನು ಕಟ್ಟಡಗಳ ಕಲ್ಲಿನ ಮೇಲೆ ಕಂಡರಿಸಿರುವ ಮತ್ತು ಮರದ ತೊಗಟೆ, ಜೇಡ್‌ಮತ್ತು ಪಿಂಗಾಣಿಯ ಮೇಲೆ ಬರೆದಿರುವ ಬರಹಗಳು ಕಂಡು ಬಂದಿದೆ. ಅವುಗಳ ಬಹುತೇಕ ಮೆಕ್ಸಿಕೊ, ಗೌಟೆಮಾಲ ಮತ್ತು ಉತ್ತರ ಬೆಲಿಜ್‌ಗಳಲ್ಲಿ ಸಿಕ್ಕಿವೆ. ಮಯಾ ಬರವಣಿಗೆಯ ಸಮೂಲ ನಾಶಮಾಡಲುಯತ್ನಿಸಿದ ಲಂಡಾನಿಂದ ಅದು ತುಸು ಮಟ್ಟಿಗೆ ಆಧುನಿಕ ಜಗತ್ತಿನ ಕಣ್ಣಿಗೆ ಬೀಳುವಂತಾಯಿತು. ಅವನಾ ವಿನಾಶಕಾರ್ಯ ಎಷ್ಟು ಘೋರವಾಗಿತ್ತೆಂದರೆ ರಾಶಿರಾಶಿಸಿ ಪುಸ್ತಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸುಟ್ಟು ಹಾಕಿದ. ಯಾರೋ ತಮ್ಮವರಿಗೆ ಇಲ್ಲಿನ ವಿಚಿತ್ರ ತೋರಿಸಲು ಕೆಲವರು ಯುರೋಪಿಗೆ ತೆಗೆದುಕೊಂಡುಹೋದ ೩ ಪುಸ್ತಗಗಳು ಮಾತ್ರ ಈಗ ಉಳಿದಿವೆ. ಅವುಗಳನ್ನು ಕೋಡೆಕ್ಸಗಳು ಎನ್ನುವರು. ಆದರೂ ಅವನು ಬರೆದ ಪುಸ್ತಕದಲ್ಲಿ ಮಯಾ ಪವಿತ್ರಬರಹಗಳ ( ಗ್ಲಿಫ್) ವಿವರ ದಾಖಲೆ ನೀಡಿರುವನು. ಆದರೆ ಅದು ಪೂರ್ಣವಾಗಿ ನಿಖರವಾಗಿಲ್ಲ. ಆದರೆ ತಕ್ಕ ಮಟ್ಟಿಗೆ ಮಾಹಿತಿ ಕೊಡುವುದು. ಅವನು ಮಯಾ ಜನರು ಅಕ್ಷರಗಳನ್ನು ಬಳಸಿ ಬರೆದಿರುವರು ಎಂದು ಕೊಂಡಿದ್ದನು . ಅದರಿಂದ ದೇಶಿಯ ಜನರ ಸಹಾಯದಿಂದ ಮಯಾ ವರ್ಣ ಮಾಲೆ ಬರೆಸಿ ದಾಖಲಿಸಿದ. ಎ, ಬಿ ,ಸಿ ಮೊದಲಾದ ಅಕ್ಷರಗಳ ಸಂಕೇತಗಳನ್ನು ಬರೆಸಿದ.. ಅವನಿಗೆ ತನ್ನಸ್ಪಾನಿಷ್‌ಭಾಷೆಯ. ಅಹ್, ಬೆಹ್, ಸೆಹ್ ( ಸ್ಪಾನಿಷ್‌ನ ಲ್ಲಿ ಎ. ಬಿ ,ಸಿ ಉಚ್ಛಾರಗಳು ) ಗಳಂತೆ ಮತ್ತು ಪ್ರತಿ ಪದಾಂಶಕ್ಕೂ ಧ್ವನಿಮೌಲ್ಯ ನೀಡಿದ. ಅವನು ದಾಖಲಿಸಿದ ಈ ವಿವರಗಳು ಮುಂದೆ ಮಯಾ ಭಾಷೆಯನ್ನು ಅರ್ಥೈಸಲು ಉಪಯೋಗವಾದವು ಒಂದು ರೀತಿಯಲ್ಲಿ ರೊಜೆಟ್ಟಾ ಶಾಸನವು ಈಜಿಪ್ಟಿನ ಅರ್ಥೈಸುವಕೆಗೆ ಸಹಾಯ ಮಾಡಿದಂತೆ ಅನ ದಿನಚರಿ ಉಪಯೋಗಕ್ಕೆ ಬಂದಿತು, ಮಯಾ ಬರಹಗಳನ್ನು ಕೋಡೀಸ್ ಎನ್ನುವರು (Codice), ಅವು ಬಹುತೇಕ ನಾಶವಾಗಿದ್ದರೂ ಭಿತ್ತಿಯ ಮೇಲಿನ ಚಿತ್ರಗಳು ಮತ್ತು ಕಲ್ಲಿನಲ್ಲಿ ಕೆತ್ತಿದ ಬರಹಗಳು ಸಾಕಷ್ಟು ಸಿಕ್ಕಿವೆ. ಅವುಗಳಿಂದ ಮಯಾ ಲಿಪಿಯ ಮಾಹಿತಿ ಸಂಪೂರ್ಣವಾಗಿ ದೊರೆತಿದೆ. ಮಯಾ ಬರಹದ ಪುನರುತ್ಥಾನವಾಗಿ ನಾಗರೀಕ ಜಗತ್ತಿನ ಗಮನಕ್ಕೆ ೧೯ನೆಯ ಶತಮಾನದ ಮಧ್ಯದಲ್ಲಿ ಬಂದದ್ದು ಜಾನ್‌ಲಾಯ್ಡ್‌ಸ್ಟೀಫನ್ಸ್‌ನಿಂದ. ಅದರಲ್ಲಿ ಚಿತ್ರಗಳ ರಚನೆಗೆ ಸಹಾಯ ಮಾಡಿದವನು ಫೆಡ್ರಿಕ್‌ಕ್ಯಾಥರ್‌ಉಡ್. ಸಚಿತ್ರವಾದ ಮಯಾ ಬರಹದ ಪುಸ್ತಕವು ಬಹಳ ಪ್ರಮುಖವಾಗಿದೆ. .ಮಯಾ ಲಿಪಿಯ ಅರ್ಥೈಸುವಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸರ್‌ಎರಿಕ್‌ಥಾಂಪ್ಸನ್. ಮಯಾ ಲಪಿಗಳ ಬಗ್ಗೆ ಅವನೇ ಶ್ರೇಷ್ಟ ಪರಿಣಿತ. ಅವನು ವ್ಯವಸ್ಥಿತವಾಗಿ ಪದಾಂಶಗಳ ಅನುಸೂಚಿ ಮಾಡಿದ. ಪದಾಂಶಗಳನ್ನು ಅವನು ಮೂರುಗುಂಪು ಮಾಡಿದ. ಉತ್ತರ ಪ್ರತ್ಯಯ, ಪ್ರಧಾನ ಸಂಕೇತ ಮತ್ತು ಚಿತ್ರಪಟಗಳು. ಉತ್ತರಪ್ರತ್ಯಯಗಳು ಅವು ಬಹುತೇಕ ಪ್ರಧಾನ ಸಂಕೇತಗಳಿಗೆ ಉತ್ತರ ಪ್ರತ್ಯಯವಾಗಿ ಬರುತ್ತವೆ.ಥಾಂಪ್ಸನ್‌ಪ್ರತಿಯೊಂದಕ್ಕೂ ಒಂದು ಸಂಖ್ಯೆ ನೀಡಿದ.ಬರಹದಲ್ಲಿ ಪದೇ ಪದೇ ಬರುವ ಸಂಕೇತಕ್ಕೆ ಅತಿ ಕಡಿಮೆ ಮೌಲ್ಯದ ಸಂಖ್ಯೆ ನೀಡಿದ ಅದಕ್ಕೂ ದೊಡ್ಡ ಸಂಖ್ಯೆಗಳನ್ನು ಕ್ರಮವಾಗಿ ಕಡಿಮೆ ಸಲ ಬರುವ ಸಂಕೇತಗಳಿಗೆ ಕೊಟ್ಟನು. ಉತ್ತರ-ಪ್ರತ್ಯಯಗಳು ೧ ರಿಂದ ಪ್ರಾರಂಭವಾಗಿ ೫೦೦ ರವರಗೆ ಇವೆ, ೫೦೧ ಪ್ರಧಾನ ಸಂಕೇತಗಳು ೯೯೯ ವರೆಗೆ ಮತ್ತು ೧೦೦೦ ದ ಮೇಲೆ ಚಿತ್ರ ಪಟಗಳು ಇವೆ. ಥಾಂಪ್ಸನ್ ಪ್ರಕಾರ ಮಯಾ ಪದಾಂಶಗಳು "ಭಾವಲಿಪಿಗಳು ಅಂದರೆ ಪ್ರತಿ ಸಂಕೇತವೂ ಒಂದು ಅಮೂರ್ತ ಭಾವನೆಯ ಸಂಕೇತ. ಈ ಐಡಿಯಾಗ್ರಾಫಿಕ್‌ಗಳು ಪ್ರಧಾನ ಸಂಕೇತಗಳು ಹಾಗೂ ಉತ್ತರ-ಪ್ರತ್ಯಯಗಳು ಅದರ ರೂಪ ಬದಲಿಸುವವು (ವಚನ, ಕ್ರಿಯಾಪದಾಂತ್ಯ, ಬಹುವಚನ ಇತ್ಯಾದಿ). ಧ್ವನಿಶಾಸ್ತ್ರದ ಪ್ರಕಾರ ಅವನ ಅನಿಸಿಕೆಯಂತೆ ಚಿತ್ರದ ಶಾಬ್ದಿಕ ಒಗಟು ಮಯಾಲಿಪಿಯ ಉಚ್ಚಾರಣೆಗೆ ಮೂಲ. ಆದರೆ ಅವನು ಲಂಡಾನ "ಅಕ್ಷರ" ಪದ್ದತಿಯನ್ನು ತಪ್ಪು ಎಂದು ಪರಿಗಣಿಸಿದ. ಮಯಾ ಲಿಪಿಗಳು ಪ್ರಿಕ್ಲಾಸಿಕ್ ಅವಧಿಯಿಂದಲೇ ದೊರೆತಿವೆ .ಅವರ ಪುರಾತನ ಲಿಪಿಗಳನ್ನು ನಜ್‌ಟ್ಯುನಿಚ್‌ಎಲ್ಟೆನ್ ಮತ್ತು ಗೌಟೆಮಾಲಾದ ಟಿಕಲ್ ಕೊಪನ್‌ಗಳಲ್ಲೂ ಇವೆ. ಗುಹೆಗಳಲ್ಲಿರುವ ವರ್ಣಚಿತ್ರಗಳಲ್ಲಿ ಕಾಣಬಹುದಾಗಿದೆ. ಮಯಾ ಲಿಪಿಯು ಅಭಿವೃದ್ಧಿ ಹೊಂದಿದ ಮಧ್ಯ ಅಮೇರಿಕನ್‌ಬರಹವಾಗಿದೆ. ಅದಕ್ಕೆ ಕಾರಣ ಅವುಗಳ ಅಸಾಧಾರಣ ಸೌಂದರ್ಯ ಪ್ರಜ್ಞೆ. ಕ್ಲಾಸಿಕ್‌ನಂತರದ ಅವಧಿಯಲ್ಲಿ ಜನರು ಕೆತ್ತುವುದನ್ನು ಬಿಟ್ಟರು ಅಂದರೆ ಕ್ರಿ.ಶ ೯೦೦ .ಅವರ ಕಟ್ಟಡದ ಗೀಳು ಕಡಿಮೆಯಾಯಿತು. ೧೫೧೯ ರಲ್ಲಿ ಸ್ಪೇನಿನ ದಾಳಿಯಾಯಿತು ಅವರ ಜೊತೆ ಸಿಡುಬು ಮತ್ತು ಮೀಸಲ್ಸ ಮಯಾ ಪದಗಳನ್ನು ಓದಲು ಅದನ್ನು ಅರ್ಥ ಮಾಡಿಕೊಳ್ಳುವುದು ಅಗದು. ಅದು ಮೂರುಭಾಗಗಳಾಗಿ ವಿಂಗಡಿಸಲಾಗುವುದು. ಮಧ್ಯವಿರುವುದು ಪ್ರಧಾನ ಭಾಗ ಅದಕ್ಕೆ ಪೂರ್ವ ಮತ್ತು ಉತ್ತರ ಪ್ರತ್ಯಯಗಳು ಇರಬಹುದು. ಅರಸರು ತಮ್ಮ ಕಟ್ಟಡಗಳ ಮೇಲೆ ಯಾರು ಕಟ್ಟಿಸಿದರು ಮತ್ತು ಯಾವಾಗ ಕಟ್ಟಿಸಿದರು ಎಂಬ ಮಾಹಿತಿಯನ್ನು ಕೆತ್ತಿಸುತಿದ್ದರು ಅಲ್ಲಿಂದ ಮಯಾ ಲಿಪಿ ಪ್ರಾರಂಭವಾಯಿತು. ಮಯಾ ಬರಹವನ್ನು ಒಲ್ಮೆಕ್ ರಿಂದ ಕಲಿತಿರಬಹುದು. ಅಥವ ಅವರೇ ಲಿಪಿಗಳನ್ನು ಅವಿಷ್ಕಾರ ಮಾಡಿರಬಹುದು ಮಾಯಾ ಬರಹವು ವರ್ಣಮಾಲೆ ಹೊದಿಲ್ಲ ಸಿಲಬರಿ ( syllabary) , ಹೊಂದಿದೆ. ಮಾಯನ್ ಲಿಪಿಗಳಲ್ಲಿ ಚಿತ್ರಲಿಪಿ ಮತ್ತು ಪದಾಂಶಗಳು ಮಿಶ್ರವಾಗಿವೆ ಸುಮಾರು ೭೦೦ ಗ್ಲಿಫ್‌ಗಳನ್ನು ದಾಖಲೆ ಮಾಡಲಾಗಿದೆ ಅವುಗಳಲ್ಲಿ ೭೫% ಅರ್ಥೈಸಲಾಗಿದೆ.ಈವರೆಗೆ ಸುಮಾರು ೭೦೦೦ ಮಯಾ ದಾಖಲೆಗಳು ಲಭ್ಯವಾಗಿವೆ. ಅವರು ಒಂದಕ್ಕಿಂತ ಹೆಚ್ಚು ಗ್ಲಿಫ್‌ಗಳನ್ನು ಸೇರಿಸಿ ಹೊಸ ಪದ ಮತ್ತು ಅರ್ಥ ಹೊರ ಹೊಮ್ಮಿಸುವ ರೀತಿಯು ವಿಸ್ಮಯಕರವಾಗಿದೆ. ಮಯಾ ಬರಹಗಳು ಕ್ರಿ. ಪೂ ೩೦೦ನೆಯ ಶತಮಾನದಿಂದ ೧೬ನೆಯಶತಮಾನದಲ್ಲಿ ಸ್ಪೇನಿನ ವಸಾಹತು ಶಾಯಿ ಆಡಳಿತ ಬರುವವರೆಗೆ ಸತತ ಬಳಕೆಯಲ್ಲಿದ್ದವು. ಅವರು ಬರಹಕ್ಕೆ ಚಿತ್ರ ಲಿಪಿ ಮತ್ತು ಪೂರಕವಾಗಿ ವರ್ಣಗಳನ್ನು ಬಳಸಿದರು .ಕ್ರಿಯಾಪದಗಳಿಗೆ ಎಡ, ಬಲ, ಕೆಳಗೆ ಪ್ರತ್ಯಯ ಸೇರಿಸುವದರಿಂದ ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್‌ಕಾಲ ಗಳನ್ನು ಪ್ರತಿನಿಧಿಸುವರು..ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲದ ಬರೆವ ರೀತಿ ಕೆಳಗಿನಂತೆ ಇತ್ತು. ಯುರೋಪಿಯನ್ ಅನೇಕರು ಅವನ್ನು ಈಜಿಪ್ಟನ ರೀತಿಯ ಪವಿತ್ರಲಿಪಿ ಎಂದೇ ಭಾವಿಸಿದ್ದರು. ಮಯಾಲಿಪಿಯನ್ನು ,ಗ್ಲಿಪ್ ಅಥವ ಪವಿತ್ರಲಿಪಿ ಎನ್ನುವರು ಮಧ್ಯ ಅಮೇರಿಕದ ಎಲ್ಲ ಲಿಪಿಗಳಲ್ಲೂ ಪೂರ್ಣವಾಗಿ ಅರ್ಥೈಸಲಾಗಿರುವ ಲಿಪಿ ಮತ್ತು ಭಾಷೆ ಎಂದರೆ ಮಯಾ ಬರಹಗಳು.ಇದು ನೋಡಲು ವಿಶಿಷ್ಟ. ಪುರಾತನವಾದರೂ ಎಲ್ಲ ಆಧುನಿಕ ಭಾಷೆಗಳಂತೆ ಸಂಪೂರ್ಣವಾಗಿ ಬರಹರೂಪದಲ್ಲಿ ಹಿಡಿದಿಡಲು ಶಕ್ತವಾಗಿದೆ. ಅವರ ಸಂಖ್ಯಾ ಪದ್ದತಿ ಅಚ್ಚರಿ ಮೂಡಿಸುತ್ತದೆ. ಕಳೆದ ವರ್ಷ ಅಂದರೆ ೨೦೧೨ನೆಯ ಡಿಸೆಂಬರ್ ಕೊನೆಯಲ್ಲಿ ಜಗತ್‌ಪ್ರಳಯದ ಭೀತಿ ಮೂಡಿಸಿ ಪ್ರಪಂಚವನ್ನೇ ಅಲ್ಲೊಲಕಲ್ಲೋಲ ಮಾಡಿದ್ದು ಯಾವುದು ಗೊತ್ತೇ? ಅದೇ ವಿಸ್ಮಯಕಾರಿಯಾದ ಮಯಾ ಪಂಚಾಂಗ.! |
No comments:
Post a Comment