Tuesday, December 19, 2017

XI Edict










ಅಶೋಕನ ಶಿಲಾಶಾಸನ 


ದೇವನಾಂ ಪ್ರಿಯ, ಪ್ರಿಯದರ್ಶಿ ಮಹರಾಜನು ಹೀಗೆ ಹೇಳುವನು,
 ಜನರು ಅನೇಕಹಬ್ಬಗಳನ್ನು ಆಚರಣೆಗಳನ್ನು ಮಾಡುವರು. ಅನಾರೋಗ್ಯವದಾಗ,ಮಗು ಹುಟ್ಟಿದಾಗ, ಮಕ್ಕಳ ಮದುವೆಯಲ್ಲಿ,ಪ್ರವಾಸ ಪ್ರಾರಂಭಿಸುವಾಗ ಇದೇ ಮೊದಲಾದ ಸಂದರ್ಭಗಳಲ್ಲಿ  ಆಚರಣೆಗಳಿವೆ.ವಿಶೇಷವಾಗಿ ಹೆಂಗಸರು ಅರ್ಥ ಹೀನ ಮತ್ತು ಉಪಯೋಗವಿಲ್ಲದ ಆಚರಣೆ ಮಾಡುವರು.ಇಂಥಹ ವ್ರತಗಳನ್ನು ಆಚರಿಸುವರು. ಇವುಗಳಿಂದ ಯಾವುದೇ ಫಲವಿಲ್ಲ.ಆಚರಣೆ ಮಾಡ ಬೇಕಾದುದು ಒಂದೇ, ಅದು ಧರ್ಮಾಚರಣೆ.ಅದು ಗುಲಾಮರು ಮತ್ತು ಸೇವಕರಲ್ಲಿ ಕಳಕಳಿ.ಗುರುಗಳಲ್ಲಿ ಗೌರವ,  ಶ್ರವಣ ಮತ್ತುಬ್ರಾಹ್ಮಣರಿಗೆ ದಾನ- ಈ ವು ಮತ್ತು ಈ ರೀತಿಯ ಆಚರಣೆಗಳೇ ಧಾರ್ಮಿಕ ಆಚರಣೆಗಳು.ಆದ್ದರಿಂ ತಂದೆ, ಮಗ, ಸೋದರ,ಯಜಮಾನ,, ಸ್ನೇಹಿತ, ಪರಿಚಿತ ಮತ್ತು ನೆರೆಹೊರೆಯವ ಯೋಚಿಸಬೇಕಾದುದು ಇದು –“ ಇದೇ ಪುಣ್ಯಕರ್ಯಇದೇ ವ್ರತ, ಇದವನ್ನುಗುರಿತಲುಪವರೆಗೆ ಅನುಸರಿಸ ಬೇಕು” ( ಖಾಲ್ಸಿ ಪಾಠ)ಇಲ್ಲವಾದಲ್ಲಿ ಅವರು ತಾವೆ ಅಮದುಕೊಳ್ಳ ಬೇಕು” ಇನ್ನೆಲ್ಲ ಆಚರಣೆಗಳು ಫಲ ಅನುಮಾನ.ಅವು ಫಲ ನೀಬಹುದು , ನೀಡ ದಿರ ಬಹುದುಅವುಗಳ ಫಲ ತಾತ್ಕಾಲಿಕ, ಆದರೆ ಧಾರ್ಮಿಕ ಆಚರಣೆ  ಎಲ್ಲ ಕಾಲದಲ್‌ಊ ಯಾವಾಗಲೂ ಪರಿಣಾಮಕಾರಿಈ ಜನ್ಮದಲ್ಲಿ ಫಲ ದೊರೆಯದಿದ್ದರೆ ಮರುಜನ್ದಲ್ಲಿ ದೊರೆವುದು ಅನಂತ ಭಾಗ್ಯ ಖಂಡಿತ. ಒಂದುವೇಳೆ ಇಹದಲ್ಲಿ ಸುಖ ಲಭಿಸಿದರೂಆಗ ಎರಡೂ ಕಡೆ ಲಾಭ. ಈ ಜನುಮದಲ್ಲಿ ಸುಖ ಮುಂದಿನಜನ್ಮ ದಲ್ಲಿ ಅನಂತಗೌರವ ವು ಧರ್ಮಾಚರಣೆಯಿಂದ ದೊರೆಯುವುದು
( ಗಿರಿನಾರ ಪಾಠ)

ಅದೂ ಅಲ್ಲದೆ, ದಾನ ಎಂಬುದು ಉತ್ತಮ.ಆದರೆಧಮಧ ದಾನಕ್ಕಿಂತ ದೊಡ್ಡದು ಬೃಎ ಇಲ್ಲಾದ್ದರಿಂದ ಸ್ನೇಹಿತ,ಸಹಚರ, ಬಂಧುಸಂಗಾತಿ  ಎಲ್ಲ ಸಂದರ್ಭದಲ್ಲೂ ಬೋಧಿಸಬೇಕು೭.” ಇದನ್ನು ಆಚರಿಸು ಇದರಿಂದ ಸ್ವರ್ಗ ದೊರೆಯುವುದು”  ಸ್ವರ್ಗಪ್ರಾಪ್ತಿಗಿಂತ ಮಿಗಿಲಾದುದು ಯಾವುದಿದೆ?