Saturday, June 20, 2015

ಕನ್ನಡ ಲಿಪಿ ವಿಕಾಸ-ಶಾಸನಗಳ ಮೂಲಕ

ಕನ್ನಡ  ಲಿಪಿ ವಿಕಾಸ-ಹಲ್ಮಿಡಿ ಮೊದಲ ಶಾಸನ
ಕನ್ನಡ ಲಿಪಿಗೆ ಸುಮಾರು ಎರಡು ಸಾವಿರ ವರ್ಷದ  ಇತಿಹಾಸವಿದೆ, ಕ್ರಿಪೂ,೩ನೇ ಶತಮಾನದ ಲ್ಲಿ ದೊರೆತ ಅಶೋಕನ ಶಾಸನಗಳ ಬ್ರಾಹ್ಮಿ ಲಿಪಿಯೇ ಭಾರತದ ಬಹುತೇಕ ಭಾಷೆಗಳ ಲಿಪಿಗಳ ಮಾತೆ. ಆದರಿಂದ ಉಗಮವಾಗಿ ಇಂದಿನ ಆಧುನಿಕ ರೂಪ ಪಡೆಯಲು ಸುಮಾರು ಎರಡು ಸಹಸ್ರಮಾನಗಳೇ ಬೇಕಾದವು.ಅಶೋಕನ ಶಾಸನಗಳಿಂದ ಮೊದಲಾದ ಈ ಲಿಪಿ ವಿಕಾಸ ಯಾತ್ರೆಗೆ  ಶಾತವಾಹನ, ಕದಂಬ, ಗಂಗ , ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ ,ಕಲ್ಯಾಣ ಚಾಲಕ್ಯ ಹೊಯ್ಸಳ ಸೇವುಣ, ಕಳಚೂರು,ವಿಜಯನಗರ ಮತ್ತು ಮೈಸೂರು ಅರಸರ ಆಳ್ವಿಕೆಯ ಕೊಡುಗೆ ಗಣನೀಯ. ಅವರುಗಳ ಕಾಲದ ಶಾಸನಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಶಾಸನಗಳ ಮೂಲಕ ಲಿಪಿ ವಿಕಾಸ ಅರಿಯುವ ಕಿರುಪ್ರಯತ್ನ  ಇದು. ಶಾಸನಗಳ ಸಾಲುಗಳನ್ನು ಆಧುನಿಕ ಕನ್ನಡದಲ್ಲಿ ನೀಡುವುದರಿಂದ ಸಾಮಾನ್ಯ ಓದುಗನಿಗೂ ಆಸಕ್ತಿ ಮೂಡಬಹುದೆಂಬ ಆಶಯವೇ ಇದರ  ಉದ್ದೇಶ. ಪ್ರಾಜ್ಞರು ಸುಧಾರಣೆಗೆ ಸಲಹೆ ಸೂಚನೆ ನೀಡಿದರೆ ಸ್ವಾಗತ.
ಹಲ್ಮಿಡಿ ಶಾಸನವು ಕನ್ನಡದಲ್ಲಿ ಈವರೆಗೆ  ದೊರೆತಿರುವ ಅತಿ  ಪ್ರಾಚೀನ  ಶಿಲಾಶಾಸನ, ಇದರ  ಕಾಲ ಕ್ರಿ.ಶ  ೪೫೦ ಇದನ್ನು ಕದಂಬ ವಂಶದ ಕಾಕುಸ್ಥವರ್ಮನ  ಅವಧಿಯಲ್ಲಿ ಕಂಡರಿಸಲಾಗಿದೆ.ಇದೊಂದು ವೀರಗಲ್ಲು. ಹಾಗೂ ದಾನ ಶಾಸನ. ಇದರ ಲಿಪಿ ಮತ್ತು ಕದಂಬರ ಸಂಕ್ರಮಣ  ಕಾಲದ್ದು.. ಇದನ್ನುಪೂರ್ವ ಹಳಗನ್ನಡ ಎನ್ನುವರು. ಈ ಶಾಸನ  ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನಿಂದ ಸುಮಾರು ೧೯ ಕಿಲೊಮೀಟರ್ ದೂರದಲ್ಲಿನ  ಹ ಲ್ಮಿಡಿ ಹೆಸರಿನ ಹಳ್ಳಿಯ ವೀರಭದ್ರದೇವರ ಗುಡಿ ಹತ್ತಿರವಿದ್ದಿತು. ಈಗ ಅಲ್ಲಿ ಅದರ ಮಾದರಿ ಇಡಲಾಗಿದೆ. ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನ ಪಡೆಯಲು ಇದು ಪ್ರಬಲ ಪುರಾವೆ ಎನಿಸಿದೆ.
ಅಟಆಸಕ್ತರ ಅನುಕೂಲಕ್ಕಾಗಿ ಮೂಲಶಾಸನದ ಪ್ರತಿ ಸಾಲೂ ,ಅದರಕೆಳಗೆ ಲಿಪ್ಯಾಂತರ  ನೀಡಲಾಗಿದೆ.ಬ್ರಾಹ್ಮಿ ಅಕ್ಷರದ ಕೆಳಗೆ ಅದರ ಲಿಪ್ಯಾಂತರ ಇರುವುದರಿಂದ ಓದುಗರು ಬ್ರಾಹ್ಮಿ ಕಲಿಯಲು ಅರ್ಥೈಸಲು ಅನುಕೂಲ.ಶಾಸನದ ತಿರುಳು ನೀಡಿದೆ.


                        


ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್ ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ಶ್ರೀಮತ್ ಕದಂಬಪನ್ ತ್ಯಾಗ ಸಂಪನ್ನನ್ ಕಲಭೋg[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್ ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ಅಳಪ ಗಣ ಪಶುಪತಿಯಾ ದಕ್ಷಿಣಾಪಥ ಬಹುಶತಹವನಾಹವದು[ಳ್] ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋ[ನ್ದಾನ]ಪಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ zಸೇನ್ದ್ರಕ ಬಣೋಭಯ ದೇಶದಾ ವೀರಪುರುಷಸಮಕ್ಷದೆ ಕೇಕಯ ಪಲ್ಲವರಂ ಕಾದೆಱದು ಪೆತ್ತಜಯನಾ ವಿಜ ಅರಸಂಗೆ ಬಾಳ್ಗೞ್ಚು ಪಲ್ಮಡಿಉಂ ಮೂೞುವಳ್ಳಿಉಂ ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ಕೞ್ದೋನ್ ಮಹಾಪಾತಕನ್ ಸ್ವಸ್ತಿ 
ಭಟ್ಟರ್ಗ್ಗೀಗೞ್ದೆ ಒಡ್ಡಲಿಆ ಪತ್ತೊನ್ದಿ ವಿಟ್ಟಾರಕರ
ಹಲ್ಮಿಡಿ ಶಾಸನದ ತಿರುಳು ಹೀಗಿದೆ- ಮೊದಲೆರಡು ಸಾಲುಗಳಲ್ಲಿ ಅಚ್ಯುತನ ಧ್ಯಾನವನ್ನು ಹೇಳಲಾಗಿದೆ. "ಲಕ್ಷ್ಮಿಯೊಡನಿರುವ ಅಚ್ಯುತನು ಶ್ಯಾಙ್ಗ ವೆಂಬ ಬಿಲ್ಲನ್ನು ಬಗ್ಗಿಸಿ ಹಿಡಿದಿದ್ದು ದಾನವರಿಗೆ ಪ್ರಳಯ ಕಾಲದ ಅಗ್ನಿಯಂತೆಯೂ ಸಜ್ಜನರಿಗೆ ಸುದರ್ಶನ ಚಕ್ರದಂತೆಯೂ ತೋರುತ್ತಾನೆ " . ನಂತರದ ಸಾಲುಗಳು ರಾಜನಿಗೆ ನಮನಗಳನ್ನು ಸಲ್ಲಿಸಿ, ಅಲ್ಲಿ ನಡೆದ ಘಟನಾವಳಿಯನ್ನು ತೆರೆದಿಡುತ್ತದೆ. " ಕದಂಬರಾಜ, ತ್ಯಾಗಸಂಪನ್ನ, ಕಲಭೋರನ ಶತ್ರು ಎಂದೆನಿಸಿರುವ ಕಕುಸ್ಥ(ತ್ಸ) ಭಟ್ಟೋರಕನು ಆಳುತ್ತಿದ್ದ ಕಾಲ. ಅವನ ಅಧೀನದಲ್ಲಿ ’ನರಿದಾವಿಳೆ ನಾಡಿನಲ್ಲಿ’ ( ಇಲ್ಲಿಯ ಸುತ್ತಲಿನ ಒಟ್ಟು ಪ್ರದೇಶ) ಮೃಗೇಶ ಮತ್ತು ನಾಗ ಎಂಬ ಅಧಿಕಾರಿಗಳಿದ್ದರು. ಅವರು ಮೃಗರಾಜ ಮತ್ತು ಸರ್ಪರಾಜರಂತೆ ವೈರಿಗಳಿಗೆ ಭಯಂಕರರೆನಿಸಿದ್ದರು. ಇವರ ಅಧೀನದಲ್ಲಿ ’ಕೀರ್ತಿಗೊಂಡ ಭಟರಿ’ ವಂಶವೆಂಬ ನಿರ್ಮಲಆಕಾಶಕ್ಕೆ ಚಂದ್ರನಂತೆ ಹೊಳೆಯುವ ಪಶುಪತಿ ಎಂಬ ಹೆಸರಿನವನಿದ್ದ. ಅಳೂಪ ವಂಶ ಸಮೂಹಕ್ಕೆ ಇವನು ಶಿವ (ಪಶುಪತಿ) ನಂತಿದ್ದ. ಪ್ರಸಿದ್ದವಾದ ದಕ್ಷಿಣಾ ಪಥದಲ್ಲಿ ನೂರಾರು ಯುದ್ಧಗಳೆಂಬ ಯಙ್ಞ ಮಾಡಿ ಬಲಿದಾನ ಮಾಡಿ ಶೌರ್ಯ ತೋರಿದ್ದ. ದಾನ ಪಶುಪತಿ ಎಂದು ಹೊಗಳಲ್ಪಟ್ಟಿದ್ದ. ಅವನು ’ಸೇಂದ್ರಕರು’ ಮತ್ತು ’ಬಾಣರ’ ಸೈನ್ಯವನ್ನು ಸೇರಿಸಿಕೊಂಡು ಕೇಕಯ ಪಲ್ಲವರೆದುರು ಕದಂಬರ ಪರವಾಗಿ ಯುದ್ದಮಾಡಿ ಜಯ ತಂದುಕೊಟ್ಟ. ಅದಕ್ಕಾಗಿ ’ಸೇಂದ್ರಕ’ ಮತ್ತು ’ಬಾಣ’ ದೇಶದ ಜನರ ಸಮ್ಮುಖದಲ್ಲಿ ಪಲ್ಮಡಿ(ಹಲ್ಮಿಡಿ) ಯನ್ನೂ ಮೂಳಿವಳ್ಳಿ ( ಇಂದಿನ ಮುಗುಳುವಳ್ಳಿ) ಯನ್ನೂ ಅವನ ಅಧೀನಕ್ಕೆ ಪ್ರೀತಿ ಪೂರ್ವಕವಾಗಿ ಕೊಡಲಾಯಿತು. ಇದು ವೀರನ ಕತ್ತಿ ತೊಳೆದು ವೀರದಾನ ಕೊಡುವ ಸಮಾರಂಭವಾಗಲು ನಾಡ ಅಧಿಕಾರಿಗಳಾದ ಶ್ರೀ ಮೃಗೇಶ ಮತ್ತು ನಾಗ ಅವರುಗಳು ಹಾಜರಿದ್ದು ಆ ಗ್ರಾಮಗಳನ್ನು ವಿಜಯಿಗೆ ನೀಡಿದರು. ಈ ದಾನವನ್ನು ಕದ್ದವನಿಗೆ ಪಾಪ ಬರುತ್ತದೆ. ಸೈನ್ಯದ ತೆರಿಗೆ ಅಧಿಕಾರಿಗಳಾಗಿದ್ದ ಮೃಗೇಶ ಮತ್ತು ನಾಗರು ಹಲ್ಮಿಡಿಯ ’ಕುರುಬ’ರಿಗೆ ಪ್ರೀತಿಯಿಂದ ತೆರಿಗೆ ವಿನಾಯಿತಿಯಾದ ’ಕುರುಂಬಿಡಿ’ ಯನ್ನು ಬಿಟ್ಟರು. ಇದನ್ನು ಕೆಡಿಸಿದವನಿಗೆ ಮಹಾಪಾತಕವು ಉಂಟಾಗುತ್ತದೆ. " ಎಂದು ಬರೆಸಲಾಗಿದೆ. ಮುಂದೆ ಎಡಪಕ್ಕದಲ್ಲಿ ಇನ್ನೊಂದು ಸಾಲನ್ನು ಬರೆದಿದ್ದಾರೆ. ಅದು ಹೀಗಿದೆ.. " ಇಲ್ಲಿನ ಗದ್ದೆಯ ಉತ್ಪನ್ನದಲ್ಲಿ ಭಟ್ಟರಿಗೆ (ಬ್ರಾಹ್ಮಣರಿಗೆ) ಹತ್ತನೆಯ ಒಂದು ಭಾಗದ ತೆರಿಗೆ ವಿನಾಯಿತಿಯನ್ನು ಕೊಟ್ಟರು " . ಇದು ಈ ಶಾಸನದ ತಿರುಳು.









  
  ನಮಃ ಶ್ರೀಮ  ತ್ಕ ದಂಬ ಪನ್ತ್ಯಾಗ  ಸಂ ಪನ್ನ ನ್ಕಲ ಭೋರನಾ ಅ ರಿಕ 


       ಕುಸ್ಥುಭಟ್ಟೋರ  ನಾಳೆ   ನರಿ ದಾವಿಳೆ   ನಾಡುಳ್‌ ಮೃಗೇಶ  ನಾ
  

      ಗೇನ್ದ್ರಾ    ಭೀಳರ್ಭ್ಭಟ     ಹರಪ್ಪೊರ್ ಶ್ರೀ  ಮೃಗೇಶ ನಾ ಗಾ ಹ್ವ  ಯ


    ರಿರ್ವರಾ ಬ ಟ  ರಿ  ಕು ಲಾ ಮ ಲ  ವ್ಯೋಮ ತಾರಾಧಿನಾಥನ್ನ ಳ ಪ

    ಗ ಣ  ಪ  ಶು   ಪ ತಿ ಯಾ  ದ ಕ್ಷಿ ಣಾ  ಪಥ ಬ ಹು        ಶ  ತ  ಹ  ವ ನಾ


 ಹ  ವ ದು ಳ್    ಪಶು ಪ್ರದಾನ  ಶೌರ್ಯೋ  ದ್ಯ  ಮ    ಭರಿತೋನ್ದಾ ನ  ಪ

ಶು   ಪ  ತಿ   ಯೆ  ನ್ದು     ಪೊ  ಗ ೞೆ     ಪ್ಪೊ     ಟ್ಟ  ಣ     ಪ   ಶು    ಪ  ತಿ


  ನಾಮ   ಧೇಯ   ನಾ  ಸ ರ  ಕ್ಕೆ  ಲ್ಲ  ಭ      ಟ ರಿ  ಯಾ ಪ್ರೇಮಾ ಲ  ಯ


        ಸು  ತ  ನ್ಗೆ  ಸೇನ್ದ್ರಕ ಭ ಣೋದ ಯ  ದೇ ಶ ದಾ  ವೀರ ಪುರುಷ ಸಮಕ್ಷ


  ದೆ ಕೇ ಕ   ಯ  ಪ  ಲ್ಲ  ವ    ರಂ ಕಾದೆ  ರೆ  ದು ಪೆ   ತ್ತ ಜ ಯ  ನಾ   ವಿ ಜ


  ಅ  ರ  ಸ  ನ್ಗೆ    ಬಾ    ಳ್ಗ   ಚ್ಚು ಪ   ಲ್ಮಿ   ಡಿ ಉಂ ಮೂೞು ವ    ಳ್ಳಿ ಯಂ  ಕೊ


     ಟ್ಟಾರ್ ಭಟಾರಿ   ಕುಲದೊನಳುಕದಮ್ಬನ್ಕಳ್ದೋನ್ ಮಹಾಪಾತಕನ್



        ಇ ರ್ವ್ವರುಂ   ಸ ಳ್ಬಙ್ಗದರ್‌ ವಿಜಾರರಂ  ಪ  ಲ್ಮ      ಡಿ ಗೆ  ಕು ರು




       ಮ್ಬಿಡಿವಿಟ್ಟಾರ್‌ಅ ದಾ  ನ   ಳಿ  ವೊ      ನ್ಗೆ ಮಹಾಪಾತಕಂ ಸ್ವಸ್ತಿ



                                 (ಇಧೇ ಶಾಸನದ ಎಡಭಾಗದಲ್ಲಿರುವ ಪಾಠ )






ಭ ಟ್ಟ ರ್ಗ್ಗೀಗ  ೞ್ದೆ                ಒಡ್ಡಲಿ            ಆ ಪ  ತ್ತೊ ನ್ದಿ  ವಿಟ್ಟಾರಕರ


ಆಧಾರ
೧.ಕನ್ನಡ ಲಿಪಿ ಉಗಮ ಮತ್ತು ವಿಕಾಸ -  . ಡಾ. ಎ.ವಿ.ನರಸಿಂಹ ಮೂರ್ತಿ
೨. ಲಿಪಿಯ ಹುಟ್ಟು ಮತ್ತು ಬೆಳವಣಿಗೆ  - ಡಾ. ದೇವರ ಕೊಂಡಾರೆಡ್ಡಿ
೩.ಕನ್ನಡ ಲಿಪಿ ವಿಕಾಸ - ಡಾ.ಎಂ.ಜಿ. ಮಂನಜುನಾಥ ಮತ್ತು ಡಾ. ದೇವರಾಜ ಸ್ವಾಮಿ
೪. ಅಶೋಕನ ಶಾಸನಗಳು- ನಾ. ಕಸ್ತೂರಿ
೫.ಲಿಪಿಶಾಸ್ತ್ರ ಪ್ರವೇಶ- ಡಾ.ಮಾಧವ ನಾ. ಕಟ್ಟಿ
೬.ಭಾಷಾವಿಜ್ಞಾನದ ಮೂಲತತ್ವಗಳು- ಡಾ.ಎಂ. ಚಿದಾನಂದ ಮೂರ್ತಿ
೭. ಎಪಿಗ್ರಾಫಿಯಾ ಕರ್ನಾಟಕ ಸಂಪುಟಗಳು-ಬಾ.ರಾ. ಗೋಪಾಲ ಮೈಸೂರುವಿಶ್ವವಿದ್ಯಾಲಯ
೮. The Alphabet-Devid deringer.
೯. Elements  of south Indian Paleography-A.C. Burnel
೧೦ ಅಂತರ್‌ಜಾಲತಾಣಗಳು.













ಆ ಪತ್ತೊನ್ದಿ ವಿಟ್ಟಾರಕರ


No comments:

Post a Comment