Saturday, August 23, 2014

ಸಾಹಿತ್ಯ ಸಾಕ್ಷಿ ಪ್ರಜ್ಞೆ ಅಸ್ತಂಗತ







ಅನಂತ ಯಾತ್ರೆ ಅಂತ್ಯ.



ಕನ್ನಡ ಸಾಹಿತ್ಯ ಜಗತ್ತಿನ ಮೇರುಶಿಖರ ಉರುಳಿದೆ. ಸಾಹಿತ್ಯ, ವಿಚಾರವಾದ, ರಾಜಕೀಯ ಮತ್ತು ಸಮಾಜಿಕ ವಿಷಯಗಳ ಅಂತರ್ಸಾಕ್ಷಿ ಮೂಕವಾಗಿದೆ. ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತದ್ದ ಆರು ದಶಕಗಳಿಗೂ ಮಿಕ್ಕಿ ಸಾಹಿತ್ಯವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಬಹುತೇಕ ಸಾಹಿತಿಗಳಂತೆ ದಂತದ ಗೋಪುರದಲ್ಲಿ ಕುಳಿತು ತಮ್ಮ ಸಾಹಿತ್ಯ ಲೋಕದಲ್ಲಿಯೇ ಲೀನವಾಗದೆ. ನಾಡು, ನುಡಿ,ಯ ವಿಷಯಕ್ಕೆ ಸದಾಮಿಡಿಯುತಿದ್ದ  ಪ್ರಗತಿಪರ ಚಿಂತಕ , ವಿಚಾರವಾದಿ  ಸಮಾಜಮುಖಿ , ಜ್ಞಾನ ಪೀಠ ಪ್ರಶಸ್ತಿ ವಿಜೇತ ಉಡುಪಿ ರಾಜ ಗೋಪಾಲಾಚಾರ್ಯ ಅನಂತಮೂರ್ತಿ  ಇನ್ನಿಲ್ಲ.
ಯುವ ಅನಂತ ಮೂರ್ತಿ 
ಅವರ ವಂಶಜರ ಮೂಲ ದಕ್ಷಿಣ ಕನ್ನಡ ಜಿಲ್ಲೆಯಾದರೂ ಜನಿಸಿದ್ದು ಲೋಹಿಯಾವಾದದ ಜನಪರ ಚಳುವಳಿಯ  ನೆಲವಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಲಿ ತಾಲೂಕಿನ ಮೇಳಿಗೆ  ಗ್ರಾಮದಲ್ಲಿ. ಜನನ   ೨೧, ಡಿಸೆಂಬರ್ ೧೯೩೨ ರಂದು.. ಮನೆತನ ಕರ್ಮಠ ಬ್ರಾಹ್ಮಣರದು . ಪ್ರಾಥಮಿಕ ಮತ್ತು ಹೈಸ್ಕೂಲು ಶಿಕ್ಷಣ ತೀರ್ಥಹಳ್ಳಿ ತಾಲೂಕು ದೂರ್ವಾಸಪುರದಲ್ಲಿ. ಮೈಸೂರಿನಲ್ಲಿ ಮಾಸ್ಟರ್‌  ಡಿಗ್ರಿ ಪಡೆದರುಅವರ ಮೈಸೂರುವಾಸ ಅನೇಕ ಉತ್ತಮ ಗೆಳೆಯರನ್ನು  ಒದಗಿಸಿತು ಕೆ. ವಿ ಸುಬ್ಭಣ್ಣ, ಎಚ್ ಎಸ್ ಬಿಳಿಗಿರಿ, ತೇಜಸ್ವಿ, ಸದಾಶಿವ, ವಿಶ್ವನಾಥ ಮಿರ್ಲೆ ಜಿ.ಎಚ್. ನಾಯಕ , ಕಡಿದಾಳ್    ಶಾಮಣ್ಣ , ಡಾ.ರತ್ನ ಮೊದಲಾದ ಗೆಳೆಯರು   ತಿಂಗಳಿಗೊಂದು ಸಲ ವಿಮರ್ಶಕ ವೃಂದ ಎಂಬ ಹೆಸರಲ್ಲಿ ಸೇರಿ ಸಾಹಿತ್ಯ ಚರ್ಚೆಮಾಡುತಿದ್ದರು. ಗೋಪಾಲಕೃಷ್ಣ ಅಡಿಗರೂ ಅಲ್ಲಿ ಹಲವು ಸಲ ಕವನವಾಚನೆ ಮಾಡಿ ಚರ್ಚೆಯಲ್ಲಿಭಾಗವಹಿಸುತಿದ್ದರು.
ಸಿ.ಡಿ ಎನ್‌ ,  ಎಸ್ ವಿ ರಂಗಣ್ನ ಅವರಿಂದ ಇಂಗ್ಲಿಷ್ ಕಲಿಕೆ. ಎಂ. ಎ ನಂತರ ಕಾಮತ್‌ ವೆಲ್ತ್ ವಿದ್ಯಾರ್ಥಿ ವೇತನ ಪಡೆದು  ಇಂಗ್ಲೇಂಡಿನ ಬರ್ಮಿಂಗ್‌ಹ್ಯಾಂನಲ್ಲಿ ಪಿ. ಎಚ್ ಡಿ   ಪಡೆದರು..ಅವರ ಉನ್ನತ ಅಧ್ಯಯನದ ಮಾಹಾಪ್ರಬಂಧ ’Politics and fiction of 1930’s’- ಸಾಹಿತ್ಯ ಮತ್ತು ಜೀವನ ಯಾತ್ರೆಯ ಮುನ್ಸೂಚಿ.


             ಪ್ರೌಢ ಅನಂತ ಮೂರ್ತಿ
ಸಂಪ್ರದಾಯಸ್ಥ ಕುಟುಂಬದಲ್ಲಿ ಜನವಾದ್ದರಿಂದ ಎಳವೆಯಲ್ಲಿಯೇ ಸಂಸ್ಕೃತ ಜ್ಞಾನ ಕರಗತ. 
ಪಿಯುಸಿವಿಜ್ಞಾನ ವಿಭಾಗದಲ್ಲಿ ಫೇಲು. ನಂತರ ಕಲಾವಿಭಾಗದಲ್ಲಿ ಕಲಿಕೆ. ಅಲ್ಲಿ ಉನ್ನತಶ್ರೇಣಿ.    ಹದಿಹರೆಯದಲ್ಲಿ ಲೋಹಿಯಾವಾದಿ ಗೋಪಾಲಗೌಡರ ಸಂಪರ್ಕ. ಕೊಣಂದೂರು ಲಿಂಗಪ್ಪ, ಜೆ. ಎಚ್ ಪಾಟಿಲರ  ಸಹವಾಸದಿಂದ ಸಮಾಜವಾದಿ ಚಳುವಳಿಗಳಲ್ಲಿ ಕ್ರಿಯಾಶೀಲ. ವಿಚಾರವಾದದ ವಕ್ತಾರ. ಬರಿ ಮಾತಿನಲ್ಲಿ ಮಾತ್ರವಲ್ಲ ,ಕೃತಿಯಲ್ಲೂ ಅವರು ನಂಬಿಕೆಯಂತೆ ನಡೆದವರು. ವೈದಿಕ ಹಿನ್ನೆಲೆಯ ಕುಟುಂದ ಪ್ರತಿಭಟನೆಯ ನಡುವೆಯೂ ಪಾಶ್ಚಾತ್ ಜೀವನಶೈಲಿಯ ಅಳವಡಿಕೆ.  ಸಾಧಾರಣ ನಿಲುವಿನ ಉತ್ತಮ ಮೈಕಟ್ಟಿನ ಸುಂದರ ಅನಂತಮೂರ್ತಿಯವರು  ಉಡುಗೆ ತೊಡುಗೆಯಲ್ಲಿ ಸೊಗಸುಗಾರರು. ಕುಡಿತ ಮಾಂಸ ಸೇವನೆಮಾಡಿ ಸಭ್ಯರಂತೆ ಸೊಗುಹಾಕುವ ಆಷಾಡಭೂತಿಗಳಲ್ಲ. ಇದ್ದುದನ್ನು  ಒಪ್ಪಿಕೊಳ್ಳುವ ಎದೆಗಾರಿಕೆ. ತಪ್ಪನ್ನು ಒಪ್ಪಿಕೊಳ್ಳುವ ಪ್ರಾಂಜಲತೆ.ಅವರ ವಿಶೇಷತೆ.
 ..ಅವರ ಬಾಳ ಸಂಗಾತಿ ಎಸ್ತರ್‌  ಅವರನ್ನು ಹಾಸನದಲ್ಲಿ  ಬೋಧಕರಾಗಿದ್ದಾಗಲೇ  ಭೇಟಿಯಾದರೂ .  ಅಂತರ್‌ ಧಾರ್ಮಿಕ ವಿವಾಹಕ್ಕೆ ವರ್ಷಗಟ್ಟಲೇ ಕಾದು ೧೯೫೬ ರಲ್ಲಿ ಮದುವೆಯಾದರು. ಅವರ ಸುಮಾರು ಅರ್ಧಶತಕಕ್ಕೂ ಮಿಕ್ಕಿದ  ಸಾರ್ಥಕ ದಾಂಪತ್ಯದ ಫಲ ಇಬ್ಬರು ಮಕ್ಕಳು. ಶರತ್‌ ಮತ್ತು ಅನುರಾಧ.
ಬಾಳ ಸಂಗಾತಿ ಎಸ್ತರ್‌ ಒಡನೆ
 ಬಾಲ್ಯದಲ್ಲೇ ಸಾಹಿತ್ಯಾಸಕ್ತಿ ಇದ್ದಿತು.ಶಾಲಾಪತ್ರಿಕೆ  ’ ತರಂಗಿಣಿ’ ಪ್ರಾರಂಭಿಸಿ   ಕನ್ನಡ ಇಂಗ್ಲಿಷ್ ಮತ್ತು ಸಂಸ್ಕೃತ  ಬರಹಗಳನ್ನು ಪ್ರಕಟಿಸಿದ್ದರು.ಇವರ ಎಳವೆಯಲ್ಲಿಯೇ ಪ್ರಾರಂಭವಾದ ಸಾಹಿತ್ಯ ಕೃಷಿ  ಸುಮಾರು ಅರವತ್ತು ದಶಕಗಳ ಕಾಲ ಸಮೃದ್ಧವಾಗಿ ಸಾಗಿತು. ಮೊದಲ ಕೃತಿ ಹೊರ ಬಂದಿದ್ದು ಅವರ ಇಪ್ಪತ್ತಮೂರನೆಯ ವಯಸ್ಸಿನಲ್ಲಿ  . ೧೯೫೫ರಲ್ಲಿ "ಎಂದೆಂದೂ ಮುಗಿಯದ ಕತೆ" ಕಥಾ ಸಂಕಲನ. ಮೌನಿಪ್ರಶ್ನೆಆಕಾಶ ಮತ್ತು ಬೆಕ್ಕು -ಇವರ ಕಥಾಸಂಕಲನಗಳು. ಈ ಎಲ್ಲ ಕತೆಗಳನ್ನೂ ಒಳಗೊಂಡ "ಮೂರು ದಶಕದ ಕಥೆಗಳು" ೧೯೮೯ರಲ್ಲಿ ಹೊರಬಂದಿದೆ. ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯಕುದುರೆನವಿಲುಗಳುಬರಘಟಶ್ರಾದ್ಧತಾಯಿ,ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ.
ಅವರ ಕಾದಂಬರಿಗಳು  ಸಾಹಿತ್ಯ  ಜಗತ್ತಿಗೆ ಹೊಸ ದಿಕ್ಕನ್ನೇ ತೋರಿದವು  ೧೯೬೫ರಲ್ಲಿ  ಪ್ರಕಟವಾದ ಇವರ.   ಕಾದಂಬರಿ "ಸಂಸ್ಕಾರ" ಬ್ರಾಹ್ಮಣ ಸಂಪ್ರದಾಯದ ಅಸಂಗತೆಯನ್ನು ವಿಶದ ಪಡಿಸುವ ಈ ಕೃತಿ  ಪ್ರಕಟವಾದಾಗ ತುಂಬ ವಿವಾದವನ್ನುಂಟು ಮಾಡಿತು. ಇದು ಹಲವಾರು ದೇಶಿ ಮತ್ತು ವಿದೇಶಿಯ ಭಾಷೆಗಳಿಗೆ ಅನುವಾದಗೊಂಡಿದೆ. ಭಾರತೀಪುರ,ಅವಸ್ಥೆ ಮತ್ತು ಭವ -ಇವರ ಇತರ ಕಾದಂಬರಿಗಳು. ಅವರು ೧೯೫೮ ರಲ್ಲಿ ಬರೆದು ಪ್ರಕಟವಾಗಿರದಿದ್ದ "ಪ್ರೀತಿ-ಮೃತ್ಯು-ಭಯ"ಎಂಬ ಕಾದಂಬರಿ ೨೦೧೨ ಜೂನ್ ೧೦ಕ್ಕೆ ಬಿಡುಗಡೆಯಾಯಿತು.
ಚಲನ ಚಿತ್ರಂಗದಲ್ಲೂ ಇವರ ಕೃತಿಗಳು ಅಲೆ ಎಬ್ಬಿಸಿವೆ. ಅನಂತಮೂರ್ತಿಯವರ ಸಂಸ್ಕಾರಅವಸ್ಥೆ ಕಾದಂಬರಿಗಳನ್ನು ಮತ್ತು ಬರಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದುರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ.ಘಟಶ್ರಾದ್ಧ ಕತೆಯನ್ನು ಆಧರಿಸಿ "ದೀಕ್ಷಾ" ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು  ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ.
ಜ್ಞಾನಪೀಠಪ್ರಶಸ್ತಿ ಪಡೆದಾಗ
ಅವರು  "೧೫ ಪದ್ಯಗಳು", "ಮಿಥುನ" ಮತ್ತು "ಅಜ್ಜನ ಹೆಗಲ ಸುಕ್ಕುಗಳು" ಎಂಬ ಮೂರು ಕವನ ಸಂಕಲನಗಳನ್ನೂ ಮತ್ತು . .ಆವಾಹನೆ" ಎಂಬ ಒಂದು ನಾಟಕವನ್ನು ರಚಿಸಿದ್ದಾರೆ.ಪ್ರಜ್ಞೆ ಮತ್ತು ಪರಿಸರಪೂರ್ವಾಪರಸಮಕ್ಷಮ -ಇವು ಅವರ ಪ್ರಬಂಧ ಸಂಕಲನಗಳು. ಇಷ್ಟಲ್ಲದೆ ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಿಕ   ಪತ್ರಿಕೆಗಳಲ್ಲಿ ಪ್ರಕಟವಾಗಿವೆ.೧೯೮೧ರಲ್ಲಿ ರಾಜಕೀಯಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು "ರುಜುವಾತು" ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು. 
ಇನ್ನೊಬ್ಬ  ಜ್ಞಾನ ಪೀಠಿ ಗಿರೀಶ್‌ಕರ್ನಾಡರೊಡನೆn
ಇವರು ಪ್ರಶಸ್ತಿಗಳ ಸರಮಾಲೆಯನ್ನೇ ಧರಿಸಿದವರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಮಾಸ್ತಿ ಪ್ರಶಸ್ತಿ –ಮತ್ತು  ಜ್ಞಾನ ಪೀಠ ಪ್ರಶಸ್ತಿಗಳು  ಅನಂತಮೂರ್ತಿಯವರಿಗೆ ಬಂದಿವೆ. ಅಂತರಾಷ್ಟ್ರೀಯ ಮಟ್ಟದ ಬೂಕರ್‌ಪ್ರಶಸ್ತಿಯ ಅಂತಿಮ ಹಂತ ತಲುಪಿದ್ದರು.. ಭಾರತ ಸಕಾರದ ಪದ್ಮ ಭೂಷಣವೂ ದೊರೆತಿದೆ. ಸಂಸ್ಕಾರಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಅನಂತಮೂರ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆ.
ಇಂಗ್ಲಿಷ್‌  ಪ್ರವಾಚಕರಾಗಿ ವೃತ್ತಿ ಪ್ರಾರಂಭಿಸಿದ ಇವರು ಹಂತಹಂತವಾಗಿ ಮೇಲೇರಿ ಪ್ರಾಧ್ಯಾಪಕರಾದರು. 
ದೇಶವಿದೇಶಗಗಳ ಪ್ರತಿಠಿತ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವರು , ಕೇರಳದ ಮಹಾತ್ಮಗಾಂಧಿ ವಿಶ್ವ ವಿದ್ಯಾಲಯ, ಕರ್ನಾಟಕದ ಸೆಂಟ್ರಲ್‌ ಯುನಿವರ್ಸಿಟಿಯ    ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು. ವ್ಯಾಪಕವಾಗಿ ವಿದೇಶಿ ಪ್ರವಾಸ ಮಾಡಿರುವ ಅವರು ಭಾಗವಹಿಸಿದ  ಅಂತರಾಷ್ಟ್ರೀಯ ಸಮ್ಮೇಳನ ಮತ್ತು ವಿಚಾರಸಂಕಿರಣಗಳು ಅಸಂಖ್ಯಾತ.  ನ್ಯಾಷನಲ್‌ಬುಕ್‌ ಟ್ರಸ್ಟ, ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್‌ ಫಿಲ್ಮ್‌ ಅಂಡ್‌  ಟೆಲಿವಿಜನ್‌ ಇನಸ್ಟಿಟ್ಯೂಟ್ ಅದ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ರಾಷ್ಟ್ರ ಮಟ್ಟದಲ್ಲಿ ಅನಂತಮೂರ್ತಿಇಲ್ಲದ ಯಾವುದೇ ಸಾಹಿತ್ಯ ಸಮಾರಂಭ ಅಪರೂಪ..
ಅನಂತ ಮುರ್ತಿಯವರ  ಸಾಮಾಜಿಕ ಪ್ರಜ್ಞೆ ಸದಾಜಾಗೃತ. ಕೊನೆಯವರೆಗೂ ಪ್ರತಿಯೊಂದು ಸಮಸ್ಯೆಗೂ ಅವರ ಸ್ಪಂದನೆ ಇದ್ದೇ ಇರುತಿತ್ತು ಅದು ಜನಪರ ಎಂದು ಅವರು ಭಾವಿಸಿದ್ದರೆ ಜನಪ್ರಿಯವಲ್ಲದ ನಿಲುವಿಗೂ ಅವರು ಬದ್ದರು..ಹೀಗಾಗಿ ಅನೇಕ ವಿವಾದಗಳ ಹುತ್ತ ಅವರ ಸುತ್ತ . 
ಜ್ಯಾತೀತ ದಳದ ನಾಯಕರೊಡನೆ
ರಾಜಕೀಯವಾಗಿ ಕ್ರಿಯಾಶೀಲ. ಬಲಪಂಥದ ಕಟ್ಟಾ ವಿರೋಧಿ. ಸಕ್ರಿಯ ರಾಜಕಾರಣಿಗಳ  ಸಂಗ ಅವರಿಗೆ ಅಧಿಕಾರದ ಹಪಾ ಹಪಿ ಇದೆ ಎನಿಸುವಷ್ಟು ನಿಕಟ. ದಿ.ರಾಮಕೃಷ್ಣಹೆಗಡೆ,ದಿ ಜೆ.ಎಚ್‌.ಪಟೇಲ್,ಮಾಜಿಪ್ರದಾನಿ, ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದವರು  ಬಹಳ ಹತ್ತಿರ. ರಾಜ್ಯಸಭಾ ಸದಸ್ಯರಾಗ ಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆ ಸೇರಿದ್ದು ಟೀಕೆಗೆ ಕಾರಣವಾಗಿತ್ತು.  ಯಾರವರು ಅನಂತಮೂರ್ತಿ? ಎಂದು ರಾಜಕೀಯ ನಾಯಕರೊಬ್ಬರು ವ್ಯಂಗ್ಯವಾಡಿದರೂ ಸಂಕೋಚವಿಲ್ಲ.. ಮೋದಿಯವರು ಪ್ರಧಾನ ಮಂತ್ರಿಯಾದರೆ ದೇಶ ತೊರೆಯುವೆ ಎಂಬ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣ.

 ಸಾಹಿತ್ಯ ರಂಗದಲ್ಲೂ ವಿಚಾರವಾದಿಗಳು ಮತ್ತು ಎಡಪಂಥೀಯರೆಡೆಗೆ ಒಲವು. ಅವರ ಮತ್ತು ಎಸ್ ಎಲ್ ಬೈರಪ್ಪನವರ ಜೊತಗಿನ  ವೈಚಾರಿಕ ಘರ್ಷಣೆ ತುಂಬ ಕುತೂಹಲಕಾರಿ. ಅವರೊಂದು ರೀತಿಯ ಯೋಚನಾ ಲಹರಿಯ , ವಿಚಾರ ಪ್ರಜ್ಞೆಯ ಸಾಕ್ಷಿಪ್ರಜ್ಞೆ. ಅಳಕು ಅಂಜಿಕೆ ಇಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ದಿಟ್ಟ. ವರಿಗೆ ಯುವಬರಹಗಾರರನ್ನು ಕಂಡರೆ ಬಹು ಪ್ರೀತಿ. ಹೊಸ ವಿಚಾರಕ್ಕೆ ತೆರೆದ ಮನ.. ಅವರ ಅಗಲುವಿಕೆಯಿಂದ ನೂರಾರು ಬರಹಗಾರಿಗೆ ಅನಾಥ ಪ್ರಜ್ಞೆ ಕಾಡುವುದು ಖಂಡಿತ.

ಭಾರತೀಯ ಸಾಹಿತ್ಯ ರಂಗದಲ್ಲಿ ಕರ್ನಾಟಕದ ಸಾಮಾಜಿಕ ವಲಯದಲ್ಲಿ ಒಂದು ಬಹು ಪ್ರಭಾವಿ ವರ್ಣರಂಜಿತ ವ್ಯಕ್ತಿತ್ವದ ಕೊರತೆ ಬಹುಕಾಲದವರೆಗೆ ಕಾಡುವುದು. ಅವರಿಗಿರುವ ಪ್ರಾಮುಖ್ಯತೆ,ಜನಪ್ರಿಯತೆ ಮತ್ತು ಸಾಹಿತ್ಯ ಸಾಧನೆಯ ಸಂಕೇತವಾಗಿ ರಾಜ್ಯ ಸರ್ಕಾರವು ಮೂರುದಿನ ಶೋಕಾಚರಣೆ ಘೋಷಿಸಿದೆ. ಸಮಾಜ ಮತ್ತು ರಾಜಕಾರಣದ ಮಾರ್ಗದರ್ಶಕನಿಗೆಸಕಲಸರ್ಕಾರಿಗೌರವದೊಂದಿಗೆ ಅಂತಿಮಕಾರ್ಯ ಆಚರಣೆಗೆ ಮುಂದಾಗಿದೆ. ಆಗಸ್ಟ ೨೨, ೨೦೧೪ ರಂದು ಉದ್ದಾಮ ಸಾಹಿತಿ, ಪ್ರಖರ ಸಾಮಾಜಿಕ ಕಳಕಳಿ ಹೊಂದಿರುವ ಸಮಾಜಮುಖಿ, ಅಖಂಡ ಜೀವನಪ್ರೀತಿ ಹೊಂದಿದ  ಅನಂತಮೂರ್ತಿಯವರ ಆತ್ಮ ಅನಂತದಲ್ಲಿ ಲೀನವಾಗಿದೆ.


Wednesday, August 20, 2014

ಈಜಿಪ್ಟಿನ ಚಿತ್ರ ಲಿಪಿ


ಈಜಿಪ್ಟಿನ ಚಿತ್ರ ಲಿಪಿ:
ಎಚ್. ಶೇಷಗಿರಿರಾವ್

(ಹೈಗ್ರೊಗ್ಲಿಫಿಕ್‌)
ಈಜಿಪ್ಟಿನ ಚಿತ್ರ ಲಿಪಿ(Hieroglyph) ಪ್ರಪಂಚದ ಅತಿ ಪ್ರಾಚೀನ ಲಿಪಿಗಳಲ್ಲಿ ಒಂದು. ಅವುಗಳ ಕಾಲ ಮೂರು ಕ್ರಿ.ಪೂ. ಮೂರು ಸಹಸ್ರಮಾನಕ್ಕೂ ಪುರಾತನ. ಸಮಕಾಲೀನ ಸುಮೇರಿಯನ್‌ ಕ್ಯೂನಿಫಾರಂ ಲಿಪಿಯಂತೆ ಚಿತ್ರಲಿಪಿಗಳ ಮೂಲ  ಬಹಳ ನಿಗೂಢವಾಗಿದೆ, ಅದಕ್ಕೆ ಗುರುತಿಸ ಬಹುದಾದ ಹಿಂದಿನ ಲಿಪಿ ಇಲ್ಲ. ಈಜಿಪ್ಟಿನ ಪ್ರಾಚೀನ ದೇವಾಲಯದ ಗೋಡೆಗಳ ಮೇಲೆ, ಬಂಡೆ ಮತ್ತು ಶಿಲೆಗಳಲ್ಲಿ ಕಂಡರಿಸಿದ, ಪಿರಮಿಡ್ಡುಗಳಲ್ಲಿ, ಸಮಾಧಿಯ ಒಳಗೆ ಮತ್ತು ಪೆಪ್ರಸ್‌ ಸುರಳಿಗಳ ಮೇಲೆ ಪ್ರಾಚೀನ ಬರಹವು ಕಂಡುಬರುತ್ತದೆ. ಒಂದು ಕಾಲದಲ್ಲಿ ಚಿತ್ರಲಿಪಿಯ ಮೂಲ ಧಾರ್ಮಿಕ ಮತ್ತು ಐತಿಹಾಸಿಕ ಬರವಣಿಗೆ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಯಿಂದ ಈ ಲಿಪಿಯು ಹಣಕಾಸಿನ ವ್ಯವಹಾರಕ್ಕೂ ಬಳಕೆಯಾಗಿರುವುದು ಕಂಡು ಬಂದಿದೆ.
ಈಜಿಪ್ಟಿನಲ್ಲಿ ಮೂಲದಲ್ಲಿ ಚಿತ್ರಲಿಪಿಗಳ ಸಂಖ್ಯೆಯು ಸಂಖ್ಯೆ ೭೦೦ ಕ್ರಮೇಣ ಕ್ರಿ.ಪೂ. ೬೦೦ರ ಹೊತ್ತಿಗೆ ಎರಡರಷ್ಟಾದವು.
ಹೀರಾ ಎಂದರೆ ಪವಿತ್ರ, ಗ್ಲಿಫಿನ್‌ ಎಂದರೆ ಕೊರೆಯುವುದು-ದೇವಸ್ಥಾನ ಮತ್ತು ಪಿರಮಿಡ್‌ ಪವಿತ್ರ ಸ್ಥಳಗಳ ಗೋಡೆಗಳ ಮೇಲೆ ಕೊರೆಯುವುದು ಎಂಬ ಅರ್ಥವಿದೆ. ಇದು ಪುರೋಹಿತರ ಲಿಪಿ. ರೋಮನರ ದಾಳಿಯಾಗುವವರೆಗೆ ಇತ್ತು. ಚಿತ್ರಲಿಪಿ ಅಂದರೆ ನೈಜರೂಪವನ್ನು ಯಥಾರೀತಿ ಚಿತ್ರಿಸುವುದು (Perspective) ತೋಳು ತೋರಿಸಲು ಹಸ್ತ, ಬಾಯಿಗೆ ಮುಖ, ಇತ್ಯಾದಿ. ಅವರು ಬಳಸಿದ್ದು ನೈಸರ್ಗಿಕ ಬಣ್ಣ- ತಾಮ್ರ ನೀಲಿ, ಬಂಗಾರ ಹಳದಿ. ಈಜಿಪ್ಟಿನ ಬರಹಪದ್ದತಿಯು ಬಹಳ ಸಂಕೀರ್ಣವಾಗಿರುವುದು.
೧. ಹೈರೊಗ್ಲಿಫಿಕ್‌ ಸಂಕೇತಗಳನ್ನು ನಾಲ್ಕು ವಿಬಾಗಗಳಾಗಿ ಮಾಡಿರುವರು.' ೧. ಅಕ್ಷರ ಸಂಕೇತಗಳು ಒಂದೆ ಧ್ವನಿಯನ್ನು ಪ್ರತಿನಿಧಿಸುತ್ತವೆ.ದುರದೃಷ್ಟವಶಾತ್‌ಅವರು ಸ್ವರಗಳ ಕುರಿತು ತಲೆ ಕೆಡಸಿಕೊಳ್ಳಲೇಇಲ್ಲ ಅವರಲ್ಲಿ ‘ಇ' ಮತ್ತು ‘ವಿ' ಗಳಿಗೆ ಸಂಕೇತವೇ ಇಲ್ಲ. ಆದ್ದರಿಂದ ಪದಗಳನ್ನುಹೇಗೆ ರಚಿಸುತಿದ್ದರು ಎಂಬುದು ಕಲ್ಪನೆಗೆ ಬಿಟ್ಟದ್ದು.
೨. ಸಿಲಬಲ್‌ಗಳ ಸಂಕೇತಗಳು-ಎರಡು ಅಥವ ಮೂರು ವ್ಯಂಜನಗಳನ್ನು ಪ್ರತಿನಿಧಿಸುತಿದ್ದವು.
೩. ಪದ ಸಂಕೇತಗಳು- ಅವು ಜಡವಸ್ತು ಮತ್ತು ಜೀವಿಗಳನ್ನು ಚಿತ್ರವಾಗಿರುತಿದ್ದವು ಪ್ರತಿನಿಧಿಸುತ್ತಿವು. ಅದರಿಂದ ಚಿತ್ರ ಮೂಲವನ್ನು ಹೋಲುತಿತ್ತು ಅವಕ್ಕೆ ನೇರ ಗೆರೆಯೊಂದನ್ನು ಸೇರಿಸುವುದರಿಂದ ಅದು ಪೂರ್ಣವಾಗಿರುವುದು ಸೂಚಿತವಾಗುತಿತ್ತು. ೪. ನಿರ್ಧಾರಕಗಳು - ಅವು ಪದಾಂಶ ಅಥವ ಧ್ವನಿಯ ಸಂಕೇತಗಳಲ್ಲ . ಆದರೆ ಅವು ತಮ್ಮ ಹಿಂದೆ ಬರೆದಿರುವ ಸಂಕೇತಗಳ ಗುಂಪಿನ ಅರ್ಥವನ್ನು ಸ್ಪಷ್ಟ ಗೊಳಿಸುತ್ತವೆ.
ಸಿಮಾಟಿಕ್‌ಪೂರ್ವ ನಿಷ್ಪನ್ನ ಲಿಪಿಗಳಂತೆ ಇಜಿಪ್ಷಿಯನರು ಬರಿ ವ್ಯಂಜನಗಳನ್ನು ಮಾತ್ರ ಬಳಕೆ ಮಾಡುತಿದ್ದರು. ಅವರಲ್ಲಿ ಸ್ವರಗಳಿಗೆ ಸಂಕೇತಗಳಿರಲಿಲ್ಲ ಅದರಿಂದಾಗಿ ಧ್ವನಿ ಚಿತ್ರಗಳು ಏಕ ವ್ಯಂಜನ, ದ್ವಿ ವ್ಯಂಜನ, ಮತ್ತು ತ್ರಿವ್ಯಂಜನಗಳಾಗಿರುತ್ತವೆ.
ಇಜಿಪ್ಷಿಯನ್‌ಪವಿತ್ರ ಲಿಪಿಗಳ ಉಚ್ಚಾರ 
ಪ್ರತಿ ವ್ಯಂಜನಗಳ ಮಧ್ಯದಲ್ಲಿ ಯಾವ ಸ್ವರಗಳು ಬರುತ್ತವೆ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ. ವ್ಯಂಜನಗಳ ಸರಣಿಯನ್ನು ಮಧ್ಯದಲ್ಲಿ ಸ್ವರವಿಲ್ಲದೆ ಉಚ್ಚರಿಸುವುದು ಕಷ್ಟ. ಪುರಾತತ್ವ ಪರಿಣಿತರು ಪವಿತ್ರ ಲಿಪಿಗಳ ಮಧ್ಯದಲ್ಲಿ ಸ್ವರಗಳನ್ನು ಸೇರಿಸುವ ಶಿಷ್ಟಾಚಾರವನ್ನು ಪಾಲಿಸಿದರು. ವ್ಯಂಜನಗಳ ನಡುವೆ A /e/ ಇಡಲಾಗುವುದು /y/ಅನ್ನು i/i/ ಎಂದೂ /w/ ಅನ್ನು /u/, ಮತ್ತು /3/ ಮತ್ತು  /‘>/ ಗಳನ್ನು  /a/ ಎಂದೂ ಬರೆಯಲಾಗುವುದು. ಹೇಗೋ ಏನೋ ಈ ಪದ್ದತಿಯು ಬಳಕೆಯಲ್ಲಿ ಬಂದಿದೆ,ಈಜಿಪ್ಟಿನ ಪದಗಳ ಉಚ್ಚಾರವು ಹೇಗೆ ಎಂಬುದು ಅನೇಕರಿಗೆ ತಿಳಿಯದು.  19ನೆಯ ವಂಶದ ಅರಸ R‘-mss ನನ್ನು ರಮಸೆಸ್‌ ಅಥವ ರೈಮೆಸೆಸ ಎಂದು ಕರೆಬಹುದೆಂದು ಕ್ಯೂನಿಫಾರಂ ಬರಹಗಳಿಂದ ತಿಳಿಯುವುದು. ಮೆಸಪಟೋಮಿಯಾ ಮತ್ತು ಈಜಿಪ್ಟಿನ ನಡುವಿನ ರಾಜತಾಂತ್ರಿಕ ಪತ್ರ ವ್ಯವಹಾರದಲ್ಲಿ ಈ ಉಲ್ಲೇಖ ಕಾಣಬಹುದು.
ನಿರ್ಣಾಯಕಗಳು ಪದಾಂಶಗಳು. ಆದರೆ ತಮ್ಮದೆ ಆದ ಧ್ವನ್ಯಾತ್ಮಕ ಮೌಲ್ಯ ಹೊಂದಿಲ್ಲ. ಯಾವುದೇ ಪದದ ಮುಂದೆ ಅವನ್ನು ಬರೆದರೆ ಆ ಶಬ್ದದ ಅರ್ಥವನ್ನು ಸ್ಪಷ್ಟ ಪಡಿಸುವುದು.ಅದಕ್ಕೆ ಕಾರಣ ಈ ಬರಹ ಪದ್ದತಿಯಲ್ಲಿ ಸ್ವರಗಳ ದಾಖಲೆಯೇ ಇಲ್ಲ. ಆದ್ದರಿಂದ ಅನೇಕ ಪದಗಳು ಒಂದೇ ರೀತಿಯ ಸಂಕೇತಗಳನ್ನು ಹೊಂದಿವೆ. ವಿವಿಧ ಸಂಕೇತ ಸಮೂಹಗಳು(ವಿಭಿನ್ನ ಸ್ವರಗಳಿಂದಾಗಿ) ವಿಭಿನ್ನಪದವಾಗುತ್ತವೆ.ಆದ್ದರಿಂದ ಬೇರೆ ಬೇರೆ ಪದಗಳನ್ನುಒಂದೇರೀತಿಯ ಸಂಕೇತಗಳ ಗುಂಪುಗಳ ಪದಾಂಶಗಳ ಸರಣಿಯಲ್ಲಿ ( ಬೇರೆ ಬೇರೆ ಸ್ವರ ಸೇರಿಸಿ) ಬರೆಯಬಹುದು. ಹೀಗಾಗಿ ನಿರ್ಧಾರಕಗಳು ಪದಾಂಶಗಳ ಸರಣಿಯ ಅರ್ಥವಿವರಣೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತವೆ.
ಸೂಚನೆ: ಚಿತ್ರ ಲಿಪಿ ಸೂಚಕಗಳು ನಿರ್ಧಾರಕಗಳಾಗಿವೆ.ಅವು ಪದಾಂಶವನ್ನುಚಿತ್ರಲಿಪಿಯಾಗಿ ಮಾರ್ಪಡಿಸುತ್ತವೆ. ಅನೇಕ ಚಿತ್ರಲಿಪಿಗಳು ಧ್ವನಿ ಲಿಪಿಗಳಾಗಿಯೂ ಬಳಕೆಯಾಗುತ್ತವೆ
ಚಿತ್ರಲಿಪಿ, ಪವಿತ್ರಲಿಪಿ ಮತ್ತು ಸಾಮಾನ್ಯ ಲಿಪಿ
ಈಜಿಪ್ಟ್ ತಜ್ಞರು ಸಂಪ್ರದಾಯಿಕವಾಗಿ ಈಜಿಪ್ಟಿನ ಲಿಪಿಯನ್ನು ಸ್ಥೂಲವಾಗಿ ಮೂರು ಭಾಗವಾಗಿ ವಿಂಗಡಿಸಿರುವರು: ಚಿತ್ರಲಿಪಿ(Hieroglyph), ಪವಿತ್ರಲಿಪಿ( hieratic), ಮತ್ತು ಸಾಮಾನ್ಯ ಲಿಪಿ( demotic). ಚಿತ್ರಲಿಪಿಯನ್ನು ಬಹುತೇಕ ಬಂಡೆ ಅಥವ ಬೃಹತ್‌ಸ್ಮಾರಕಗಳ ಮೇಲೆ ಕಂಡರಸಿರುವರು ಪವಿತ್ರಲಿಪಿಯು "ಅರ್ಚಕರ ಲಿಪಿ"  .ವ್ಯಾಪಕವಾಗಿ ಹಸ್ತಪ್ರತಿಗಳಲ್ಲಿ ಮತ್ತು ಚಿತ್ರಗಳಲ್ಲಿ ಬಳಕೆಯಾಗಿದೆ.ಅದು ವಾಸ್ತವವಾಗಿ ಸ್ಮಾರಕಗಳಲ್ಲಿಯ ಚಿತ್ರಲಿಪಿಯ ಕೂಡು ಬರಹವಾಗಿದೆ.ಸಾಮಾನ್ಯ ಲಿಪಿಯನ್ನು ದೈನಂದಿನ  ಬಳಕೆಯಲ್ಲಿ ಉಪಯೋಗಿಸಲಾಗುತಿತ್ತು. ಅದೂ ಕೂಡಾ ಬಹುವಾಗಿ ಕೂಡುಲಿಪಿಯೇ.ಅದು ಪವಿತ್ರಲಿಪಿಯ ಬದಲಾಗಿ ಕ್ರಿ. ಪೂ. ೬00 ಇಸ್ವಿಯಿಂದ ದೈನಂದಿನ ಬಳಕೆಯಲ್ಲಿತ್ತು. ವಾಸ್ತವವಾಗಿ ಒಂದು ಸಾಮಾನ್ಯ ಲಿಪಿಯನ್ನು ಒಂದಕ್ಕಿಂತ ಹೆಚ್ಚಾದ ಚಿತ್ರ ಲಿಪಿ ಅಥವ ಪವಿತ್ರಲಿಪಿಯಾಗಿ ಅನುವಾದಿಸಬಹುದು. ಆದ್ದರಿಂದ ಸಾಮಾನ್ಯ ಲಿಪಿಗೂ ಉಳಿದವಕ್ಕೂ ಸಂವಾದಿಯಾಗಿ ಒಂದೇ ಸಂಕೇತವಿದೆ ಎನ್ನುವ ಹಾಗಿಲ್ಲ.
ಈಗಾಗಲೇ ತಿಳಿಸಿರುವಂತೆ ಚಿತ್ರಲಿಪಿ ಮತ್ತು ಪವಿತ್ರ ಲಿಪಿಗಳನ್ನು ಪ್ರತಿನಿಧಿಸುವ ಸಂಕೇತಗಳು ಒಂದೇ ರೀತಿಯಲ್ಲಿರುತ್ತವೆ. ವಾಸ್ತವವಾಗಿ ಈ ಎರಡೂ ಪದ್ದತಿಗಳೂ ಈಜಿಪ್ಟಿನ ನಾಗರೀಕತೆಯ ಕ್ರಿ.ಪೂ.ಮೂರನೆಯ ಸಹಸ್ರಮಾನದ ಕೊನೆಯ ಅರ್ಧ ಭಾಗದಲ್ಲಿ ರಾಜವಂಶಪೂರ್ವ ಯುಗದಲ್ಲಿ ಉಗಮವಾದವು.ಇತ್ತೀಚೆಗೆ ರಾಜವಂಶಪೂರ್ವ ಅವಧಿಯ ಸ್ಕಾರ್ಪಿಯನ್ I ಅನ್ನು ಕುರಿತ ವಿವರ ಸಿಕ್ಕಿವೆ. ಅವನ ಸಮಾಧಿಯಲ್ಲಿ ( Abydos) ಅತಿ ಹೆಚ್ಚಿ ಸಂಖ್ಯೆಯ ಮುದ್ರೆಗಳು ದೊರೆತಿವ. ಅವುಗಳ ಕಾಲ ಕ್ರಿ. ಫೂ. ೩೪೦೦ ನಿಂದ ೩೨೦೦ ಆಗಿರುವುದರಿಂದ ಅವು ಈಜಿಪ್ಟಿನ ಅತ್ಯಂತ ಪುರಾತನ ಲಿಪಿಗಳಾಗಿವೆ.
ಅತಿಪುರಾತನ ಚಿತ್ರಲಿಪಿ ಕಂಡರಿಕೆಗಳ ಉದಾಹರಣೆ ಸಿಕ್ಕಿರುವುದು. ನಾರ್ಮರ್‌ನ  ವರ್ಣಫಲಕದಲ್ಲಿದೆ. ನಾರ್ಮರ್  ಒಬ್ಬ ಪ್ರಾಚೀನ ಅರಸ. ಅವನು ಸಾಂಪ್ರದಾಯಿಕ ಈಜಿಪ್ಟಿನ ಅರಸರ ಪಟ್ಟಿಯಲ್ಲಿ ಇಲ್ಲದಿದ್ದರೂ (ಸೆತಿ ಅರಸನ ಕಾಲದಲ್ಲಿ ತಯಾರಾದ ಅಬ್ಯದಾಸನ ರಾಜರ ಪಟ್ಟಿ). ಆದರೂ, ಅವನ ವರ್ಣಫಲಕದ ಮೇಲಿನ ಚಿತ್ರ ಲಿಪಿಯ ಪ್ರಕಾರ ಅವನು ಏಕೀಕೃತ ಈಜಿಪ್ಟಿನನ್ನು  ಕ್ರಿ. ಪೂ.೩೦೦೦ ಆಳಿದ. ಅವನು ಮೇಲಿನ ಮತ್ತು ಕೆಳಈಜಿಪ್ಟನ ಎರಡರ ಅರಸನಾಗಿದ್ದ. ಅನೇಕ ಈಜಿಪ್ಟಿನ ತಜ್ಞರು ಅವನನ್ನು ಆ ವಂಶದ ಪ್ರಥಮಅರಸ ಮೆಮನೆಸನ ಸಮಕಾಲೀನ ಎನ್ನುವರು, ಇನ್ನೂ ಕೆಲವರು ಅದಕ್ಕೂ ಮೊದಲಿದ್ದ ಎನ್ನುವರು ಸ್ಕಾರ್ಪಿಯನ್‌ಅರಸ II, ಮತ್ತು ಕಾ(ಝೆ್ಖೆನ್‌) ಅರಸರಿಧ್ದ "ಝಿರೋ ವಂಶ"ದವನು ಎನ್ನುವರು.
ನಾರ್ಮರ್ ಹೆಸರಿನ ಚಿತ್ರಲಿಪಿಯಲ್ಲಿ 2 ಪದಾಂಶಗಳಿವೆ. ನೇಮ್ (name,) ಮತ್ತು ಅದ್ನುಆವರಿಸಿದ ಸೆರಖ್. ಹೆಸರಿನ ಬರಹದ  ಮೇಲುಭಾಗವು ಕ್ಯಾಟ್‌ಫಿಷ್  ಕೆಳಭಾಗವು ಉಳಿ (serekh) ಈಜಿಪ್ಟ್ ಭಾಷೆಯಲ್ಲಿ. ರಾಜರ ಹೆಸರಿನ ಸುತ್ತ ಆವರಣ ಇರುವುದು. ಆ ಭಾಷೆಯಲ್ಲಿ  ಕ್ಯಾಟ್‌ಫಿಷ್‌ /n‘>r/, ಮತ್ತು ಉಳಿ /mr/.ಒಟ್ಟಾಗಿ ಸೇರಿಸಿ ಬರೆದರೆ ಅದರ ಉಚ್ಚಾರ /n‘rmr/. ಅದನ್ನು ನಾರ್ಮರ್( Narmer) ಎಂದುನಾವು ಕರೆದರೂ,ನಮಗೆ /n‘rmr/.ನಲ್ಲಿರುವ ವ್ಯಂಜನಗಳ ಮಧ್ಯದ ಸ್ವರ ಯಾವುದು ಎಂಬುದು ತಿಳಿಯದು.
ಸ್ಮಾರಕಗಳ ಚಿತ್ರಲಿಪಿಯ ಜೊತೆಗೆ ಕೂಡು ಬರಹದ ಪವಿತ್ರಲಿಪಿಯೂ ಕೂಡಾ "ಕಾ" ಅರಸನ ಆಳ್ವಿಕೆಯ ಅವಧಿಯಲ್ಲಿದ್ದಿತು. ಅದನ್ನು ಆ ಕಾಲದ ಮಡಕೆಯ ಮೇಲೆ ಕಾಣಬಹುದು. ತುಸು ಸಮಯದ ನಂತರದ ಉದಾಹರಣೆಗಳೆಂದರೆ "ಆಹ "ಅರಸ ಮತ್ತು "ಡೆನ್" ಅರಸರಕಾಲದ ಪ್ರಥಮವಂಶದವರ ಅವಧಿಯದು.ಆದರೆ 4ನೆಯ ವಂಶದವರ ಅವಧಿಯಲ್ಲಿ ಸಾಕಷ್ಟು ಪವಿತ್ರಲಿಪಿಗಳ ದಾಖಲೆಗಳು ಲಭ್ಯವಾಗಿವೆ. 
ಚಿತ್ರಲಿಪಿ ಬದಲಾಗದೇ ಇದ್ದರೂ, ಅವುಗಳನ್ನು ಕೂಡಿಸಿ ಬರೆಯಲಾಯಿತು. ಅದರಿಂದ ಹೆಚ್ಚಿನ ಸಂಖ್ಯೆಯ ಲಿಗೇಚರ್‌ಗಳ (ಸಂಲಗ್ನ) ಬಳಕೆಯಾಯಿತು ಕೆಳಗಿರುವ ಚಿತ್ರಲಿಪಿ ಮತ್ತು ಪವಿತ್ರ ಲಿಪಿಗಳನ್ನು ಹೋಲಿಸಿ(ಕಾಲ ಸುಮಾರು ಕ್ರಿ. ಪೂ. ೧೨೦೦):
ಮೊದಲ ಮತ್ತು ಎರಡನೆ ಸಾಲಿನ ನಡುವೆ ತುಸು ಹೋಲಿಕೆ ಗುರುತಿಸ ಬಹುದು, ನೀವು ಪವಿತ್ರ ಲಿಪಿಯೂ ಒಂದೆ ಸಂಕೇತವಾಗಿ ಬದಲಾಗಿರುವುದನ್ನೂ ಗುರುತಿಸ ಬಹುದು.ಪದೇಪದೇ ಬಳಸಿದ ಅನೇಕ ಸಂಕೇತಗಳು ಸೇರಿ  ಲಿಗೇಚರ್‌ಗಳಾಗಿರುವವು. ನಾವು' a' ಮತ್ತು 'e' ಗಳನ್ನು ಸೇರಿಸಿ  'æ'  ಎಂದು ಬರೆಯುವ ಹಾಗೆ.
ಅಂತಿಮವಾಗಿ ಪವಿತ್ರ ಲಿಪಿಯನ್ನುಅತಿಹೆಚ್ಚು ಸೇರಿಸಿಬರೆದ ಲಿಪಿಯು ಸಾಮಾನ್ಯ ಬರಹವಾಯಿತು. ಅದು ಚಿತ್ರ ಲಿಪಿಯ ಮೂಲದಿಂದ ಬಂದಿದೆ ಎಂಬ ಸುಳಿವೂ ಸಿಗುವುದಿಲ್ಲ. ಕ್ರಿ. ಪೂ. ೬೦೦, ಪೆಪ್ರಿಯ ಮೇಲೆ ದಾಖಲೆಗಳನ್ನು ಬರೆಯಲು ಬಳಸಲಾಗುತಿದ್ದ ಪವಿತ್ರ ಲಿಪಿಯು ಧಾರ್ಮಿಕ ಬರಹಗಳಿಗಾಗಿ ಸೀಮಿತ ಆಯಿತು. ಸಾಮಾನ್ಯ ಲಿಪಿಯು ದೈನಂದಿನ ಲಿಪಿಯಾಯಿತು. ಅದನ್ನು ಲೆಕ್ಕವಿಡಲು, ಸಾಹಿತ್ಯದಲ್ಲಿ ಇತರೆ ಬರಹಗಳಿಗೆ ಬಳಕೆಮಾಡಿದರು. ಕೆಳಗಿನದು ರೊಜೆಟ್ಟಾ ಶಿಲೆಯ ಮೇಲಿನ ಬರಹ. ಇದಕ್ಕೂ ಚಿತ್ರ ಲಿಪಿಗೂ ಯಾವುದೇ ಹೋಲಿಕೆ ಇಲ್ಲ. ಎಷ್ಟು ಕೂಡಿಸಿ ಬರೆಯಲಾಗಿದೆ ಎಂದರೆ ಅದು ಅರಾಮಿಕ್‌ ಲಿಪಿಯನ್ನು ಹೋಲುವುದು.
ಕ್ರಿ ಶ.5ನೆಯ ಶತಮಾನದ ಈಜಿಪ್ಟಿನ ಕೊನೆಯ ಶಾಸನ. ಇದು ಕಾಪ್ಟಿಕ್‌ಲಿಪಿಯಲ್ಲಿದೆ ( ಕೂಡಕ್ಷರ ). ಗ್ರೀಕ್‌ಆಧಾರಿತ ವರ್ಣಗಳು ಮತ್ತು   ಕೆಲವು ಸಾಮಾನ್ಯ ಸಂಕೇತಗಳ ಸಹಾಯದಿಂದ ಈಜಿಪ್ಟಿನ ಪ್ರಾಥಮಿಕ ಬರಹ ಪದ್ದತಿಯು  ಗ್ರೀಕ್‌ ಆಧಾರಿತ ವರ್ಣಗಳು ಮತ್ತು ಕೆಲವು ಸಾಮಾನ್ಯ ಸಂಕೇತಗಳ ಸಹಾಯದಿಂದ  ಉಗಮವಾಯಿತು. ಇವುಗಳನ್ನು ಬಳಕೆ ಮಾಡಿ ಬೇಕಾದ ಹೆಸರುಗಳನ್ನು ಬರೆಯಬಹುದು. ಆದರೆ ಮೂಲದ ಭಾಷೆಯ ಉಚ್ಚಾರಣೆ ಮಾಡಲು ಇದರಿಂದ ಆಗದು. ಆದರೆ ಈಗಿನ ಈಜಿಪ್ಷಿಯನ್ ಲಿಪಿಯು ಭಿನ್ನವಾಗಿದೆ . ಅಲ್ಲಿ ಅರೇಬಿಯನ್‌ಲಿಪಿಯನ್ನು ಬಳಸುವರು. ಯಾವುದೇ ಹೆಸರನ್ನು ಬೇಕಾದರೂ ಈ ಸಂಕೇತಗಳನ್ನು ಬಳಸಿ ಬರೆಯಬಹುದು, ಆದರೆ ಮಾನವರ ಹೆಸರು ಬರೆದಾಗ ಹೆಸರಿನ ಮುಂದೆ ಗಂಡಿನ ಮತ್ತು ಹೆಣ್ಣಿನ ಚಿತ್ರಲಿಪಿಯನ್ನು ಬರೆಯುವುದರಿಂದ ಅವುಗಳ ಲಿಂಗವನ್ನು ಗುರುತಿಸ ಬಹುದಾಗಿತ್ತು.
ಇತರ ಅನೇಕ ಸಂಸ್ಕೃತಿಗಳಂತೆ ಈಜಿಪ್ಷಿಯನ್‌ರು ತಮ್ಮ ಮೂಲ ಚಿತ್ರ ಲಿಪಿಗಳ ಬಳಕೆಯನ್ನು ಪೂರ್ತಿ ಕೈ ಬಿಡಲಿಲ್ಲ ಅಥವ ಸರಳಗೊಳಿಸಲಿಲ್ಲ . ಬಹುಶಃ ಅವು ಬಹಳ ಸುಂದರವಾಗಿರುವದೇ ಅದಕ್ಕೆಕಾರಣ'.  
ಹೈರೊಗ್ಲಿಫ್‌ಗಳನ್ನು ಅವರು " ದೇವರ ನುಡಿ" ಎಂದೆ ಭಾವಿಸಿದ್ದರು. ಅವನ್ನು ಪ್ರಮುಖವಾಗಿ ಅರ್ಚಕರು ಬಳಸುತಿದ್ದರು. ಪರಿಶ್ರಮದಿಂದ ರಚಿಸಬೇಕಾಗಿದ್ದ ಸಂಕೇತಗಳು ದೇವಸ್ಥಾನ ಮತ್ತು ಸಮಾಧಿಗಳಲ್ಲಿ ಅಲಂಕಾರಕ್ಕೂ ಕಾರಣವಾಗಿದ್ದವು. ಆದರೆ ದೈನಂದಿನ ವ್ಯವಹಾರಕ್ಕಾಗಿ ಅವರು ಮತ್ತೊಂದು ಲಿಪಿಯನ್ನು ಬಳಸಿದರು ಅದನ್ನೇ ಹಿರಾಟಿಕ್‌ ಲಿಪಿ ಎನ್ನುವರು. ಇದು ಕೈಬರಹದಂತೆ ಇರುವುದು. ಅದರಲ್ಲಿ ಚಿತ್ರಲಿಪಿಗಳನ್ನು ಸಂಕ್ಷಿಪ್ತಗೊಳಿಸಲಾಗಿತ್ತು ಬಹುತೇಕ ಅವುಗಳಿಂದ ಮೂಲದ ಗುರುತು ಸಿಕ್ಕುತ್ತಿರಲಿಲ್ಲ, ಅವು ಅಷ್ಟು ಅಮೂರ್ತವಾಗಿರುತಿದ್ದವು. ಅವುಗಳನ್ನು ದಾಖಲೆಗಳಿಗೆ ಬಳಸಿದರು.
ಬರಹವನ್ನು ಎಡದಿಂದ ಬಲಕ್ಕೆ ಅಥವ ಬಲದಿಂದ ಎಡಕ್ಕೆ ಅಂದರೆ ಎರಡೂ ರೀತಿಯಲ್ಲಿ ಬರೆಯಬಹುದಾಗಿತ್ತು. ಅವುಗಳನ್ನು ಕಂಬ ಸಾಲು ಅಥವ ಅಡ್ಡ ಸಾಲಿನಲ್ಲೂ ಬರೆಯುತಿದ್ದರು. ಕಂಬಸಾಲಿನಲ್ಲಿ ಬರೆಯುವಾಗಮೇಲಿನಿಂದ ಕೆಳಗೆ ಓದ ಬೇಕಿತ್ತು ಅಡ್ಡಸಾಲಿನಲ್ಲಿ ಓದಲು ಬರಹದಲ್ಲಿರುವ ಪ್ರಾಣಿಗಳ ಮುಖ ಯಾವ ದಿಕ್ಕಿನಲ್ಲಿ ಇರುವುದೋ ಆ ದಿಕ್ಕಿನಿಂದ ಓದಲು ಪ್ರಾರಂಭಿಸಬೇಕಿತ್ತು. ಮೊದಲು ಮೇಲಿನ ಸಂಕೇತಗಳನ್ನು ಓದಿ ನಂತರ ಕೆಳಗಿನ ಸಂಕೇತಗಳಿಗೆ ಹೋಗ ಬೇಕಿತ್ತು. ರೊಜೆಟ್ಟಾ ಶಿಲೆಯು ಸಿಕ್ಕಮೇಲೆ ಈಜಿಪ್ಷಿಯನ್‌ಲಿಪಿಯ ನಿಗೂಢ ಪ್ರಪಂಚ ತೆರೆದುಕೊಂಡು ನೈಲ್‌ನದಿಯ ಸಂಸ್ಕೃತಿಯ ಪೂರ್ಣ ಪರಿಚಯ ಆಗಿದೆ.

Saturday, August 16, 2014

ಖರೋಷ್ಠಿ

ಲುಪ್ತ ಲಿಪಿ - ಖರೋಷ್ಠಿ


ಎಚ್‌.ಶೇಷಗಿರಿರಾವ್‌
                              








 ಖರೋಷ್ಠಿ ಲಿಪಿ
ಭಾರತದ ಭಾಷೆಗಳ ಬರಹದ  ಮಾತೆ ಎನಿಸಿರುವ ಬ್ರಾಹ್ಮಿಲಿಪಿಯ ಇನ್ನೊಂದು ಸಮಕಾಲೀನ ಲಿಪಿ ಖರೋಷ್ಠಿ . .ಮೊಟ್ಟಮೊದಲು ಅದು ಬೆಳಕಿಗೆ ಬಂದುದೇ ಅಶೋಕನ ಶಾಸನಗಳ ಮೂಲಕ. ಅನೇಕ ಶಾಸನಗಳು ಅದರಲ್ಲೂ ವಾಯವ್ಯ ಭಾರತದಲ್ಲಿ  ಬ್ರಾಹ್ಮಿ ಮತ್ತು ಖರೋಷ್ಟೀ ಲಿಪಿಯಲ್ಲಿ ದೊರಕಿವೆ. ಅದರಲ್ಲೂ ಕೆಲವು ಕಡೆ ದ್ವಿಭಾಷಾ ಶಾಸನಗಳು  ಅಂದರೆ ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಗಳಲ್ಲಿನ ಶಾಸನಗಳು ದೊರೆತಾಗ ಖರೋಷ್ಠಿಯ ಅಧ್ಯಯನ ಹೊಸ ತಿರುವು ಪಡೆಯಿತು. ಜೊತೆಗೆ ಅನೇಕ ನಾಣ್ಯಗಳ ಮೇಲೆ ಒಂದು ಬದಿಯಲ್ಲಿ ಬ್ರಾಹ್ಮಿ ಮತ್ತು ಇನ್ನೊಂದು ಬದಿಯಲ್ಲಿ ಖರೋಷ್ಠಿಯ ಲಿಪಿಗಳ ಬರಹವೂ ಕಂಡು ಬಂದಿದೆ.
ದ್ವಿಭಾಷಾ ಲಿಪಿಇರುವ ನಾಣ್ಯ
ಖರೋಷ್ಟಿಯು ಭಾರತದ ವಾಯವ್ಯ ಪ್ರಾಂತ್ಯಗಳಲ್ಲಿ ಕ್ರಿ.ಪೂ.4ನೆಯ  ಶತಮಾನದಿಂದ ಕ್ರಿ.ಪೂ.೩ ನೆಯದಲ್ಲಿ ಶತಮಾನದಲ್ಲಿ ಪ್ರಚಲಿತವಿದ್ದ  ಲಿಪಿಅದು ಒಂದು  ಹಂತದಲ್ಲಿ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳನ್ನುಬರೆಯಲು ಬಳಕೆಯಾಗುತಿತ್ತುಅದು ಬ್ರಾಹ್ಮೀ ಲಿಪಿಗೆ ಸರಿದೊರೆಯಾಗಿತ್ತುಅದನ್ನು ಸಾಮ್ರಾಟ್‌  ಅಶೋಕನು ತನ್ನಶಾಸನಗಳಲ್ಲಿ ವ್ಯಾಪಕವಾಗಿ ಬಳಸಿದನು ಹಲವು ಕಡೆ ಪ್ರಾಕೃತ ಮತ್ತು ಖರೋಷ್ಠಿಗಳನ್ನು ಒಟ್ಟೊಟ್ಟಿಗೆ  ಬಳಸಿರುವುದು  ಕಂಡುಬಂದಿದೆ..
ಖರೋಷ್ಟಿಯು ಅರಾಮಿಕ್‌ ಲಿಪಿಯಿಂದ ಉಗಮವಾಗಿದೆ..ಕಾರಣ ಆ ಪ್ರದೇಶವು ಅಕಾಮೆನಿಡ್‌ ಸಾಮ್ರಾಜ್ಯದ ಭಾಗವಾಗಿತ್ತು ಕ್ರಿ. ಪೂ. ಐದನೆಯ ಶತಮಾನದಲ್ಲಿ ಅವರ ಆಧೀನದಲ್ಲಿದ್ದುದರಿಂದ ಆ ಭಾಷೆಯ ಪ್ರಬಾವ ಅವರ ಮೇಲೆ  ಬಿದ್ದಿತು.

ಖರೋಷ್ಠಿ ಲಿಪಿಯನ್ನು  ಬಂಡೆ, ಲೋಹ, ಚರ್ಮ ಮತ್ತು ಪಾರ್ಚಮೆಂಟಗಳ ಮೇಲೆ ಬರೆದಿರುವ ದಾಖಲೆ ದೊರೆತಿವೆ.  ಅವುಗಳಲ್ಲಿ ಬೌದ್ಧ ಧರ್ಮದ ಬರಹಗಳೇ ಅಧಿಕ.. ಆ ದಾಖಲೆಗಳು ಕೊಡುಗೆ , ದಾನ , ಸ್ಥೂಪ ನಿರ್ಮಾಣದ ವಿವರನೀಡುತ್ತವೆ. ಅದೂ ಅಲ್ಲದೆ ಖರೋಷ್ಠಿಯನ್ನು ಸಾಹಿತ್ಯ ಮತ್ತು ಆಡಳಿತ ಉದ್ದೇಶಕ್ಕೂ ಬಳಸಿರುವುದು ಕಂಡು ಬರುತ್ತದೆ.  .
ಖರೋಷ್ಠಿಯ ವ್ಯಾಪಕ ಅಧ್ಯಯನವು  ಸಾಧ್ಯವಾದುದು ಬೌಧ್ಧ ಧರ್ಮದ ಪ್ರಾಚೀನ ಹಸ್ತಪ್ರತಿಗಳಿಂದ ಗಾಂಧಾರಿ ಭಾಷೆಯಲ್ಲಿನ ೨೭ ಬರ್ಚ ಮರದ ತೊಗಟೆಯ ಮೇಲೆ ಬರೆದಿರುವ ಖರೋಷ್ಠಿ  ಲಿಪಿಯ ಬರಹವು ೧೯೯೪ ರಲ್ಲಿ ದೊರಕಿದವುಅದನ್ನು ಮೊದಲು ಬ್ರಿಟಿಷ್‌ಲೈಬ್ರರಿ ಪಡೆಯಿತು  ವಾಷಿಂಗ್ಟನ್‌ ವಿಶ್ವ ವಿದ್ಯಾನಿಲಯದ  ವಿಶೇಷ ಅಧ್ಯಯನ ಪೀಠ ಈ ಕೆಲಸ ಪ್ರಾರಂಬಿಸಿತುಈ ಹಸ್ತಪ್ರತಿಗಳು ಕ್ರಿಪೂ.ಒಂದನೆಯ ಶತಮಾನದಿಂದ  ಕ್ರಿ.ಶ ಮೂರನೆಯ ಶತಮಾನದವರೆಗಿನ  ಅವಧಿಯ ಯದ್ಧವಾಗಿದ್ದವುಇವು ದಕ್ಷಿಣ ಏಷಿಯಾದಲ್ಲಿ ಮತ್ತು ಖರೋಷ್ಠಿ ಲಿಪಿಯಲ್ಲಿ ದೊರೆತ ಅತ್ಯಂತ ಪ್ರಾಚೀನ ಹಸ್ತಪ್ರತಿಗಳು ಎನ್ನಬಹದು.   .ಇಮತ್ತು      ಕ್ಷಿಣ ಏಷಿಯಾದಲ್ಲಿನ ಬೌದ್ಧ ಧರ್ಮದ ಸ್ಥಿತಿಗತಿ ಮತ್ತು ಅದು ಮಧ್ಯಏಷಿಯಾದಲ್ಲಿ ಹರಡಿದ ಕುರಿತಾದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ..

ಶೋಕನ ಕಾಲದಲ್ಲಿ ಅರಸನ ಅಧಿಕೃತ ದಾಖಲೆಗಳು,ಲೆಕ್ಕ ಪತ್ರ, ಸರ್ಕಾರಿ ಮತ್ತು ಖಾಸಗಿ ಪತ್ರಗಳನ್ನು  ಮರದ  ಪಟ್ಟಿಕೆಗಳ ಮೇಲೆ ಖರೋಷ್ಠಿ ಲಿಪಿಯಲ್ಲಿ ಬರೆಯುತಿದ್ದರು. ಪುರಾತನ ಲವುಲಾನ್‌ ನಗರದಲ್ಲಿ ಅಂಥಹ ಕಟ್ಟಿಗೆಯ ಪಟ್ಟಿಕೆಗಳು ದೊರೆತಿವೆ.
ಮೌರ್ಯರ ಶಾಸನಗಳು ಬ್ರಾಹ್ಮಿ ಮತ್ತು ಖರೋಷ್ಟಿಲಿಪಿಯಲ್ಲಿ ಬರೆಯಲಾಗಿದೆ ಕಾರಣ ಸಾಮಾನ್ಯ ಜನರು ಎರಡು ಲಿಪಿಯನ್ನು ಅರ್ಥ ಮಾಡಿಕೊಳ್ಳುತಿದ್ದರು. ಬೌದ್ಧ   ಸಂಸ್ಕೃತ ಕೃತಿ “ ಲಲಿತ ವಿಸ್ತಾರ’ ಆಗಿನ ಕಾಲದಲ್ಲಿ ಪ್ರಚಲಿತವಿದ್ದ ೬೪ ಲಿಪಿಗಳ ದೀರ್ಘ ಪಟ್ಟಿಯನ್ನೇ ಕೊಡುವುದು. ಅದರಲ್ಲಿ ಖರೋಷ್ಠಿಯ ಹೆಸರೂ ಇದೆ ಖರೋಷ್ಠಿ  ಎಂದರೆ ಕತ್ತೆ ತುಟಿ    ಆಥವ ಒಂಟೆ ತುಟಿಯಂಥಹ ಲಿಪಿ ಎಂಬ ಅರ್ಥವನ್ನೂಕೊಡುವರು. .ಅರವತ್ತುನಾಲ್ಕು ಲಿಪಿಗಳಲ್ಲಿ ಅನೇಕ ಪ್ರಾದೇಶಿಕ, ಬುಡಕಟ್ಟು ಮತ್ತು ವಿದೇಶಿ ಲಿಪಿಗಳೆಂದು ವಿಭಾಗ ಮಾಡಲಾಗಿದೆ. ,
ಖರೋಷ್ಟಿ ಅಕ್ಷರಗಳು ಸುಮಾರು ಕ್ರಿ. ಪೂ.  .ನೆಯ ಶತಮಾನದಲ್ಲಿ  ಕಂಡುಬಂದಿವೆ. ಬಹುಶಃ ಅದರ ಮೂಲ ಅರಾಮಿಕ್‌ ಅಕ್ಷರಗಳಾಗಿರಬಹುದು. ಇದು ಸಾಮಾನ್ಯವಾಗಿ ವಾಯವ್ಯಭಾರತ ಮತ್ತು ಮಧ್ಯ ಏಷಿಯಾದಲ್ಲಿ ಕ್ರಿ.ಶ  4tನೆಯ ಶತಮಾನದ ವರೆಗೆ ಬಳಕೆಯಲ್ಲಿತ್ತು
ಇದಕ್ಕೆ ಬ್ರಾಹ್ಮಿಯಂತೆ  ಭಾರತ ಮತ್ತು ವಾಯುವ್ಯ ಏಷಿಯಾದಲ್ಲಿ ಉತ್ತರಾಧಿಕಾರಿಗಳು ಇಲ್ಲ. ಇದು ಮಧ್ಯ ಏಷಿಯಾದ ರಾಜ್ಯಗಳಲ್ಲಿ ಖೋತಾನ್‌ಮತ್ತು ಕ್ರೊರೆಯಿನ್ ರಾಜ್ಯಗಳಲ್ಲಿ ಅಧಿಕೃತ ಭಾಷೆಯಾಗಿ ಅಧಿಕೃತ ದಾಖಲೆಗಳಲ್ಲಿ ಬಳಸಲಾಗುತಿತ್ತು ಮೂರು ಮತ್ತು ನಾ;ಲ್ಕನೆ ಶತಮಾನದಲ್ಲಿ.ರೇಷ್ಮೆ ರಸ್ತೆಯ ಬದಿಯಲ್ಲಿದ್ದ ನಗರಗಳಲ್ಲೂ ಏಳನೆ ಶತಮಾನದವರಗೆ  ಬಳಕೆ ಇದ್ದಿತು.   ಬಗ್ಗೆ1830ರಿಂದ 1840ರ ವರೆಗೆ ಅನೇಕ ವಿದ್ವಾಂಸರು ಸಂಶೋಧನೆ ಮಾಡಿರುವರುಜೇಮ್ಸ ಪ್ರಿನ್ಸೆಪ್‌ಕ್ರಿಶ್ವಿಯನ್‌ ಲಸ್ಸಾನ್‌ಎದ್ವಿನ್‌ನೋರಿಸ್‌ರು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಿದರುಆದರೆ ಪರಸ್ಪರ ವಿಚಾರ ವಿನಿಮಯ ನಡೆಸುತಿದ್ದರು.ಅಂತಿಮವಾಗಿ ಅದರ ರಹಸ್ಯ ಬಯಲಾಯಿತು.
  ಭಾರತದಲ್ಲಿ ಖರೋಷ್ಟಿ ಲಿಪಿಗೆ ಅನೇಕ ಹೆಸರುಗಳು ಇವೆ.” ಬೆಕ್ಟ್ರಿಯನ್‌”, “ಕಾಬೂಲಿ”, ಇಂಡೊ ಬೆಕ್ಟ್ರಿಯನ್‌ ಎಂದುಗುರುತಿಸುವರು.  ಖರೋಷ್ಠಿಯುಬ್ರಾಹ್ಮಿ ಲಿಪಿಯ ಜೊತೆಯಲ್ಲಿಯೇ ಭಾರತದಲ್ಲಿ ವಿವಿಧ ಬಾಗಗಳಲ್ಲಿ  ಸುಮಾರು ಏಳು ನೂರುವರ್ಷಗಳ ಕಾಲ ಬಳಕೆಯಾಗುತಿತ್ತು.  (  ಕ್ರಿ.. ಪೂ. 4ನೆಯ  ಶತಮಾನದಿಂದ  ಕ್ರಿ. ಶ  3ನೆಯ ಶತಮಾನದವರೆಗೆ AD), ಆದರೆಬ್ರಾಹ್ಮಿ ಲಿಪಿಯು ಭಾರತೀಯ ಭಾಷೆಗಳಿಗೆ ಹೆಚ್ಚು ಸೂಕ್ತವೆನಿಸಿದುದರಿಂದ ಬರಬರುತ್ತಾ ಖರೋಷ್ಠಿಯ ಜಾಗವನ್ನು ಆಕ್ರಮಿಸಿತುಆದರೂ ವಾಯವ್ಯ ಭಾರತದಲ್ಲಿ ಕುಟುಕು ಜೀವ ಹಿಡಿದಿತ್ತು
ಪಾಕೀಸ್ತಾನದ ಖೈಬರ್‌ಪ್ರದೇಸದಲ್ಲಿನ ಬಂಡೆ ಶಾಸನ


ಈ ಲಿಪಿಯು ಪೂರ್ಣ ಪ್ರಮಾಣದಲ್ಲಿ ಕಂಡು ಬಂದಿರುವುದು  ಅಶೋಕನ ಶಾಸನಗಳಲ್ಲಿ (ಶಹಬಜ ಘರ್‌ ಶಾಸನಗಳಲ್ಲಿ ).ಖರೋಷ್ಠಿಲಿಪಿಯ ಮೊದಲ ಶಾಸನವು ನಮಗೆ ದೊರೆತಿರುವುದು ಪಾಕೀಸ್ತಾನದಲ್ಲಿಅದರ ಕಾಲ  ಕ್ರಿಪೂ.2ನೆಯ  ಶತಮಾನ ಆದರೂ ಅನೇಕ ಮೂಲಗಳ ಪ್ರಕಾರ ಈ ಭಾಷೆಯು ಅದಕ್ಕೂ ಬಹು ಮೊದಲೇ ಜನಿಸಿತ್ತು ಮತ್ತು ಬಳಕೆಯಲ್ಲಿಯೂ ಇದ್ದಿತು ಎಂಬ ವಾದವೂ ಇದೆ.. ಖರೋಷ್ಠಿಯು ಹೆಚ್ಚು ಜನಪ್ರಿಯವಾಗದೇ ಇರಲು ಕಾರಣ ಅದನ್ನು ಬರೆಯುವ ರೀತಿ. ಎಲ್ಲ ಭಾರತೀಯ ಭಾಷೆಗಳನ್ನು ಓದುವುದು ಎಡದಿಂದ ಬಲಕ್ಕೆ  ಆದರೆ ಇದು ಮಾತ್ರ ಬಲದಿಂದ ಎಡಕ್ಕೆ . ಆದ್ದರಿಂದ ಇದನ್ನು ಬಳಸಲು ಹಿಂಜರಿದರು.ಆದರೂ ಖರೋಷ್ಠಿಯು ಆಫಘನಿಸ್ತಾನ, ಮಧ್ಯ ಏಷಿಯಾ ಮತ್ತು ಈಶಾನ್ಯ ಚೀನಾದ ಭಾರತದ ಬೆಕ್ಟ್ರಿರಿಯಾ ಮತ್ತು ಸ್ಕೈಥಿಯಾ ರಾಜ್ಯಗಳಲ್ಲೂ ಬಳಸಲಾಗುತಿತ್ತು.. ಆದರೂ ಕ್ರಿ.ಶ ಐದನೆಯ ಶತಮಾನದಲ್ಲಿ ಸಂಪೂರ್ಣವಾಗಿ ಮಾಯವಾಯಿತು. ಖರೋಷ್ಠಿ ವರ್ಣಮಾಲೆಯ ಮೂಲ ಅಕ್ಷರಗಳು ವ್ಯಂಜನಗಳು. ’  ಹೊರತಾಗಿ ಎಲ್ಲ ಸ್ವರಗಳೂ ಅವುಗಳನ್ನು  ಹಿಂಬಾಲಿಸುತ್ತವೆ. ಸ್ವರಗಳನ್ನು ಚಿಕ್ಕದಾದ ಹೆಚ್ಚುವರಿ ಸಂಕೇತಗಳಂತೆ ಬರೆಯಲಾಗುವುದು. ಆ ಸಂಕೇತಗಳು ವ್ಯಂಜನದ ಮೇಲೆ ಅಥವ ಕೆಳಗೆ ಇರಬಹುದು..
ಖರೋಷ್ಠಿಯಲ್ಲಿ ಹ್ರಸ್ವ ಸ್ವರ ಮತ್ತು ದೀರ್ಘ ಸ್ವರಗಳ ನಡುವೆ ವ್ಯತ್ಯಾಸ ಇಲ್ಲ.ಅಶೋಕ,  ಶಕ ಮತ್ತು ಕುಶಾನರ ಶಾಸನಗಳಲ್ಲಿ ಹ್ರಸ್ವ ಮತ್ತು ಧೀರ್ಘ ಸ್ವರಗಳ ವ್ಯತ್ಯಾಸ ಇಲ್ಲ   ಕೂಡು ಬರಹ. ಮೊದಲ ಸ್ವರಕ್ಕೆ ಒಂದೇ ಚಿಹ್ನೆ.ಉಳಿದ ಸ್ವರಗಳು ಅದಕ್ಕೆ ತುಸು ಬದಲಾವಣೆ ಮಾಡುವುದರಿಂದ ಪಡೆಯಲಾಗುವುದು
    ಕರೋಷ್ಠಿಯು ಪ್ರಮುಖವಾಗಿ ವರ್ಗೀಯ ಮತ್ತು ಅವರ್ಗೀಯ ವ್ಯಂಜನಗಳಿಂದಲೇ ಆಗಿದೆ. ವರ್ಣಮಾಲೆಯಲ್ಲಿ  ಇರುವುದು ೩೩ ಅಕ್ಷರಗಳು .ಪ್ರತ್ಯೇಕ ಸ್ವರಗಳಿಲ್ಲ..ಅಡ್ಡ ಸಾಲಿನಲ್ಲಿ ಎಡದಿಂದ ಬಲಕ್ಕೆ ಬರೆಯುವ ಖರೋಷ್ಠಿ  ..





ಪ್ರತಿ ಅಕ್ಷರದಲ್ಲಿಯೇ  /a/  ಸ್ವರ ಇದೆ. ಇತರೆ ಸ್ವರಗಳನ್ನು ಕಾಗುಣಿತದಂತೆ ಸೇರಿಸಬಹುದು  ( diacritics.)ಮೂಲಸ್ವರಕ್ಕೆ ವಿವಿಧ ಭಾಗದಲ್ಲಿ ಗರೆ ಸೇರಿಸುವುದರಿಂದ ಉಳಿದ ಸ್ವರಗಳನ್ನು ಸೃಷ್ಠಿಸುವರು.’ಇ’ ಕಾರವನ್ನು ಸೂಚಿಸಲು  ’ಅ’ ಅಕ್ಷರದ  ಎಡಭಾಗದಲ್ಲಿ ಛೇದಕ ಗರೆ ಎಳೆಯುವರು.ಉಕಾರವು ಅ’ ಅಕ್ಷರದ ಎಡಭಾಗದಲ್ಲಿ ಆದರೆ ಕೆಳಗೆ ಗೆರೆ ಎಳೆಯುವರು. ಎ ಕಾರವು ’ಇ’ ಕಾರ ಸೂಚಿಸುವ ಗೆರೆಯ ಅರ್ಧದಷ್ಟು ಉದ್ದವಾಗಿರುತ್ತದೆ.’ಓ’ ಕಾರವು ಅಕ್ಷರದ ಕೆಳಗೆ ಎಡಭಾಗದಲ್ಲಿ ಗೆರೆ ಇರುವುದು. ಅನುಸ್ವಾರಕ್ಕೆ  ಅಕ್ಷರಗಳ ಕೆಳಗೆ ’ಮ’ ಬರೆಯುವರು. ಒತ್ತಕ್ಷರಗಳನ್ನು ಒಂದು ಅಕ್ಷರದಲ್ಲಿ ಇನ್ನೊಂದು ಸೇರಿಸುವ ಮೂಲಕ ಪ್ರತಿನಿಧಿಸುವರು




                     
ಸ್ವತಂತ್ರ ಸ್ವರಗಳೇ ಇಲ್ಲ . ಮತ್ತು ದೀರ್ಘ ಸ್ವರಗಳು ಮತ್ತು ಸಂಯುಕ್ತ ಸ್ವರಗಳು ಇಲ್ಲದಿರುವುದು   ಗಮನಾರ್ಹ
  



          
                    ಅಂಕೆಗಳಲ್ಲಿಯೂ ಒಂದರಿಂದ ನಾಲಕ್ಕು ಮಾತ್ರ ಬಳಸಿರುವರು.

 

ಬ್ಯೂಹ್ಲರನ ಪ್ರಕಾರ ಇದು ಕರಣಿಕರ ಲಿಪಿ ಅದಕ್ಕೆ ದೀರ್ಘಸ್ವರಗಳಿಲ್ಲ. ಆದರೆ  ರಾಜ ಬಲಿಪಾಂಡೆಯವರ ಪ್ರಕಾರ ಇದನ್ನುಪ್ರಾಕೃತ ಭಾಷೆ ಬರೆಯಲು  ಬಳಸುತಿದ್ದುದರಿಂದ ಹೀಗಾಗಿದೆ. ಕಾರಣ ಅದರಲ್ಲಿ ದೀರ್ಘಸ್ವರ ಇಲ್ಲ  ಇದು ಸಿಮೇಟಿಕ್‌ ಪ್ರಭಾವದಿಂದ ಆಗಿರುವುದಲ್ಲ.

ಈಗ ತಿಳಿದಿರುವಂತೆ ಖರೋಷ್ಠಿಯು ಅರಾಮಿಕ್‌ಲಿಪಿಯಿಂದ ಉಗಮವಾಗಿದೆ ಮತ್ತು ಅದನ್ನು ಅಕಮೆಂಡೈಡ್‌ನ ಭಾರತೀಯ ಸಾಮಂತರ ಆಸ್ಥಾನದಲ್ಲಿ ಅನ್ವೇಷಿಸಲಾಗಿದೆ. ಖರೋಷ್ಠಿಯನ್ನು ಪೂರ್ಣವಾಗಿ ಅರಾಮಿಯಾ ಲಿಪಿಯನ್ನು ಯಥಾರೀತಿ ತೆಗೆದುಕೊಂಡಿಲ್ಲ ಅದರಲ್ಲಿ 33 ಅಕ್ಷರಗಳನ್ನು ತುಸು ಬದಲಾವಣೆಯೊಂದಿಗೆ ಅಳವಿಡಿಸಿಕೊಳ್ಳಲಾಗಿದೆ.
ಖರೋಷ್ಠಿ ಮತ್ತು ಬ್ರಾಹ್ಮಿ ಇವೆರಡರಲ್ಲಿ ಯಾವುದು ಭಾರತದಲ್ಲಿ ಮೊದಲು ಬಂದಿತು ಎಂಬುದು ಅನಿಶ್ಚಿತ. ಆದರೆ ಬ್ರಾಹ್ಮಿಯ ಮೇಲೆ ಖರೋಷ್ಠಿಯ ಪ್ರಭಾವ ಇದ್ದಂತೆ ಕಾಣುತ್ತದೆ.
 ಕರೋಷ್ಠಿ ಲಿಪಯನ್ನು ಭಾರತದ ಪ್ರಾಕೃತ ಮತ್ತು ಸಂಸ್ಕೃತ ಹಾಗೂ ಈರಾನಿನ ಬೆಕ್ಟ್ರಿಯನ್ ಸಸೇಯನ್‌ ಮತ್ತು ಸ್ಕೈಥಿಯನ್‌ ಭಾಷೆಗಳನ್ನು ಬರೆಯಲು ಬಳಕೆ ಮಾಡುತಿದ್ದರು

                              
               ಖರೋಷ್ಠಿ ಲಿಪಿಯಲ್ಲಿ ಅಡ್ಡ ಸಾಲಿನಲ್ಲಿ ಎಡದಿಂದ ಬಲಕ್ಕೆ ಬರೆಯುವರು..
  
                                                            ಮಾದರಿ ನರಹ

  
                                            ಬಲದಿಂದ ಎಡಕ್ಕೆ ಓದಿ: 


                                                       Ci-th.a ma-sa di-va-se pra-d.ha-me

                                          ಸಿ-ತ-ಅ-ಮ-ಸ-ಡಿ-ವ –ಸೆ ಪರ-ಹ-ಮೆ

                                               ಚೈತ್ರದ ಮೊದಲ ದಿನ