Tuesday, July 29, 2014

ನಿಸರ್ಗದ ನಡುವೆ ಜನ್ಮದಿನಾಚರಣೆ


ಕಡಲ ತಡಿಯಲ್ಲಿ ಹ್ಯಾರಿಸ್‌ ಹುಡುಕಾಟ

 ರಜಾ  ಎಂದರೆ ಮಜಾ ಎಂಬುದು ಬೇಸಿಗೆಯಲ್ಲಿ ಅಮೇರಿಕಾದ ಬಹುತೇಕರ ಅನಿಸಿಕೆ. ಈ ವಾರಾಂತ್ಯದಲ್ಲಿ  ಮೊನ್ನೆ ತಾನೇ ಸೆಸ್ಮೆ ಸ್ಟ್ರೀಟ್ ಎಂಬ ವಾಟರ್‌ಪಾರ್ಕಗೆ ಹೋಗಿದ್ದೆವು  ಮತ್ತೆ ಶನಿವಾರ ಏಕೆ ಮನೆಯಲ್ಲಿ ಕಾಲ ಕಳೆಯ ಬೇಕೆಂದು ಕಡಲತಡಿಗೆ ಸಂಜೆ ಭೇಟಿ ನೀಡಿದೆವು. ವಿವೇಕ ಪ್ರಸಾದ್‌ಕುಟುಂಬವೂ ನಮ್ಮ ಜೊತೆ  ಸೇರಿತ್ತು.ನಾಲ್ಕು ಗಂಟೆಗೆ ಬಿಡಬೇಕೆಂದಿದ್ದೆವು.. ಸಮಯದ ವಿಷಯದಲ್ಲಿ ಮಾತ್ರ ಅಪ್ಪಟ ಭಾರತೀಯರಾಎದ ನಾವು. ಯಥಾರೀತಿ ಒಂದು ಗಂಟೆ ತಡವಾಗಿ ಹೊರಟೆವು. ಕಡಲ ತೀರ ಸೇರಿದಾಗ ಆಗಲೇ ಐದೂವರೆ ಗಂಟೆನಮ್ಮ ಮನೆಯಿಂದ ಮೂರು ನಾಲ್ಕು ಬೀಚುಗಳಿಗೆ
 ಗಂಟೆಯೊಳಗೆ ಕಾರಲ್ಲಿ ಹೋಗಬಹದು . ಅಲ್ಲಿ ಇಲ್ಲಿ ಎಂದು ಚರ್ಚಿಸಿ ಕೊನೆಗೆ ಬ್ರಾಡ್ಲೆ ಬೀಚ್‌ಗೆ ಹೋದೆವು. ಇದು ಒಂದು ಚಿಕ್ಕಗ್ರಾ. ಜನ ಸಂಖ್ಯೆ ನಾಲ್ಕು ಸಾವಿರದ ಅಸು ಪಾಸು. ರೈಲು ಬಸ್ಸಿನ ಸಂಪರ್ಕವೂ ಇದೆ. ಅಮೇರಿಕಾದ ಜನವಸತಿಯ ಒಂದು ಮಾದರಿ ಗ್ರಾಮ. ಪ್ರವಾಸೋದ್ಯಮವೇ ಇಲ್ಲಿನ ಜನರ ಬದುಕಿನ ಜೀವಾಳ. ತೀರದ ಉದ್ದಕ್ಕೂ ಅಗಲವಾದ ರಸ್ತೆ. ಅಲ್ಲಿಯೇ ಕಾರು ನಿಲ್ಲಿಸಲು ನಿಗದಿಯಾದ ಸ್ಥಳ. ಇನ್ನೊಂದು ಬದಿಯಲ್ಲಿ ಸಾಲು ಸಾಲುಮನೆಗಳು. ವಾಣಿಜ್ಯ ಕಟ್ಟಡಗಳು. ನೋಡಲು ಮನೆಯಂತೆ ಆಗಿದ್ದರೂ ಅವು ಬೇಸಿಗೆ ಕಾಲದ ವಸತಿ ಗೃಹಗಳು.ಹೋಟೆಲ್ ಮತ್ತು ಇತರೆ ವ್ಯಾಪಾರ ಕೇಂದ್ರಗಳು.    ಡಲ ತೀರ ಶುಲ್ಕ ಸಹಿತವಾದುದು. ಅಂದರೆ ಹಣ  ನೀಡಿಯೇ ಒಳ ಹೋಗಬೇಕು. ಆದರೆ ಬೆಳಗ್ಗೆ ೯ ಗಂಟೆಯ ಒಳಗೆ ಮತ್ತು ಸಂಜೆ ಆರುಗಂಟೆಯ ನಂತರ ಮುಕ್ತ ಪ್ರವೇಶ. ಒಂದು ರೀತಿಯಲ್ಲಿ ನಾವು ತೀರ ತಡವಾಗಿ ಹೋದುದು ಅನುಕೂಲವೇ ಆಯಿತು. ಉಚಿತ ಪ್ರವೇಶ ಮತ್ತು ಕಾರ್‌ ಪಾರ್ಕಿಂಗ್ ದೊರೆಯಿತು

.ಮೂರುವರ್ಷದ ಹಿಂದೆ ಹೋದಾಗ್ಯೂ ಈಗ ಬಹಳ ವ್ಯತ್ಯಾಸ ಕಂಡು ಬಂದಿತು. ಆಗ ಪಾದಚಾರಿಗಳ ಪಥ ಕಟ್ಟಿಗೆಯದಾಗಿತ್ತು ಮತ್ತು ಬೀಚಿನಲ್ಲಿರುವ ಮನೆಗಳು ಹಳೆಯವು. ಈಗ ನೋಡಿದರೆ ಎಲ್ಲ ಲಕಲಕ ಹೊಳೆಯುತ್ತಿವೆ. ನಿರಂಚಿನಿಂದ ಸುಮಾರು ೧೦೦ ಮೀಟರ್‌ ನಂತರ ಎತ್ತರದ ಕಾಂಕ್ರೀಟ್‌ ಕಟ್ಟೆ ಅದರ ಮೇಲೆ ದಾರಿ, ಬೆಂಚುಗಳು, ವಿಶ್ರಾಂತಿಗೃಹ  ಇತ್ಯಾದಿ. ವಿಕಲಚೇತನರೂ ಗಾಲಿಕುರ್ಚಿಯಲ್ಲಿ ಬರಲು ಸೌಲಭ್ಯ.ಇದಿಷ್ಟು ಆದದ್ದು ಸ್ಯಾಂಡಿ ಚಂಡ ಮಾರುತ ಬಂದ ಮೇಲೆ. ಆಗ ಬಹುತೇಕ ನಾಶವಾಗಿದ ಎಲ್ಲವನ್ನು ಪುನರ್‌ನಿರ್ಮಿಸಲಾಗಿತ್ತು. ಅದಕ್ಕೆ ಸಕ್ಕಾರವು ವಿಶೇಷ ಅನುದಾನ ನೀಡಿತ್ತು. ಇಲ್ಲಿನ ಎಲ್ಲ ಮನೆಗಳಿಗೂ ಚಂಡ ಮಾರುತದಿಂದ ರಕ್ಷಣೆ ಪಡೆಯಲು ಎತ್ತರ ಹೆಚ್ಚಿಸಲು ತಲಾ ೩೦ಸಾವಿರ ಡಾಲರ್‌ ಅನುದಾನ ದೊರಕಿತ್ತು 


ಅದರ ಜೊತೆ ತಾವೂ ಹಣ ಹಾಕಿ ಬೇಸಿಗೆ ಬರುವಷ್ಟರಲ್ಲಿ ಎಲ್ಲ ದುರಸ್ತಿ ಮಾಡಿದ್ದರು ನಾಲ್ಕುಸಾವಿರದ ಜನ ಸಂಖ್ಯೆ ಈ ಗ್ರಾಮದಲ್ಲಿ ಬೇಸಿಗೆಯಲ್ಲಿ ಸುಮಾರು ೪೦,೦೦೦ಜನ ಪ್ರವಾಸಿಗಳುಬರುತ್ತಾರೆ. ಅವರಿಗೆ ಸಕಲ ಸೌಲಭ್ಯ ದೊರಕಿದರೆ ಮಾತ್ರ ಮರು ಭೇಟಿ. ಅದಕ್ಕೆ ಮೊದಲಿಗಿಂತ ಚೆನ್ನಾದ  ವ್ಯವಸ್ಥೆ ಮಾಡಿದ್ದರು. ಬೀಚಿನತ್ತ ಕಣ್ಣ ಹಾಯಿಸಿದರೆ ಬಹಳ ಖುಷಿಯಾಯಿತು ಎಲ್ಲೆಲ್ಲೂ ಕಸ ರಹಿತ ಮರಳು . ನೂರು ಮೀಟರ್‌ಗೆ ಒಂದರಂತೆ ಎತ್ತರದ ಲೈಫ್ ಗಾರ್ಡ ಗೋಪುರಗಳು, ಅದರ ಮೇಲೆ ಕಣ್ಗಾವಲಿನ ಪಡೆ.ಅಲ್ಲಲ್ಲಿ ಸಮುದ್ರದೊಳಗೆ ಒಳಚಾಚಿರುವ ಕಲ್ಲುಬಂಡೆಗಳಿಂದ ನಿರ್ಮಿಸಿದ ಜಟ್ಟಿಗಳು ಅದರ ಮೇಲೆ ಫಿಷಿಂಗ್ ‌ರಾಡ್ ಹಿಡಿದು ಮೀನು ಹಿಡಿಯುವಲ್ಲಿ ಮಗ್ನರಾದ ಹವ್ಯಾಸಿಗಳು. ಅವರ ಏಕಾಗ್ರತೆ ಧ್ಯಾನಮಾಡುವವರನ್ನು ಹೋಲುತಿತ್ತು. ಅರ್ಧ ಗಂಟೆಯಾದರೂ ಒಂದು ಮೀನೂ ಗಾಳಕಚ್ಚಿರಲಿಲ್ಲ. ಆದರೂ ಅವರು ತಮ್ಮ ಕಾಯಕ ಮುಂದುವರಿಸಿದ್ದರು. ಇದು ಅವರ ಹವ್ಯಾಸ , ಹಣ ಗಳಿಸುವ ಮಾರ್ಗವಲ್ಲ ಅಂದುಕೊಂಡೆ. ಸಾಗರದ ಅಲೆಗಳ ಮೇಲೆ ತೇಲು ಹಲಗೆ ಹಿಡಿದುಈಜುವ, ಬೋಟಿನಲ್ಲಿ ಹುಟ್ಟುಹಾಕುತ್ತಾ ಬಾತುಕೋಳಿಯಂತೆ ಕಾಣುವ ಹವ್ಯಾಸಿಗಳು . ತುದಿಯಲ್ಲಿ ನಿರಾಟವಾಡುವ ಹುಡುಗರು,ಖುಷಿ ಕೊಡುತಿದ್ದರು. ನೀರಲ್ಲಿ ಬಹುದೂರದ ವರೆಗೆ ತೇಲುಬುರುಡೆಗಳಿಂದ ಕೂಡಿದ ಬಲವಾದ ಪ್ಲಾಸ್ಟಿಕ್‌ ಹಗ್ಗಗಳು  ಬೀಚಿಗೆ ಬರುವವರಿಗೆ ಎಲ್ಲ ಸುರಕ್ಷತೆಯ ಆಶ್ವಾಸನೆ ನೀಡುವಂತಿದ್ದವು
.
ಹೊರಗಡೆಯ ತಾಪಮಾನ ೮೬ ಡಿಗ್ರಿ ಎಫ್ . ಬಿಸಿಲೋ ಬಿಸಿಲು. ಸರಿ ಮಕ್ಕಳ ಮರಿಗಳ ಸಮುದ್ರಸ್ನಾನಕ್ಕೆಂದು ಸ್ವಿಮ್ಮಿಂಗ್‌ ಉಡುಪು ಸಮೇತ ಹೊರಟೆವು. ಇಲ್ಲಿನದು ವಿಶೇಷವೆಂದರೆ ಯಾರೂ ಈಜುಡುಗೆ ತೊಡದೆ ನೀರಿಗೆ ಇಳಿಯುವ ಹಾಗಿಲ್ಲ. .ಕ್ಕಳಿಗಂತೂ  ಡಯಫರ್ ಕಡ್ಡಾಯ. ನಮ್ಮಲ್ಲಿಯಂತೆ ಹುಟ್ಟುಡುಗೆಯಲ್ಲಿ ನೀರಿಗೆ ಇಳಿಯುವ ಹಾಗಿಲ್ಲ. ಚಿಕ್ಕಮಗುವಾದರೂ ಡಯಫರ್ ಹಾಕಿರಲೇ ಬೇಕು.. ಯುವಜನಾಂಗ ಕನಿಷ್ಠ ಉಡುಪುಧರಿಸಿದರೂ ಆಕ್ಷೇಪವಿಲ್ಲ . ಕಾರಣ ಸ್ಪಷ್ಟ. ನೀರು  ಮಕ್ಕಳಿಂದ  ಮಲಿನವಾಗದಿರಲು ಕಾಳಜಿ. ಅಷ್ಟೇ ಅಲ್ಲ ತೀರದಲ್ಲಿಯೇ ನಿಯಮಾವಳಿಗಳ ಪಟ್ಟಿ. ಚರ್ಮರೋಗವಿರವವರು,ಹೊಟ್ಟೆ ನೋವು, ಅತಿಸಾರ ರೋಗಿಗಳು ನೀರಿಗಿಳಿಯಬಾರದು.  ಹೊಟ್ಟೆ ನೋವಿಗೂ ಸಮುದ್ರಸ್ನಾನಕ್ಕೂ ಏನು ಸಂಬಂಧ ಎನಿಸಿದರು ಯೋಚಿಸಿದಾಗ ಫಕ್ಕನೆ ಹೊಳೆಯಿತು. ಮೆರಿನಾ  ಬೀಚಿನಲ್ಲಿ ಬೆಳಗ್ಗೆ ಸಾಲು ಸಾಲುಜನ ಮಲವಿಸರ್ಜಸಿ ತೊಳೆದುಕೊಳ್ಳುವ ದೃಶ್ಯ. ಇಲ್ಲಿ ಅದಂತೂ ಸಾಧ್ಯವೇಇಲ್ಲ ಕಾರಣ ತೀರದುದ್ದಕ್ಕೂ ಭದ್ರವಾದ ಬೇಲಿ. ಜೊತೆಗೆ ಕಡಲ್ಗಾವಲು ಪಡೆ. ಪ್ರವೇಶ ದ್ವಾರದಲ್ಲಿಯೇ ರೆಸ್ಟ್ ರೂಮ್‌ಗಳು. ಅಲ್ಲಿಯೇ ಎಲ್ಲ ಮುಗಿಸಿ ನೀರಿಗಿಳಿಯ ಬೇಕು.

ಹೊರಗಿನ ಉಷ್ಣತೆ ೨೭ಡಿಗ್ರಿ ಸೆ. ಇದ್ದರೂ ನೀರಿನ ಉಷ್ಣತೆ ೧೫ ಡಿಗ್ರಿ ಮಾತ್ರ. ನಮಗಂತೂ ಕೊರೆವ ಚಳಿ ಎನಿಸುತಿತ್ತು. ಅದರಲ್ಲೂ ಖುಷಿಖುಷಿಯಾಗಿ ಈಜುಡುಗೆ ತೊಟ್ಟು ನೀರಿಗೆ ಇಳಿಯದಿದ್ದರೂ ತೀರದಲ್ಲಿ ನಲಿದಾಡುವವರೇ ಬಹಳ.ಜಿಂಕೆಯ ಮರಿಯಿಂದ ಹಿಡಿದು ಗುಜ್ಜಾನೆ, ನೀರಾನೆಗಳು ಸಹ ಚುರುಕಾಗಿ ಓಡಾಡುತ್ತಾ ಮಾತನಾಡುತ್ತಾ  ನೋಡುಗರ  ಕಣ್ಣು ತುಂಬಿಸಿದವು. ಮಕ್ಕಳು ಮರಳಾಟದಲ್ಲಿ ಮಗ್ನರು.ಅದಕ್ಕಾಗಿ ವಿಶೇಷ ಆಟಿಕೆಗಳು.ಅಲ್ಲ್ಲಿ ದೊಡ್ಡ ಬಣ್ಣದ ಕೊಡೆ ಏರಿಸಿ ಅದರ ಕೆಳಗೆ ಬಿಡಾರ ಹೂಡಿ ಹರಟುತ್ತಿರುವ ಸಂಸಾರಂದಿಗರು.ತಮ್ಮದೇ ರಾಜ್ಯದಲ್ಲಿ ವಿಹರಿಸುತಿದ್ದರು.ಇಲ್ಲಿನ ವಿಶೇಷವೇನೆಂದರೆ ಊಟ ತಿಂಡಿ ಯಾವುದನ್ನೂ ತೀರಕ್ಕೆ ಕೊಂಡೊಯ್ಯುವ ಹಾಗಿಲ್ಲ ನಿಯಮ ಮೀರಿದರೆ ತಕ್ಷಣ ಉಚ್ಚಾಟನೆ ಖಚಿತ. ಅದಕ್ಕೆ ಕಾಣುತ್ತದೆ ಬೀಚ್‌ ಅಷ್ಟು ಶುಚಿಯಾಗಿತ್ತು ಅಲ್ಲಿ ನೀರ ಸ್ನಾನಕ್ಕಿಂತ ಸೂರ್ಯ ಸ್ನಾನಕ್ಕೆ ಬಂದವರೇ ಹೆಚ್ಚು..ಮರಳ ಮೇಲೆ ಹಾಸು ಹಾಕಿ ಮುಖ ಮುಚ್ಚಿ ಮಲಗಿದವರು ಯೋಗನಿದ್ರಾ ನಿರತರಂತೆ ಕಂಡುಬಂದರು .
ಅಲ್ಲಿ ಇನ್ನೊಂದು ವಿಚಿತ್ರಕಂಡೆವು . ಸುಮಾರು ಹದಿನಾಲ್ಕುವರ್ಷ ವಯಸ್ಸಿನ ಹುಡುಗನೊಬ್ಬನು ಕೈನಲ್ಲಿ ಉದ್ದನೆಯ ಹಿಡಿಇರುವ ಉಪಕರಣ ಹಿಡಿದು ಮರಳಿನ ಮೇಲೆ ಅದರ ತುದಿಯನ್ನು ಆಡಿಸುತ್ತಾ ಹೊರಟಿದ್ದ. ಅದು ಎಲೆಕ್ಟ್ರಾನಿಕ್ ಮೆಟಲ್‌ಡಿಟೆಕ್ಟರ್. ಲೋಹದ ಸುಳಿವು ಕಂಡರೆ ತಲೆಗೆ ಹಾಕಿಕೊಂಡಿದ್ದ ಇಯರ್ ಫೋನ್‌ ನಲ್ಲಿ ಧ್ವನಿ ಮೂಡುತಿತ್ತು ಆಗ ಮರಳನ್ನು ಮೊಗೆದು ಜರಡಿಯ ತರದ ಉಪಕರಣದಲ್ಲಿ ಜಾಲಿಸುತಿದ್ದ ದೊರೆತ ನಾಣ್ಯಡೈಮ, ಕ್ವಾರ್ಟರ್, ಮತ್ತು ಡಾಲರ್‌ ನಾಣ್ಯವಾಗಿರುತಿತ್ತು. ಅವುಗಳನ್ನು ಪಸ್Fಲ್ಲಿ ಹಾಕಿಕೊಳ್ಳುತಿದ್ದ. .ಕುತೂಹಲದಿಂದ ಅವನನ್ನು ಮಾತನಾಡಿಸಿದೆವು. 

ಅವನ ಹೆಸರು ಹ್ಯಾರಿಸ್. ಹೈಸ್ಕೂಲ್ ವಿದ್ಯಾರ್ಥಿ. ಬೇಸಿಗೆಯಲ್ಲಿ ಸಂಜೆ ಎರಡು ಗಂಟೆ ಈ ಶೋಧ ಕಾರ್ಯ ಮಾಡುವನು. ಮರಳಿನಲ್ಲಿ ಪ್ರವಾಸಿಗರು ಉದುರಿಸಿಕೊಂಡ ನಾಣ್ಯಗಳು ದೊರೆಯುತಿದ್ದವು ದಿನಕ್ಕೆ ೪-೫ ಡಾಲರ್‌ ಸಂಗ್ರಹವಾಗುತಿದ್ದವು. ಅದು ಅಷ್ಟು ದೊಡ್ಡ ಮೊತ್ತವಲ್ಲ. ಆದರೆ ಹಲವು ಸಲ ಚಿಕ್ಕ ಪುಟ್ಟ ಆಭರಣಗಳೂ ದೊರೆತಿವೆ. ಕಳೆದ ಬೇಸಿಗೆಯಲ್ಲಿ ವಜ್ರಖಚಿತ ಉಂಗುರ ಒಂದು ಸಿಕ್ಕಿತಂತೆ. ಅದರಿಂದ ಸುಮಾರು ಸಾವಿರ ಡಾರ್ ಸಂಪಾದನೆಯಾಗಿತ್ತು..ಅಕಸ್ಮಾತ್ ಯಾರಾದರೂ ಕಳೆದುಕೊಂಡುದನ್ನು ಗಮನಿಸಿ ಹುಡುಕ ಬಯಸಿದರೆ ಗಂಟೆಗೆ ಐವತ್ತು ಡಾಲರ್‌ ಬಾಡಿಗೆಗೆ ಉಪಕರಣವನ್ನುಬಳಸಿ ಅವರೆದುರೇ ಶೋಧನೆಯ ಕೆಲಸ ಮಾಡುತಿದ್ದ. ಅವರಿಗೆ ಕಳೆದ ವಾಸ್ತು ದೊರೆಯಲಿ ಬಿಡಲಿ ಹಣ ಸಂಪಾದನೆ ಆಗುತಿತ್ತು. ಗಮನಸದೆ ಇದ್ದರಂತೂ ಸರೇ ಸರಿ, ತನ್ನ ಕಾಯಕ ಮಾಡುತಿದ್ದ..ಕಲಿಕೆ ಮತ್ತು ಗಳಿಕೆಯ ಕಾರ್ಯ ಒಟ್ಟಿಗೆ ಆಗುತಿತ್ತು. ಆದರೆ ಇದು ಅವನ ಸ್ವಯಂ ಉದ್ಯೋಗ.ಆ ಹುಡುಗನ ದುಡಿಮೆಯ ಹೊಸ ಹಾದಿ ಮೆಚ್ಚುಗೆ ಮೂಡಿಸಿತು.   ಹ್ಯಾರಿಸ್ ಹುಡುಕುವುದೇನು ಎಂಬುದು ತಿಳಿದಂತಾಯಿತು.



 ಬ್ರಾಡ್‌ ವೇ ಗ್ರಾಮದ ಉಪವನದಲ್ಲಿ ಒಂದು ಹಿರಿಯ ನಾಗರೀಕರ ಸಂಗೀತ ಕಾರ್ಯಕ್ರಮ ಇದ್ದಿತು. ಅಲ್ಲಿನ ಹಿರಿಯರನ್ನು ನೋಡಿ ನನಗೆ ಐವತ್ತು ವರ್ಷದ ಹಿಂದಿನ ನಮ್ಮೂರು ಜ್ಞಾಕಕ್ಕೆ ಬಂದಿತು. ಆಗ ಅಲ್ಲಿನ ಜನ ಹೊರಸು, ಗುಡಾರ ಕಂಬಳಿ ತಂದು ಬಯಲಾಟ ನೋಡುತಿದ್ದೆವು ಅದೇರೀತಿ ಇಲ್ಲಿ ಜನ ತಮ್ಮ ತಮ್ಮ ಕುರ್ಚಿ ತಾವೇ ತಂದುಕೊಂಡು ಕುಳಿತುಕೊಂಡು ಸಂಗೀತ ಕೇಳುತಿದ್ದರು. ಅವರೆಲ್ಲ ಹೋದ ಮೇಲೆ ಮೊಮ್ಮಗು ಅದ್ವೈತನ ಜನ್ಮದಿನದ ಕಾರ್ಯವನ್ನು  ಉಪವನದಲ್ಲಿಯೇ ನಡೆಸಿದೆವು ಅಲ್ಲಿಯೇ ಕೇಕ್ ತಂದು ಕತ್ತರಿಸಲಾಯಿತು ಜತೆಯಲ್ಲಿದ್ದ ಮಕ್ಕಳೆಲ್ಲ ಖುಷಿ ಪಟ್ಟರು.ಅಮೇರಿಕಾ ಲೆಕ್ಕದಲ್ಲಿ ಅದು ಅತ್ಯಂತ ಸರಳವಾಗಿತ್ತು ಆದರೆ  ರಾತ್ರಿಯಲ್ಲಿ ನಿಸರ್ಗದ ಮದ್ಯದಲ್ಲಿ  ಹುಟ್ಟು ಹಬ್ಬದ ಆಚರಣೆ ಮಾಡಿದ್ದು
 ಬಹುಅರ್ಥಪೂರ್ಣವಾಗಿತ್ತು. 
  
 





Sunday, July 27, 2014

ರಸ್ತೆಯಲ್ಲಿ ಕಾರಿಗೆ ಆದ್ಯತೆ ಇಲ್ಲ !

ಪಾದಚಾರಿಯೇ ರಸ್ತೆಯ ರಾಜ!
ಅಮೇರಿಕಾದ ನೆಲದಮೇಲೆ ಮೊದಲ ಬಾರಿಗೆಕಾಲಿಟ್ಟ ಕೂಡಲೇ ಕಣ್ಣಿಗೆ ಎದ್ದು ಕಂಡದ್ದು ವಿಭಿನ್ನ ನೋಟ ಮತ್ತು ಆದ್ದು ವಿಶೇಷ ಅನುಭವ . ವಿಮಾನಿಲ್ದಾಣದಲ್ಲಿ ಚೆಕ್‌ಔಟ್‌ ಮಾಡಿಸಿ ಹೊರ ಬಂದಾಗ,  ನನ್ನನ್ನು ಕಂಡ ತಕ್ಷಣ ಮಗಳು ಅಳಿಯ ನಗುನಗುತ್ತಾ ಸ್ವಾಗತಿಸಿ ಎಲ್ಲ ಬ್ಯಾಗೇಜುಗಳನ್ನು ಕಾರಿನಲ್ಲಿ ಹಾಕಿ ಮುಂದಿನ ಸೀಟಿನಲ್ಲಿ ಕೂಡಲು ಹೇಳಿದರು. ನಾನು ಕಾರಿನ ಮುಂಭಾಗದಲ್ಲಿ ಎಡ ಬದಿಯ ಬಾಗಿಲ ತೆರೆದು ಕೂಡಲು ನೋಡಿದರೆ ಅದು ಚಾಲಕನ ಸೀಟು. ಮತ್ತೆ ಸುತ್ತುಹಾಕಿ ಬಲ ಬದಿಗೆ ಬಂದು ಭಾಗಿಲು ತೆರೆದು ಕುಳಿತೆ. ಕಾರು ಹೊರಟಿತು. ಆದರೆ ಅದು ಚಲಿಸಿದ್ದು ರಸ್ತೆಯ ಬಲ ಭಾಗದಲ್ಲಿ. ಇದೇನು ರಾಂಗ್ ಸೈಡ್‌ನಲ್ಲಿ ಹೋಗುತ್ತಿರುವಿರಿ ಎಂದಾಗ . ಅವರು ನಗುತ್ತಾ  ಇಲ್ಲಿ  Right is right and left is wrong. ಎಂದರು ಅಲ್ಲದೇ ಇಲ್ಲಿನ ಎಲ್ಲವಾಹನಗಳೂ ಲೆಫ್ಟ ‌ ಹ್ಯಾಂಡ್ ‌ ಡ್ರೈವ್‌ ಅಂದರೆ ನಮ್ಮಲ್ಲಿನ ಸಂಚಾರಿ ನಿಯಮಗಳು ಇಲ್ಲಿ ಉಲ್ಟಾ..
 ಈ ವಿಯ್ತ್ರದ ಮೂಲವನ್ನು ಹುಡುಕುತ್ತಾ ಹೊರಟಾಗ ಅಚ್ಚರಿಕಾದಿತ್ತು. ಜಗತ್ತಿನ ಸುಮಾರು ಮುಕ್ಕಾಲು ಪಾಲು ದೇಶಗಳಲ್ಲಿ ಇದೇ ಪದ್ದತಿ.ಇಂಗ್ಲೆಂಡ್‌ ಮತ್ತು ಅದರ ವಸಾಹತುಗಳಾಗಿದ್ದ ದೇಶಗಳಲ್ಲಿ ಮಾತ್ರ ವಾಹಗಳು ರಸ್ತೆಯ ಎಡ ದಿಗೆ ಚಲಿಸುವ ನಿಯಮವಿದ್ದುದು ಕಂಡು ಬಂದಿತು.ಅದಕ್ಕೂ ಒಂದು ಐತಿಹಾಸಿಕ ಕಾರಣವಿದೆ.
 ರಸ್ತೆಯಲ್ಲಿ ಹೋಗುವಾಗ ದುರಾದ ಪರಿಚಿತರ ಕೈಕುಲುಕು ಪದ್ದತಿ ಮೊದಲಿನಿಂದಲೂ ಇದೆ.  ಅದಕ್ಕೆ ಬಲಗೈ ಬಿಡುವಾಗಿ ಬೇಕು. ಅದಕ್ಕೂ ಹೆಚ್ಚಾಗಿ ಶತೃಗಳು ಎದುರಿನಿಂದ ಬಂದು ದಾಳಿ ಮಾಡಿದರೆ ಖಡ್ಗ ಹಿಡಿದು ಹೋರಾಲು ಬಲಗೈ ಅನ್ನೇ ಬಹುತೇಕರು ಉಪಯೋಗಿಸುವರು. ಆದ್ದರಿಂ ೧೮ನೆಯ ಶತಮಾನದಲ್ಲಿ ಕುದುರೆಗಾಡಿಗಳು ಅಥವ ಕೋಚ್ ಗಳು ಸಾರಿಗೆಯ ಸಾಧನವಾಗಿದ್ದವು. ಅವುಗಳ ಬಳಕೆ ಅಧಿಕವಾದಾಗ ವಾಹಗಳು ಎಡ ಬದಿಯಲ್ಲೇ ಚಲಿಸ ಬೇಕೆಂಬ ನಿಯಮ ಇಂಗ್ಲೆಂಡಿನಲ್ಲಿ ಜಾರಿಗೆ ಬಂದಿತು.. ಇದಕ್ಕೆ ಪೋಪ್‌ಅವರ ಅನುಮತಿಯೂ ಪುಷ್ಟಿಕೊಟ್ಟಿತು.ವ್ಯಾಟಿಕನ್‌ ಬರುವ ಸಹಸ್ರಾರು ಭಕ್ತರು ಸಾಲಾಗಿ ಎಡಬಾಗದಲ್ಲೇ ಚಲಿಸಬೇಕೆಂದು ಅವರು ನಿರೂಪ ಹೊರಡಿಸಿದ್ದರು.
ನಿಯಮಗಳಿಗೆ ಪ್ರತಿರೋಧ ಬಂದುದು ಮೊದಲು ಫ್ರಾನ್ಸನಲ್ಲಿ.ಅದೂ  ಫ್ರೆಂಚ್‌ಕ್ರಾಂತಿಯ ನಂತರ.  ಮುಂಚೆ ಅಲ್ಲಿನ ಆಢ್ಯರು  ಮತ್ತು ಶ್ರೀಮಂತರು ಹಮ್ಮಿನಿಂದ ರಸ್ತೆಯ ಎಡಬದಿಗೆ ವೇಗವಾಗಿ ತಮ್ಮ ಕೋಚುಗಳಲ್ಲಿ ಸಂಚರಿಸುತಿದ್ದರು. ಜನ ಸಾಮಾನ್ಯರು ಜೀವ ಕೈನಲ್ಲಿ ಹಿಡಿದು ರಸ್ತೆಯ  ಬಲ ಬದಿಗೆ ಸರಿಯುತಿದ್ದರು.  ಕ್ರಾಂತಿಯನಂತರ ಜನಸಾಮಾನ್ಯರು ಚಲಿಸುತಿದ್ದ ರಸ್ತೆಯ ಬಲಭಾಗವೇ ಅಧಿಕೃತವಾಯಿತು ಇದೊಂದು ಪ್ರತಿಭಟನೆಯ ಸಂಕೇತವಾಯಿತು. ಇದನ್ನೇ ಜಗತ್ತಿನ ಬಹುತೇಕ ದೇಶಗಳು ಅನುಸರಿಸಿದವು. ಬ್ರಿಟನ್‌ ನ ವಸಾಹತು ಅಲ್ಲದಿದ್ದರು ಅವರ ಸಂಚಾರಿ ನಿಯಮಗಳನ್ನು ಅನುಸರಿಸುತ್ತಿರುವ ದೇಶ ವೆಂದರೆ ಜಪಾನ್. ಕಾರಣ ಜಪಾನ್‌ನೊಡನೆ ವ್ಯಾಪಾರಕ್ಕಾಗಿ ಅಲ್ಲಿನ ಬಂದರುಗಳನ್ನು ಮುಕ್ತವಾಗಿಸಲು ಹೋಗಿದ್ದ ರಾಯಭಾರಿಯ ಚಾಣಾಕ್ಷತನ..ಲ್ಲಿನ ಅರಸರ ಮನ ಒಲಿಸಿ ತಮ್ಮಲ್ಲಿಯ ಸಂಚಾರಿ ನಿಯಮಗಳನ್ನು ಅನುಸರಿಸುವಂತೆ ಮಾಡಿದನು.
ಸಂಚಾರಿಸಾಧನಗಳಲ್ಲಿ ಕ್ರಾಂತಿಯಾದುದು ಆಟೋ ಮೋಬೈಲ್ ಬಂದನಂತರ. ಮೊದ ಮೊದಲ ಕಾರುಗಳಲ್ಲಿ ಡ್ರೈವರ್‌ನ ಸೀಟು ಕೋಚ್ ಗಳಲ್ಲಿ ಇದ್ದಂತೆ ಮಧ್ಯದಲ್ಲಿಯೇ ಇದ್ದಿತು. ಆದರೆ ಯಾರೋ ಒಬ್ಬ ಮೋಜುಗಾರ ಕಾರಿನಲ್ಲಿ ಹೋಗುವಾಗ ಪ್ರೇಯಸಿ ಅಥವ ಹೆಂಡತಿ ಪಕ್ಕದಲ್ಲಿ ಕುಳಿತಿದ್ದರೆ ಸೊಗಸೆಂದು ಕೊಂಡು ಕಾರಿನ ಮುಂಭಾಗದಲ್ಲಿ ಇಬ್ಬರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದನು. ಆಗ ಮೊದಲಾಯಿತು ಕಾರಿನಲ್ಲಿ ಲೆಫ್ಟ್ ಹ್ಯಾಂಡ್ ಡ್ರೈವ್ ಮತ್ತು ರೈಟ್ ಹ್ಯಾಂಡ್ ಡ್ರೈವ್‌ ಎಂಬ ವ್ಯತ್ಯಾಸ., ಜಪಾನ್‌ ಮತ್ತು ಬ್ರಿಟನ್‌ ಕಾರು ತಯಾರಿಕೆಯ ಕಾರ್ಖಾನೆಗಳಲ್ಲಿ ಸ್ಥಳಿಯ ಬೇಡಿಕೆಗೆ ತಮ್ಮಲ್ಲಿನ ಸಂಚಾರಿ ನಿಯಮಗಳಿಗೆ ಅನುಗುಣವಾಗಿ ರೈಟ್ ಹ್ಯಾಂಡ್ ಡ್ರೈವ್‌ಕಾರುಗಳು ತಯಾರಿಸಿದರೆ ರಫ್ತು ಮಾಡಲು ಲೆಫ್ಟ್ ಹ್ಯಾಂಡ್ ಡ್ರೈವ್‌ಕಾರುಗಳನ್ನು ತಯಾರಿಸುವರು. ಈಗಲೂ ವಿಶೇಷವಾದ ರೇಸ್‌ ಕಾರುಗಳಲ್ಲಿ ಡ್ರೈವರನ ಸೀಟು ಒಂದೇ ಅದೂ ಮಧ್ಯಭಾಗದಲ್ಲಿ.
ನಮ್ಮಲ್ಲಿ ರಸ್ತೆಗಳಲ್ಲಿ ಮೊದಲ ಆದ್ಯತೆ ವಾಹನಗಳಿಗೆ..ಅದಕ್ಕೆ ಪಾದಚಾರಿಗಳು ರಸ್ತೆ ದಾಟುವಾಗ ಅಂಚಿನಲ್ಲಿ ನಿಂತು ಅಚೀಚೆ ನೋಡಿ  ದಾಟಬೇಕು.ನಮ್ಮಲ್ಲಿ ಅಕಸ್ಮಾತ್ ನೋಡದೇ ಯಾರಾದರೂ ರಸ್ತೆಗೆ ಇಳಿದರೆ . ‘ ರಸ್ತೆ ನಿಮ್ಮ ಅಪ್ಪನದಾ
/ ಮನೆಯಲ್ಲಿ ಹೇಳಿಬಂದಿರುವೆಯಾ ? ಎಂದು ಕಾರಿನಲ್ಲಿ ಹೋಗುವವರು ಗದರುವುದು ಸಾಮಾನ್ಯ. ಅಪಘಾತವಾದರೂ ಅಚ್ಚರಿ ಇಲ್ಲ. ಈ ಅನುಭವದ ಹಿನ್ನೆಲೆಯಲ್ಲಿ ನಾನು ಅಮೇರಿಕಾದಲ್ಲಿ ಗ್ರಂಥಾಲಯಕ್ಕೆ,ವಾಯುವಿಹಾರಕ್ಕೆ ಹೋಗುವಾಗ ಸಂಚಾರಿ ದೀಪವಿಲ್ಲದ ಕಡೆ ರಸ್ತೆ ದಾಟಬೇಕಾದಾಗ. ರಸ್ತೆ ಅಂಚಿನಲ್ಲಿ ಎಂದಿನಂತೆ ಕಾರು ಬರುವುದು ಕಂಡರೆ ನಿಲ್ಲುತಿದ್ದೆ. ಆದರೆ ರಸ್ತೆ ಅಂಚಿಗೆ ಬರುತಿದ್ದ ನನ್ನನ್ನು ನೋಡಿ ಚಲಿಸುತ್ತಿರುವ ಕಾರುಗಳ ಗಕ್ಕನೆ ನಿಲ್ಲುತಿದ್ದವು. ಅಷ್ಟೇ ಅಲ್ಲ ಅವರು ಕೈ ಮಾಡಿ ರಸ್ತೆ ದಾಟಲು ಸೂಚಿಸುತಿದ್ದರು. ಇಲ್ಲಿ ಪಾದಚಾರಿಯೇ ರಸ್ತೆಯ ರಾಜ.ಅವನಿಗೆ ಮೊದಲ ಆದ್ಯತೆ. ಇನ್ನು ರಸ್ತೆಗಳಲ್ಲಿ ಸಂಚಾರೀ ದೀಪಗಳು ಇದ್ದರೆ  ಅ ರಸ್ತೆಯ ಅಂಚಿನಲ್ಲಿರುವ ಕಂಬದ ಮೇಲೆ ಒಂದು ಸ್ವಿಚ್‌ ಇರತ್ತದೆ. ಅದನ್ನು ಅದುಮಿದರೆ ವಾಹನಗಳಿಗೆ ನಿಲ್ಲುವ ಸೂಚನೆಯ ಕೆಂಪುದೀಪ ಬೆಳಗುತ್ತದೆ ಮತ್ತು ಪಾದಚಾರಿಗಳಿಗೆ ರಸ್ತೆ ದಾಟಲು ಹಸಿರು ದೀಪ ಬೆಳಗುತ್ತದೆ..




ಮನು‍ಷ್ಯರಿಗೆ ಮಾತ್ರ ಅಲ್ಲ ಇಲ್ಲಿನ ವಿಚಿತ್ರ ಎಂದರೆ  ಪ್ರಾಣಿ ಪಕ್ಷಿಗಳಿಗೂ ರಸ್ತೆ ದಾಟುವ ವಿಷಯದಲ್ಲಿ ಮೊದಲ ಆದ್ಯತೆ .ಇಲ್ಲಿನ ಬಹುತೇಕ ಕಡೆ ರಸ್ತೆಯ ಎರಡೂ ಬದಿಗೂ ಮರಗಿಡಗಳು ದಟ್ಟವಾಗಿರುತ್ತವೆ.. ಅಂಥಲ್ಲಿ ಜಿಂಕೆಗಳು ಕಂಡುಬರುತ್ತವೆ. ಅವು ನಿರ್ಭಯವಾಗಿ ಓಡಾಡುತ್ತವೆ. 

ಇಲ್ಲಿಗೆ ಬಂದರೆ ಸಲ್ಮಾನ್‌ಖಾನ್‌ಗೆ ಅದೆಷ್ಟು ಖುಷಿಯಾಗುವುದೋ ಊಹಿಸಬಹುದು. ಅಷ್ಟು ಮುಕ್ತವಾಗಿ ಯಾವುದೇ ಭಯವಿಲ್ಲದೇ ಸಂಚರಿಸುತ್ತವೆ ಜಿಂಕೆಗಳು. ಆದರೆ ಅವಗಳಿಗೆ ಅಪಾಯವಾದರೆ ಕಠಿಣ ಶಿಕ್ಷೆ ಖಂಡಿತ. ಅದಕ್ಕಾಗಿ ಅವುಗಳು ಅಪಾಯವಿಲ್ಲದೆ ರಾಸ್ತೆ ದಾಟಲು ಮುನ್ನೆಚ್ಚರಿಕೆ ವಹಿಸಿರುವರು. ಅಂಥಹ ಸ್ಥಳಗಳಲ್ಲಿ ಜಿಂಕೆಗಳ ಸಂಖ್ಯೆ ಅಧಿಕವಿರುಲ್ಲಿ   Deer Xing   ಫಲಕ ಇರುತ್ತದೆ.ಲ್ಲಿ ಎಚ್ಚರಿಕೆಯಿಂದ ವಾಹನಚಾಲನೆ ಮಾಡುವುದು ಅಗತ್ಯ.


 ಅದರಂತೆ ಜಲಾಶ್ರಯಗಳ ನಡುವೆ ರಸ್ತೆ ಹೋಗುತಿದ್ದರೆ ಅಲ್ಲಿ ಡಕ್ ಕ್ರಾಸಿಂಗ್ ಫಲಕವಿರುವುದು.   ಬಾತು ಕೋಳಿಗಳ ಗುಂಪು ಸಾವಕಾಶವಾಗಿ  ಕ್ವೆಕ್ ಕ್ವೆಕ್ ನ ಸದ್ದು ಮಾಡುತ್ತಾ ರಸ್ತೆ ದಾಟುವುದನ್ನು  ಕಾರಿನಲ್ಲಿ ಕುಳಿತು  ನೋಡುವುದೇ ಒಂದು ಮಜಾ.

 ಬೆಟ್ಟ ಪ್ರದೇಶದಲ್ಲಿ ಕರಡಿ ಕ್ರಾಸಿಂಗ್  ಫಲಕ. ಹತ್ತಿರ ಹಳ್ಳಿಯಿದ್ದರೆ ಅಲ್ಲಿ  cattle Xing  ಫಲಕ. ಆ ಜಾಗದಲ್ಲಿ ಅಪಘಾತವಾದರೆ ಮಾಲಿಕರಿಗೆ ಪೂರ್ಣ  ಪರಿಹಾರದೊರೆಯುತ್ತದೆ.ಉಳಿದಂತೆ ಎಲ್ಲ ಸಂಚಾರೀಫಲಕಗಳೂ ಕಂಡು ಬರುತ್ತವೆ.
 ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ತಡೆ ರಹಿತವಾಗಿ ವಾಹನ ಚಾಲನೆ ಆಗಬೇಕು. ಅದೂ ನಿಗದಿತ ವೇಗದಲ್ಲಿ . ಅಲ್ಲಿ ಜನ ಹೋಗುವ ಪ್ರಮೇಯವೇ ಇಲ್ಲ.  ನಿಯಮ ಮೀರಿದರೆ ಶಿಕ್ಷೆ ಖಂಡಿತ  . ವೇಗ ಮಿತಿಯಲ್ಲಿ ವ್ಯತ್ಯಾಸ ಕೂಡದು . ಕೆಲವು ಬಾರಿ ದುಪ್ಪಟ್ಟು ದಂಡ. ಎಲ್ಲಂದರಲ್ಲಿ ಕಾರು ನಿಲ್ಲಿಸುವ ಹಾಗಿಲ್ಲ ಹಲವಾರು ಮೈಲಿಗೊಂದರಂತೆ ಸರ್ವೀಸ್ ಏರಿಯಾ ಇರುತ್ತದೆ. ಅಲ್ಲಿ ಎಲ್ಲ ಸೌಲಭ್ಯಗಳೂ ಲಭ್ಯ. ದಾರಿಯುದ್ದಕ್ಕೂ ಅವುಗಳು ಇರುವ ದೂರವನ್ನು ಸೂಚಿಸುವ ಫಲಕಗಳಿರುತ್ತವೆ.
ಅಲ್ಲಿ ಯಾರೂ ಇರಲಿಕ್ಕಿಲ್ಲ ಎಂದುಕೊಂಡು ಹೇಗಾದರೂ ಹೋಗಬಹುದೆಂದರೆ ಅದು ಭ್ರಮೆ ಎಲ್ಲ ಕಡೆ  ಪೋಲೀಸರು ಇರುವುದೇ ಇಲ್ಲ. ಆದರೆ ಕಾಣದ ಕಣ್ಣುಗಳಾದ ರಹಸ್ಯ ಕ್ಯಾಮರಾಗಳು ಎಲ್ಲವನ್ನೂ ದಾಖಲಿಸುತ್ತವೆ.ಪೋಲೀಸರು ಕುಳಿತಲ್ಲಿಯೇ ಕಾರಿನಲ್ಲಿದ್ದರೂ ಸಹಾ ಕಾಂಪ್ಯೂಟರ್‌ ಮೂಲಕ ಪರಿಶೀಲಿಸುತ್ತಿರುತ್ತಾರೆ. ಮತ್ತು ಮನೆಗೆ ದಂಡ ಪಾವತಿಯ ನೋಟೀಸು ಬರುತ್ತದೆ. ದಂಡ ಪಾವತಿಸದಿದ್ದರೆ ಕಠಿಣ ಕ್ರಮ. ಗುರುತರ ಅಪರಾಧವಾದರೆ ಪೋಲೀಸ್‌ ಜೀಪು ಕೆಲವೇ ನಿಮಿಷದಲ್ಲಿ ಪ್ರತ್ಯಕ್ಷ.ರಂತೂ ಸಕಲಶಸ್ತ್ರ ಸಜ್ಜಿತರಾಗಿರುವರು ಮತ್ತು ಗಣಕ ಯಂತ್ರದ ನೆರವು ಇದ್ದೇ ಇರುತ್ತದೆ. ಎಲ್ಲವನ್ನು ಕ್ಷಣಾರ್ಧದಲ್ಲಿ ಪರಿಶೀಲಿಸುವರು.
ಇನ್ನು ಕಾರನ್ನೂ ಬೇಕೆಂದಲ್ಲಿ ನಿಲ್ಲಿಸುವ ಹಾಗಿಲ್ಲ. ಪ್ರತಿ ಮನೆಗೂ ಗರಾಜ್ ಇದ್ದೇ ಇರುವುದು. ಅದಿಲ್ಲದೆ ಇದ್ದರೆ ಅವರಿಗೆ ನಿಗದಿತ ಪಾರ್ಕಿಂಗ್ ಜಾಗ ಗುರುತಿಸಿರುವರು .ಅಲ್ಲಿಯೇ ನಿಲ್ಲಿಸ ಬೇಕು ಅನಧಿಕೃತವಾಗಿ ನಿಲ್ಲಿಸಿದ್ದರೆ ಅದನ್ನು  ಟೋ  ಮಾಡಿ ಒಯ್ಯುವರು. ಅದೂ ಮಾಲಿಕನ ವೆಚ್ಚದಲ್ಲಿ ಜೊತೆಗೆ ದೈನಂದಿನ ಲೆಕ್ಕದಲ್ಲಿ ದಂಡ ಹಾಕಲಾಗುವುದು. ಇಲ್ಲಿ ಮಾಲ್, ಹೋಟೆಲ್‌, ಚರ್ಚ್ ಗುಡಿ ಥೇಟರ್ ಅಥವ ಯಾವುದೇ ಸಾರ್ವಜನಿಕ ಸಮಾರಂಭವಾದರೂ ಅನುಮತಿಗೆ ಮೊದಲು ಕಾರ್‌ಪಾರ್ಕಿಂಗ್ ವ್ಯವಸ್ತೆ ಮಾಡುವುದು ಕಡ್ಡಾಯ. ಸಾಕಷ್ಟು ಸ್ಥಳಾವಕಾಶವಿದ್ದರೆ ಮಾತ್ರ ಅನುಮತಿ.. ಇನ್ನು. ಪ್ರತಿಯಂದು ಕಡೆಯಲ್ಲಿಯೂ ವಿಕಲ ಚೇತನರಿಗೆ ವಿಶೇಷ ವ್ಯವಸ್ಥೆ ಇರುವುದು. ಅವರಿಗೆ ಮೀಸಲಾದ ಸ್ಥಳ ಖಾಲಿಇದ್ದರೂ ಅಲ್ಲಿ ಯಾರೂ ಕಾರು ನಿಲ್ಲಿಸುವ ಹಾಗಿಲ್ಲ. ಅಲ್ಲಿ ಬೇರೆಯವರು ವಾಹನ ನಿಲ್ಲಿಸುವುದು ಅಪರಾಧ.
ಇಲ್ಲಿನ ಮನೆಗಳ ಸಮುಚ್ಚಯದಲ್ಲಿ ದಟ್ಟ ಕೆಂಪುಬಣ್ಣ ಬಳದುಕೊಂಡ ಜಲಮೂಲದ ವ್ಯವಸ್ಥೆ ಇದೆ. ಅವುಗಳ ಅಕ್ಕ ಪಕ್ಕದಲ್ಲಿ ಕಾರು ನಿಲ್ಲಿಸುವುದು ಅಪರಾದ . ಕಾರಣ ಇಲ್ಲಿ ಬಹುತೇಕ ಮನೆಗಳು ಕಟ್ಟಿಗೆಯವು ಬೆಂಕಿ ಬೀಳುವ ಅಪಾಯ ಇದ್ದೇ ಇರುತ್ತದೆ. ಅದಕ್ಕೆ ನೀರಿನ ವ್ಯವಸ್ಥೆಯ ಮುಂದಾಲೋಚನೆ. ಮನೆಯಲ್ಲು ಫೈರ್‌ ಅಲರಾಂ ವ್ಯವಸ್ಥೆ ಕಡ್ಡಾಯ. ನ್ಮ್ ಮನೆಯವರು ಹೋದ ಹೊಸದರಲ್ಲ ದೇವರ ಪೂಜೆ ಮಾಡಿ ಎಂದಿನಂತೆ ನಾಲ್ಕು ಅಗರ ಬತ್ತಿ ಹಚ್ಚಿದ್ದರು ಕಲವೆ ನಇಮಿದಲ್ಲಿ ಫೈರ್‌ ಅಲಾರಾಮ್‌ ಮೊಳಗ ತೊಡಗಿತು. ಎಲ್ಲ ರಿಗೂ ಗಾಬರಿ. ತಕ್ಷಣ ಫ್ಯಾನ್‌ ಹಾಕಿ, ಕಿಟಕಿಬಾಗಿಲು ತೆರೆದರು ಫೈರ್‌ ಅಲರಾಂ ಇದ್ದಲ್ಲಿಗೆ ಹೋಗಿ ಟವಲ್ ನಿಂದ ಅದರ ಹತ್ತಿರವಿರುವ ಹೊಗೆ ಚದುರಿಸಿದರು.ಅಕಸ್ಮಾತ್ ವಿಷಯ ತಿಳಿಯದ ವರು ಇದ್ದರೆ ಐದು ನಿಮಿಷದಲ್ಲಿ ಅಗ್ನಿಶಾಮಕ ದಳ ವಾಹನಗಳೊಂದಿಗೆ ಹಾಜರು.ಘಟನೆ ನೈಜವಾಗಿದ್ದರೆ ತಕ್ಷಣ ರಿಹಾರಕ್ರಮ , ಇಲ್ಲವಾದರೆ ಮೊಕದ್ದಮೆ ದಾಖಲು. ಕೋರ್ಟ ಕಚೆರಿ ಅಲೆಯಬೇಕಾಗುವುದು. ಅದಕ್ಕ ಅಡುಗೆ ಮಾಡುವಾಗಲು ಯಾವುದನ್ನೂ ಹೊತ್ತಿಸಬಾರದು  ಎಂಬ ಸೂಚನೆ ಬಂದಿತು.
.ನಗರ ಪ್ರದೇಶಗಳಲ್ಲಿ ಪೇ ಪಾಕರ್ಕಿಂಗ್‌ವ್ಯವಸ್ಥೆ ಇರುತ್ತದೆ. ರೈಲ್ವೇ ನಿಲ್ದಾಣ ಮತ್ತು ಇತರೆಡೆ ಸಾಮೂಹಿಕ ವ್ಯವಸ್ಥೆ ಇರುವುದು ತಿಂಗಳ ಪಾಸೂ ಕೊಡುತ್ತಾರೆ.ಜನ ನಿಬಿಡ ಪ್ರದೇಶದಲ್ಲಿ ರಸ್ತೆಯ ಬದಿಯಲ್ಲಿರು ಯಂತ್ರಗಳಲ್ಲಿ ಹಣಹಾಕಿ ನಿಲ್ಲಿಸ ಬಹುದು.ಸಂಚಾರಿ ನಿಯಮ ಉಲ್ಲಂಘಿಸಿದರೆ ಕಾರಿನ ವಿಂಡ್‌ಸ್ಕ್ರೀನ್ಗೆ ಟಿಕೆಟ್ ಅಂಟಿಸುವರು.ಸಕಾಲದಲ್ಲಿ ದಂಡ ಕಟ್ಟಲೇ ಬೇಕು ತಪ್ಪಿದರೆ ಪರಿಣಾಮ ತೀವ್ರ. ಜೈಲುಇ ಶಿಕ್ಷೆಯೂ ಆಗ ಬಹುದು. ಇಲ್ಲವೇ ಚಾಲನಾ ಪರವಾನಿಗೆಯೇ ರದ್ದಾಗುವುದು. ಇಲ್ಲಿ ಕಾಲಿಲ್ಲದಿದ್ದರೂ ಚಲನೆಗೆ ತೊಂದರೆ ಇಲ್ಲ ನೂರು ಅಂತಸ್ಥಿನ ಕಟ್ಟಡದಲ್ಲೂ ಗಾಲಿಕುಚರ್ಚಿಯಲ್ಲಿ ಕುಳಿತು ಹೋಬಹುದು. ಆದರೆ ಕಾರಿಲ್ಲದೆ ಇದ್ದರೆ ಜೀವನ ದುರ್ಭರ.. ಆದ್ದರಿಂದ ಸಂಚಾರಿ ನಿಯಮಗಳ ಕಡೆ ಇಲ್ಲಿನವರಿಗೆ ಬಹಳ ಗಮನ. ಟಿಕಟ್  ಪಡೆದರೆ ಅದು ವೈಯುಕ್ತಿಕ ವಿವರದಲ್ಲಿ ದಾಖಲಾಗುತ್ತದೆ.  ವಾಹನ ವಿಮೆ ಮತ್ತು ,ಜೀವ ವಿಮೆಯ ಕಂತೂ ಅಧಿಕವಾಗುವುದು . ಸಂಚಾರ ನಿಯಮಗಳ ಉಲ್ಲಂಘನೆ ಚಾಲಕನ ಭವಿಷ್ಯಕ್ಕೇ ಸಂಚಕಾರ ತರುವ ಸಾಧ್ಯತೆ ಇದೆ. ಅದಕ್ಕಾಗಿ  ಈ ಪ್ರಕರಣಗಳ ನಿರ್ವಹಿಸುವ  ವಿಶೇಷ ವಕೀಲರ ಪಡೆ ಇರುತ್ತದೆ. ಅವರನ್ನು  ಟಿಕೆಟ್ ‌ ಅಡ್ವೊಕೇಟ್ ಎನ್ನಲಾಗುತ್ತದೆ.
 ಕಾರಿನಲ್ಲಿನ ಪಯಣಿಗರಿಗೆ ಸೀಟ್‌ ಬೆಲ್ಟ್‌ ಕಡ್ಡಾಯ.೧೦ ವರ್ಷದ ಒಳಗಿನ ಮಕ್ಕಳನ್ನುವಿಶೇಷ ಸೀಟಿನಲ್ಲಿಯೇ ಕೂಡಿಸಿ ಬೇಕು. ಬೆಲ್ಟ್‌  ಕಟ್ಟುವುದು ಕಡ್ಡಾಯ..ಒಂಟಿಯಾಗಿ ಮಕ್ಕಳನ್ನು ಕಾರಿನಲ್ಲಿ ಬಿಡುವ ಹಾಗಿಲ್ಲ. ಅದು ಗುರುತರ ಅಪರಾಧ.ಕಾರಿನಿಂದ ಯಾವುದೇ ವಸ್ತುವನ್ನು ಹೊರಗೆ ಎಸೆಯುವ ಹಾಗಿಲ್ಲ. ತಂಡಿ ತೀರ್ಥದ ಸೇವನೆ ಮಾಡಿದರೆ ಖಾಲಿ ಬಾಟಲು, ಕವರ್‌, ಪೇಪರ್‌ಗಳನ್ನು ಒಂದು ಚೀಲದಲ್ಲಿ ಸಂಗ್ರಹಿಸಿಕೊಂಡು ಅವನ್ನು ಅಲ್ಲ್ಲಲ್ಲಿ ಇಟ್ಟಿರುವ   ಟ್ರಾಷ್ ಬಿನ್ನಲ್ಲಿ ಹಾಕ ಬೇಕು.
ಚಳಿಗಾಲದಲ್ಲಿ ಇನ್ನೊಂದು ಸಮಸ್ಯೆ. ರಸ್ತೆಯಲ್ಲಿ ಮನೆಯ ಮುಂದೆ ಹಿಮ ಶೇಖರವಾಗಿರುವುದು ವಸತಿ ಸಮುಚ್ಚಯಗಳಲ್ಲಾದರೆ ಕಮ್ಯನಿಟಿಯವರು ಹಿಮ ತೆಗೆಸಿ ಕಾರು ಹೋಗಲು ದಾರಿ ಮಾಡುವರು. ಸ್ವತಂತ್ರ ಮನೆ ಇದ್ದರೆ ರಸ್ತೆಯವರೆಗಿನ ಹಿಮವನ್ನು ಮನೆ ಮಾಲಿಕನೇ ತೆಗೆಯ ಬೇಕು. ಹಲವು ರಸ್ತೆಗಳಲ್ಲಿ ಕಾರುಗಳನ್ನು ನಿಲ್ಲಿಸುವ ಹಾಗೇಯೇ ಇಲ್ಲ. ತುಸುವೇ ಸಮಯದಲ್ಲಿ ಕಾರು ಮಟಾಮಾಯ.ಅದರ ಜಾಗದಲ್ಲಿಒಂದು ಪುಟ್ಟ ಬಿಳಿಯ ಬೆಟ್ಟ ಕಾರು ಹಿಮಾವೃತವಾಗುವುದು. ಅದರಿಂದ ಸಂಚಾರಕ್ಕ ಅಡಚಣೆ. ಅಕ್ಕಾಗಿ ಅಲ್ಲಿ ಎಚ್ಚರಿಕೆಯ ಫಲಕಗಳುಇರುತ್ತವೆ.
ಇನ್ನುವೇಗ ಮಿತಿಯಿರುವ ರಸ್ತಗಳಲ್ಲಿ ಚಲಿಸುವ ಕಾರಿನ ವೇಗ ಅಳೆಯುವ ಉಪಕರಣ ಅಲ್ಲ್ಲಿ ಅಳವಡಿಸಿರುವರು. ಕಾರಿನ ವೇಗ ತಿಳಿಸುವ ಫಲಕಗಳೂ ಇರುತ್ತವೆ. ಇನ್ನುಳಿದಂತೆ ಸಾರ್ವತ್ರಿಕವಾದ ಎಲ್ಲ ಸಂಚಾರೀ ಸಂಕೇತಗಳು ಅಲ್ಲಿಯೂ ಇವೆ. ಜನವಿರುವ ಜಾಗದಲ್ಲಿ ಕಾಲು ನಡಗೆಯವರಿಗೆ ಕಾರಿನಲ್ಲಿ ಬರುವವರಿಗಿಂತ ಹೆಚ್ಚು ಆರಾಮ , ಸಂಚಾರವೂ ಸುಗಮ.
ಅಕಸ್ಮಾತ್ ಕಾರೇನಾದರೂ ಯಾರಿಗಾದರೂ ತಗುಲಿದರೆ  ಸುಮಾರಾಗಿ ಗಾಯವಾದರು ಲಾಟರಿ ಹೊಡೆದಂತೆ.  ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಜೊತೆಗೆ ಮಿಲಿಯನ್‌ಗಟ್ಟಲೆ ಪರಿಹಾರ.ಕೇಳುವವರೂ ಇದ್ದಾರೆ. ಅದಕ್ಕೂ ಕಾದು ಕೂತಿರುವ ವಕೀಲರೇ ಇರುತ್ತಾರೆ.ಆದ್ದರಿಂದ ಅತಿ ಎಚ್ಚರಿಕೆಯ ವಾಹನ ಚಾಲನೆ ಇಲ್ಲಿ ರಕ್ತಗತ ವಾಗಿರುತ್ತದೆ. ಇಲ್ಲಿ ಮನೆಗೊಂದು ಕಾರು ಎನ್ನವುದಕ್ಕಿಂತ ಜನಕ್ಕೊಂದು ಕಾರು ಸಹಜ ಎನ್ನಬಹುದು. ಅದರ ಫಲ ಎಲ್ಲಿ ನೋಡಿದರೂ ಕಾರುಗಳ ಕಾರುಬಾರು. ತುಸುವೇ ಹೆಚ್ಚು ಕಡಿಮೆಯಾದರೂ ಮೈಲುಗಟ್ಟಲೆ ರಸ್ತೆ ಸಂಚಾರ ಸ್ಥಗಿತ. ಅದಕ್ಕೆ ಸಂಚಾರವನ್ನು ಸುಗಮ ಗೊಳಿಸಲು ನಿಯಮಪಾಲನೆ ಕಡ್ಡಾಯ ತಪ್ಪಿದರೆ ಶಿಕ್ಷೆ ಅಥವ ದಂಡ ಖಚಿತ.


 







Thursday, July 24, 2014

ಶತಕವೀರ ಸಾಹಿತಿ ಎಸ್‌.ವಿ. ಶ್ರೀನಿವಾಸರಾವ್‌


ಸದ್ದಿಲದೆ ಸಾಹಿತ್ಯ ಕೃತಿ ಶತಕ ಬಾರಿಸಿದ  ಎಸ್‌.ವಿ.ಶ್ರೀನಿವಾಸ್ರಾವ್

ಮಾತಿಗಿಂತ ಕೃತಿಗೆ ಆದ್ಯತೆ ಕೊಡುವ ವಿರಳ ವ್ಯಕ್ತಿಗಳಲ್ಲಿ  ಪ್ರಮುಖರು ಎಸ್‌.ವಿ. ಶ್ರೀನಿವಾಸರಾವ್‌.ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಕೃತಿರಚನೆ ಮಾಡಿ,ಸಮಾಜದ ಬೇರು ಮಟ್ಟದಿಂದ  ನಾಡಿನ ಮೇರು ಸಂಘಟನೆ ಸಾಹಿತ್ಯ ಪರಿಷತ್ತಿನವರೆಗೆ ವಿಭಿನ್ನ ಸಾಹಿತ್ಯ ಸಂಘಟನೆಗಳಲ್ಲಿ  ಆರು ದಶಕಗಳಿಗೂ ದುಡಿದರೂ ದಣಿವರಿಯದ ಜೀವ ಅವರದು.
 ಇವರ ತುಮುಕೂರು ಜಿಲ್ಲೆಯ ಚಿಕ್ಕಸಾರಂಗಿಯಲ್ಲಿ ೨೪-೧೨ -೩೧ ರಲ್ಲಿ ಜನಿಸಿದರು. ತಂದೆ  ಗುಂಡಪ್ಪ   ಮತ್ತು ತಾಯಿ ಪದ್ಮಾವತಮ್ಮ . ಆದರೆ ಬೆಳೆದಿದ್ದು ಸೋದರಮಾವ  ವೆಂಕಟರಾಮಯ್ಯ ಮತ್ತು ಪುಟ್ಟಚ್ಚಮ್ಮಅವರ ದತ್ತು ಪುತ್ರನಾಗಿ..ಎರಡು ಕುಟುಂಬಗಳ ಪ್ರೀತಿಯ ಧಾರೆಯಲ್ಲಿ ಬಾಲ್ಯ ಕಳೆಯಿತು. ಮನೆಯಲ್ಲಿನ ಸುಸಂಸ್ಕೃತ ವಾತಾವರಣ ಅವರಲ್ಲಿ ಸಾಹಿತ್ಯಾಭ್ಯಾಸಕ್ಕೆ  ಅನುವು ನೀಡಿತು.ಆದರ ಫಲವಾಗಿ ತಮ್ಮ ಹದಿ ವಯಸ್ಸಿನಲ್ಲಿಯೇ ಆರ್ಯನ್ಹೈಸ್ಕೂಲಿನಲ್ಲಿರುವಾಗಲೇ ಕಥಾಸ್ಪರ್ಧೆಯಲ್ಲಿ ಬಹುಮಾನಿತರಾದರು. ಅಂದು  ಸಾಹಿತ್ಯ ರಚನೆಯಲ್ಲಿ ತೊಡಗಿದ ಅವರು ೮೩ರ ವಯಸ್ಸಿನಲ್ಲೂ ಲೇಖನ ವ್ಯವಸಾಯ ನಡೆಸಿರುವರು.ಸಾಮಾನ್ಯವಾಗಿ ಸಾಹಿತ್ಯ ಲೋಕದಲ್ಲಿ ವಿಹರಿಸುವವರು ಕಲ್ಪನಾವಿಲಾಸಿಗಳು,ಸಮಾಜದ ಕಷ್ಠನಿಷ್ಠುರಗಳ ಜೀವನದದಲ್ಲಿ ಜರ್ಜರಿತರಾಗುವರು ಎಂಬ ಮಾತಿದೆ. ಅದಕ್ಕೆ ಅಪವಾದ ಇವರು. ವಿಜ್ಞಾನದಲ್ಲಿ ಪದವಿ ಪಡೆದು ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಇಪ್ಪತ್ತೆರಡನೆ ವಯಸ್ಸಿನಲ್ಲಿಯೇ ಉದ್ಯೋಗಕ್ಕೆ ಸೇರಿದರು..ಗಳಿಕೆಯ ಜೊತೆ ಕಲಿಕೆಯೂ ಮುಂದುವರಿಸಿ ಎ.ಎಮ್‌..ಇ ಪದವಿ ಮುಗಿಸಿ ವೃತ್ತಿಜೀವನದಲ್ಲಿ ಮೇಲೇರಿ ಸೈಂಟಿಫಿಕ್ಆಫೀಸರ್ಹುದ್ದೆಗೇರಿ ಮೂರೂವರೆ ದಶಕದ ಸೇವೆಯನಂತರ ನಿವೃತ್ತರಾದರು.
ಇವರ ಬಾಳ ಸಂಗಾತಿ ಶ್ರೀಮತಿ ಅನುಸೂಯ..’ ವಿವಾಹಂ ವಿದ್ಯನಾಶನಂ’  ಎಂಬ ಲೋಕೋಕ್ತಿಗೆ ಅಪವಾದ. ಅವರು ಪತಿ ಯಜ್ಞಾನಾರ್ಜನೆಗೆ , ಸಾಹಿತ್ಯ ಕೃಷಿಗೆ ತುಂಬು ಹೃದಯದ ಒತ್ತಾಸೆ ನೀಡಿದ ಫಲ ಕನ್ನಡ ಎಂ. ಎ ಮತ್ತು  ರಷ್ಯನ್ಭಾಷೆಯ ಡಿಪ್ಲೊಮಾ. ವೃತ್ತಿ ನಿಮಿತ್ತ ಮೊದಲಲ್ಲಿ ಹೊರನಾಡಲ್ಲಿ ವಾಸ. ಮುಂಬಯಿ ಇವರ ಕಾರ್ಯಕ್ಷೇತ್ರ. ಅಲ್ಲಿ ಸಾಹಿತಿಗಳ ಸಹವಾಸ ಲಭ್ಯ. ಸಂಘಟನಾ ಕಾರ್ಯದಲ್ಲೂ ಸಕ್ರಿಯ. ನಂತರ ಬೆಂಗಳೂರಲ್ಲಿ ನೆಲಸಿರುವರು.
ವೃತ್ತಿಯಿಂದ ವಿಜ್ಞಾನಿಯಾದ ಅವರ  ಲೇಖನಿಯ ವೇಗ ಜೆಟ್ವಿಮಾನದಂತೆ. ಕಾದಂಬರಿ,ಅವರ ಹೃದಯಕ್ಕೆ ಹತ್ತಿರ. ಅದರ  ಫಲ ಹನ್ನೆರಡು ಸಾಮಾಜಿಕ , ಎರಡು ವೈಜ್ಞಾನಿಕ ಮತ್ತು ಒಂದು ಚಾರಿತ್ರಿಕ ಕಾದಂಬರಿಗಳು ಓದುಗರಿಗೆ ದಕ್ಕಿದವು. ಬಹುಶಃ ಅವರ ಓದುಗರ ಸಂಖ್ಯೆ ಒಂದು ದಾಖಲೆ . ಕಾರಣ ಕನ್ನಡ ನಿಯತ ಕಾಲಿಕಗಳ್ಲಲ್ಲಿ ಅತ್ಯಧಿಕ ಕೃತಿಗಳನ್ನು ಬರೆದ ಹಿರಿಮೆ ಅವರದು.. ಸುಧಾ, ಕನ್ನಡ ಪ್ರಭ , ಮಲ್ಲಿಗೆ ಬಾಲಮಂಗಳ , ಕರ್ಮವೀರ ಮೊದಲಾದ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ವರ್ಷಗಟ್ಟಲೇ ಅವರ ಕಾದಂಬರಿಗಳ ಧಾರೆ ಕಂತಿನ ಮೇಲೆ ಕಂತು ಹರಿದು ಸಾವಿರಾರು ಓದುಗರು ವಾರವಾರವೂ ಓದಲು ಕಾತುರರಾಗಿ ಕಾಯುವಂತೆ ಮಾಡಿದ ಅವರ ಕೃತಿಗಳ ಚುಂಬಕ ಶೈಲಿ ಅನನ್ಯ. ೧೯೬೫ ರಿಂದ ಪ್ರಾರಂಭವಾದ  ಸಾಹಿತ್ಯ ಧಾರೆ ಮೂರುವರೆ  ದಶಕಕಳೆದರೂ ರೂ ಒಂದಲ್ಲ ಒಂದು ನಿಯತಕಾಲಿಕದಲ್ಲಿ ಓದುಗರನ್ನು  ಈಗಲೂ ರಂಜಿಸುತ್ತಲಿವೆ. ಧಾರಾವಾಹಿಗಳೂ ವೈವಿದ್ಯ ಪೂರ್ಣ. ವೈಜ್ಞಾನಿಕ, ಚಾರಿತ್ರಿಕ ಮತ್ತು ಸಾಮಾಜಿಕ ಕೃತಿಗಳಾಗಿವೆ.
ಅವರ ಕಥಾಸಂಕಲನಗಳ ಸಂಖ್ಯೆ ಹತ್ತಕ್ಕೂ ಹೆಚ್ಚು. ನೂರಾರು ಕಥೆಗಳ ಸಮಗ್ರ ಕಥಾ ಸಂಕಲನ ಹೊರ ಬಂದಿದೆ. ಶಿಶು ಸಾಹಿತ್ಯದಲ್ಲೂ ತಮ್ಮ ಛಾಪು ಮೂಡಿಸಿರುವರು ಇಪ್ಪತ್ತೆರಡು ಕೃತಿಗಳು ಮಕ್ಕಳ ಮನೋವಿಕಾಸಕ್ಕೆ ಸಹಾಯಕವಾಗಿವೆಅಖಿಲ ಕನರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ರಚಿಸಿ ಮೂರು ದಶಕಗಳಿಮದ ಸಲ್ಲಿಸಿದ ಸೇವೆಗೆ  ಇತ್ತೀಚೆಗೆ ಶಿವಮೊಗ್ಗ ಕರ್ನಾಟಕ ಸಂಘವು ಡಾ. ಶಿವರಾಮಕಾರಂತ  ಪ್ರಶಸ್ತಿ ನೀಡಿ ಅವರ ಜೀವಮಾನದ ಸಾಧನೆ ಗೌರವಿಸಿದೆ.
ಅನುವಾದ ರಂಗದಲ್ಲೂ ಅದ್ವಿತೀಯರು. ಕನ್ನಡ, ಹಿಂದಿ ಸಂಸ್ಕೃತ,ಇಂಗ್ಲಿಷ್‌  ಮತ್ತು ರಷ್ಯನ್ಭಾಷೆ ಬಲ್ಲರು. ಹೊರನಾಡಿ ಪರ ಭಾಷೆಯ ಶ್ರೇಷ್ಠ ಕೃತಿಗಳ ಪೆರಿಚಯವನ್ನು ಕನ್ನಡಿಗರಿಗೆ ಮಾಡಿಸಿರುವರು.,ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ನ್ಯಾಷನಲ್ಬುಕ್ಟ್ರಸ್ಟ್ನಿಂದ ಅವರ ಕೃತಿಗಳು ಪ್ರಕಟ ಗೊಂಡಿವೆ.
ಜ್ಞಾನಾರ್ಜನೆಗೆ ದೇಶ ನೋಡು ಇಲ್ಲವೇ  ಕೋಶ  ಓದು ಎನ್ನುವ ಮಾತಿದೆ. ಇವರು ಎರಡನ್ನೂ ವಿಸ್ತೃತವಾಗಿ ಮಾಡಿರುವರು. ಭಾರತದಲ್ಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ಅಸ್ಸಾಂನಿಂದ ಬದರಿಯವರೆಗೆ ಪ್ರವಾಸ ಮಾಡಿರುವರು ಅಮೇರಿಕಾದ ಭೇಟಿಯೂ ಆಗಿದೆ, ಅವೆಲ್ಲ ಅನುಭವ ಅಕ್ಷರಗಳಲ್ಲಿ ದಾಖಲಿಸಿದ್ದಾರೆ.ಹಲವು ಸಾರ್ಥಕ ಸೇವೆ ಸಲ್ಲಿಸಿದ ಸಂಘಟನೆಗಳ ರಜತೋತ್ಸವ ಸ್ಮರಣ ಸಂಚಿಕೆಗಳ ಸಂಪಾದನೆ ಮಾಡಿ  ಸಾಧನೆಯ ಪರಿಚಯ ಮಾಡಿಸಿರುವರು.ಕನ್ನಡ ಸಾಹಿತ್ಯದ ಯಾವುದೇ ಸಂಭಾವನಾ ಗ್ರಂಥವೂ ಇವರ ಲೇಖನವಲ್ಲದೆ ಅಪೂರ್ಣ ಎನ್ನಿಸುವಷ್ಟು ವಿಶೇಷ ಲೇಖನಗಳು ಇವೆ, ಕಾರಣ ಅವರೊಡಗಿನ ನಿಕಟ ಸಂಪರ್ಕ. ಹಲವಾರು ಸಂಕೀರ್ಣ ಕೃತಿಗಳ ಜೊತೆ ನೂರಾರು ಬಿಡಿ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಮಾಹಿತಿ ಕೋಶ ಇವರ ಒಂದು ದು ವಿಶಿಷ್ಟ ಕೃತಿ ಕನ್ನಡ ಬರಹಗಾರರೆಲ್ಲರ ಸಮಗ್ರ ಮಾಹಿತಿಗಳನ್ನು ಒಳಗೊಂಡ ಈ ಕೃತಿಗೆ ರನ್ನ ಪ್ರಶಸ್ತಿ ದೊರಕಿದೆ. ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿದ ಎಲ್ಲ ಸಂಘಟನೆಗಳೂ  ಕೈಗೆಟಕುವಂತ ಇಟ್ಟುಕೊಳ್ಳಲೇ ಬೇಕಾದ   ಉಪಯುಕ್ತ ಕೃತಿ ಇದಾಗಿದೆ,
ಕಥೆ, ನಾಟಕ  ಶಿಶು ಸಾಹಿತ್ಯ, ವೈಜ್ಞಾನಿಕಪ್ರಬಂಧ  ರೇಡಿಯೋ ರೂಪಕ,ದೂರದರ್ಶನದಲ್ಲಿ ವಿಖ್ಯಾತರ ಸಂದರ್ಶನ,ಪ್ರವಾಸ ಕಥನ, ವ್ಯಕ್ತಿ ಚಿತ್ರಣ , ಕನ್ನಡಸಾಹಿತ್ಯದ ವೈವಿದ್ಯತೆ ಅರಿಯಲುಇವರ ಸಮಗ್ರ ಕೃತಿಸಂಪುಟ ನೋಡಿದರೆ ಸಾಕು
ಇವರದು ಸಮಾಜಮುಖಿ ಜೀವನತಾವು ನೆಲಸಿರುವ  ಬನಶಂಕರಿ ಬಡಾವಣೆಯ ಸಾಂಸ್ಕೃತಿಕ ಸಂಘನೆ ಕಾರ್ಯದಲ್ಲಿ ಮೂರು ದಶಕಗಳಿಂದಲೂ ಸತತ  ತೊಡಗಿರುವರು. ವಿವಿದ ಹುದ್ದೆಯಲ್ಲಿ ಸೇವೆ ಸಲ್ಲುತ್ತಲಿದೆ..ನಾಡಿನ ಹಿರಿಯ ಸಂಸ್ಥೆ  ಸಾಹಿತ್ಯ ಪರಿಷತ್ನಲ್ಲಿ ಖಜಾಂಚಿಯಾಗಿ ಮೂರುವರ್ಷ ಕನ್ನಡ ನುಡಿಯ ಸಂಪಾದಕರಾಗಿ ಮೂರುವರ್ಷ ಸೇವೆ ಸಲ್ಲಿಸಿರುವರು. ಇನ್ನೂ ಹತ್ತಾರು ಸಂಸ್ಥೆಗಳೊಡನೆಯು ಇವರು ನಿಕಟ ಸಂಪರ್ಕ ಹೊಂದಿರುವರು. ವಿಶೇಷವಾಗಿ  ಬಿ.ಎಂಶ್ರೀ. ಪ್ರತಿಷ್ಠಾದಲ್ಲಿ  ಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವೆ ತುಂಬ  ದೊಡ್ಡದು  ಎಂಬತ್ತರ ಮಾಗಿದ ವಯಸ್ಸಿನಲ್ಲೂ ಯುವಕರೂ ನಾಚುವಂತೆ ಠಾಕೋಠೀಕಾಗಿ ಸಂಜೆ ೪  ಗಂಟೆಗೆ ಸ್ಕೂಟರ್ಸವಾರರಾಗಿ ಬಂದು ನಾಲ್ಕು ತಾಸು ದಣಿವಿಲ್ಲದೆ ದುಡಿಯುತಿದ್ದ ಇವರ ಪರಿ ಅನುಕರಣೀಯ.
ಎಲೆಯ ಮರೆಯ ಕಾಯಂತೆ ಕೆಲಸ ಮಾಡುವ ಇವರ ಕೊಡುಗೆಗೆ  ಸಲ್ಲಬೇಕಾದ ಗೌರವ ತುಸು ವಿಳಂಬವಾಗಿಯೇ ಸಂದಿದೆ.. ಇವರ ಕೃತಿಗಳಿಗೆ ಬಂದಿರುವ ಬಹುಮಾನಗಳು ಬಹಳ.  ಇವರಿಗೆ  ೨೦೦೫ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ  ಗೌರವಿಸಲಾಯಿತು. ಕರ್ನಾಟಕ ಶ್ರೀ,   ಕನ್ನಡ ಶ್ರೀ ವಿಶ್ವೇಶ್ವರಯ್ಯ ಪ್ರಶಸ್ತಿ , ಆರ್ಯಭಟ ಪ್ರಶಸ್ತಿ ಮುಖ್ಯವಾದವು

  ಸಾಹಿತ್ಯ ರಂಗದಲ್ಲಿನ ಸಮೃದ್ಧ ಸಾದನೆಯೊಂದಿಗೆ ವೃತ್ತಿ  ಬದುಕಿನಲ್ಲೂ ಯಶಸ್ವಿ. ತಮ್ಮ ಸಂಶೋಧನೆಗಳಿಂದ ಇಲಾಖೆಯಲ್ಲಿ ಸನ್ಮಾನಿತರು. ವೈಯುಕ್ತಿಕ ಬದುಕೂ ಅವರ ಸಾಹಿತ್ಯ ಶೈಲಿಯಂತೆ ಪ್ರಶಾಂತ. ಅನುಕೂಲೆಯಾದ ಸತಿ, ಒಬ್ಬ ಮಗ , ಇಬ್ಬರು ಪುತ್ರಿಯರು ನಾಲ್ವರು  ಮೊಮ್ಮಕ್ಕಳ ಸುಖೀ ಸಂಸಾರಜೊತೆಗೆ ಸಾಮಾಜಿಕವಾಗಿಯೂತಮ್ಮ ಮೃದು ಸ್ವಬಾವ, ಮಧುರ ನುಡಿ ಮತ್ತು ಸರಳ ನಡೆಯಿಂದಅಂದರಿಕೂ ಮಂಚಿವಾಡು ಅನಂತಯ್ಯ ‘’ ಆಗಿರುವರು. ಇದರ ಪಲ ಶೃತಿ ನೂರಾರು ಸಾಹಿತ್ಯ ಸಾಧಕರ ಗೆಳೆಯರ ಬಳಗ. ಸಹೋದ್ಯೋಗಿಗಳ ಆದರ, ಓದುಗರ ಅಭಿಮಾನ ಪಡೆದ ಸಾರ್ಥಕ ಬದುಕು.  ಸಹಸ್ರ ಚಂದ್ರದರ್ಶನ ಮಾಡಿ ಈಗಾಗಲೇ ಮೂರು ವರ್ಷ  ಕಳೆದಿವೆ.. ಅವರ ಕೃತಿಗಳಂತೆ ಇವರೂ ನೂರುವರ್ಷ ತಲುಪಲಿ ಎಂಬ  ಹಾರೈಕೆ ಅಭಿಮಾನಿಗಳದು.



Thursday, July 10, 2014

ಬಾದಾಮಿಗೆ ಬೇಕು ಜೇನುಗೂಡು !


ಜೇನುನೊಣ ಕೊಡುವುದು ಕೈತುಂಬ ಹಣ!
     ಅಮೇರಿಕಾದ ಪಶ್ಚಿಮಭಾಗದಲ್ಲಿ  ಅದರಲ್ಲೂ ಕ್ಯಾಲಿಫೋರ್ನಿಯಾದಲ್ಲಿ ಜನವರಿ ತಿಂಗಳಿಂದ  ಎಲ್ಲೆಲ್ಲೂ ಜೇನುಹುಳುಗಳ ಗುಂಜಾರವ. ಜೇನುಹುಳ ಬೇಕಿವೆ ಬಾಡಿಗೆಗೆ!.  ಎಂಬ ಜಾಹಿರಾತು  ಸ್ಥಳೀಯ ಪತ್ರಿಕೆಗಳಲ್ಲಿ. ಮನೆ ಬಾಡಿಗೆ ನಮಗೆಲ್ಲ ಗೊತ್ತು. ಕಾರು, ಸೈಕಲ್‌ ಕೊನೆಗೆ ಜನರೂ ಬಾಡಿಗೆ ದೊರಕುತ್ತಾರೆ. ಅದರಲ್ಲೂ ಫಲವತ್ತಾದ ಮಹಿಳೆಯರಿಗೆ ಸಲಿಂಗ ವಿವಾಹ ಕಾನೂನು ಬದ್ಧವಾದ ಈ ನಾಡಿನಲ್ಲಿ ಮಗು ಪಡೆಯಲು ಬಾಡಿಗೆ ತಾಯಂದಿರಿಗೂ  ಬೇಡಿಕೆ ಇದೆ. ಆದರೆ ಬೇಕಿದೆ ಜೇನುನೊಣಗಳು ಎಂಬ ಜಾಹಿರಾತನ್ನು ಈ ಪ್ರಾಂತ್ಯಗಳ ಸ್ಥಳೀಯ ಪತ್ರಿಕೆಗಳಲ್ಲಿ ನೋಡಿ   ಅಬ್ಬಾ ಜೇನುತುಪ್ಪಕ್ಕೆ ಅಷ್ಟು ಬೇಡಿಕೆಯೇ ಎಂದು ಹುಬ್ಬು ಏರಿಸಬಹುದು. ನಿಜ!   ಬಹಳ ಬೇಡಿಕೆ ಇದೆ .  ಆದರೆ  ಜೇನುತುಪ್ಪಕ್ಕೆ ಅಲ್ಲ , ಜೇನುಹುಳುಗಳಿಗೆ.  ಅವರಿಗೆ ಜೇನುನೊಣಗಳು ಬೇಕೇ ಬೇಕು. ಒಂದು ಎರಡು ಜೇನು ಪೆಟ್ಟಿಗೆಗಳಲ್ಲ. ಜೇನುಹುಳುಗಳಿಂದ ಗಿಜಗುಡುವ ಲಕ್ಷ ಲಕ್ಷ ಜೇನು ಪೆಟ್ಟಿಗೆಗಳು ಬೇಕು   . ಔಷಧಿಗಾಗಿ ಎಂದು ಭಾವಿಸಿದ್ದರೆ ಅದೂ ತಪ್ಪು.ಅವು ಬೇಕಾಗಿರುವುದು ತೋಟಗಾರರಿಗೆ. ಅದೂ ಒಂದೆರಡು ತಿಂಗಳ ಮಟ್ಟಿಗೆ. ನಿಗದಿತ ಅಳತೆಯ ಜೇನು ಪೆಟ್ಟಿಗೆ ಯನ್ನು ಒದಗಿಸಿ  ಅವರ ತೋಟದಲ್ಲಿ  ಇಟ್ಟರೆ ಸರಿ,  ಹೂವಿಂದ ಹೂವಿಗೆ ಹಾರಾಡಿದರೆ ಜೇನು ನೊಣ ನಿಮ್ಮ ಕೈನಲ್ಲಿ ಝಣ ಝಣ ಹಣ.  ಈಗ ಒಂದು ಜೇನುಪೆಟ್ಟಿಗೆಯ ಬೆಲೆ ಅಜಮಾಸು ನೂರು ಡಾಲರು ಮುಟ್ಟಿದೆ. ಅಂದರೆ ಅಂದಾಜು ಒಂದು ಜೇನು ನೊಣದ ಒಂದು ತಿಂಗಳ ಬಾಡಿಗೆ  ೨ ಸೆಂಟ್ಸ್‌  ಅಂದರೆ ಅಂದಾಜು ೧೨ ರೂಪಾಯಿ.

ಇದಕ್ಕೆಲ್ಲ ಕಾರಣ ಕ್ಯಾಲಿಫೋರ್ನಿಯಾ ಪ್ರದೇಶದಲ್ಲಿರುವ ಲಕ್ಷಾಂತರ ಎಕರೆ ಬಾದಾಮಿ ತೋಟಗಳು. ಬಾದಾಮಿ ಬೆಳೆಯು ಸಮೃದ್ಧವಾಗಲು ಹೂಗಳು ಅರಳಿದ ಸಮಯದಲ್ಲಿ ಪರಾಗಸ್ಪರ್ಶದ ಪ್ರಮಾಣ ಅಧಿಕವಾದಷ್ಟೂ ಬಂಪರ್‌ಬೆಳೆ. ಮತ್ತು ಬಾದಾಮಿ ಹೂಗಳ ಪರಾಗ ಸ್ಪರ್ಶವಾಗುವುದು 90%  ಗೂ ಹೆಚ್ಚು   ಜೇನುಹುಳುಗಳಿಂದಲೇ.ವಿಶ್ವದ  ಬಾದಾಮಿ ಉತ್ಪಾದನೆಯಲ್ಲಿ ಅಮೇರಿಕಾದ್ದೇ ಸಿಂಹಪಾಲು.  ದಿನದಿಂದ ದಿನಕ್ಕೆ ಬಾದಾಮಿಯ ಬೇಡಿಕೆ ಏರುತ್ತಿರುವಾಗ ಉತ್ಪಾದನೆಯಾಗುತ್ತಿರುವ ಬಾದಾಮಿಯ ಮಾರುಕಟ್ಟೆಯ ಅಗತ್ಯ ಪುರೈಸಲು ಹೆಣ ಗಾಡುತ್ತಿದೆ. ಕಳೆದ ಶತಮಾನದಲ್ಲಿ ಅಮೇರಿಕಾದಲ್ಲಿ ಅದರಲ್ಲೂ ಕ್ಯಾಲಿಫೋರ್ನಿಯಾದಲ್ಲಿ  ಗೋಲ್ಡ್‌ರಷ್‌ ಎಂಬ ಗಳಿಕೆಯ ಕಾಲ ಬಂದಿತ್ತು ಆಗತಾನೆ ಪತ್ತೆಯಾದ ಬಂಗಾರದ ಗಣಿಗಳಲ್ಲಿ  ದುಡಿದು ರಾತ್ರೋರಾತ್ರಿ ಶ್ರೀಮಂತರಾಗಲು ರಾಷ್ಟ್ರದ ಎಲ್ಲ ಕಡೆಯಿಂದ ಜನ ಅಲ್ಲಿಗೆ ಧಾವಿಸಿದ್ದರು.ಆಗ ಯಾವುದೇ ನಿಯಂತ್ರಣವಿರಲಿಲ್ಲ. ಸಿಕ್ಕವರಿಗೆ ಸೀರುಂಡೆ. ಒಂದು ರೀತಿಯಲ್ಲಿ ಈಗ ಅದೇ ಪರಿಸ್ಥಿತಿ. ಆದರೆ ಬಾದಾಮಿ ಗಿಡಬೆಳೆಯಬೇಕು. ಅದರ ಹೂಗಳ ಪರಾಗಸ್ಪರ್ಶಕ್ಕಾಗಿ ಜೇನುಹುಳ ಸಾಕ ಬೇಕು. ಅದಕ್ಕೇ ಈ ಪಾಟಿ ಜೇನುಹುಳಕ್ಕೆ ಬೇಡಿಕೆ.
ಇದಕ್ಕೆ ಕಾರಣ ಕ್ಯಾಲಿಫೋರ್ನಿಯಾದಲ್ಲಿನ ಬಾದಾಮಿ ತೋಟಗಳು  ಆ ಹಂಗಾಮಿನಲ್ಲಿ ಹೂವು ಬಿಡುತ್ತವೆ. ಮತ್ತು ಬಾದಾಮಿಯ ಹೂಗಳು ಫಲಭರಿತವಾಗ ಬೇಕಾದರೆ ನಡೆಯುವ ಪರಾಗಸ್ಪರ್ಶದ ಕಾರ್ಯವನ್ನು ೯೦% ಜೇನು ಹುಳುಗಳೇ ನಿರ್ವಹಿಸುತ್ತವೆ.
ಕ್ಯಾಲಿಫೋರ್ನಿಯಾದಲ್ಲಿ  ವಿಶ್ವದಲ್ಲಿನ 82% ಬಾದಾಮಿ ಉತ್ಪಾದನೆಯಾಗುತ್ತದೆ. ಅಲ್ಲಿ ಸುಮಾರು 800,000  ಎಕರೆ ಬೂಮಿಯಲ್ಲಿ ಬಾದಾಮಿ ಬೆಳೆಯಲಾಗುತ್ತಿದೆ.ಕ್ಯಾಲಿಫೋರ್ನಿಯಾದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಡಿರುವ 400 ಮೈಲುಉದ್ದದ ಪಟ್ಟಿಯಲ್ಲಿ  ಎಲ್ಲಿನೋಡಿದರೂ ಬರೀ ಬಾದಾಮಿಯ ಮರಗಳ ತೋಟ. ಅದೂ ಚಿಕ್ಕಪುಟ್ಟ ಹಿಡುವಳಿಗಳು ಅಲ್ಲ.  ತೋಟದ ಸರಾಸರಿ ವಿಸ್ತೀರ್ಣವೇ ಸುಮಾರು  97 ಎಕರೆ. ನೂರಾರು ಅದಕ್ಕೂ ಬೃಹತ್‌ ತೋಟಗಳೂಇವೆ. ಅವುಗಳ ವಿಸ್ತಿರ್ಣ 500   ಎಕರೆಯಷ್ಟು. ಅಲ್ಲಿ ಎಲ್ಲ ಯಾಂತ್ರೀಕೃತ ಕೃಷಿ. ಕೆಲವು ಕಡೆ ಕಾಂಪ್ಯೂಟರೀಕೃತ ಕೆಲಸಗಳು ಸರ್ವೇ ಸಾಮಾನ್ಯ. ಎಲ್ಲ ಕಡೆ ಹನಿನೀರಾವರಿ ಅಳವಡಿಸಲಾಗಿರುತ್ತದೆ. ಪರಿಣಾಮ ಆಧುನಿಕ ಯಂತ್ರೋಪಕರಣಗಳ ಬಳಕೆ ಅಧಿಕವಾಗಿರುವುದು.ಗೊಬ್ಬರ ಮತ್ತು ಕೀಟನಾಶಕಗಳನ್ನು ಹಾಕಲು ಹೆಲಿಕಾಪ್ಟರ್‌  ಬಳಸುತ್ತಾರೆ.
 ಈ ತೋಟಗಳ ನಿರ್ವಹಣೆಯಲ್ಲಿ ಕ್ಯಾಲಿಫೋರ್ನಿಯಾದಲ್ಲಿ  ಬಾದಾಮಿ ಮಂಡಳಿಯದು ಮಹತ್ವದ ಪಾತ್ರವಿದೆ. ಜಮೀನಿನ ಮಣ್ಣು ಪರೀಕ್ಷೆಯಿಂದ ಹಿಡಿದು ಬೀಜ , ಗೊಬ್ಬರ , ಇಳುವರಿ, ಸಂಗ್ರಹಣೆ, ಸಾಗಣಿಕೆ ಮತ್ತು ಮಾರಾಟದ ವರೆಗ ಎಲ್ಲದರಲ್ಲೂ ಮಾರ್ಗದರ್ಶನ ನೀಡುತ್ತದೆ. ಅದು ಮಣ್ಣು ಪರೀಕ್ಷೆಯಿಂದ ಹಿಡಿದು ಬೀಜ ಗೊಬ್ಬರ, ಬಿತ್ತನೆ ಇಳುವರಿ , ಸಂಗ್ರಹಣೆ ಮಾರಾಟ, ಎಲ್ಲದರಲ್ಲೂ ಸಂಶೋಧನೆಯ ಫಲಿತಾಂಶಗಳ ಪ್ರಕಾರ ರೈತರಿಗೆ  ಉಪಯುಕ್ತವಾದ ಮಾಹಿತಿ ನೀಡುತ್ತದೆ,
ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಹೊಸ ತಳಿಗಳ ಸಂಶೋಧನೆಗೆ ವಿಶೇಷ ಪ್ರಯೋಗಾಲಯಗಳೂ ನಿರತವಾಗಿವೆ.
 ಸ್ಪೇನ್‌  ಬಾದಾಮಿ ಉತ್ಪಾದನೆಯಲ್ಲಿ   ವಿಶ್ವದಲ್ಲಿಎರಡನೆಯ ಸ್ಥಾನದಲ್ಲಿದೆ.  ಅದರ ಪಾಲು ೧೭%. ಅಲ್ಲಿ ಅಮೇರಿಕಾಕ್ಕಿಂತ ಮೂರುಪಟ್ಟು  ಕೃಷಿಭೂಮಿಯಲ್ಲಿ ಬಾದಾಮಿ ಬೆಳೆಯುತ್ತಾರೆ. ಸ್ಪೇನನಲ್ಲಿ ಚಿಕ್ಕ ಹಿಡುವಳಿದಾರು.ಮಳೆಆಧಾರಿತ ಬೇಸಾಯ ಮತ್ತು ಮಾನವ ಶಕ್ತಿ ಆಧಾರಿತ ಕೃಷಿ ಕಾರ್ಯ ನಿರ್ವಹಣೆ. ಮತ್ತು ಸಾಂಪ್ರದಾಯಿಕ ಪದ್ದತಿಯ ಕೃಷಿ. ಅದರಿಂದ ಇಳುವರಿ ಕಡಿಮೆ.ಯುರೋಪು ಹಾಗು ಇತರೆ ದೇಶಗಳು ಅಲ್ಪ ಸ್ವಲ್ಪ ಬಾದಾಮಿ ಬೆಳೆ ಮಾಡುತ್ತವೆ..
ಸ್ಪೇನ್‌ ಮತ್ತು  ಯುರೋಪು ಬಾದಾಮಿ ಬೀಜಗಳ ದೊಡ್ಡಗ್ರಾಹಕರು. ಚೀನಾ  ಮತ್ತು ಹಾಂಕಾಂಗ್‌ಗೆ   ೬೪೨ ಮಿಲಿಯನ್‌ ಡಾಲರ್‌ ಮತ್ತು  ಭಾರತಕ್ಕೆ  ೩೧೨ಮಿಲಿಯನ್‌ ಇಡೀ ಬದಾಮಿ ರಫ್ತಾಗುತ್ತವೆ. ಅಲ್ಲಿ ಕಡಿಮೆ ಕೂಲಿ ಇರುವುದರಿಂದ ಅವರು ಕಚ್ಚಾ ಬಾದಾಮಿಯ ಸಿಪ್ಪೆ ತೆಗೆದು ಅದರಿಂದ ವಿವಿಧ ಉತ್ಪನ್ನಗಳನ್ನುತಯಾರಿಸುವರು  ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿನಿಂದ ಉತ್ತಮಲಾಭ ದೊರೆಯುತ್ತದೆ. ಅದಕ್ಕೆ ಸ್ಥಳಿಯ ಬೇಡಿಕೆಯೂ ಹೆಚ್ಚು. ಇದು ಸೌಂದರ್ಯವರ್ಧಕಗಳಲ್ಲಿ ಮತ್ತು ಔಷಧಿಗ ವಲಯದಲ್ಲೂ ಬೇಡಿಕೆ ಹೆಚ್ಚಿದೆ..ಬಾದಾಮಿಯಂತೂ ಬಹು ಬೇಡಿಕೆಯ ಡ್ರೈ ಫ್ರೂಟ್‌. ಅದು ವೈಭವೋಪೇತ ಆಹಾರದಲ್ಲಿನ ವಿಭಾಜ್ಯ ಅಂಗ. ಅದರ ಔಷಧಿಯ ಗುಣವೂ  ಬೇಡಿಕೆ ಹೆಚ್ಚಲು ಕಾರಣ. ವಿವಿಧ ಖಾದ್ಯ ತಯಾರಿಕೆಯಲ್ಲಿ ಅದರ ಬಳಕೆ ಮಾಡಿದರೆ  ರುಚಿಯ ಮೌಲ್ಯ ಹೆಚ್ಚುವುದು. ಆಹಾರ ಮತ್ತು ಪಾನೀಯ ಗಳಲ್ಲಿ ಬಾದಾಮಿಯ ಅಂಶ ಆರೋಗ್ಯ ವರ್ಧಕ ಮತ್ತು ಪುಷ್ಟಿದಾಯಕ . ಈ ಎಲ್ಲ ಗುಣಗಳಿಂದ ಅದಕ್ಕೆ ವಿಶ್ವಾದ್ಯಂತ ಬೇಡಿಕೆ  ಇದೆ..ನಾವು ಕುಡಿಯುವ ಬಾದಾಮಿಹಾಲು, ತಿನ್ನುವ ಖಾರ ಹಚ್ಚಿ ಹುರಿದ ಬಾದಾಮಿ, ಸಿಹಿತಿಂಡಿಯಲ್ಲಿ ಹಾಕುವ ಬಾದಾಮಿ ಚೂರುಗಳನ್ನು  ತಿನ್ನುವಾಗ ಅದು ಅಮೇರಿಕಾದಿಂದ ಬಂದಿರುವುದು ಎಂಬ ಅರಿವು ಬಹುತೇಕ ನಮಗಿರುವದೇಇಲ್ಲ. ಅಮೇರಿಕಾದ ಏಕಸ್ವಾಮ್ಯತೆ ಅಷ್ಟರಮಟ್ಟಿಗಿದೆ ಬಾದಾಮಿ ಬೆಳೆಯಲ್ಲಿ
 ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯ.ಈ ವರ್ಷ ಜೇನುಹುಳಿಗಳಿಗೆ ಬೇಡಿಕೆ ಹೆಚ್ಚಾಗಲು ಮುಖ್ಯಕಾರಣ ಬಾದಾಮಿ ಬೆಳೆಯ ಭೂಪ್ರದೇಶವನ್ನು ಒಂದೂವರೆ ಪಟ್ಟು ಹೆಚ್ಚಿಸಿರುವುದು. ಎರಡನೆಯದಾಗಿ ಜೇನುಹುಳಗಳ ಸಂಖ್ಯೆಯು ಕಡಿಮೆಯಾಗಿರುವುದು. ಮಂಜು ಮುಸುಕಿದ ವಾತಾವರಣ, ಅತಿಯಾದ ಚಳಿ, ಅಕಾಲ ಮಳೆ ಹೆಚ್ಚಿನಪ್ರಮಾಣದ ಜೇನುನೊಣಗಳ ಸಾವಿಗೆ ಕಾರಣ ವಾಗಿವೆ. ಅಲ್ಲದೆ ಈ ಹಿಂದೆ ಆಷ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುತಿದ್ದ ಜೇನು ಹುಳುಗಳು ಸೋಂಕು ರೋಗ ಹರಡುವ ಶಂಕೆಯಿಂದ  ಅವುಗಳ ಆಮದನ್ನು ನಿಷೇಧಿಸಲಾಗಿದೆ. ಇದರ ಪರಿಣಾಮ ಅಮೇರಿಕಾದ ಬಹುತೇಕ ಎಲ್ಲ ರಾಜ್ಯಗಳಿಂದಲೂ ಜೇನು ಸಾಕಣೆದಾರರು ಇಲ್ಲಿಗೆ ತಮ್ಮ ಜೇನುಗೂಡುಗಳನ್ನು ತರುತಿದ್ದಾರೆ. ಈಗ ಜೇನು ಹುಳಗಳದೇ ಒಂದು ಬೃಹತ್‌  ಜಾತ್ರೆ ಅಲ್ಲಿ ಸೇರಲಿದೆ..ವೈಜ್ಞಾನಿಕವಾಗಿ ಜೇನು ಹುಳ ಸಾಕಣೆ ಮಾಡುವುದರಲ್ಲಿ ತರಬೇತಿ ಕೊಡಲು ಸಂಸ್ಥೆಗಳು ತಲೆ ಎತ್ತಿವೆ ತೋಟಗಾರರು ಮತ್ತು ಜೇನುಗೂಡು ಸರಬರಾಜು ಮಾಡುವವರ ಸಂಪರ್ಕ ಸಾಧಿಸುವ ಸಂಸ್ಥೆಗಳು  ಉತ್ತಮ ವ್ಯವಹಾರ ಮಾಡುತ್ತಿವೆ. ಇದೂ ಅಲ್ಲದೆ ಅನೇಕ ಜೇನುಹುಳು ಸಾಕಣೆದಾರರು ತೋಟಗಾರರೊಂದಿಗೆ ಒಂದು ರೀತಿಯಲ್ಲಿ ವಿಶ್ವಾಸ ಬೆಳಸಿಕೊಂಡು ಪ್ರತಿವರ್ಷ ತಪ್ಪದೇ ಅಲ್ಲಿಗೇ ತಮ್ಮ ಜೇನುಪೆಟ್ಟಿಗೆಗಳನ್ನು ತರುತ್ತಾರೆ.ಜೇನುಹುಳು ಸಾಕಣೆಗೆ ಅಗತ್ಯವಾದ ಉಪಕರಣಗಳು, ಆಹಾರ, ಔಷಧಿ ಮತ್ತು ರಾಣಿ ಜೇನುಗಳನ್ನು ಒದಗಿಸುವ ಕಂಪನಿಗಳೂ ಇವೆ. ಇವುಗಳೆಲ್ಲದರ ಜೊತೆ ಜೇನು ಪೆಟ್ಟಿಗೆ ಗಳನ್ನು ಸುಗಮವಾಗಿ ಸಾಗಿಸುವ  ಉದ್ಯಮವೂ ದೊಡ್ಡದಾಗಿಯೇ ಬೆಳೆದಿದೆ. ಅದಕ್ಕಾಗಿ ವಿಶೇಷ ವಾಹನಗಳನ್ನೇ ಬಳಸಲಾಗುತ್ತದೆ.  ಜೇನು ಹುಳುಗಳಿಗೆ ಇಷ್ಟೊಂದು ಬೇಡಿಕೆ ಇದ್ದು ಅದಕ್ಕಾಗಿ ಉತ್ತಮ ಬೆಲೆ ಕೊಡುತ್ತಿರುವಾಗ ಅವುಗಳ ಗುಣ ಮಟ್ಟದ ಕುರಿತು ಖಾತ್ರಿ ಬೇಡುವುದು ಸಹಜ. ಹಾಗಾಗಿ ಒಂದು ನಿಗದಿತ ಅಳತೆಯ ಪೆಟ್ಟಿಗೆಯಲ್ಲಿ ಇರಬೆಕಾದ ಜೇನುಹುಳಗಳ ಸಂಖ್ಯೆಯನ್ನೂ  ನಿರ್ವಹಿಸುವರು. ಅಕಸ್ಮಾತ್‌ ಕಡಿಮೆ ಇದ್ದರೆ ಬೇರೊಂದು ಕಡೆಯಿಂದ ತಂದು ಸರಿದೂಗಿಸುತ್ತಾರೆ.
ಜೇನಿಗಿಂತ ಸಿಹಿ ಬೇರೆ ಇಲ್ಲ   ನಿಜ,   ಆದರೆ ಜೇನುಹುಳುಗಳ ಹಾರಾಟಕ್ಕಿಂತ  ಹೆಚ್ಚಿನ ಖುಷಿ   ರೈತರಿಗೆ ಬೇರೆ ಇಲ್ಲ..ಅವುಗಳ ಹಾರಾಟ ಅಧಿಕವಾದಷ್ಟೂ ಬಾದಾಮಿ ಫಸಲು ಹೆಚ್ಚುವುದು . ಬೆಳೆಗಾರನ ಮುಖದಲ್ಲಿ ನಗು ಮೊಳಗುವುದು.