Sunday, March 30, 2014

ಸರಳೀಕೃತ ಹಸ್ತ ಪ್ರತಿ ಅಧ್ಯಯನ



                            

                   ಯುಗಾದಿಯ ಶುಭಾಶಯಗಳು                     


        ರೇವಣ ಸಿದ್ದೇಶ್ವರ ಕಾವ್ಯ                                                  

  

                                ರೇವಣಸಿದ್ಧೇಶ್ವರ ಕಾವ್ಯದ ಮೊದಲ  ಗರಿ ಲಿಪ್ಯಾಂತರ
೧. ಶ್ರೀ ಗಣಾಧಿಪತೇಯೇನಮಃ.  Ii ಶ್ರೀಗುರ ಪರಬ್ರಹ್ಮೇಣೇಮಃ  II ಶ್ರೀ ಗುರು ರಾಮಗಿರಿ ಕರಿಸಿದ್ದೇಶ್ವರಸ್ವಾಮಿಯ ಪಾದಾರವಿಂದವೇ ಗತೀII  ಪೈಂಗಳ ನಾಮ ಸಂವತ್ಸರದ ಮಾಘಶುದ್ಧ ಪಂಚಮಿ --- ಗತಿಸಿದ ಮಠದ ಸಿದ್ಧವೀರಯ್ಯನವರು
 ೨ .ಲಿಖಿಸಿದ ರೇವಣಸಿದ್ದೇಶ್ವರನ ಕಾವ್ಯ ಪಾಡಿಗಳಿಗೆ ಶುಭ ಮಸ್ತು, ಶೋಭನ ಮಸ್ತು  ಆಯುರಾರೋಗ್ಯ ಐಶ್ವರ್ಯವೃದ್ಧಿ ರಸ್ತು Iಐದನೂ- I ಶ್ರೀ ಮದ್ಗುರುರಾಮಗಿರಿಯ  ಸಿದ್ದೇಶನ  ಕೋಮಲ ಪಾದಪದ್ಮಗಳಿಗೆ--- ಅಸ್ತು  
೩. ಹೃದಯ ಕಮಲದಭಿರಾಮ ಕುಸುಮನಿಕೆರಗುವೆನು IIII ಲಂಬೂಜಸಖನನಂಬುIಜಾಕ್ಷನಂಬುಜಸಖ I ಕುಂಬಿನಯೊಳಗುಳ್ಳ ಜನರುII ಜಾಂಬಾರಿ ಮೊದಲಾದ Iಸುರರು ಪೂಜಿಪ ಪಾದಾಂಬುಜಕಾನೆರುಗುವೆನು II  II  ಸಶ್ರಾಗ—
೪. ನನಕ ಪತ್ರನಾಮನ ಪಿತ ಶುಕ್ರಗಾಮನ ಸ್ತೋತ್ರ  ಪಾತ್ರಾ II ಪತ್ರ ಕಾರನಹರಗಾರ್ಧಾಂಗವನಿತತ್ತಾI s ಸತ್ರಾಂಬಕಜಯ ಜಯII  II ಪಾರ್ವತಿ ಸಕಲ ಜನರಿಗೆಲ್ಲ ಮಾತೆಯುII ಸರ್ವೇಶ್ವರನರ್ಧಾಂಗಿ ನೀ II  ಸರ್ನಿಸೆನ್ನಯ ಮಾನದೊಳಗೆ ಸುಮತಿಯಾ
 ೫. ನುI ಪರ್ವತರಾಜ ಕುವರಿ II  IIಮೃಡನುರಿಗಣ್ಣಗಳು ಘುಡು ಘುಡಿಸಿತ ಸುಟ್ಟ Iಖಡ್ಗ ಶೂಲಿಗೆ ಧನು ಶರಧಿII ನಡದು ದಕ್ಷನ ಶಿರ ಕಡಿದ ವೀರೇಶ್ವರI ಕೊಡು ಎನ್ನ ಮತಿಗೆ ಮಂಗಳವಾIIII  ಪಡೆದೇಳು ದಿನದೆಡೆಯೊಳಗೆ ಕಡೆಗಡಿ ಯುತ ತಾರಕನಾ  II ಹೊಡೆದು ಕೆಡವಿದ ಷಣ್ಮುಖನು ಕೊಡು  I
ಯೆಮಗೆ ಈಗ ದೃಡತರ ವರದ ಸನ್ಮತಿಯಾ II II ದಂಡ ಕಮಂಡ ಕಂಕಾ ಉಪಕರ್ಣ ಕುಂಡಲ ಅಸಿತಾವಧಿರಿಸಿIi  ಕಂಡು  ಇಂಧುಧರನ ಲಿಂಗದಲ್ಲಿ ಉದ್ಭವಿಸಿದ ಉದ್ದಂಡ ರೇವಣ ಕೊಡು ವರವಾ IIII
ಜಲಧಿಯುಕ್ಕಿ ಜಗವೆಲ್ಲಾ ನುಂಗಲು ಹಲುಬಿ ಸುರರು ಬಾಯಿ ಬಿಡಲು II ಋಜ ಬಲ್ಪಿಯಲಿ ಎಲ್ಲರ ಕಾಯ್ದ ಶೂಲಿಯ ವೃಷಭ ಕೊಡುವರವಾ  IIII ಸರ್ವಜ್ಞನ ವರ ಕುವರ ಗಣೇಶನೆ ಸರ್ವ ಕಾಲದಿಂದ -----

                                                     ಹಸ್ತ ಪ್ರತಿ ಅಭಿಯಾನ
                         
, ಹಸ್ತ ಪ್ರತಿ ಅಭಿಯಾನದ ಅಂತಿಮ ಗುರಿಯು  ಗರಿಗಳಲ್ಲಿ  ಪಠ್ಯವನ್ನು ಅಧ್ಯಯನ ಮಾಡಿ ಹೊಸ ಗನ್ನಡದಲ್ಲಿ ದಾಖಲಿಸುವುದು, ವಿದ್ವತ್‌ ಮತ್ತು ತಂತ್ರ ಜ್ಞಾನಗಳ ಸಮ್ಮಿಳನದಿಂದ ವರ್ಷಗಟ್ಟಲೆ ಹಿಡಿಯಬಹುದಾದ ಕೆಲಸವನ್ನು  ಕೆಲವೇ ತಿಂಗಳಲ್ಲೆ ಪೂರೈಸುವ ಪ್ರಯತ್ನಾವಾಗಿ ೧೦೦ ಗರಿಗಳಿರುವ ರೇವಣ ಸಿದ್ದೇಶ್ವರ ಕಾವ್ಯವನ್ನು ಕೈಗೆತ್ತಿಕೊಂಡು  ೬  ಗಂಟೆಯಲ್ಲಿ  ಒಂದು ಗರಿಯ ಲಿಪ್ಯಾಂತರ ಮಾಡಿದೆ..ಅಂದರೆ  ಹತ್ತು ಪಟ್ಟು ಕಡಿಮೆ ಅವಧಿಯಲ್ಲಿ ಗ್ರಂಥ ಸಂಪಾದನಾ ಕಾರ್ಯಮಾಡುವ ಸಾಧ್ಯತೆ ಇದೆ. ಯುವ ಸಂಶೋಧಕರ ಗಮನ ಸೆಳೆಯಲು ಹೊಸವರ್ಷದ ಶುಭಾಶಯ ಕೋರುತ್ತಾ ಈ ಕೊಡುಗೆ ನೀಡಿದೆ. ಕಾಂಪ್ಯೂಟರ್‌ ಹೊಂದಿರುವ  ಮತ್ತು ಕನ್ನಡ ಭಾಷೆಲ್ಲಿ ಪರಿಣತೆ ಇರುವವರು ತಾವು ಇದ್ದ ಜಾಗದಲ್ಲೇ ಈ ಅಭಿಯಾನದಲ್ಲಿ ಭಾಗವಹಿಸಿ ಗ್ರಂಥ ಸಂಪಾದನೆ ಮಾಡಬಹುದು. ಈ ಕಾರ್ಯದಲ್ಲಿ ಸಹಕರಿಸಿದ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,,ಶ್ರೀ ಗುರುಪ್ರಸಾದ ಮತ್ತು ಅವರ ತಂಡ, ಶ್ರೀಮತಿ ಸೀತಾಲಕ್ಷ್ಮಿ  ಮತ್ತು ಆನ್‌ಲೈನ್‌ ನಲ್ಲಿ ಸಹಕರಿಸಿದ ಸಹೃದಯರು ಹಾಗೂ ಆಸಕ್ತಿತೋರಿದ ಎಲ್ಲರಿಗೂ ಆಭಾರಿ. ಮಾಹಿತಿಗೆ  ಅಭಿಯಾನದ ನಿರ್ದೇಶಕರನ್ನು  ಮಿಂಚಂಚೆಯ  ಮೂಲಕ.ಸಂಪರ್ಕಿಸಿ-
                             -   appaaji@gmail.com
                                          ಹೊಸ ವರ್ಷದ  ಶುಭಾಶಯಗಳೊಡನೆ  
ಎಚ್‌.ಶೇಷಗಿರಿರಾವ್‌.
ನಿರ್ದೇಶಕರು
ಹಸ್ತ ಪ್ರತಿ ಅಭಿಯಾನ        
                                                                              

                       

Friday, March 28, 2014

ಶ್ರೀ ಪ್ರಶಸ್ತಿ ಚಿತ್ರ ಸಂಪುಟ




 


   


 


 


 


                                                       


Monday, March 24, 2014

ಶ್ರೀ ಸಾಹಿತ್ಯ ಪ್ರಶಸ್ತಿ


ಬಿ.ಎಂ.ಶ್ರೀ ಪ್ರತಿಷ್ಠಾನವು ನೀಡುವ “ ಶ್ರೀ ಸಾಹಿತ್ಯ ಪ್ರಶಸ್ತಿ” ಯ ಪ್ರಥಮ ಪ್ರದಾನ ಸಮಾರಂಭವು ಭಾನುವಾರ ಬೆಳಗ್ಗೆ ೧೦ ಗಂಟೆಗೆ ಮಿಥಿಕ್‌ ಸೊಸೈಟಿ ಸಭಾಂಗಳದಲ್ಲಿ ನಡೆಯಿತು..
 ಸುಪ್ರಸಿದ್ದ ವಿಮರ್ಶಕ ಡಾ. ಜಿ.ಎಸ್‌. ಅಮೂರ್‌ ಅವರು ಪ್ರಶಸ್ತಿ ಪ್ರದಾನ ಮಾಡುತ್ತಾ ಬಿ. ಎಂ.ಶ್ರೀ ನವೋದಯ ಸಾಹಿತ್ಯಕ್ಕೆ ನಾಂದಿ ಹಾಡಿದ ಮಹಾಪುರುಷ. ಇಂದು ಕನ್ನಡವು ಭಾರತೀಯ ಭಾಷೆಗಳಲ್ಲಿ ಅಗ್ರ ಸ್ಥಾನದಲ್ಲಿ ಇರಲು ಕಾರಣ ಅವರ  ಹಿರಿಯ ಕಾಣಿಕೆ. . ಕನ್ನಡಿಗರಲ್ಲಿ ದ್ರಾವಿಡ ಪ್ರಜ್ಞೆಯನ್ನು ಜಾಗೃತ ಗೊಳಿಸಿ ದವರು  ಅವರು,ಕನ್ನಡದ ದುರಂತ ನಾಯಕ ಪ್ರಧಾನನಾಟಕಗಳಾದ  “ಅಶ್ವತ್ಥಾಮ “ ಗಧಾಯುದ್ಧ, ಪಾರಸಿಕರು ಅವರ ಹೊಸ ದೃಷ್ಟಿಯ ಕೊಡುಗೆಗಳು, ಭಾಷೆ ಛಂದಸ್ಸು, ವಿಷಯ  ಜೊತೆಗೆ ಕನ್ನಡ ಅಭಿಮಾನ ಬೆಳೆಸುವಲ್ಲಿನ ಅವರ ಕಾಣಿಕೆ ಅಸದೃಶ ಆದರೆ ಅವರ ಕೊಡುಗೆಯನ್ನು ಗುರುತಿಸುವ ಕೆಲಸ ಸರ್ಕಾರ ಒಂದು ಶತಮಾನ ಕಳೆದರೂ ಮಾಡಿಲ್ಲ. ಯಾವ ಸಾಹಿತಿಗೂ ಅದರ ಬಗ್ಗೆ ನೆನಪು ಆಗಲಿಲ್ಲ. 
ಶ್ರೀಮತಿ. ಕಮಲಿನಿ .ಷ. ಬಾಲುರಾವ್‌
ಆದರೆ ಬದಲಾಗುತ್ತಿರುವ ಈ ಕಾಲಮಾನದಲ್ಲಿ ತಮ್ಮ ಅಜ್ಜನ ಹೆಸರನಲ್ಲಿ ಪ್ರಶಸ್ತಿ ಕೊಡ ಮಾಡಿದ ಶ್ರೀಮತಿ ಕಮಲಿನಿ.ಷ. ಬಾಲುರಾವ್  ಅವರ  ಕೊಡುಗೆ ವಿಶೇಷವಾದದು , ಶ್ರೀಯವರು ಕನ್ನಡದ  ಮೊದಲ ಅನುವಾದಕರು. ಸಂಸ್ಕೃತದ ಹಿಡಿತದಿಂದ ಕನ್ನಡ ಭಾಷೆ,  ಬಿಡಿಸಿದವರು. ಅವರಂತೆ ಪ್ರಶಸ್ತಿ ವಿಜೇತ ಭಟ್ಟರು ಇಂಗ್ಲಿಷ್‌ನ ಮೇರು ಶಿಖರಗಳಾದ ಷೇಕ್ಸಪಿಯರ್‌, ಡಬ್ಲ್ಯ. ಬಿ. ಯೇಟ್ಸ್‌ ಮತ್ತು ಟಿ.ಎಸ್‌. ಈಲಿಯಟ್‌ರ ಕಾವ್ಯದ ಅನುವಾದ ಮಾಡಿ ಹೊಸಕಾವ್ಯದ ಹಾದಿ ಸುಗಮ ಗೊಳಿಸಿರುವರು. ಶ್ರೀಯವರು ಕನ್ನಡನಾಡಿನಾದ್ಯಂತ ಸಂಚರಿಸಿ ಕನ್ನಡದ ಏಳಿಗೆಗೆ ಉಪನ್ಯಾಸ ಮಾಡಿದ ಅಪ್ರತಿಮ ವಾಗ್ಮಿಗಳು ಭಟ್ಟರು ವಿದೇಶದಲ್ಲೂ ಕನ್ನಡದ ಕಂಪನ್ನು ಹರಡಿದವರು, ಮೇಲಾಗಿ ಗೇಯತೆ ಪ್ರಧಾನವಾದ ಕವಿಗಳು ಹೀಗಾಗಿ ಪ್ರಥಮ ಪ್ರಶಸ್ತಿಯು ಅವರಿಗೆ ಸಂದುದು ಬಹುಸೂಕ್ತ ಎಂದರು.

ಉದ್ಘಾಟನೆ
ಅಭಿನಂದನ ಭಾಷಣ ಮಾಡುತ್ತಾ ಡಾ. ಎಂ. ಎಚ್. ಕೃಷ್ಣಯ್ಯನವರು ತಮ್ಮ ಸಹಪಾಠಿಗೆ ಸಂದ ಈ ಗೌರವತಂದ ಸಂತೋಷ ವ್ಯಕ್ತ ಪಡಿಸಿ  ವಾಚಾಳಿಯಾದ ತಮ್ಮ ಗೆಳೆಯ ಹೇಗೆ ತನ್ನ ಮಾತುಗಾರಿಕೆಯನ್ನು ಕನ್ನಡದ ಪ್ರಚಾರಕ್ಕೆ ಬಳಸಿಕೊಂಡಿರುವನು, ಜಡವಾಗಿದ್ದ ಕಾವ್ಯಪ್ರಪಂಚಕ್ಕೆ  ಆಧುನಿಕತಂತ್ರ ಜ್ಞಾನದ ಬಳಕೆಯಿಂದ ಕ್ಯಾಸೆಟ್‌ ಯುಗಕ್ಕೆ ನಾಂದಿ ಹಾಡಿ ಚಲನ ಶೀಲತೆ ನೀಡಿದರು,ಶಿಶುನಾಳ ಷರೀಪ್‌ರ ಪದಗಳನ್ನು ಹಳ್ಳಿಹಳ್ಳಿಗಳಲ್ಲೂ ಗುಣಗುಣಿಸುವಂತೆ ಮಾಡಿ ಸುಗಮ ಸಂಗೀತದ ಹೊಸ ಸಾಧ್ಯತೆ ತೋರಿದರು, ಎಂಬುದನ್ನು ವಿವರಿಸಿದರು.
ಪ್ರಶಸ್ತಿ ಪ್ರದಾನ
ಪ್ರಶಸ್ತಿ ಸ್ವೀಕರಿಸಿದ ಡಾ. ಲಕ್ಷ್ಮೀನಾರಾಯಣಭಟ್ಟರು ಕನ್ನಡ ಕಾವ್ಯದ  ನವಯುಗಕ್ಕೆ ಶ್ರೀಕಾರ ಹಾಕಿದ ಯುಗ ಪುರುಷರ ಹೆಸರಿನ ಪ್ರಶಸ್ತಿ ದೊರೆತಿರುವುದು ಅತಿ ದೊಡ್ಡ ಗೌರವ. ಗುರುವರ್ಯರು ಕನ್ನಡಕ್ಕಾಗಿ ಎತ್ತಿದ ದನಿ ,ಎತ್ತಿ  ತೋರಿಸಿದ ಭಾಷೆಯ ಬೆಳವಣಿಗೆಯ ತೊಡಕುಗಳು ಇಂದಿಗೂ ಪ್ರಸ್ತುತ. ಅವರ ಹೆಜ್ಜೆಯಲ್ಲಿ ನಡೆದುದಕ್ಕೆ ಇಷ್ಟೆಲ್ಲ ಸಾಧನೆ ಸಾಧ್ಯವಾಯಿತು ಎಂದರು.
ಪ್ರಸ್ತಾವಿಕ ಭಾಷಣ ಮಾಡಿದ ಡಾ. ಪಿ.ವಿ. ನಾರಾಯಣ  ಬಿ.ಎಂ.ಶ್ರೀ ಸ್ಮಾರಕಪ್ರತಿಷ್ಠಾನಕ್ಕೆ ಅವರ ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿ ನೀಡುವ ಕಾರ್ಯ ಸಾರ್ಥಕವೆನಿಸಿದೆ .. ಮತ್ತು ಇದನ್ನುಯಾವುದೇ ಒತ್ತಡ ಮತ್ತು ಪಕ್ಷಪಾತರಹಿತವಾಗಿ  ಆಯ್ಕೆ ಮಾಡಲು ಕೈಕೊಂಡ ಪ್ರಕ್ರಿಯೆಯನ್ನು ವಿವರಿಸಿದರು. ಶ್ರೀಯವರು ಕನ್ನಡ ಕಾವ್ಯ ಭಾಷೆಗೆ ಹೊಸ ಹುಟ್ಟು ಕೊಟ್ಟವರು, ಭಾಷೆ, ಛಂದಸ್ಸು ಮತ್ತು ಜನಪದರ ನುಡಿ ಬಳಕೆಗೆ ಹಾದಿ ಹಾಕಿಕೊಟ್ಟವರು ಸಂಸ್ಕೃತದ ಸಂಕೀರ್ಣತೆಯನ್ನು ಕೈಬಿಟ್ಟು ತಿಳಿಗನ್ನಡದ ಸರಳ ಭಾಷಾ ಬಳಕೆಗೆ ಒತ್ತು ಕೊಟ್ಟವರು , ಕನ್ನಡ  ಮೊದಲ ಚಳುವಳಿಗಾರರು ,ಕನ್ನಡದ ಮೊದಲ ಗೌರವ ಪ್ರಾಧ್ಯಾಪಕರು .ಅವರ ಕಾಣಿಕೆಯ ಪ್ರಮಾಣ ಎಷ್ಟು ಅಗಾಧವಾಗಿರುವುದೆಂದರೆ ನಂತರ ಬಂದ ಎಲ್ಲ ಕವಿಗಳೂ ಅವರಿಂದ ಪ್ರಭಾವಿತರೇ,  ಒಂದು ಶತಮಾನ ಕಳೆದರೂ  ಅವರ ಕಾವ್ಯ ಮತ್ತು ಮಾತು ಪ್ರಸ್ತುತವಾಗಿರುವುದು ಎಂದರು.
ಎಂ ಶ್ರೀಯವರ ನೇರ ಶಿಷ್ಯರಾದ ಶತಾಯುಷಿ ನಾಡೋಜ ಡಾ. ಜಿ. ವೆಂಕಟ ಸುಬ್ಬಯ್ಯನವರು ಅಧ್ಯಕ್ಷತಾ ಭಾಷಣ ಮಾಡುತ್ತಾ ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಂಡರು. ಬೆಂಗಳೂರಿನಲ್ಲಿ ಸೆಂಟ್ರಲ್‌ ಕಾಲೇಜಿನಲ್ಲಿ  ಪ್ರಾದ್ಯಾಪಕರಾಗಿದ್ದ ಅವರು ಮೈಸೂರಿಗೆ ಬಂದು ಮಾಡುತಿದ್ದ ಪಾಠ ಮನದಲ್ಲಿ  ಅಚ್ಚೊತ್ತಿದಂತೆ ಉಳಿಯುತಿತ್ತು. ಆ ಕಾಲದಲ್ಲಿ ಮುದ್ರಿತವಾದ ಎಲ್ಲ ಪುಸ್ತಕಗಳನ್ನು ಓದಿರುತಿದ್ದರು.ರನ್ನ ಗಧಯುದ್ಧ ಪಾಠ ಮನದಲ್ಲಿ ಇಂದಿಗೂ ಅಚ್ಚೊತ್ತಿದಂತದೆ ಅವರು ಹಾಕಿದ ಭದ್ರ ಬುನಾದಿಯ ಮೇಲೆ ಇಂದು ಹೊಸಗನ್ನಡ ಕಾವ್ಯ ನಿಂತಿದೆ.ಆ ಯುಗಪ್ರವರ್ತಕೆ ಸ್ಮಾರಕ ಪ್ರಶಸ್ತಿ  ಮತ್ತೆ ನವೋದಯದ ಮರು ಹಟ್ಟಿಗೆ ಕಾರಣರಾದ,ಶಾಸ್ತ್ರ,ನಾಟಕ, ವಿಮರ್ಶೆ ಕ್ಷೇತ್ರಗಳಲ್ಲಿ ಹೆಜ್ಜೆ ಗುರುತ ಮೂಡಿಸಿರುವ ಡಾ. ಲಕ್ಷ್ಮೀ ನಾರಾಯಣಭಟ್ಟರಿಗೆ ದೊರೆತಿರುವುದದು ತಂಬ ಅರ್ಥ ಪೂರ್ಣ ಎಂದರು .

ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಪ್ರೊ. ಅಬ್ದುಲ್‌ಬಷೀರ್‌ ನಿರೂಪಣೆ ಮಾಡುತ್ತಾ ಪ್ರಶಸ್ತಿವಿಜೇತರು ತಮಗೆ ಗುರುಗಳಾಗಿದ್ದು ಅವರನ್ನು ಗೌರವಿಸುವ ಭಾಗ್ಯ ತಮ್ಮದಾಗಿರುವದಕ್ಕೆ ತೃಪ್ತಿ ವ್ಯಕ್ತ ಪಡಿಸಿದರು ಅವರ ತೋರಿದ ಹಾದಿಯಲ್ಲಿ ನಡೆದುದೇ ಸಾಹಿತ್ಯ ರಂಗದ ತಮ್ಮ ಕಿರು ಕೊಡುಗೆಗೆ ಕಾರಣ ಎಂದು ನೆನೆದರು.
ಕಾರ್ಯಕ್ರಮದ ಪ್ರಾರಂಭದಲ್ಲಿಶ್ರೀಮತಿ ಶೀಲಾ ಮತ್ತು ವೃಂದದವರಿಂದ ಎಂ.ವಿ. ಸಿ. ಮತ್ತು ಬಿ. ಎಂ. ಶ್ರೀಯವರ ಗೀತೆಗಳ ಗಾಯನವಾಯಿತು.ಕನ್ನಡದ ಖ್ಯಾತ ಸಾಹಿತಗಳು  ಉಪಸ್ಥಿತರಿದ್ದರು












Saturday, March 22, 2014

ಪ್ರಥಮ ಶ್ರೀಸಾಹಿತ್ಯ ಪ್ರಶಸ್ತಿ ವಿಜೇತ -ಎನ್‌ ಎಸ್‌. ಎಲ್‌


ನವೋದಯ ಕಾವ್ಯಕ್ಕೆ  ಮರುಜೀವ ನೀಡಿದ ಕವಿ

ನವೋದಯದ ಹರಿಕಾರರಾದ ಬಿ.ಎಂ. ಶ್ರೀ ಅವರ ಸ್ಮಾರಕ  ಪ್ರಥಮ ಶ್ರೀಸಾಹಿತ್ಯ ಪ್ರಶಸ್ತಿ ನವೋದಯ ಕವಿತೆಯ ಪುನರ್‌ಜೀವನ ನೀಡಿದ ಕವಿಗೆ ಸಂದಿರುವುದು ಬಹಳ ಸಂದೋರ್ಭಚಿತ. ಭಾವಗೀತೆಯಲ್ಲಿ ಗೇಯತೆಗೆ ಬಹುದೊಡ್ಡ ಸ್ಥಾನವಿದೆ. ಓದುವ ಕವನವನ್ನುಆಲಿಸುವ ಕವನವಾಗಿಸಿ, ವ್ಯಕ್ತಿಕೇಂದ್ರಿತ ಅನುಭವವನ್ನು ಸಮುದಾಯ ಕೇಂದ್ರಿತವಾಗಿಸುವ, ಸುಗಮ ಸಂಗಿತದ ಜನಪ್ರಿಯತೆಗೆ ಕಾರಣರಾದವರಲ್ಲಿ ಪ್ರಮುಖಕವಿ ಎನ್‌.ಎಸ್‌. ಲಕ್ಷೀನಾರಾಯಣಭಟ್ಟರು ಪ್ರಮುಖರು.


 ಕ್ಯಾಸೆಟ್‌ಯುಗಕ್ಕೆ ಕಾರಣೀಭೂತರೆಂದು ಹಲವರ ಅನಿಸಿಕೆ. ಅವರು ದ್ವನಿಸುರುಳಿಗಾಗಿ ಬರೆದವರಲ್ಲ. ಅವರ ಕವಿತೆಗಳು ಹಾಡುಗಾರಿಕೆಗೆ ಲಘು ಸಂಗಿತಕ್ಕೆ ಹೇಳಿ ಮಾಡಿಸಿದಂತೆ ಇದ್ದುದುರಿಂದ  ಒಂದು ದೊಡ್ಡ ಅಭಿಮಾನಿ ವೃಂದವೇ ಸೃಷ್ಟಿಯಾಯಿತು. ನವ್ಯ ಕಾವ್ಯದ  ತುಟ್ಟ ತುದಿಯ ಅವಧಿಯಲ್ಲಿ ಭಾವಗೀತೆಯಲ್ಲಿನ ಭಾವಕ್ಕೆ ಆಭಾವ ಬಂದಿತು.. ವಿಚಾರ ಪ್ರಧಾನವಾಗಿರುವ ‘ಕವಿತೆಯಲ್ಲಿ ಹಾಡಲು ಅನುಕೂಲವಾಗುವ ಗೇಯಂತೆ,ಛಂದೋಬದ್ದತೆಎರಡೂ ಗೌಣವಾದವು. .ಕವನವು ಮೆಚ್ಚಿಗೆಯಾಗುವುದು  ಅದು ಅರ್ಥವಾಗದಿದ್ದಾಗ ’ ಎಂಬ ಮಾತು ಕನ್ನಡದ ಮಟ್ಟಿಗೂ ಸತ್ಯವಾಗಿತ್ತು  ಕಾವ್ಯವಿಚಾರ ಪರವಾಗಿರಬೇಕೆಂದವರು ಹಲವರಾದರೆ, ಕೆಲವರು ಪ್ರಚಾರ ಪ್ರಧಾನವಾಗಿರಬೇಕೆಂದೂ ಬಯಸಿದರು ಈ ಸಂದಿಗ್ದ ಸಮಯದಲ್ಲಿ ಸಾಹಿತ್ಯ ಮತ್ತು ಸಂಗೀತಗಳ ಸಂಗಮದ ಸಾಧ್ಯತೆಯನ್ನು ಹೊಸ ತಂತ್ರಜ್ಞಾನ ತೋರಿಸಿತು.ಅದನ್ನು ಮೊದಲು ಮನಗಂಡು ಅದರ ಸದುಪಯೋಗ ಮಾಡಿಕೊಂಡವರಲ್ಲಿ ಭಟ್ಟರೂ ಪ್ರಮುಖರು.
ಎನ್‌. ಎಸ್‌ ಲಕ್ಷ್ಮಿನಾರಾಯಣ ಭಟ್ಟರು  ತುಂಗೆಯ ತಟದಲ್ಲಿರುವ ಶಿವಮೊಗ್ಗೆಯಲ್ಲ್ಲಿ ೧೯೩೬ ರಲ್ಲಿ  ಜನಿಸಿದರು.ಅವರ ತಂದೆ ಶಿವರಾಮ ಭಟ್ಟರ ಮೂಲ ದಕ್ಷಿಣ.ಕನ್ನಡ. ಓದಿನ ಹಂಬಲದಿಂದ ಶೃಂಗೇರಿಯಿಂದ ನಡೆದು ಬಂದು ಸಂಸ್ಕೃತ ಅಧ್ಯಯನ ಮಾಡಿದರು. ಹೊಟ್ಟೆ ಪಾಡಿಗಾಗಿ ಶಿವಮೊಗ್ಗೆಯಲ್ಲಿ ನೆಲಸಿ ಪೌರೋಹಿತ್ಯದಿಂದ ಸಂಸಾರ ಸಾಗಿಸುತಿದ್ದರು  ಐದು ಮಕ್ಕಳು ಕೊನೆಯ ಗಂಡು ಮಗು ಹುಟ್ಟಿದುದು ೧೯೩೬ ರಲ್ಲಿ. ಎರಡೇ ವರ್ಷದವನಿದ್ದಾಗ ತೀರಿಹೋದರು  ನಾಲ್ವರು ಅಕ್ಕಂದಿರು ಕೊನೆಯ ಗಂಡು ಮಗುವನ್ನು  ಇವರ ತಾಯಿ ಮೂಕಾಂಬಿಕಮ್ಮ ನೆರೆ ಹೊರೆಯವರ ಮನೆಗೆಲಸ ಮಾಡಿ ಗಳಿಸಿದ ಹಣದಲ್ಲಿ ಮಕ್ಕಳನ್ನು ಸಾಕಿದರು.ಮುತ್ತುಗದ ಎಲೆ ಕಿತ್ತು ತಂದು ಎಲೆ ಹಚ್ಚಿ ಮರುವ ಕೆಲಸದಲ್ಲಿ ಮಕ್ಕಳೂ ಸಹಕರಿಸುತಿದ್ದರು.ಇದ್ದಒಬ್ಬಮಗನೂ ಮಾದ್ಯಮಿಕ ಶಾಲೆಯಲ್ಲಿರುವಾಗಲೇ ತನಗಿಂತ ಕೆಳಗಿನ ತರಗತಿಯ ಮಕ್ಕಳಿಗೆ ಮನೆಪಾಠ ಹೇಳಿ ಬದುಕಿನ ಬಂಡಿ ಸುಗಮವಾಗಿ ಸಾಗಲು ಸಹಾಯ ಮಾಡುತಿದ್ದನು. ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೆ ತತ್ವಾರ. ತಾಯಿ ಮೂಕಾಂಬಿಕಮ್ಮನ ಆತ್ಮಯಜ್ಞದಿಂದ ಜೀವನರಥ ಸಾಗುತಿತ್ತು.. ಇದಕ್ಕೂ ಮಿಗಿಲಾಗಿ ತಾವು ಹೋಗುತಿದ್ದ ಮನೆಗಳಲ್ಲಿನ  ಸಾಹಿತ್ಯ ಕೃತಿಗಳನ್ನು ಎರವಲು ತಂದು ಸಂಜೆ , ರಾತ್ರಿ ಮಕ್ಕಳೊಡನೆ ಒಟ್ಟಿಗೆ ಕುಳಿತು ಅವರಿಂದ ಓದಿಸಿ ಎಲ್ಲರೂ ಕೇಳುತಿದ್ದರು.ಇದರಿಂದ ಹೊಟ್ಟೆಯ ಹಸಿವು ಹಿಂಗದಿದ್ದರೂ ಎಳೆಯ ಮನಸ್ಸಿಗೆ ಸಾಹಿತ್ಯದ ಅಭಿರುಚಿ ಹತ್ತಿತು. ವಿಶೇಷವಾಗಿ ಗಳಗನಾಥರ, ಅನಕೃ ಕಾದಂಬರಿಗಳು.ಪಠನ ಆಗಿದ್ದು ಆಗಲೇ. ಇದೆಲ್ಲ ಮುಂದಿನ ಸಾಹಿತ್ಯ ಸಾಧನೆಗೆ ಅಡಿಪಾಯ ವಾಗಿತ್ತು..


ಬಾಲಕ ಲಕ್ಷ್ಮಿನಾರಾಯಣ ಬಲು ಚುರುಕು   ದೇವಾಲಯದ ಹತ್ತಿರವಿದ್ದ ಸಂಪಿಗೆ ಮರವೇರಿ ಹೂವು ಕದ್ದು ದೇವತಾರಾದನೆ ಮಾಡಲು ಸುತ್ತ ಮುತ್ತಲಿನವರಿಗೆ ಕೊಡುತಿದ್ದ ಹುಡುಗನಿಗೆ ಶ್ರದ್ಧೆಯಿಂದ ಸಾಹಿತ್ಯ ಸಮಾರಾಧನೆಯೆಡೆಗೆ ಸೆಳೆದವರು ಕೇಶವ ಘನಪಾಠಿಗಳು.  ಅವರಿಂದ  ಸಂಸ್ಕೃತದ ಮೊದಲಪಾಠ. ಅಮರಕೋಶ,ಕಾಳಿದಾಸ  ಸಂಸ್ಕೃತ ಸಾಹಿತ್ಯದ ಪರಿಚಯ. ಕಾಳಿದಾಸನ ಕಾವ್ಯ ಪ್ರವೇಶ,ಅವರ ಪರಿಸರದ ಪ್ರಭಾವದಿಮದ ಸಂಗಿತದ ಒಲವು. ಕಲಿಕೆಗಿಂತಲೂ ಕೇಳಿಕೆಯು ಪ್ರಭಾವ ಬೀರಿತು. ಮನೆಯ ಎದುರಿನ ಲಕ್ಷ್ಮಿದೇವಸ್ತಾನದಲ್ಲಿ ಸಂಜೆ ಗಮಕ, ಹರಿಕಥೆ,ಸಂಗಿತ ವೆಂಕಟೇಶಯ್ಯನವರ ಭಾರತವಾಚನ ಕುಮಾರವ್ಯಾಸನನ್ನು ಹೃದಯಕ್ಕಿಳಿಸಿತು ಕೀರ್ತನೆ, ಹರಿಕಥೆ,ಸ್ತೋತ್ರಗಳ ನಿರಂತರವಾಗಿ ಆಲಿಸುವದರಿಂದ ಮನಸ್ಸು ಲಯಬದ್ದ ಪದಗಳ ಮೋಡಿಗೆ ಮರುಳಾಯಿತು.

.ತುಂಗೆಯ ದಡದಲ್ಲಿ ಮನೆ. ಬೇಸಿಗೆಯಲ್ಲಿನ ಜುಳುಜುಳುನಾದ , ಮಳೆಗಾಲದ ಅವಳ ಅಬ್ಬರ ಅವರ ಕಾವ್ಯದಲ್ಲಿ  ಪ್ರತಿಬಿಂಬಿಸಿದೆ.. ದೇವರ  ಪೂಜೆಯಲ್ಲಿ ಕುಮಾರವ್ಯಾಸ ಕವಿತೆಗಳೊಂದಿಗೆ ಅರ್ಚನೆ ಮೊದಲು ಮಾಡಿದರು.. ಇಂಟರ್‌ ಮಿಡೀಯಟ್‌ ಶಿವಮೊಗ್ಗದಲ್ಲಿ.ಜಿ.ಎಸ್‌ಎಸ್‌ ಗುರುಗಳು ಪದವಿಯನ್ನು ಮೈಸೂರಲ್ಲಿ ಕಲಿಯುವ ಆಶೆ. ಟಿಕೆಟ್‌ ಇಲ್ಲದೆ ರೈಲಿನಲ್ಲಿ ಮೈಸೂರಿಗೆ ಪ್ರಯಾಣ ಮಾಡಿದರು. ಜೇಬಿನಲ್ಲಿ ಇದ್ದುದು ಪುಡಿಗಾಸು.ಆದರು ಮೊಂಡು ಧೈರ್ಯದಿಂದ ಹೊರಟರು.ಉಚಿತ ವಿದ್ಯಾರ್ಥಿ ನಿಲಯದಲ್ಲಿ ವಸತಿ. ತ. ಸು. ತ.ಸು ಶ್ಯಾಮರಾಯರ ಕೃಪಾಛಾಯೆಯಲ್ಲಿ ಊಟದ ವ್ಯವಸ್ಥೆಯಾಯಿತು. ಹಲವರ ಮನಯಲ್ಲಿ ವಾರಾನ್ನ. ಎಲ್ಲೂ ಇಲ್ಲದಾಗ ಶ್ಯಾಮರಾಯರೇ ಅನ್ನದಾತರು.ಹೀಗೆಸಾಗಿತು ಅವರ ವಿದ್ಯಾರ್ಥಿಜೀವನ.. ಪದವಿಯಲ್ಲಿ  ತಿ.ನಂ ಶ್ರೀ. ಅವರ ಗುರುಗಳು .ಆನರ್ಸನ ಓದುವಾಗಲೇ  ಇಪ್ಪತ್ತಕ್ಕೂ ಅಧಿಕ ಪದ್ಯ ಬರೆದಿದ್ದರು.ಅವರ  ಸಹಪಾಠಿ ಕೆ. ನಾರಾಯಣ  ಅವರ ಮೊದಲ ಓದುಗ ಮತ್ತು ವಿಮರ್ಶಕ.ಪದ್ಯಗಳು ಬಾಲಿಶ ಎಂದು ಹರಿದುಹಾಕಿದರು.
ಕಾಲೇಜಿನಲ್ಲಿ .ಹಂ.ಪ.ನಾ, ಎಚ್‌ ಎಂ. ಕೃಷ್ಣಯ್ಯ ,ಸುಜನಾ ಸಹಪಾಠಿಗಳು ಡಿ.ಎಲ್‌.ಎನ್‌., ತಿ.ನಂಶ್ರೀ.ಎಸ್‌ವಿ. ರಂಗಣ್ಣ, ಎಸ್‌ವಿ. ಪರಮೇಶ್ವರಭಟ್ಟರಂಥಹ ಉದ್ದಾಮ ವಿದ್ವಾಂಸರ ಗರಡಿಯಲ್ಲಿ ಕಲಿಕೆ..ಪದವಿ ಮತ್ತು ಎಂ. ಎ ನಲ್ಲಿ  ಪ್ರಪ್ರಥಮ ಸ್ಥಾನ.  ಎಂ ಎ ನಂತರ ಎರಡುವರ್ಷ ಸಂಶೋಧನೆ ವಿಧ್ಯಾರ್ಥಿಯಾಗಿ ಕೆಲಸ ಮಾಡಿದರು. ಸುವ್ಯವಸ್ಥಿತ ಅಧ್ಯಯನಕ್ಕೆಬುನಾದಿ  ಬಿದ್ದ್ದು ಆಗಲೇ. “ಆಧುನಿಕ  ಕನ್ನಡ ಕವಿಗಳಲ್ಲಿ ಪ್ರತಿಮಾವಿಲಾಸ’  ವಿಷಯದ ಮೇಲೆ ಸಂಶೋಧನೆಗೆ ತೊಡಗಿದರು.ಮೊದಲು ಡಿ.ಎಲ್  ಎನ್‌.ಅವರ ಮಾರ್ಗದರ್ಶಿಯಾಗಿದ್ದರು. ಅವರ ನಿಧನಾನಂತರ ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಸಂಪ್ರಬಂಧ ಸಿದ್ಧವಾಯಿತು ಪದವಿಯೂ ದೊರೆಯಿತು..ಅದು ಸೀಮಿತ ಎನಿಸಿದ್ದರಿಂದ ಪ್ರಕಟಿಸಲಿಲ್ಲ. ತುಸು ಸಮಯದ ನಂತರ   ಪ್ರಾಚಿನ ಮತ್ತು ಆಧುನಿಕ ಕಾವ್ಯ ,ಗ್ರೀಕ್‌, ಇಂಗ್ಲಿಷ್‌ ಮತ್ತು ಸಂಸ್ಕೃತದ ಆಳವಾದ ಅಧ್ಯಯನದ ಫಲಸ್ವರೂಪ”  ಕಾವ್ಯ ಪ್ರತಿಮೆ. “  ಕೃತಿ ಹೊರಬಂದಿತು. ಜಿ.ಎಸ್‌ಎಸ್‌ರ ಪ್ರಕಾರ ಕನ್ನಡ ಕಾವ್ಯ ಮಿಮಾಂಸೆ  ಕ್ಷೇತ್ರಕ್ಕೆ ಅದು ಒಂದು ಮೌಲಿಕ ಕೊಡುಗೆ, ಅನಂತಮೂರ್ತಿಗಳು ಈ ಕೃತಿಯನ್ನು  ಆಚಾರ್ಯ  ಕೃತಿ ಎಂದು ಕರೆದರು.


ಅವರ ಉದ್ಯೋಗ ಪರ್ವಪ್ರಾರಂಭವಾದುದು ಆಚಾರ್ಯ ಪಾಠಶಾಲೆ ಕಾಲೇಜಿನಲ್ಲಿ. . ಬೆಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾದಾಗ ಕನ್ನಡ ವಿಭಾಗದಲ್ಲಿ ಸೇವೆ ಸಂದಿತು.ಅಲ್ಲಿ .ಪ್ರಾಧ್ಯಾಪಕ ವಿಭಾಗ ಮುಖ್ಯಸ್ಥ, ಆರ್ಟಫ್ಯಾಕಲ್ಟಿ ಡೀನ್‌ ,ಸಿಂಡಿಕೇಟ್‌,ಸೆನೇಟ್‌ ಸಮಿತಿ ಸದಸ್ಯರಾಗಿ ಬಹುಮುಖಿ ಸೇವೆ ಸಲ್ಲಿಸಿದರು. ಅವರ ಜೀವನ ಬರಿ ಹೂವಿನ ಹಾಸಿಗೆಯಾಗಿರಲಿಲ್ಲ. ಬಾಲ್ಯದಲ್ಲಿ ಬಡತನದ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಗೆದ್ದರೆ ಕವಿಯಾಗಿಯೂ ಆಧುನಿಕ ತಂತ್ರ ಜ್ಞಾನದ ಬಳಕೆಯಿಂದ ಧ್ವನಿ ಸುರಳಿಗಳ ಸಹಾಯದಿಂದ ಸಾಹಿತ್ಯ ಮತ್ತು ಕಾವ್ಯವನ್ನು ಜನಸಾಮಾನ್ಯರ ಮನೆಯಂಗಳಕ್ಕೆ ಮುಟ್ಟಿಸಿದರ ಪರಿಣಾಮವಾಗಿ ಭಾವ ಗೀತೆಗಳಿಗೆ ಮರು ಹುಟ್ಟು ದೊರೆಯಿತು. ಗೆಳೆಯ ಶಿವಮೊಗ್ಗ ಸುಬ್ಬಣ್ಣ, ಸಿ .ಅಶ್ವತ್ಥ, ಮೈಸೂರು ಅನಂತಸ್ವಾಮಿ,ರತ್ನಮಾಲಪ್ರಕಾಶ್‌ ಅವರ ಇನಿದನಿಯಲ್ಲಿ ಮನೆ ಮನೆಯಲ್ಲೂ ಭಾವಗೀತೆಗಳು ನಿನದಿಸ ತೊಡಗಿದವು. ಇದರಿಂದ ಕೀರ್ತಿಯ ಜೊತೆ ಟೀಕೆ ಟಿಪ್ಪಣಿಗಳೂ ಬಂದವು. ಕಾವ್ಯ ಗುಣದ ಕೊರತೆ ಇದೆ, ಧ್ವನಿ ಸುರಳಿಗಾಗಿಯೇ ಬರೆಯುತ್ತಾರೆ ಎಂಬ ಮಾತೂ ಅಲ್ಲಿಲ್ಲಿ ಕೇಳ ಬಂದಿತು. ಆದರೆ ಕ್ರಮೇಣ ಎಲ್ಲರೂ ಹೊಸ ಸಾಧ್ಯತೆಯನ್ನು ಒಪ್ಪಿಕೊಂಡರು.ಧ್ವನಿ ಸುರಳಿಗಳು ಸಾಹಿತ್ಯ ಪ್ರಸಾರದ ಹೊಸ ಸಾಧನವಾಗಿ ಹೊರ ಹೊಮ್ಮಿದವು. ಈಗ ಲಘು ಸಂಗಿತ ಮಾತ್ರವಲ್ಲದೆ, ಭಕ್ತಗೀತೆಗಳು, ಸಾಹಿತ್ಯ ಉಪನ್ಯಾಸಗಳು, ಕುಮಾರವ್ಯಾಸ ಮತ್ತು .ಪಂಪ. ಲಕ್ಷ್ಮೀಶರ ಕಾವ್ಯಗಳ ವಾಚನ ಮತ್ತು ವಿವರಣೆಗಳ ದ್ವನಿಸುರಳಿಗಳೂ ಜನರನ್ನು ತಲುಪಿವೆ.
ಅವರು  ಉತ್ತಮ ವಾಗ್ಮಿ ಮತ್ತು ಆಡಳಿತಗಾರರಾದ ಇವರಮೆಲೆ , ದಲಿತ ವಿರೋಧಿ ಎಂಬ ಆಪಾದನೆ ಬಂದಾಗ ತಕ್ಷಣ ಹುದ್ದೆಗ ತ್ಯಜಿಸಿದರು. ವಿಚಾರಣೆಯಲ್ಲಿ ಸತ್ಯ ಹೊರಬಂದು  ರಾಹು ವಿಮೋಚನೆಯಾದ ಚಂದ್ರನಂತೆ  ಬೆಳಗಿದರು.
 .ಗೋಪಾಲ ಕೃಷ್ಣ ಅಡಿಗರಕಾಲದಲ್ಲಿ  ನವ್ಯ ಕಾವ್ಯ ಏರು ಮುಖದಿಂದಾಗಿ ನವೋದಯ ಕಾವ್ಯ ನವೆದಿತ್ತು. .ಮೂವತ್ತು ವರ್ಷ ಭಾವಗೀತೆಗಳಿಗೆ ಬರಬಿದ್ದಿತು.
ಆ ಸಮಯದಲ್ಲಿವೃತ್ತ, ಸುಳಿ, ಹೊಳೆಸಾಲಿನ ಮರ, ದೆವ್ವದೊಡಗಿನ ಮಾತುಕಥೆ ಮೊದಲಾದ ಕವನಸಂಕಲನ ಪ್ರಕಟವಾಗಿವೆ, ಅವು ಕವಿ ಎಂಬ ಅಧಿಕೃತ ಮುದ್ರ ಒತ್ತಿದರೆ ನಂತರದ  ದ್ವನಿಸುರಳಿಗಳಾದ ಸಂವೇದನೆ, ಪಾಂಚಾಲಿ, ಹಸಿರುತುಂಬಿದ ತೋರಣ, ನಡೆದಿದೆ ಪೂಜಾರತಿ ಮೊದಲಾದ ಕ್ಯಾಸೆಟ್‌ಗಳು ಜನಪ್ರಿಯತೆ ತಂದವು.. ಕವಿ,ವಿಮರ್ಶಕ ಮತ್ತು ಸಾಹಿತಿ  ಕ್ಯಾಸೆಟ್‌ ಕ್ರಾಂತಿಗೆ ಕಾರಣರಾದರು. ದೀಪಿಕಾ,ಭಾವೋತ್ಸವ ಭಾವಸಂಗಮ. ಶಿಶುನಾಳ ಶರೀಫ, ಮೈಸೂರು ಮಲ್ಲಿಗೆ ಮೊದಲಾದ ಹಲವು ಕ್ಯಾಸೆಟ್‌ಗಳಿಂದ ಮನೆ ಮಾತಾದರು.
ತಿ.ನಂ.ಶ್ರೀಯವರಿಗೆ ಶಾಸ್ತ್ರಸಾಹಿತ್ಯದ ಬೆಳೆಯ ಬಗ್ಗೆ ಕೊರಗು ಇತ್ತು.ಎಲ್ಲರೂ ಸೃಜನಶೀಲ ಸಾಹಿತ್ಯ ದೆಡೆಗೆ ಮುಖಮಾಡಿದ್ದರು ಕಾರಣ ಅದರಿಂದ ಹೆಸರು ಮತ್ತು ಹಣಗಳಿಕೆ ಸುಲಭವಾಗಿ ದಕ್ಕುವುದು. ಗುರುಗಳ ಕೊರಗು ಕಳೆಯಲು ಅವರ ನೆನಪಲ್ಲಿ ಶಾಸ್ತ್ರಭಾರತಿ, ಕಾವ್ಯಪ್ರತಿಮೆ, ಭಾರತೀಯ ಗ್ರಂಥಸಂಪಾದನಾ ಪರಿಚಯ, ಹಾಗೆಯೇ ವಿಮರ್ಶಾ ರಂಗದಲ್ಲಿ ಹೊರಳುದಾರಿಯಲ್ಲಿ ಕಾವ್ಯ,ಸಾಹಿತ್ಯ ಸನ್ನಿಧಿ, ಶಿಶುನಾಳ ಷರೀಫ್‌ ವಿವವೇಚನೆ   ಕೃತಿಗಳ ರಚನೆ ಮಾಡಿರುವರು.

 ಭಟ್ಟರು ಅನುವಾದ ಕ್ಷೇತ್ರದಲ್ಲೂ ತೊಡಗಿಸಿಕೊಂಡರು. ಷೇಕ್ಸಪಿಯರ್‌ ಸಾನೆಟ್‌ಚಕ್ರ, ಚಿನ್ನದ ಹಕ್ಕಿ, ಡಬ್ಲ್ಯ.ಬಿ.ಏಟ್ಸನ ಕವನಗಳು, ಟಿ.ಎಸ್‌.  ಈಲಿಯಟ್‌ನ ಕಾವ್ಯ ಸಂಪುಟ ಮೊದಲಾದ ಅನುವಾದಗಳು ಅವರ ಸಾದನೆಗೆ ಗರಿ ಮೂಡಿಸಿದೆ. ಅವು ಡಾ.ಕೀರ್ತಿನಾಥ ಕುರ್ತುಕೊಟಿ.. ಪ್ರೊ.ಜಿಎಸ್‌ ಅಮೂರ್‌ ಮತ್ತು  ಗೋಪಾಲಕೃಷ್ಣಅಡಿಗರ  ಮೆಚ್ಚಿಗೆಗೆ ಪಾತ್ರ.ವಾಗಿವೆ.. .ಸಿ,ಆರ್‌ಸಿಂಹ ಅವರೊಡಗಿನ ಗೆಳೆತನ, ಬಿ.ವಿ ಕಾರಂತರ ಮತ್ತು ಕೆ.ವಿ ಸುಬ್ಬಣ್ಣ ಅವರ ಒಡನಾಟದ ಫಲವಾಗಿ  ಮೃಚ್ಛಕಟಿಕ, ಹಬ್ಬದ ಹನ್ನೆರಡನೆಯರಾತ್ರಿ, .ಊರ್ವಸಿ, ಚಿತ್ರಾಂಗದ ಇಸ್ಪೀಟ್‌ರಾಜ ನಾಟಕಗಳು ರಂಗವೇರಿದವು.
ಅವರ ಇತರ ಬರಹದ ಬೆಳೆಯೂ  ಹುಲುಸಾಗಿತ್ತು ಪ್ರಜಾವಾಣಿಯಲ್ಲಿ ಸತತ ಎಂಟು ವರ್ಷ ಬರೆದ ಅಂಕಣ ಪುಸ್ತಕ ವಿಮರ್ಶೆ
, ಮಕ್ಕಳ ಸಾಹಿತ್ಯದಲ್ಲೂ ಕೃಷಿ ಮಾಡಿದರು. ರಾಜರತ್ನಂ, ಹೊಯ್ಸಳರ ನಂತರ ಮಕ್ಕಳ ಸಾಹಿತ್ಯ ರಂಗ ಸೊರಗಿತ್ತು ಕವಿತೆಗಳಂತೂ ಇಲ್ಲವೇ ಇಲ್ಲ ಎನ್ನಬಹುದು ಆ ಸಮಯದಲ್ಲಿ  ಇವರ ನಂದನ, ಕಿಶೋರಿ,ಕಿನ್ನರಿ ಕವನಸಂಕಲನ ಕುಂತಿ, ಡಿವಿಜಿ, ಕರ್ಣ ಮೊದಲಾದವು ಮಕ್ಕಳ ಮನ ಸೂರೆ ಗೊಂಡಿವೆ.
ಹಲವು ಜನಪ್ರಿಯ ಮಕ್ಕಳ ಕವಿತೆಗಳು ಪ್ರಕಟವಾದವು. ಅವು ಕ್ಯಾಸಟ್ಟಿನಲ್ಲೂ ಬಂದಿವೆ. ಕರ್ನಾಟಕದಲ್ಲಿ ಮಾತ್ರವಲ್ಲ ವಿದೇಶಗಳ್ಲೂ ಅವುಗಳನ್ನು ಮಕ್ಕಳು ಗುಣಗುಣಿಸುತಿದ್ದಾರೆ. ಅವರದು ಚಿಕ್ಕ ಚೊಕ್ಕ ಸಂಸಾರ. ಮನೆವಾರ್ತೆ ಎಲ್ಲ ಮಡದಿ ಜ್ಯೋತಿ ಅವರದು., ಚೈತ್ರ ಅನಿವಾಸಿ ಮಗ ಮತ್ತು ಮನೆ ಹತ್ತಿರವೇ ಇರುವ  ಮಗಳು ಕ್ಷಮಾ..
ಕ್ಯಾಸೆಟ್‌ ಲೋಕ ಅವರ  ಸೀಮೋಲ್ಲಘನೆಗೆ ಕಾರಣ ವಾಯಿತು.. ಅಮೇರಿಕಾದಲ್ಲಿ. ನಾಲ್ಕುಸಲ ಭೇಟಿ  ಅಮೇರಿಕದ ೨೬ ಪ್ರಾಂತ್ಯಗಳಲ್ಲಿ ಅವರ ಸಾಹಿತ್ಯ ಉಪನ್ಯಾಸ. ಸುಮಾರು ೯೬ ಸ್ಥಳಗಳಲ್ಲಿ ಅನಿವಾಸಿ ಕನ್ನಡ  ರಸಿಕರಿಗೆ ಕಾವ್ಯ ಪರಿಚಯ. ಭಟ್ಟರು ಬಹು ಗಟ್ಟಿಗರು. ಕಾಲದ ಪರಿಣಾಮ ಅವರಮೇಲೆ ಆಗಿಲ್ಲ ಎನ್ನಬಹುದು. ಎರಡೆರಡು ದಿನಗಳ ಸಾಹಿತ್ಯ ಸಮಾವೇಶ. ಟಿಪ್ಪಣಿಗಳ ಹಂಗಿಲ್ಲ ಸಾಹಿತ್ಯದ  ರಸಗಂಗೆಯಲ್ಲಿ ಕೇಳುಗರು ಮುಳುಗಿ ಏಳುವರು. ಹದಿನೈದು ನೂರು ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆ ಅವರ ಬಾಯಲ್ಲಿ ಓತ ಪ್ರೋತ. ಅನಿವಾಸಿ ಕನ್ನಡಿಗರಿಗೆ ಭಟ್ಟರೆಂದರೆ ಭಟ್ಟಿ ಇಳಿಸಿದ ಕನ್ನಡ, ಸಂಸ್ಕೃತ ,ಸಾಹಿತ್ಯದ ಪ್ರತಿರೂಪ. ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಅವರ ಉಪನ್ಯಾಸದ ಧ್ವನಿ ಸುರುಳಿಗಳಿಗೆ ಬಹು ಬೇಡಿಕೆ. ಬಿಸಿ ದೋಸೆಯಂತೆ ಹೊರ ಬರುತ್ತಲೇ ಖಾಲಿ.
ಅವರನ್ನು ಕುರಿತು ಅನಿಸಿಕೆಯ ಕೆಲವು ಮಾದರಿ ಇಲ್ಲಿವೆ.
ಬದುಕಿನ ಅರ್ಥ ಪೂರ್ಣತೆಯಲ್ಲಿ ಹುಟ್ಟುವ ಕಾವ್ಯ,- ಕಂಬಾರ,
ಸಮಾಧಾನ ಭಾವ ಸ್ಥಾಯಿಯಾದ ಕಾವ್ಯ-  ಕಿ.ರಂ..
ಬೆಳಕಿನ ಆರಾದನೆಯ ಕಾವ್ಯ -ಎಚ್‌ಎಸ್‌ಎವಿ
ಸಹಜವಾಗಿಯೇ ಇವರನ್ನುß ಬಹುಮಾನÀ, ಪ್ರಶಸ್ತಿಗಳು ಅರಸಿ ಬಂದವು. gÁdå ¸Á»vÀå CPÁqÉ«ÄAiÀÄ §ºÀĪÀiÁ£ÀUÀ¼ÀÄ, ²ªÀgÁªÀÄ PÁgÀAvÀ, ªÀiÁ¹Û, C£ÀPÀÈ f.J¸ï.J¸ï ¤gÀAd£À CªÀgÀ ºÉ¸Àj£À ¥Àæ±À¹ÛUÀ¼À£ÀÆß, J£ï¹EDgïnAiÀÄ ¨Á®¸Á»vÀå ¥ÀÄgÀ¸ÁÌgÀªÀ®èzÉ gÁeÉÆåÃvÀìªÀ ¥Àæ±À¹ÛUÀÆ CªÀgÀÄ ¨sÁd£ÀgÁVzÁÝgÉ.
E¢ÃUÀCªÀgÀ ªÀÄÄrUÉ ಪ್ರಪ್ರಥಮ  ²æøÁ»vÀå ¥Àæ±À¹Û AiÀÄ  UÀj ªÀÄÆrzÉ.

















Tuesday, March 18, 2014

ಸಾರ್ಥಕ ಸಂಸ್ಥೆ

ಸಾರ್ಥಕ  ಸಂಸ್ಥೆ ಬಿ.ಎಂ. ಶ್ರೀ. ಸ್ಮಾರಕ  ಪ್ರತಿಷ್ಠಾನ

-                                                                                                                            -ಎಚ್‌.ಶೇಷಗಿರಿರಾವ್‌

ಯಾವುದೇ  ಶ್ರೇಷ್ಟ ಸಾಧನೆ ಮಾಡಿದ  ವ್ಯಕ್ತಿಗೆ ಗೌರವ ಸಲ್ಲಿಸಲು,  ಅಭಿಮಾನ ಸೂಚಿಸಲು ಹಲವು ಮಾರ್ಗಗಳಿವೆ.  ಅವರ ಹೆಸರನ್ನು  ಬಡಾವಣೆಗೆ, ರಸ್ತೆಗೆ, ವೃತ್ತಕ್ಕೆ ಇಡುವುದು ,  ರಸ್ತೆಯ ನಡುವೆ ಪ್ರತಿಮೆ ಸ್ಥಾಪಿಸುವುದು ಸಾಮಾನ್ಯ. ಆದ್ದರಿಂದಲೇ ನಮ್ಮಲ್ಲಿ ಹಲವಾರು ಗಾಂಧಿನಗರ, ನೆಹರೂ ರಸ್ತೆ, ಕುವೆಂಪು ವೃತ್ತಗಳಿವೆ. ಕೆಲವಂತೂ ಅಪಭ್ರಂಶವಾಗಿ ಮೂಲವನ್ನೇ ಮರೆಸುವವು. ಎಂ. ಜಿ. ರಸ್ತೆ, ಜೆ.ಸಿ ರಸ್ತೆ, ಎನ್‌.ಆರ್. ಕಾಲನಿ  ,ಸಿ.ಜಿ ಪುರ, ಕೆ.ಆರ್‌.ನಗರ , ಆರ್‌.ಟಿ. ನಗರ ,ಜೆ.ಜೆ ನಗರ ಬೆಂ. ಬ.ನಿ ಗಳ ಮೂಲಸ್ವರೂಪ  ಕೇಳಿದರೆ ಕಣ್ಣು ಕಣ್ಣು ಬಿಡುವವರೆ ಬಹಳ.ಬರಬಬರುತ್ತಾ ಗಾಂಧಿ ಎಂದರೆ ಯಾರು ಎಂದರೆ ಸೋನಿಯಾ,ಗಾಂಧಿ ರಾಹುಲ್‌ಗಾಂಧಿ ಎನ್ನುವ ದಿನಗಳೂ ಬರಬಹುದು.. ಹಾಗೆಂದು ಅವರ ಸ್ಮಾರಕ ನಿರ್ಮಾಣ ಮಾಡಬಾರದು ಎಂದೇನೂ ಅಲ್ಲ. ಹಿರಿಯರ ಹೆಸರು ಶಾಶ್ವತವಾಗಿರ ಬೇಕಾದರೆ ಅವರ ತತ್ವ ,ಆದರ್ಶ.ಮತ್ತು ನಂಬಿಕೆಗಳನ್ನು ಬಿಂಬಿಸುವ ಕೆಲಸ ಆಗ ಬೇಕು ,ಅವರ ಕಾರ್ಯವನ್ನು ಮುಂದುವರಿಸುವ ವ್ಯವಸ್ಥೆಯೇ ಅವರಿಗೆ ಸೂಕ್ತ ಸ್ಮಾರಕ.
ಬಿ. ಎಂ. ಶ್ರೀ ಕಲಾಭವನ
‘ಇಂಥಹ ಕಾರ್ಯಮಾಡುವ ಸಂಸ್ಥೆಗಳು ನಮ್ಮ ನಾಡಿನಲ್ಲಿ ಹಲವಿವೆ. ಅವು ವ್ಯಕ್ತಿನಿಷ್ಠವಾಗಿರಬಹುದು.  ಸರ್ಕಾರದ ನೆರವಿನ ಏಕೋದ್ದೇಶದ ಸಂಸ್ಥೆಗಳಾಗಿರಬಹುದು .ಆದರೆ ಖಾಸಗಿನ ವ್ಯಕ್ತಿಯೊಬ್ಬರು ತಮ್ಮ ಗುರುಗಳ ಮೇಲಿನ ಅಭಿಮಾನದಿಂದ ಅವರ ಅನಿಸಿಕೆಯನ್ನು ನಿಜ ಮಾಡಲು,ಅವರ ಗುರಿಯನ್ನು ಸಾಧಿಸಲು, ಯಾವುದೇ ವ್ಯಕ್ತಿಯ , ಪಂಥದ ಉದ್ದೇಶ ಸಾಧನೆಗಿಂತ ಸಾಮೂಹಿಕ. ಏಳಿಗೆ ಸಮುದಾಯದ ಜಾಗೃತಿ, ಸಾಹಿತ್ಯದ ಬೆಳವಣಿಗೆಗ ಮೀಸಲಾಗಿರುವ ಕೆಲವೇ ಸಂಸ್ಥೆಗಳಲ್ಲಿ  ಒಂದು .ಪ್ರೊ.ಎಂ.ವಿ. ಸಿತಾರಾಮಯ್ನವರು ಸ್ಥಾಪಿಸಿದ ತಮ್ಮ ಗುರುಗಳ ಗುರುಗಳಾದ ಕನ್ಡ ದ ಸಾಹಿತ್ಯದ ಹೊಸ ಹುಟ್ಟಿಗೆ ಕಾರಣರಾದ ಬಿ. ಎಂ. ಶ್ರೀ  ಸ್ಮಾರಕ ಪ್ರತಿಷ್ಠಾ.ನ... ಬಿ. ಎಂ ಶ್ರೀ ಕಂಠಯ್ಯ ಅವರನ್ನು  ಕನ್ನಡ ದ ಕಣ್ವ, ನವೋದಯದ ಹರಿಕಾರ, ಕನ್ನಡ ಸ್ನಾತಕೋತ್ತರ ಅಧ್ಯಯನಕ್ಕೆ  ಕಾರಣ ಪುರುಷ, ಕನ್ನಡದ ಪ್ರಪ್ರಥಮ ಪ್ರೊಫೆಸರ್‌, ನಾಡು ನುಡಿಗೆ ಮರುಜೀವನ ನೀಡಿದ ಮಹಾಪುರುಷ ಎಂದೆಲ್ಲ ಹೊಗಳಿಕೆಯ ಹೊಳೆ ಹರಸಿದರೂ ಅವರ ಸ್ಮರಣೆಗೆ ಯಾವದೇ ಕೆಲಸ ಮಾಡದಿರುವುದನ್ನು ಗಮನಿಸಿ ತಾವೇ ಅವರ ಆಶಯಗಳಾದ, ಹಸ್ತಪ್ರತಿ ಸಂಗ್ರಹ, ಸಂರಕ್ಷಣೆ, ಶೋಧನೆ,ಪ್ರಕಟಣೆ,ಮತ್ತು ಸಾಹಿತ್ಯ ಪ್ರಸಾರದ ಉದ್ಧೇಶದಿಂದ ಬಿ.ಎಂ,ಶ್ರೀ ಪ್ರತಿಷ್ಠಾನ.ಸ್ಥಾಪಿಸಿದರು.
 ಹಾಗೆ ನೋಡಿದರೆ ಎಂ.ವಿ.ಸೀ ಯವರು ನೇರ ಶಿಷ್ಯರೇನಲ್ಲ. ಆದರೆ ಇವರ ಬರಹದ ಬದುಕಿಗೆ ಸ್ಪೂರ್ತಿಯಾದುದು ಗುರುಗಳಾದ ತಿ. ನಂ.ಶ್ರೀಯವರು ಇವರ ಹದಿನಾರಮನೆಯ ಹುಟ್ಟು ಹಬ್ಬದಂದು ಕೊಡುಗೆಯಾಗಿ ನೀಡಿದ “ ಇಂಗ್ಲಿಷ್‌ಗೀತೆಗಳು”  ”ಅಂದು ಪ್ರಾರಂಭಿಸಿದ ಸಾಹಿತ್ಯ ಯಾತ್ರೆಯ ಫಲವಾಗಿ ಅವರಿಂದ ಸಾಹಿತ್ಯರಂಗಕ್ಕ ಅನೇಕ ಕೊಡುಗೆಗಳು ಸಂ

ಪ್ರಥಮ ಗೌರವಾದ್ಯಕ್ಷರು- ನಿಟ್ಟೂರು ಶ್ರೀನಿವಾಸ ರಾವ್‌

ತಮ್ಮ ಗುರುವಿನ ಹೆಸರಲ್ಲಿ ಏನಾದರೂ ಮಾಡ ಬೇಕೆಂಬ ಅವರ ಹಂಬಲಕ್ಕೆ ಇಂಬು ಕೊಟ್ಟುದುದು ಅವರ ಮೈಸೂರಿನಲ್ಲಿನ ಮನೆತನಕ್ಕೆ ಸೇರಿದ ದೇವಾಲಯದ ಕೋಣೆಯೊಂದರಲ್ಲಿ ಪೇರಿಸಿಸಿಟ್ಟ  ಹಾಳಾಗುತಿದ್ದ  ಹಸ್ತಪ್ರತಿಗಳು. ಜೊತೆಗೆ .ತಿಮ್ಮಪ್ಪದಾಸರ ವಂಶದವರಾದ ಅವರ ಮನೆಯಲ್ಲಿ ಅನೇಕ ಹಸ್ತಪ್ರತಿಗಳು..   ತಕ್ಷಣ ಅವರಿಗೆ ನೆನಪಿಗೆ ಬಂದದ್ದು ಬಿ.ಎಂ . ಶ್ರೀ ಯವರು ಧಾರವಾಡದಲ್ಲಿ ಮಾಡಿದ್ದ “ ಕನ್ನಡ ಮಾತು ತಲೆಎತ್ತುವ ಬಗೆ ಭಾಷಣ” . ಅದರಲ್ಲಿ ಅವರು ಪ್ರಮುಖವಾಗಿ ಹಸ್ತಪ್ರತಿಗಳಲ್ಲಿ ಅಡಗಿದ ಜ್ಞಾನ ಸಂಪತ್ತನ್ನು ಸಂಗ್ರಹಿಸಿ, ಸಂರಕ್ಷಿಸಿ,ಸಂಶೋಧನೆ ಮಾಡಿ ಮುದ್ರಿಸುವ ಅಗತ್ಯದ ಕುರಿತು ಹೇಳಿದ್ದರು;  ಅರಿಂದ ಸ್ಪೂರ್ತಿ ಪಡೆದ ಅವರು ೧೯೭೯-ಮೇ ೬ ರಂದು ತಮ್ಮ ಮನೆಯಲ್ಲಿಯೇ ಪ್ರತಿಷ್ಠಾನ ಸ್ಥಾಪಿಸಿದರು
 
ಪ್ರತಿಷ್ಠಾನ ಉದ್ಘಾಟಿಸುತ್ತಿರುವ ಕುವೆಂಪು


 ರಾಷ್ಟ್ರ ಕವಿ ಕುವೆಂಪು ಅವರು ತಮ್ಮ ಇಳಿವಯಸ್ಸಿನಲ್ಲಿಯೂ ಗುರುಗಳ ಮೇಲಿನ ಗೌರವ ಮತ್ತು ಶಿಷ್ಯನ ಮೇಲಿನ ಅಭಿಮಾನದಿಂದ  ಪ್ರತಿಷ್ಠಾನದ ಉದ್ಘಾಟನೆ ಮಾಡಿದರು.  ಮಾಸ್ತಿಯವರು ದಿನವೂ ಒಂದು ಸಲವಾದರೂ ಭೆಟಿಕೊಡದೇ ಹೋಗುತ್ಬತಿರಲಿಲ್ದ.ಖ್ಯಾತ ನಾಮ ಸಾಹಿತಿಗಳಿಗೆ ಇದು ಒಂದು ವೇದಿಕೆಯಾಗಿತ್ತು 
ಎಂ.ವಿ ಸೀ ಯವರು ಅನಾರೋಗ್ದ ನಡುವೆಯೂ ಸಾಹಿತ್ಯ ಸಂರಕ್ಷಣೆ ಕೆಲಸವನ್ನು ತಮ್ಮ ಶಿಷ್ಯರಾದ ಪರಮಶಿವ ಮೂರ್ತಿ, ಗೀತಾಚಾರ್ಯ, ದೇವರ ಕೊಂಡಾ ರೆಡ್ಡಿಯಮೊದಲಾದವರ ಸಹಕಾರದಿಂದ ಮುಂದುವರಿಸಿದರು. ನೆರವಿನ ಅಗತ್ಯವಿದ್ದ ಅವರಿಗೆ   ಶಿಕ್ಷಣ ಮುಂದುವರಿಸಲು ಆಸರೆನೀಡಿ ಬಿಡುವಿನಲ್ಲಿ  ಹಸ್ತಪ್ರತಿ ಕೆಲಸದಲ್ಲಿ ತೊಡಗಿಸಿದರು
ಹಾ.ಮಾ. ನಾಯಕ ಮತ್ತು ಗೋರೂರು
ನಿಟ್ಟೂರು ಶ್ರೀನಿವಾಸರಾವ್‌ ಇದರ ಪ್ರಥಮ ಅಧ್ಯಕ್ಷರು . ಎಂವಿಸೀ ಯವರೇ ಕಾರ್ಶ್ರೀಯದರ್ಶಿ ನಂತರ  ಜಿ ನಾರಾಯಣ, ಡಾ. ಜಿ.ವೆಂಕಟ ಸುಬ್ಬಯ್ಯ, ದಿ. ಶ್ರೀನಿವಾಸ ರಾಜು, ಪ್ರೊ. ಲಿಂಗಯ್ಯ ಅಧ್ಯಕ್ಷರಾಗಿದ್ದರು ಈಗ ಪ್ರೊ. ಎಂ ಎಚ್ ಕೃಷ್ಣಯ್ಯ ಗೌರಾವಾದ್ಯಕ್ಷರು ಮತ್ತು . ಡಾ., ಪಿ.ವಿ.ನಾರಾಶಿ ಅಧ್ಯಕ್ಷರು.ಸಂಸ್ಥೆಯ ಚಟುವಟಿಕೆಗಳನ್ನು ಪದಾಧಿಕಾರಿಗಳ ನೆರವಿನೊಡನೆ ನಿರ್ವಹಿಸುತ್ತಿರುವರು..
ಮಾಸ್ತಿ ಮತ್ತು ಕುವೆಂಪು ಮಾತುಕಥೆ
ಪ್ರತಿಷ್ಠಾನವು ಕೆಲವು ವರ್ಷಗಳ ನಂತರ ಮಾಸ್ತಿಯವರ ಮನೆಯಲ್ಲಿ, ನಂತರ ಗೋಖಲೆ ಸಾರ್ವಜನಿಕ ಸಂಸ್ಥೆಯ ಆವರಣದಲ್ಲಿ ಕಾರ್ಯ ನಿರ್ವಹಿಸಿ ೨೦೦೦ ದಲ್ಲಿ ಮಹಾನಗರಪಾಲಿಕೆಯಿಂದ ನಿವೇಶನ ಪಡೆಯಿತು.   ಎನ್ದು‌ಆರ್‌ ಕಾಲನಿಯಲ್ಲಿ ಮೂರನೆಯ ಮತ್ತು ನಾಲ್ಕನೆಯ ಮುಖ್ಯ ರಸ್ತೆಗಳನ್ನು ಸೇರಿಸುವ ಜಾಗ ಅದು. ಅದರಲ್ಲಿ ಟ್ರಾನ್ಸಫಾರ್ಮರ್‌ ಬೇರೆ ಇದ್ದಿತು. ಅಕ್ಕಪಕ್ಕದ ಆಕ್ಷೇಪಣೆಯ ನಡುವೆ ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆಯವರ ಸಹೃದಯತೆಯಿಂದ
 ನಿವೇಶನ ಲೀಜ್‌ಮೇಲೆ ದೊರೆತು ಕಟ್ಟಡ ಪ್ರಾರಂಭ ವಾಯಿತು
ನಿರ್ಮಾಣ ಹಂತದ ಭವನ 


 ಸಾರ್ವಜನಿಕರು, ಸಹಕಾರ, ಜನಪ್ರತಿನಿಧಿಗಳು ಮತ್ತು ಸದಸ್ಯರ ಸಹಕಾರದಿಂದ  ೨೦೦೪ ರಲ್ಲಿ ರಜತೋತ್ಸವ ಸಂದರ್ಭದಲ್ಲಿ ತನ್ನ ಸ್ವಂತ ಭವ್ಯ ಭವನದಲ್ಲಿ ಕಾರ್ಯ ನಿರ್ವಹಿಸತ್ತಿದೆ.. ಬಿ. ಎಂ. ಶ್ರೀ ಕಲಾಭವನವು ಸಾಹಿತ್ಯ ,ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ..


ಪ್ರತಿಷ್ಠಾನದೊಡನೆ ನಾಡಿನ ಖ್ಯಾತನಾಮ ಸಾಹಿತಿಗಳ ಒಡನಾಟವಿದೆ. 

ಶ್ರೀಯವರ ಹುಟ್ಟೂರಾದ ಬೆಳ್ಳೂರಿನಲ್ಲಿ೧೯೮೪ ರಲ್ಲಿ ಅವರ ಜನ್ಮ ಶತಮಾನದ ಸ್ಮರಣೆಗಾಗಿ’ಶ್ರೀ ಶತಮಾನ ಭವನ” ನಿರ್ಮಿಸಿಲಾಗಿದೆ.  ವಸ್ತುಸಂಗ್ರಹಾಲಯ, ಗ್ರಂಥಾಲಯ ಮತ್ತು ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಇದಕ್ಕ ಆದಿ ಚುಂಚನಗಿರಿ ಶ್ರೀಮಠದ ಮಹಾಸ್ವಾಮಿಗಳ ಸಹಾಯ ಮತ್ತು ಸಹಕಾರವಿದೆ.
ಈಗ ಪ್ರತಿಷ್ಠಾನ ಮೂವತ್ತು ಸಾವಿರಕ್ಕೂ ಅಧಿಕ ವಿರಳ ಪರಾಮರ್ಶನ ಪುಸ್ತಗಳಭಂಡಾರ, ೧೫೦೦ ಹಸ್ತಪ್ರತಿಗಳುಸಂಗ್ರಹ ಹೊಂದಿದೆ. ಈಗ ಹಸ್ತಪ್ರತಿಗಳ ಡಿಜಟಲೀಕರಣ ಕೈಗೆತ್ತಿಕೊಂಡಿದೆ.ಹಸ್ತಪ್ರತಿ ಅಧ್ಯಯನ ತರಗತಿ ಮತ್ತು ಹಳೆಗನ್ನಡ ತರಗತಿಗಳನ್ನು ನಡೆಸಿ ಪರಂಪರೆಯ ಜ್ಞಾನ ಆಸಕ್ತರಿಗೆ ದೊರಕಿಸುತ್ತಿದೆ. ಕರ್ನಾಟಕದಲ್ಲಿ ಸಂಶೋಧನೆ ಮತ್ತು ಪಾಂಡಿತ್ಯಗಳಿಗೆ ಮೀಸಲಾದ ಪ್ರಮುಖ ಸಂಸ್ಥೆ ಯಾಗಿದೆ. ಹಂಪಿ ಕನ್ನಡ ವಿಶ್ವದ್ಯಾಲಯದ ಪಿಎಚ್‌.ಡಿ ಮತ್ತು ಎಂಫಿಲ್‌ ಅಧ್ಯಯನಕ್ಕೆ  ಅವಕಾಶ ಕೊಡುವ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರವಾಗಿದೆ.
ಹಸ್ತ ಪ್ರತಿ ವಿಭಾಗದಲ್ಲಿ ಕಾರ್ಯನಿರತರು-ಶ್ರೀಮತಿ ಮಧುರಾ, ಶ್ರೀಮತಿ ವೀಣಶಾ ಮತ್ತು ಶ್ರೀ ಗುರುಪ್ರಸಾದ್‌
ವಿದ್ವಾಂಸರ ಅಭಿವ್ಯಕ್ತಿಗೆ ಅವಕಾಶ ಕೊಡಲು ಅರ್ಧವಾರ್ಷಿಕ ನಿಯತಕಾಲಿಕ ವಿದ್ವತ್‌ ಪತ್ರಿಕೆ  “ಲೋಚನ” ವನ್ನು ೧೯೮೨ ರಲ್ಲಿ ಪ್ರಾರಂಭಿಸಿನಿರಂತರವಾಗಿ ಹೊರ ತರುತ್ತಲಿದೆ.ಇದರಲ್ಲಿ ಸಂಶೋಧನ ಲೇಖನಗಳು,ವಿಮರ್ಶೆ,ಟೀಕೆ ಟಿಪ್ಪಣಿ ಪ್ರಕಟವಾಗುತ್ತವೆ.ಇದನ್ನು ಸದಸ್ಯರಿಗೆ ಉಚಿತವಾಗಿ  ಒದಗಿಸುವುದು.
ಪ್ರತಿಷ್ಠಾನದಲ್ಲಿ ನಡೆಯುವ ಚಟುವಟಿಕೆಗಳ ಮಾಹಿತಿಯನ್ನು ನೀಡಲು ತ್ರೈ ಮಾಸಿಕ ನಿಯತಕಾಲಿಕವಾದ ವಾರ್ತಾಪತ್ರ ಹೊರ ತರಲಾಗುತ್ತಿದೆ. ಇನ್ನುಮುಂದೆ ಶ್ರೀಸುದ್ದಿ ಎಂಬ ಮಾಸ ಪತ್ರಿಕೆ ಹೊರ ತರುವ ಯೋಜನೆ ಇದೆ.
ದತ್ತಿ ಉಪನ್ಯಾಸಗಳು ಸಂಸ್ಥೆಯನ್ನು ಸದಾ ಚಟುವಟಿಕೆಯಲ್ಲಿಡುತ್ತಲಿವೆ. ಸುಮಾರು ನಲವತ್ತು ದತ್ತಿ ನಿಧಿಗಳುಇವೆ. ಸಾಹಿತ್ಯದ ವಿವಿಧ ಶಾಖೆಗಳನ್ನು  ಕುರಿತು ತಜ್ಞರಿಂದ ಉಪನ್ಯಾಸ ನಡೆಸಲಾಗುವುದು.

ಸಾಹಿತ್ಯ ಪ್ರಶಸ್ತಿಗಳು- ಪ್ರತಿಷ್ಠಾನವು  ಸಾಹಿತ್ಯ ಸಾಧಕರಿಗೆ ವಾರ್ಷಿಕವಾಗಿ ಹಲವು ಪ್ರಶಸ್ತಿ ಪ್ರದಾನ ಮಾಡುವುದು.  ಈ ಪ್ರಶಸ್ತಿಗಳಿಗೆ ವಿಶೇಷ  ಗೌರವ ಇದೆ. ಪ್ರಶಸ್ತಿಯ ಮೊಬಲಗು ಕೆಲವೇ ಸಾವಿರವಾದರೂ ಅದಕ್ಕೆ ಅತಿ ಹೆಚ್ಚಿನ ಪ್ರತಿಷ್ಠೆ ಇದೆ. ಇದನ್ನು ಪಡೆಯಲು ದೆಹಲಿಯಂಥಹ ,ದೂರದ ಪ್ರದೇಶಗಳಿಂದ ಬರುವರು. ಅರಳುತ್ತಿರುವ ಪ್ರತಿಭೆಗಳು ಮಾತ್ರವಲ್ಲ ,ವಿಖ್ಯಾತ ವಿದ್ವಾಂಸರೂ ಈ ಪ್ರಶಸ್ತಿಯಿಂದ ಸಾರ್ಥಕತೆ ಪಡೆಯುವರು .ಅಂತರಾಷ್ಟ್ರೀಯ ಮಟ್ಟದ ಹೆಸರಾಂತ ಇತಿಹಾಸ ವಿದ್ವಾಂಸರಾದ  ಡಾ.ಷ.ಶೆಟ್ಟರ್‌  ತಮ್ಮ ಕೃತಿಯೊಂದನ್ನು  ಕಳುಹಿಸಿ , ಪ್ರಶಸ್ತಿ ಬಂದಾಗ  ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಧನ್ಯತಾಭಾವ ವ್ಯಕ್ತ ಪಡಿಸಿರುವುದು ಇದರ ಸಾಹಿತ್ಯಿಕ ಮೌಲ್ಯಕ್ಕೆ  ಪ್ರತೀಕವಾಗಿದೆ.
ಸಾಹಿತ್ಯೋಪಾಸನೆ ಕಾರ್ಯಕ್ರಮ ಬಹು ಜನಪ್ರಿಯ. ಕಳೆದ ಶತಮಾನದಿಂದ ಈ ವರೆಗಿನ ಕನ್ನಡಕ್ಕಾಗಿ ಶ್ರಮಿಸಿದ ಗಣ್ಯ ಸಾಹಿತಿಗಳನ್ನು ಕುರಿತಾದ ವಿಶೇಷ ಉಪನ್ಯಾಸ ಪ್ರತಿ ತಿಂಗಳು ನಡೆಸಲಾಗುವುದು ಇದರಿಂದ ಹಿರಿಯ ಸಾಧಕರ ನೆನಪನ್ನು ಯುವ ಪೀಳಿಗೆಗೆ ಕೊಡಲು ಅನುವಾಗುವುದು..

ಬರಿ ಸಾಹಿತ್ಯಕ್ಕೆ ಮಾತ್ರವಲ್ಲ ಸಂಗೀತಕ್ಕೂ ಅವಕಾಶ ಕಲ್ಪಿಸಲಾಗಿದೆ. ಸುಗಮ ಸಂಗೀತವೆಂದರೆ ಭಾವ ಗೀತೆಗಳನ್ನು ಕೇಳುಗರು ಮನ ಮುಟ್ಟುವಂತೆ ಸಾದರ ಪಡಿಸುವುದು. .ಅಲ್ಲಿ ಸಾಹಿತ್ಯಕ್ಕೂ ಸಾಕಷ್ಟು ಪ್ರಾಧಾನ್ಯತೆ ಇದೆ..ನಾಡಿನ ಹೆಸರಾಂತ ಸುಗಮ ಸಂಗೀತಗಾರರಾದ ಪಿ ಕಾಳಿಂಗರಾವ್‌, ಎಂ. ವಿ. ಸಿ. ಮತ್ತು ಬಿ.ಎಂಶ್ರೀ  ಅವರ ಹೆಸರಿನಲ್ಲಿ” ಸಿರಿ ಸಂಗಿತ”,ಕಾರ್ಯಕ್ರಮದಲ್ಲಿ ಪ್ರತಿ ತಿಂಗಳು  ಸುಗಮ ಸಂಗಿತದ ಕಾರ್ಯಕ್ರಮ ನಡೆಸಲಾಗುವುದು.,
ತಿಮ್ಮಪ್ಪದಾಸ ಹಸ್ತಪ್ರತಿ ವಿಭಾಗದಲ್ಲಿ ಕನ್ನಡ , ಸಂಸ್ಕೃತ, ಗ್ರಂಥ, ನಾಗರಿ, ತೆಲುಗು ತಮಿಳು ತಿಗಳಾರಿ ಲಿಪಗಳಲ್ಲಿನ ೧೫೦೦ ಹಸ್ತಪ್ರತಿಗಳನ್ನು ಸಂರಕ್ಷಿಸಲಾಗಿದೆ.. ಅವುಗಳ ಡಿಜಟಲೀಕರಣ ಮತ್ತು ವಿರಳ ಗ್ರಂಥಗಳ ಮುದ್ರಣಕ್ಕೆ ಕ್ಕೆ ಕ್ರಮ ತೆಗೆದುಕೊಳ್ಳ್ಲಲಾಗುತ್ತಿದೆ. ಅದರ  ಅಡಿಯಲ್ಲಿ ಪ್ರತಿವರ್ಷ ರಾಜ್ಯ ಮಟ್ಟದ ಹಸ್ತಪ್ರತಿ ಅಧ್ಯಯನ ಸಮಾವೇಶ ನಡೆಸಲಾಗುವುದು . ಮತ್ತು ಆ ಸಮಾವೇಶದಲ್ಲಿ ಮಂಡಿಸಿದ ಲೇಖನಗಳ ಸಂಕಲನವನ್ನು ಗ್ರಂಥರೂಪದಲ್ಲಿ ತರಲಾಗುವುದು.
ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು

ಹಸ್ತಪ್ರತಿಗಳ ಸೇವಾಕೇಂದ್ರ  ಸಾರ್ವಜನಿಕರಲ್ಲಿರುವ ಹಸ್ತಪ್ರತಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಿ ಕೊಡಲಾಗುವುದು. ಹಸ್ತಪ್ರತಿಗಳನ್ನು ಕುರಿತು ಜಾಗೃತಿ ಮೂಡಿಸಲು  ಅನೇಕ ಕಡೆ ಹಸ್ತಪ್ರತಿ ಪ್ರದರ್ಶನ ನಡೆಸಲಾಗುತ್ತಿದೆ. ಯಾವುದೇ ಶೈಕ್ಷಣಿಕ  ಸಮಾರಂಭದಲ್ಲಿ ವೈವಿದ್ಯ ಪೂರ್ಣ ಹಸ್ತ ಪ್ರತಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮಾಹಿತಿಯುಳ್ಳ ಪ್ರದರ್ಶಿಕೆಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ.
ಇತ್ತೀಚೆಗೆ ಇನ್ನೊಂದು ಶೈಕ್ಷಣಿಕ ಚಟುವಟಿಕೆ ಕೈಗೆತ್ತಿ ಕೊಂಡಿದೆ.  ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಕರಶಾಸ್ತ್ರ ಎಂಬ ವಿಷಯವಿದ್ದು ಅವರು ಕಾಲೇಜಿನಲ್ಲಿ ಬರಿ ತಾತ್ವಿಕ ಉಪನ್ಯಾಸಗಳಿಂದ ತೃಪ್ತಿ ಪಡಬೇಕಾಗುವುದು. ಅವರಿಗೆ ಹಸ್ತಪ್ರತಿಗಳ ಕುರಿತಾದ ಪ್ರಾತ್ಯಕ್ಷಿಕೆ ನೀಡಲು ಮತ್ತು ಸಂರಕ್ಷಣೆಯ ವಿಧಿವಿಧಾನಗಳನ್ನು ಕೈ ಮುಟ್ಟಿ ಮಾಡಿ ತಿಳಿದು ಕೊಳ್ಳಲು ಒಂದು ವಾರದ ಕಾರ್ಯಶಿಬಿರ ನಡೆಸಲಾಗುತ್ತಿದೆ.

  ಚಿ. ಶ್ರೀನಿವಾಸ ರಾಜು
ಹಸ್ತ ಪ್ರತಿ ಕುರಿತಾಗಿ ಜಾಗೃತಿ ಮೂಡಿಸಲು ’ ಹಸ್ತಪ್ರತಿ ಅಭಿಯಾನ’ ಕೈ ಕೊಳ್ಳಲಾಗಿದೆ.
 ಸಂಸ್ಥೆಯ ಪ್ರಕಟನ ವಿಭಾಗವು ಸಂಶೋಧನ ಕೃತಿಗಳನ್ನು, ಪ್ರಾಚೀನ ಗ್ರಂಥಗಳನ್ನು, ವಿಶೇಷ ಉಪನ್ಯಾಸಗಳನ್ನು ವಿವಿಧ ಸಾಹಿತ್ಯಮಾಲೆಗಳ ಮೂಲಕ ಪ್ರಕಟಿಸುತ್ತಲಿದ.
ಈ ವರೆಗೆ ಸುಮಾರು ಒಂದುನೂರು ಪುಸ್ತಕಗಳನ್ನು ಪ್ರಕಟಿಸಲಾಗಿದೆ.
ಈಗ ಸಾಹಿತ್ಯದ ಐದು ವಿಭಾಗಗಳಲ್ಲಿ ಪ್ರಶಸ್ತಿ  ಕೊಡಲಾಗುತ್ತಿದೆ. .ಮಕ್ಕಳ ಸಾಹಿತ್ಯ, ವಿಮರ್ಶಾ ಕೃತಿ, ಸಂಶೋಧನಾ ಕೃತಿ ಸಂಶೋಧನೆ, ಸೃಜನ ಶೀಲ ಮತ್ತು ಸಾಹಿತ್ಯ ಸಂಘಟನೆಗಳಿಗೆ ಸರದಿಯ ಮೇಲೆ , ಕಾದಂಬರಿ ಅಥವ ಕಥಾ ಸಂಕಲನಕ್ಕೆ ಸರದಿಯ ಮೇಲೆ ಪ್ರಶಸ್ತಿ ನೀಡುವುದುಮತ್ತು ಕನ್ನಡ ನಾಡು ನುಡಿಗೆ ಸಂಬಂಧಿಸಿದ ಗ್ರಂಥಕ್ಕೆ ಪ್ರತಿವರ್ಷ ಪುರಸ್ಕಾರ ನೀಡಲಾಗುವುದು.

ಪ್ರೊ. ಅಬ್ದುಲ್‌ಬಷೀರ್‌,ರಾಮಪ್ರಸಾದ್‌, ಸುಮತೀಂದ್ರ ನಾಡಿಗ್‌ ಮತ್ತು ಪ್ರೊ. ಲಿಂಗಯ್ಯ
ಇವೆಲ್ಲಕ್ಕೂ ಶಿಖರ ಪ್ರಾಯವಾಗಿ ಈ ವರ್ಷದಿಂದ ಬಿ. ಎಂ. ಶ್ರೀ ಹೆಸರಿನಲ್ಲಿ  ಒಂದು ಲಕ್ಷ ರೂಪಾಯಿ ಮೌಲ್ಯದ  ಶ್ರೀಪ್ರಶಸ್ತಿ ಯನ್ನುಸಾಹಿತ್ಯ ರಂಗದಲ್ಲಿ ಶ್ರೇಷ್ಠ ಸಾಧನೆ ಮಾಡಿದ, ಈವರೆಗೆ ಯಾವುದೇ ರಾಷ್ಟ್ರೀಯ ಅಥವ ರಾಜ್ಯಮಟ್ಟದ  ಪ್ರತಿಷ್ಠಿತ ಪ್ರಶಸ್ತಿ ಪಡೆಯದ ಸಾಹಿತಿಗೆ ನೀಡಲಾಗುವುದು.ಈ ಪ್ರಶಸ್ತಿಯನ್ನು ಬಿ.ಎಂ.ಶ್ರೀ ಯವರ ಮೊಮ್ಮಗಳಾದ ಶ್ರೀಮತಿ ಕಮಲಿನಿ.ಷ.ಬಾಲುರಾವ್‌ ಅವರು ದೊಡ್ಡ ಮೊತ್ತವನ್ನು ನಿಶ್ಚಿತ ಠೇವಣಿಯಲ್ಲಿ ಇಡುವ ಮೂಲಕ ಪ್ರಾಯೋಜಿಸಿದ್ದಾರೆ. ಇನ್ನು ಮುಂದೆ ಬಿ. ಶ್ರೀಯವರ ಜನ್ಮ ದಿನದಂದು ಈ ಪ್ರಶಸ್ತಿ ನೀಡಲಾಗುವುದು.
ಶ್ರೀ ಪ್ರಶಸ್ತಿ ಫಲಕ
 ಇದರಲ್ಲಿ ಸರ್ಕಾರಿ ಪ್ರಾಯೋಜಕತ್ವ ಇಲ್ಲ. ಯಾವುದೇ ಪಂಗಡ , ಜಾತಿ, ಮತ ಮತ್ತು ಇಜಂಗಳ ಗೋಜಿಲ್ಲ.ರಾಜ್ಯದ ನಾಲ್ಕುವಿಭಿನ್ನ ಭಾಗಗಳಿಂದ ಬಂದ ಸಾಹಿತ್ಯ ಪರಿಣಿತರು ಪ್ರಶಸ್ತಿಗೆ ಅರ್ಹರಾದವರನ್ನು ಆರಿಸುವರು. ಅದರಲ್ಲಿ ಸಂಸ್ಥೆಯ ಪಾತ್ರವಿಲ್ಲ. ಆಯ್ಕೆ ಪಾರದರ್ಶಕವಾಗಿರುವುದು.. ಇದರಿಂದ ಒತ್ತಡ , ಪ್ರಭಾವಗಳಿಗೆ ಅವಕಾಶವೇ ಇಲ್ಲ..ಯಾರೂ ಅರ್ಜಿ ಹಾಕಬೇಕಿಲ್ಲ. ಅದಕ್ಕೆ ಒಬ್ಬ ಸಾಹಿತ್ಯಾಸಕ್ತರು ಈ ಪ್ರಶಸ್ತಿಯು ಕರ್ನಾಟಕದ ಜ್ಞಾನಪೀಠ ಎಂದು ಕರೆದಿರುವುದರಲ್ಲಿ ಅತಿಶಯೋಕ್ತಿ ಇಲ್ಲ ಎನ್ನ ಬಹುದು.
ಕನ್ನಡಪ್ರೇಮಿಗಳು  ಪೋಷಕರಾಗಿ,ದಾನಿಗಳಾಗಿ,ಆಜೀವ ಸದಸ್ಯರಾಗಿ ಅಥವ ಸ್ವಯಂಸೇವಕರಾಗಿ ಪ್ರತಿಷ್ಠಾನದ ಕೆಲಸದಲ್ಲಿ ಭಾಗಿಗಳಾಗಲು  ಕನ್ನಡ ಸೇವೆ ಮಾಡಲು ಸ್ವಾಗತವಿದೆ.



ವಿಳಾಸ .:  ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನ (ನೊಂ) ೩ನೆಯ ಮುಖ್ಯ ರಸ್ತೆ, , ಎನ್‌ ಆರ್‌ ಕಾಲನಿ, ಬೆಂಗಳೂರು-  ೫೬೦೦೧೯. ದೂರವಾಣಿ – ೦೮೦-೨೬೬೧೫೮೭೭