Thursday, December 18, 2014

ಚಂದ್ರಗಿರಿ ಉತ್ಸವ

ಶಾಸನ ಸಾಹಿತ್ಯ ಪ್ರಶಸ್ತಿ

ಎಚ್‌.ಶೇಷಗಿರಿರಾವ್, ನಿರ್ದೇಶಕರು, ಹಸ್ತಪ್ರತಿವಿಭಾಗ





ಕನ್ನಡ ಸಾಹಿತಿಗಳಿಗೆ ಕಳೆದ ಎರಡು ದಶಕಗಳಿಂದ ಪ್ರಶಸ್ತಿಗಳಿಗೆ ಬರವೇಇಲ್ಲ. ಬಡಾವಣೆಯ  ಬಸವನ ಗುಡಿ ರತ್ನ ದಿಂದ ಹಿಡಿದು ರಾಜ್ಯ ಮಟ್ಟದ  ಕರ್ನಾಟಕ ರತ್ನ ದವರೆಗೆ ಪ್ರಶಸ್ತಿಗಳಿವೆ. ಜ್ಞಾನ ಪೀಠಕ್ಕೂ ಹೆಚ್ಚಿನ ನಗದು ನೀಡುವ  ಪ್ರಶಸ್ತಿಗಳಿವೆ.  ಹಲವರಿಗಂತೂ ಪ್ರಶಸ್ತಿಗಳ ಸರಮಾಲೆ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ. ಕಾದಂಬರಿ, ಕವನ. ವಿಮರ್ಶೆ ಮಹಿಳೆ, ಯುವ ಬರಹಗಾರ, ವಿಜ್ಞಾನ, ಸಂಶೋಧನೆ,  ಅನುವಾದ ಹೀಗೆ ಎಲ್ಲ ರಂಗಗಳ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಆಗುತ್ತ ಲಿದೆ
ಶಾಸನಗಳ ನೆಲವೀಡಾದ  ಚಂದ್ರಗಿರಿ
. ಈವರೆಗೆ , ಇತಿಹಾಸ ಮತ್ತು ಸಾಹಿತ್ಯಗಳ ತಾಯಿ ಬೇರಾದ ಶಾಸನ ಸಂಶೋಧಕರು ಮಾತ್ರ ಎಲೆಯ ಮರೆಯ ಕಾಯಿಯಂತೆ ನೆಲದೊಳಗಣ ನಿದಾನದಂತೆ  ಅಜ್ಞಾತವಾಗಿ ಬೆಟ್ಟ ಗುಡ್ಡಗಳಲ್ಲಿ, ಹಾಳು ಗುಡಿಗಳಲ್ಲಿ, ಕಾಡು ಮೇಡುಗಳಲ್ಲಿ ಅಡಗಿರುವ ಶಾಸನಗಳ ಪತ್ತೆ ಮತ್ತು ಅವುಗಳ ಅರ್ಥೈಸುವಿಕೆ, ಅವುಗಳ ಸಾಹಿತ್ಯಿಕ ಮತ್ತು ಸಾಂಸ್ಕೃತಿ ಮಹತ್ವವನ್ನು ಸಂಶೋಧಿಸಿ ಹೊಸ ಬೆಳಕು ಚೆಲ್ಲಲು ಮಾಡುವ ಕಾರ್ಯದ ಮಹತ್ವ ಬರೀ ವಿಚಾರ ಸಂಕೀರಣ ಮತ್ತು ಸ್ಮರಣ ಸಂಚಿಕೆಗಳ ಲೇಖನಕ್ಕೆ ಮಾತ್ರ ಮೀಸಲಾಗಿತ್ತು.  ಈ ದಿಶೆಯಲ್ಲಿ ದುಡಿವ ಇತಿಹಾಸ ತಜ್ಞರು, ಪುರಾತ್ತತ್ವ ಪರಿಣಿತರುಮತ್ತು  ಲಿಪಿತಜ್ಞರನ್ನು ಗುರುತಿಸುವ, ಸಾರ್ವಜನಿಕವಾಗಿ ಸಮ್ಮೇಳನದಲ್ಲಿ ಸನ್ಮಾನಿಸುವ ನಗದು ಪ್ರಶಸ್ತಿ ನೀಡುವ ಪ್ರಥಮ ಪ್ರಯತ್ನದ ಕರ್ನಾಟದಲ್ಲಿ ನಡೆಯಿತು.


ಗೊಮ್ಮಟೇಶ್ವರ 
 ಶ್ರವ ಬೆಳಗೊಳ ಜೈನ ಕಾಶಿ ಎಂದೇ ಪ್ರಖ್ಯಾತ. ಅಲ್ಲಿನ ವಿಂದ್ಯಾಗಿರಿಯಲ್ಲಿರುವ  ಏಕಶಿಲಾ ಗೊಮ್ಮಟೇಶ್ವರ  ವಿಗ್ರಹ ವಿಶ್ವದ ವಿಸ್ಮಯಗಳಲ್ಲಿ ಒಂದು.  ಅದಕ್ಕೆ ಲಕ್ಷಾಂತರ ಜನ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಹನ್ನೆರಡು ವರ್ಷಕ್ಕೆ ಒಮ್ಮೆ ನಡೆವ ಮಹಾಮಸ್ತಕಾಭಿಷೇಕವಂತೂ ಜಗತ್‌ಪ್ರಸಿದ್ಧ. 

ಈ ಎಲ್ಲ ಖ್ಯಾತಿಗೂ ಕಾರಣರು ಅಲ್ಲಿರುವ ಜೈನ ಮಠದ  ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮಿಗಳು. ಅವರ ದೂರದೃಷ್ಟಿಯ ಫಲಿತವೇ ಚಂದ್ರಗಿರಿ ಅತವ ಚಿಕ್ಕ ಬೆಟ್ಟದ ಉತ್ಸವ.ದೊಡ್ಡ ಬೆಟ್ಟವು ಔನತ್ಯಕ್ಕೆ ಹೆಸರಾದರೆ ಚಿಕ್ಕಬೆಟ್ಟವು ಧಾರ್ಮಿಕ ಮತ್ತು ಐತಿಹಾಸಿಕವಾಗಿ ಅತಿ ಮಹತ್ವ ಹೊಂದಿದೆ.ಚಂದ್ರಗಿರಿಯು  ಶಿಲಾಶಾಸನಗಳ ಸಾಗರ. ಬಹುಶಃ ಭಾರತದಲ್ಲೇ ಒಂದೇ ಕಡೆ ಸುಮಾರು ೫೩೬ ಶಿಲಾಶಾನಗಳನ್ನು ಹೊಂದಿರುವ ಹಿರಿಮೆ  ಇದರದು. ಹತ್ತು ಶತಮಾನಗಳಿಗೂ ಅಧಿಕ ಪುರಾತನವಾದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಬಸದಿಗಳು ಮತ್ತು ಶಾಸನಗಳ ನೆಲೆಬೀಡು. ವಿಶೇಷವಾಗಿ ಮರಣದ ಮಹಿಮೆಯನ್ನು ಸಾರುವ ಏಕ ಮೇವ ಸ್ಥಾನ. ಇಬ್ಬರು ಚಕ್ರವರ್ತಿಗಳು ನೂರಾರು ಜೈನ ಮುನಿಗಳು ಸಲ್ಲೇಖನ ವ್ರತದ ಮೂಲಕ ಪ್ರಾಣತ್ಯಾಗ ಮಾಡಿ ಪುಣ್ಯಭೂಮಿ ಇದು. ಸಾವೂ ಒಂದು ಸಂಭ್ರಮ ಎಂಬ ಜೈನ ಮತದ ತತ್ವವನ್ನು ಸಾರಿದ್ದ ತಾಣ ಇದಾಗಿದೆ..


 ಇದರ ಮಹತ್ವನ್ನು ಸಾರಲು ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು
  ಬಾಹುಬಲಿಯ ಮಹಾಮಸ್ತಕಾಭಿಷೇಕದಂತೆ ಹನ್ನೆರಡುವರ್ಷಗಳ ನಡುವೆ ಚಂದ್ರಗಿರಿ ಮಹೋತ್ಸವವನ್ನೂ ಹನ್ನೆರಡು ವರ್ಷಗಳಿಗೊಂದು ಸಾರಿ ಆಚರಿಸಿ ಈ ಬೆಟ್ಟದ ಧಾರ್ಮಿಕ ಮತ್ತು  ಐತಿಹಾಸಿಕ ಮಹತ್ವನ್ನೂ ಸಾರಲು ೨೦೦೧ ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿದರು. ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಷಪೂರ್ತಿ  ನಡೆಸುವರು ಆ ಮಹೋತ್ಸವದ ಎರಡನೆಯ  ಆವೃತ್ತಿ  ಈ ವರ್ಷ ನಡೆದಿದೆ..ಈ ಸಲದ  ವಿಶೇಷವೆಂದರೆ  ಮೊದಲ ಬಾರಿಗೆ ಅದರ ಐತಿಹಾಸಿಕ ಮಹತ್ವಕ್ಕೆ ಕಾರಣವಾದ ಶಿಲಾಶಾನಗಳ ಅಧ್ಯಯನಮಾಡಿ ಹೊಸ ಬೆಳಕು ಚೆಲ್ಲುತ್ತಿರುವ ಶಾಸನ ನ ತಜ್ಞರಿಗೆ’ ಶಾಸನ ಸಾಹಿತ್ಯ “ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದರು. ಎರಡನೆಯ ಚಂದ್ರಗಿರಿ ಉತ್ಸವವು  ಆದೃಷ್ಟಿಯಿಂದ  ಅವಿಸ್ಮರಣೀಯ . ಮೊದಲಬಾರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಮೂತ್ತೈದು ಸಾವಿರ ರೂಪಾಯಿಗಳ  ಶಾಸನ ಕ್ಷೇತ್ರದಲ್ಲಿನ ಹನ್ನೊಂದು ಜನ ಹಿರಿಯ ಸಾಧಕರಿಗೆ ನೀಡಿ ಗೌರವಿಸಲಾಗಿದೆ.
ಶಾಸನಸ್ಥಾಪನಾ ರೂಪಕ
ಈ ಕಾರ್ಯಕ್ರಮವೇ ಒಂದು ರೀತಿಯಲ್ಲಿ ವಿಶಿಷ್ಟವಾಗಿತ್ತು. ಕಾರ್ಯಕ್ರಮ ಪ್ರಾಂಭವಾದ್ದು ಶಾಸನ ನಮನ  ದಿಂದ.. ಅದೂ ಸಂಗೀತ ಮತ್ತು ನೃತ್ಯದ ಮೂಲಕ. ಹಾಸನದ  ನೃತ್ಯ ಪಟುವಿನ ನೃತ್ಯಾಂಜಲಿ ಆಕರ್ಷಕ ನಾಂದಿಯಾಯಿತು. ನಂತರದ   ಕಾರ್ಯಕ್ರಮವಾದ ಶಿಲಾಶಾಸನ ಸ್ಥಾಪನೆ ಎಂಬ ರೂಪಕವು ನೋಡುಗರನ್ನು ಒಂದು ಸಹಸ್ರಮಾನದ ಹಿಂದಿನ ಐತಿಹಾಸಿಕ ಲೋಕಕ್ಕೆ ಕರೆದೊಯ್ದಿತು. ಶಿಲಾಶಾಸನವನ್ನು ನಡೆಸಿ ತಾವು ಮಾಡಿದ ದಾನವನ್ನು ಸ್ಥಿರಗೊಳಿಸಿ ಪ್ರಜೆಗಳಲ್ಲಿ ಅದರ ಪ್ರಾಮುಖ್ಯತೆಯ  ಅರಿವು  ಮೂಡಿಸುವ ಪ್ರಯತ್ನ ಅದಾಗಿತ್ತು.  ಶಾಸನ ಕಂಡರಿಸುವ ಶಿಲ್ಪಿ , ರಚಿಸುವ ಕವಿ, ನಿರ್ಮಿಸುವ ದಂಡನಾಯಕ. ಅದನ್ನು ಸಮರ್ಪಿಸುವ  ಅರಸ ವಿಷ್ಣುವರ್ಧನ, ಅವನ ಅರಸು ಪರಿವಾರ  ಸಕಲ ಗೌರವ ಗಳೊಂದಿಗೆ ನೆರೆದ  ಸಭಾಸದರು  ನಮ್ಮೆಲ್ಲರನ್ನೂ ಹೊಯ್ಸಳರ ಕಾಲಕ್ಕೆ ಕರೆದೊಯ್ದಿತು.ಈ ರೂಪಕವು ಸ್ವಾಮೀಜಿಯವರ ಕನಸಿನ ಕೂಸು ಎಂಬುದ ಗಮನಾರ್ಹ.. . ವೈಭವೋಪೇತ ಉಡುಗೆ ತೊಡುಗೆಗಳು, ೨೫ ಕ್ಕೂ ಅಧಿಕ ನಟರ ಹೊಂದಾಣಿಕೆ  ಸುಸಂಬದ್ಧ ,ಸಂಭಾಷಣೆ ಮತ್ತು ಅದ್ದೂರಿಯ ರಂಗಸಜ್ಜಿಕೆ  ನೋಡುಗರ ಮನಸೂರೆ ಗೊಂಡವು.ಶಾಸನ ಸಾಹಿತ್ಯ ಪ್ರಶಸ್ತಿ ಪ್ರದಾನಕ್ಕೆ ಸೂಕ್ತ ಹಿನ್ನೆಲೆ ಒದಗಿಸಿತು
ಪ್ರಶಸ್ತಿ  ಪಡೆದ  ಡಾ. ದೇವರ ಕೊಂಡಾ ರೆಡ್ಡಿ

ಇನ್ನು ವೇದಿಕೆಯಲ್ಲಿ ಸನ್ಮಾನಿತರಿಗೆ ಮಾಡಿದ ಆಸನ ವ್ಯವಸ್ಥೆ ಅವರ ಸಾಧನೆಯ ಮಹತ್ವ ಸಾರುವಂತಿತ್ತು ಸಿಂಹಾಸನವನ್ನು ಹೋಲುವ ವೇದಿಕೆಯ ಮಧ್ಯದಲ್ಲಿದ್ದು  ಸ್ವಾಮೀಜಿಯವರಿಗೂ ಆಸನಕ್ಕಿಂತಲೂ ವೈಭವೋಪೇತವಾಗಿದ್ದುದು ಶಾಸನ ಸಾಹಿತ್ಯಕ್ಕೆ ಸಲ್ಲಿಸಿದ ಅತಿ ದೊಡ್ಡ ಗೌರವವವೇ ಸರಿ.  ಬಹುತೇಕ ಸನ್ಮಾನ ಸಮಾರಂಭಗಳಲ್ಲಿ ರಾಜಕಾರಣಿಗಳ, ವ್ಯವಸ್ಥಾಪಕರ ಮತ್ತು ದಾನಿಗಳದೇ ದರ್ಬಾರು ಎದ್ದು ಕಾಣುವುದು ಸನ್ಮಾನಿತರು ಬಡ ಬಂಧುಗಳಂತೆ.ಆದರೆ ಇಲ್ಲಿ  ಶಾಸನ ಮತ್ತು ಶಾಸನ ಪರಿಣಿತರೇ   ಸಮಾರಂಭದ ಕೇಂದ್ರ ಬಿಂದುವಾಗಿದ್ದು ಸದಭಿರುಚಿಯ ಸಂಕೇತ.. ಪ್ರತಿಯೊಬ್ಬರ ಸಾದನೆ ಸಾರುವ ಮಾನ ಪತ್ರ  ಪಠಣೆ, ಶಾಲುಹೊಚ್ಚಿ ಸ್ಮರಣಿಕೆ ನೀಡಿ,ನಗದು ಬಹುಮಾನದೊಂದಿಗೆ ಗೌರವಿಸಲಾಯಿತು
ಚಾರು ಕೀರ್ತಿ ಭಟ್ಟಾರಕರೊಂದಿಗೆ ಪ್ರಶಸ್ತಿ ವಿಜೇತರು
 ಸನ್ಮಾನಿತರ ಪರವಾಗಿ . .ಷ.ಶೆಟ್ಟರ್ ಶ್ರವಣ ಬೆಳಗೊಳದ ಶಾಸನಗಳ ಮಹತ್ವ ಆಗಿರುವ ಮತ್ತು ಆಗ ಬೇಕಾದ ಕಾರ್ಯಗಳ ಮಹತ್ವವನ್ನು ತಿಳಿಸಿದರು. ಪ್ರೊ. ಹಂ.ಪಾ. ನಾಗರಾಜಯ್ಯನವರು ಜೈನ ಸಾಹಿತ್ಯದ ಮೇರು ಸಾದಕ.ಅವರು ಸನ್ಮಾನಿತರಾದರೂ ಎಲ್ಲ ಕಾರ್ಯದಲ್ಲೂ  ಅವರುನಿರ್ದೇಶನ ನೀಡಿ ನಿರ್ವಹಿಸುತ್ತಿರುವುದು ಕಾಣುತಿತ್ತು,ಸ್ವಾಮೀಜಿಯವರು ಮಾತಿಗಿಂತ ಕೃತಿಯಲ್ಲಿ ತಮ್ಮ ಇರವನ್ನು ಪ್ರಚುರ ಪಡಿಸಿದರು, ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಶಾಸನ ಕ್ಷೇತ್ರದ ಹಿರಿಯರು ಭಾಗವಹಿಸಿದ್ದರು. ಕರ್ನಾಟಕ ಜೈನ ಭವನವು ಜನರಿಂದ ತುಂಬಿ ತುಳುಕುತಿತ್ತು. ಜೈನ ಸಮಾಜವು  ಬೆಳಗಿನ
 ಉಪಹಾರದಿಂದ ಹಿಡಿದು ಮಧ್ಯಾಹ್ನದ ಊಟದ ವರೆಗೆ ಅಚ್ಚುಕಟ್ಟಾಗಿ  ಕೆಲಸ ಮಾಡಿದರು.ಪರಂಪರೆ ಮತ್ತು ಇತಿಹಾಸವನ್ನು ಗೌರವಿಸುವಲ್ಲಿ ಈ ಸಮಾರಂಭ ಯಶಸ್ವಿಯಾಯಿತು ಎನ್ನಬಹುದು.
ಈ ಸಲ ಕರ್ನಾಟಕ ಇತಿಹಾಸ ಅಕಾದಮಿಗೆ ಪ್ರಶಸ್ತಿಗಳ ಮಹಾಪೂರ. ಒಟ್ಟು ಹನ್ನಂದು  ಪ್ರಶಸ್ತಿಗಳಲ್ಲಿ ಇತಿಹಾಸ ಅಕಾದಮಿಗೆ ಅದ್ಯಕ್ಷರಾದ ಡಾ.ದೇವರಕೊಂಡಾರೆಡ್ಡಿ ಮತ್ತು ಕಾರ್ಯದರ್ಶಿ ಡಾ. ಪಿವಿ. ಕೃಷ್ಣ ಮೂರ್ತಿ ಸೇರಿದಂತೆ ಒಂಬತ್ತು ಜನರು ಪ್ರಶಸ್ತಿಗೆ ಭಾಜನರಾಗಿರುವುರು.   ಇದು ಶಾಸನ ಕ್ಷೇತ್ರಕ್ಕ ಮತ್ತು ಇತಿಹಾಸ ರಂಗಕ್ಕೆ ಅಕಾದಮಿ ನೀಡುತ್ತಿರುವ ಕೊಡುಗೆಯ ಸಂಕೇತವಾಗಿದೆ
I




ಚಾರು ಕೀರ್ತಿ ಭಟ್ಟಾರಕರ ಜೊತೆ ಪ್ರಶಸ್ತಿ ವಿಜೇತರು
                                                                           






                            
ಡಾ. . ಶೆಟ್ಟರ್‌


Sunday, December 14, 2014

ಸಂಜಯ ಸೂರಿ


ಎಚ್‌.ಶೇಷಗಿರಿರಾವ್









ಕಲಾ  ಕುಟುಂಬಿ ಸಂಜಯ ಸೂರಿ
  ಎಂಬತ್ತರ ದಶಕದ ಒಂದು ಶುಕ್ರವಾರ. ರಾಜಕುಮಾರರ ಚಿತ್ರ ಬಿಡುಗಡೆಯಾಗಿದೆ. ಸಂಜಯ ಥೇಟರ್‌ಮುಂದೆ ಜನಸಾಗರ. ಥೇಟರನಲ್ಲಿ ಗಡಿಬಿಡಿಯೇ ಗಡಿಬಿಡಿ..ಮ್ಯಾಟನಿ ಮುಗಿದು ಫಸ್ಟ್‌ ಷೋಗೆ ಟಿಕೆಟ್‌ ವಿತರಣೆಯಾಗಿದೆ. ಆಗಲೇ ಹೌಸ್‌ಫುಲ್‌ ಬೋರ್ಡು ರಾರಾಜಿಸುತ್ತಿದೆ. ಕೌಂಟರ್‌ನಲ್ಲಿ ಸಂಗ್ರಹವಾದ ಹಣವನ್ನು ಚೀಲವೊಂದರಲ್ಲಿ ಹಾಕಿ ಗೆಳೆಯನ ಕೈನಲ್ಲಿಕೊಟ್ಟು ಹತ್ತು ಗಂಟೆಯ ಮೇಲೆ ಬಂದು ಲೆಕ್ಕ ಒಪ್ಪಿಸುವೆ ಈಗ ತುರ್ತಾಗಿ ಹೊಗಬೇಕು ಎಂದು ಸಂಜಯ ಸಿನೆಮಾ ಥೇಟರ್‌ನಿಂದ  ಹೊರಟ ಸದೃಢ ಸುರದ್ರೂರೂಪಿ  ಯುವಕ ಕಲಾಕ್ಷೇತ್ರದತ್ತ ಧಾವಿಸಿದ.  ಹೀರೋ  ಬಂದನಾ, ಬಂದನಾ ಎಂದು  ಹಲಬುತಿದ್ದ   ನಿರ್ದೇಶಕನಿಗೆ ," ಸಾರಿ ಸಾರ್‌, ತಡವಾಯಿತು" ಎಂದು ವಂದಿಸಿ  . ಗ್ರೀನ್‌ರೂಮಿನಲ್ಲಿ ನುಗ್ಗಿ ಬಣ್ಣ ಹಚ್ಚಿಸಿ ಕೊಂಡು ರಂಗದ ಮೇಲೆ ನಡೆದ.ಆ ವ್ಯಕ್ತಿಯೇ ಸೂರ್ಯನಾರಾಯಣ ಆಗ ರಂಗಭೂಮಿಯಲ್ಲಿ ಸೂರ್ಯ ನಾರಾಯಣನ ಹೆಸರಿನ ನಟರು ಮುರುನಾಲ್ಕು ಜನರಿದ್ದರು . ಅದಕ್ಕೆಂದೆ ಸಂಜಯ ಟಾಕೀಸ್‌ನಲ್ಲಿ ಕೆಲಸ ಮಾಡುತಿದ್ದದರಿಂದ ಸಂಜಯ  ಸೂರಿ.ಎಂಬ  ಹೆಸರು. ಕೊನೆ ತನಕ ಅದೇ ಹೆಸರು ಉಳಿದು ಬಿಟ್ಟಿತು ನಾಟಕ ರಂಗದಲ್ಲಿ.
ಸೂರ್ಯನಾರಾಯಣ

ಬೆಳಗಿನ ಏಳರ ಸಮಯ. ಕಹಳೆ ಬಂಡೆ ಉದ್ಯಾನದಲ್ಲಿ ಹಿರಿಯ ನಾಗರೀಕರು ವಾಯುವಿಹಾರದಲ್ಲಿ ತೊಡಗಿದ್ದಾರೆ. ಅರವತ್ತರ ಆಚೆ ಇರುವ ಗಟ್ಟಿ ಮುಟ್ಟಾಗಿ ಕಾಣುವ ವ್ಯಕ್ತಿ ಎದುರಿಗೆ ಬಂದವರಿಗೆಲ್ಲ ಶುಭೋದಯ ಎನ್ನತ್ತಾ, ಮಾತು ಮಾತಿಗೆ ಮಂಕುತಿಮ್ಮನ ಕಗ್ಗದ ಪದ್ಯಗಳನ್ನು ಗಟ್ಟಿಯಾಗಿ ಹೇಳುತ್ತಾ ನಗುತ್ತಾ ನಗಿಸುತ್ತಾ ಮುದುಡಿದ ಮುಖದಲ್ಲೂ ಮುಗಳ್ನಗೆ ಮೂಡಿಸುವ ವ್ಯಕ್ತಿ  ಬೇರೆ ಯಾರೂ ಅಲ್ಲ,  ಕಲಾವಿದ ಸಂಜಯ ಸೂರಿ.

ಹುಟ್ಟಿದ್ದು ತಿಪಟೂರಿನಲ್ಲಿ. ಬಡ ಕುಟುಂಬ. ಶಿಕ್ಷಣ ಎಸ್‌ಎಲ್ ಸಿ ವರೆಗೆ. ಆಗಲೇ ಕಲೆ ಕೈ ಬೀಸಿ ಕರೆಯಿತು. ಬಾಲ ಕಲಾವಿದನಾಗಿ  ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ ರಂಗ ಪ್ರವೇಶ. . ಪ್ರಭಾತ್‌ ಕಲಾವಿದರಲ್ಲಿ ತರಬೇತಿ. ಪರಿಣಾಮ ನಟನೆ, ನೃತ್ಯಗಳಲ್ಲಿ ಪರಿಣಿತಿ. ಅಲ್ಲಿಂದ ನಿರಂತರ ಕಲಾಪಯಣ. ಟಿ. ವಿ. ಸಿನೆಮಾಗಳಲ್ಲೂ ಅಭಿನಯ ಕೆ. ಬಾಲಚಂದರ್‌ ರವರಿಂದ ಹಿಡಿದು ಬಿ.ವಿ. ಕಾರಂತ, ನಾಗಾಭರಣ, ಟಿ ಎನ್‌.ಸೀತಾರಾಮ್. ಅವರ ಜೊತೆ ಕೆಲಸಮಾಡುವ ಅವಕಾಶ.   ಹೊಟ್ಟೆ ಪಾಡಿಗೆ ಸಂಜಯ ಥೇಟರ್‌ನಲ್ಲಿ ಉದ್ಯೋಗ.ಅಲ್ಲಿಂದ ಉದ್ಯೋಗ ಪರ್ವ ಅನೇಕ ಖಾಸಗಿ ಕಂಪನಿಗಳಲ್ಲಿ ಮುಂದುವರಿಯಿತು.. ನಾಟಕದ ಗೀಳಿನಿಂದ ವೃತ್ತಿಯಲ್ಲಿ ಹಿನ್ನೆಡೆ. ಆದರೆ ಪ್ರವೃತ್ತಿಯಾದ ಕಲಾ ಸೇವೆಗೆ ಮಾತ್ರ ಸದಾ ಮುಂದು


ಸಮಕಾಲೀನ  ಬಹುತೇಕ ಹವ್ಯಾಸಿ ನಾಟಕ ತಂಡಗಳಲ್ಲಿ ಅವಿಭಾಜ್ಯ ಅಂಗ.    ಸುಮಾರು ನೂರಾರು ಸಲ ರಂಗವೇರಿದರೂ ತಣಿಯದ ದಾಹ. ಕಿರುತೆರೆಯಲ್ಲೂ  ನಟನೆ. ಬೆಳ್ಳಿತೆರೆಯಲ್ಲೂ ಖ್ಯಾತ ನಾಮರ ಸಿನೆಮಾಗಳಲ್ಲಿ ,ಅದೂ ಕಲಾತ್ಮಕ ಚಿತ್ರಗಳಲ್ಲಿ  ಪಾತ್ರ ವಹಿಸುವ ಅವಕಾಶ. ಜೊತೆಗೆ ತಮ್ಮದೇ ಆದ ಕಲಾತಂಡದ ಸ್ಥಾಪನೆ. ಸೂರ್ಯ ಕಲಾವಿದರು ತಂಡಕ್ಕೆ ಪ್ರಭಾತ್‌ ಕಲಾವಿದರೇ ಸ್ಪೂರ್ತಿ ಎನ್ನಬಹುದು. ವಿಶೇಷವಾಗಿ ನೃತ್ಯ ನಾಟಕಗಳ ನಿರ್ಮಾಣ. ಅನೇಕ ನಾಟಕಗಳ ನಿರ್ದೇಶನ. ಅದರಿಂದಲೇ ಸಂಜಯ ಸೂರಿ ಎಂಬ ಹೆಸರು ರಂಗಭೂಮಿಯಲ್ಲಿ ಪ್ರಚಲಿತ. ಮದುವೆಯಾದ ನಂತರ  , ಮೂರು ಮಕ್ಕಳ ಸಂಸಾರ ಸಾಕುವ ಹೊಣೆ ಹಾಗಾಗಿ. ಆಗ ಸಿನೆಮಾ ಕೇಂದ್ರ ಮದ್ರಾಸಿಗೆ ಕರೆ ಬಂದರೂ ಹೋಗಲಾರದ ಸ್ಥಿತಿ. ಕಲಾರಾಧನೆಗೇನೂ ಕುಂದಿಲ್ಲ. ಬಸವನ ಗುಡಿಯ ಕಾರಂಜಿ ಆಂಜನೇಯ ದೇವಸ್ಥಾನದ ಸಂಕೀಣದಲ್ಲ್ಯಲಿರುವ  ಹಳೆಯ ಕಾಲದ ಛತ್ರದಲ್ಲಿನ ಮೂರುಕೋಣೆಯ ಮನೆಯೇ ಅವರ ರಂಗ ಕೇಂದ್ರ. ಅಲ್ಲಿರುವ ಮನೆ ಮುಂದಿನ ಬಯಲೇ ರಂಗಮಂದಿರ.ರಂಗತಾಲೀಮಿಗೂ  ಅಲ್ಲಿಯೇ  ಅವಕಾಶ.. ಒಂದು ರೀತಿಯ ಬಯಲು ರಂಗ ಮಂದಿರ. 
ಮೋಹಿನಿ ಭಸ್ಮಾಸುರ  ನೃತ್ಯ ನಾಟಕದಲ್ಲಿ


   ಕಲಾವಿದ  ಮುಖ್ಯ ಮಂತ್ರಿ ಚಂದ್ರು ಹೇಳುತಿದ್ದಂತೆ ಕಲಾರಂಗದಲ್ಲಿ ಯಶ ಗಳಿಸಲು ಯೋಗ ಮತ್ತು ಯೋಗ್ಯತೆ ಎರಡೂ ಬೇಕು. ಸೂರಿಗೆ ಮದಲನೆಯದು ಕನಿಷ್ಟ ಮತ್ತು ಎರಡನೆಯದು ಗರಿಷ್ಟ. ಹಣ ಗಳಿಕೆ ಹೇಳುವಂತಿಲ್ಲದಿದ್ದರೂ ಜನ ಗಳಿಕೆ ಅಪಾರ. ಎಲ್ಲ ಕಡೆ ಅಭಿಮಾನಿಗಳ ಮಹಾಪೂರ.
ಪ್ರಭಾತ್‌ ಕಲಾವಿದರೊಡನೆ ಇಪ್ಪತ್ತೈದು ವರ್ಷ ಒಡನಾಟ. ಬೆನಕ, ಸ್ಪಂದನ, ದರ್ಶನ ರಂಗಗಳಲ್ಲೂ ಸಕ್ರಿಯ. ನಂತರ ತಮ್ಮದೇ ಆದ ಸೂರ್ಯ ಕಲಾವಿದರು. ಅವರ ಉಸಿರು.   ಹೊಂದಿರುವ ತಂಡ   ನಾಟಕ ಮತ್ತು ನೃತ್ಯ ರೂಪಕಗಳ ನಿರ್ಮಾಣ. ಸಹಸ್ರಾರು ಪ್ರದರ್ಶನ ದೇಶ ವಿದೇಶಗಳಲ್ಲಿ ನೀಡಿರುವರು ಕನ್ನಡದ ಎಲ್ಲ ವಾಹಿನಿಗಳಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವರು. ಜೊತೆಗೆ  ಸಂಸ್ಕೃತ ಮತ್ತು ಹಿಂದಿ ಧಾರಾವಾಹಿಗಳಲ್ಲೂ ಮಿಂಚಿರುವರು.  ಸುಮಾರು ಚಲನ ಚಿತ್ರಗಳಲ್ಲಿ  ಅದರಲ್ಲೂ ೧೫ ಚಲನಚಿತ್ರಗಳಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತನಿರ್ದೇಶಕರಾದ ಕೆ. ಬಾಲಚಂದರ್‌ ಜಿ.ವಿ ಐಯರ್‌, ಗಿರೀಶ ಕರ್ನಾಡರು ಸೇರದಂತೆ ಖ್ಯಾತನಾಮ ನಿರ್ದೇಶಕರಿಗೆ ಬೇಕಾದ ನಟ. ಎಪ್ಪತ್ತೈದಕ್ಕೂ ಅಧಿಕ ಚಿತ್ರಗಳಲ್ಲಿ ಚಾರಿತ್ರ್ಯ ನಟನಾಗಿ ಕನ್ನಡದ ಡಾ. ರಾಜಕುಮಾರ್‌ ರಿಂದ ಹಿಡಿದು ಪುನೀತ್‌ರಾಜಕುಮಾರ್‌ ವರೆಗೆ  ಎಲ್ಲ ನಾಯಕ ರ ಚಿತ್ರಗಳಲ್ಲಿ ಸಹ ನಟ.
ಸಂಜಯ ಸೂರಿ
ಅನೇಕ ಬಾರಿ  ನಾಟಕದಲ್ಲಿನ  ಉತ್ತಮ ನಟನೆಗಾಗಿ ಪ್ರಶಸ್ತಿ ವಿಜೇತರು, ಕೆಂಪೇ ಗೌಡ ಮತ್ತು ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರ.. ಬಾಲ್ಯದಿಂದಲೂ ಗರಡಿಮನೆಯಲ್ಲಿ ಗಟ್ಟಿಯಾದ ದೇಹ. ಮಧ್ಯಮ ಆಕೃತಿ.ನೋಡಲು ಸುರೂಪಿ. ಸದಾ ಒಂದಲ್ಲ ಒಂದು ಕೆಲಸ.  ಜೀವನದ ಜಂಜಾಟದಲ್ಲಿ ಹಣ್ಣುಹಣ್ಣು . ಒಂದು ಕಣ್ಣಿನಲ್ಲಿ ದೃಷ್ದೋಟಿ ದೋಷ. .  ಜೊತೆಗೆ ವರ್ಣಾಂಧತೆ... ಪರಿಣಾಮ ರಂಗ ಚಟುವಟಿಕೆಗೆಗೆ . ಮೊದಲಿನಂತೆ ಓಡಾಟ  ಸಾ ಧ್ಯವಾಗದು.. ಆದರೂ ಕ್ರಿಯಾಶೀಲ. . ಆದರೆ ಸಮಾಜ ಮುಖಿ. ಹಲವಾರು ಚಟುವಟಿಕೆಗಳಲ್ಲಿ ಮಗ್ನ. ಆಧುನಿಕ ಮನೋಭಾವ. ಹಿರಿಯ ಮಗನು ವಿಧವೆಗೆ ಹೊಸ ಬಾಳು ನೀಡಲು ಮುಂದಾದಾಗ ಹೃದಯ ತುಂಬಿ ಹರಸಿದವರು.ಕಿರಿಯ ಮಗನ ಪ್ರೇಮ ವಿವಾಹಕ್ಕೂಆರ್ಶೀವಾದ. ಕಲಾವಿದೆ ಸೊಸೆಯ ಕಲಾಪಯಣದಲ್ಲೂ ಸಹಕಾರ. ಈಗ ಕಲಾ ಜ್ಯೋತಿಯನ್ನು ಮಗನ ಕೈಗೆ ನೀಡಿ ಆಗಾಗ ಮಾರ್ಗದರ್ಶನ ಮಾಡುತ್ತಾ ಖುಷಿಯಾಗಿರುವರು.
ಯುವ ಕಲಾವಿ ವಿಕ್ರಂ ಸೂರಿ

ವಿಕ್ರಂ ಸೂರಿ ತಂದೆಗೆ ತಕ್ಕ ಮಗ. ಬಾಲ್ಯದಲ್ಲೇ  ಕಲಾವಾತಾವರಣದಲ್ಲಿ ಬೆಳದವ. ಚಿಕ್ಕ ವಯಸ್ಸಿನಲ್ಲಿ ರಂಗವೇರಿದ ಪ್ರತಿಭಾನ್ವಿತ. ಪ್ರಭಾತ್‌ ಕಲಾವಿದರ ಗರಡಿಯಲ್ಲಿ ಪಳಗಿದವ. ಭರತನಾಟ್ಯ ಮತ್ತು ಕಥಕ್‌ ತರಬೇತಿ   ಪಡೆದು ನೃತ್ಯ ಪಟುವಾಗಿಯೂ ಹೆಸರು ಮಾಡಿರುವನು.  ಸೂರ್ಯ ಕಲಾವಿದರ ಸೂತ್ರ ಧಾರಿ. ನಾಟಕ ರಂಗದಲ್ಲಿ ನಟನಾಗಿ ನಿರ್ದೇಶಕನಾಗಿ ಅನುಭವ.ಕಿರು ತೆರೆಯಲ್ಲೂ ಕಿರಿಯವಯಸ್ಸಿನಲ್ಲಿಯೇ ಪ್ರವೇಶ ಮಾಡಿ ಟಿ. ಎನ್‌ಸೀತಾರಾಮ್‌ರ ಮನ್ವಂತರ ದಿಂದ ಮನೆ ಮಾತಾದ ಕಲಾವಿದ. ಪಾಪಾ ಪಾಂಡುವಿನಲ್ಲೂ ಛಾಪು ಮೂಡಿಸಿ ಪ್ರೇಕ್ಷಕರಿಗೆ ಕಚಗುಳಿ ಇಟ್ಟವರು. ಹೀಗೆ ಅನೇಕ ಧಾರಾವಾಹಿಗಳಲ್ಲಿ ಭಾಗವಹಿಸಿರುವರು. ಜೊತೆಗೆ ಸಿನೆಮಾರಂಗದಲ್ಲೂ ಪ್ರವೇಶ ದೊರಕಿದೆ.ಹಲವಾರು ಚತ್ರಗಳಲ್ಲಿ ಹಾಸ್ಯ ನಟನಾಗಿ ತಮ್ಮದೇ ಆದ ಸ್ಥಾನ ಕಂಡು ಕೊಳ್ಳುತ್ತಿರುವರು ಇವರ ನೃತ್ಯ ನಾಟಕಗಳಲ್ಲಿ ಸಹಕಲಾವಿದೆಯಾದ , ನಾಟಕಗಳಲ್ಲಿ  ನಾಯಕಿಯಾದ ನಮಿತಾ  ಜೀವನ ಸಂಗಾತಿ. ಸಪ್ತ ಪದಿ ತುಳಿದ ನಮಿತಾ ಜೀವನ, ನಾಟಕ, ನೃತ್ಯಗಳಲ್ಲೂ ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಿರುವುದರಿಂದ ಸಂಗಾತಿಗೆ ಕಲಾರಾಧನೆಗೆ  ಇನ್ನಿಲ್ಲದ ಉತ್ತೇಜನ. ಜೊತೆ ಜೊತೆಯಾಗಿ ಯಶಸ್ಸಿನತ್ತ ದಾಪುಗಾಲು

ನಮಿತಾ ರಾವ್ ಹುಟ್ಟಿದ ಮನೆ  ಮತ್ತು ಮೆಟ್ಟಿದ ಮನೆ ಎರಡರಲ್ಲೂ ಕಲಾಸೇವೆಗೆ ಅವಕಾಶ ಪಡೆದವರು.ಭರತ ನಾಟ್ಯ ಪ್ರವೀಣೆ. ಸಂಗೀತದಲ್ಲೂ ಗತಿ ಉಂಟು. ಭಾವ ಪೂರ್ಣ ಅಭಿನಯ ನೀಡಬಲ್ಲ ನಟಿ ದೇಶವಿದೇಶದಲ್ಲಿ ಪ್ರದರ್ಶನ ನೀಡಿರುವ  ನೃತ್ಯ ಗಾತಿ . ಕಿರುತೆರೆಯಲ್ಲೂ ಮಿಂಚಿದವರು.ಹಲವಾರು ಧಾರಾವಾಹಿಗಳಲ್ಲೂ ನಟನೆ.
ಉದಯೋನ್ಮುಖ ತಾರೆ ನಮಿತಾ ರಾವ್‌


 ಸಿಲ್ಲಿಲಲ್ಲಿ ಧರಾವಾಹಿಯಲ್ಲಿ ಪ್ರೇಕ್ಷಕರು ಹೊಟ್ಟೆ ಹುಣ್ಣಾವಂತೆ ನಗಿಸಿ ಹಾಸ್ಯ ಪಾತ್ರದಲ್ಲಿ ಸೈ   ಎನಿಸಿ ಕೊಂಡ ಅಭಿನೇತ್ರಿ.   .ಶಾಸ್ತ್ರೀಯ ನೃತ್ಯ ಪರಿಣಿತೆ. ಅನೇಕ ನೃತ್ಯ ನಾಟಕಗಲಲ್ಲಿ ಹೆಸರು ಮಾಡಿರುವರು.ಪತಿಯೊಂದಿಗಿನ ಮೋಹಿನಿ ಭಸ್ಮಾಸುರ ಮೊದಲಾದ ಹಲವು ನೃತ್ಯ ನಾಟಕಗಳಿಂದ ಕಲಾ ರಂಗದಲ್ಲಿ ಹೆಸರು ಪಡೆದ ಜೋಡಿ. ದೇಶ ವಿದೇಶದಲ್ಲೂ ಪ್ರದರ್ಶನ ನೀಡಿರುವರು. ಈಗ ಸಿನೆಮಾರಂಗದಲ್ಲೂ ಪ್ರವೇಶ ದೊರೆತಿದೆ. ಇತ್ಕೆಂತೀಚಗೆ ಅವರ ಅಭಿನಯದ  ಚಿತ್ರ ಮಂದಿರದಲ್ಲಿ ಎಂಬ ಸಿನೆಮಾ  ಬೆಂಗಳೂರಿನಲ್ಲಿ ನಡೆದ ಏಳನೇ ಚಲನಚಿತ್ರೋತ್ಸವದಲ್ಲಿ  ಪ್ರದರ್ಶಿಸಿತವಾಗಿ  ಜನ ಮೆಚ್ಚುಗೆ ಗಳಿಸಿತು.ಕೆಂಪೇ ಗೌಡ ಪ್ರಶಸ್ತಿಗೂ ಪಾತ್ರಳಾಗಿರುವ ಕಲಾವಿದೆ. ಈಗ ಸೂರ್ಯಕಲಾತಂಡ  ಚಟುವಟಿಕೆಗಳಲ್ಲಿ ಪ್ರಧಾನ ಪಾತ್ರಧಾರಿ. ಕಲಾಕಟುಂಬದ ಪರಂಪರೆಯ ಮುಂದುವರಿಸಿರುವ ಯುವ ಕಲಾವಿದೆ.
.





Friday, December 5, 2014

ಶಾಸನ ಸಾಹಿತ್ಯ ಪ್ರಶಸ್ತಿ ವಿಜೇತರಿಗೆ ಅಭಿನಂದನೆ

  ಕನಾಟಕ ಇತಿಹಾಸ ಅಕಾದಮಿಗೆ ಶಾಸನ ಸಾಹಿತ್ಯ ಪ್ರಶಸ್ತಿಗಳ ಸುರಿ ಮಳೆ
 ಶಾನಗಳು ಇತಿಹಾಸದ ಅಡಿಗಲ್ಲುಗಳು. ಕರ್ನಾಟಕದಲ್ಲಿ  ಏಕೆ ? ಭಾರತದಲ್ಲಿಯೇ ಒಂದೇ ಕಡೆ ಶಾಸನಗಳು ಇಷ್ಟು ಅಧಿಕ ಸಂಖ್ಯೆಯಲ್ಲಿರುವುದು. ಶ್ರವಣ ಬೆಳಗೊಳದಲ್ಲಿ ಮಾತ್ರ. . ಅಲ್ಲಿನ ಚಂದ್ರಗಿರಿ ಅಥವ ಚಿಕ್ಕಬೆಟ್ಟದಲ್ಲಿ ಐದುನೂರಕ್ಕೂ ಮಿಕ್ಕಿ ಶಿಲಾಶಾಸನಗಳಿವೆ. ಶಾಸನ ಅಭ್ಯಾಸಿಗಳಿಗೆ ಚಂದ್ರಗಿರಿ ಜ್ಞಾನದ ಆಗರ . ಶ್ರವಣ ಬೆಳಗೊಳ  ಜೈನಕಾಶಿ ಎಂದು ಪ್ರಖ್ಯಾತ. ಜೊತೆಗ ಶಾಸನ ಕಾಶಿ ಎನ್ನಬಹುದು.  ಎರಡು ಸಹಸ್ರಮಾನಕ್ಕೂ ಪುರಾತನವಾದ ಈ ಕ್ಷೇತ್ರದಲ್ಲಿನ  ಬಾಹುಬಲಿಯ ಮಹಾಮಸ್ತಕಾಭಿಷೇಕ ದಂತೆಹನ್ನೆರಡುವರ್ಷಕೊಮ್ಮೆ  ಚಂದ್ರಗಿರಿ ಉತ್ಸವವನ್ನೂ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಶಾಸನ ಕ್ಷೇತ್ರದಲ್ಲಿ ಗಣನೀಯ ಸಾಧಕರಿಗೆ ಶಾಸನ ಸಾಹಿತ್ಯ ಪ್ರಶಸ್ತಿಯನ್ನು ನೀಡಲು ಪೂಜ್ಯ ಚಾರು ಕೀರ್ತಿ ಭಟ್ಟಾರಕಸ್ವಾಮೀಜಿಯವರು  ನಿರ್ಧರಿಸಿರುವುರು . ಈ ಬಾರಿಯ  ಶಾಸನ ಕ್ಷೇತ್ರದಲ್ಲಿನ  ಹನ್ನೊಂದು ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ . ಕರ್ನಾಟಕ ಸಾಹಿತ್ಯ ಪರಿಷತ್ತಿನ ಅದ್ಯಕ್ಷರೂ ಸೇರಿದಂತೆ ೯ ಸದಸಸ್ಯರಿಗೆ  ಪ್ರಶಸ್ತಿಗಳ ಸುರಿಮಳೆಯಾಗಿದೆ. ಹನ್ನೊಂದರಲ್ಲಿ ಹತ್ತು ಪ್ರಶಸ್ತಿಗಳು ಅವರಿಗೇ ಸಂದಿವೆ.ಅವರು ಇತಿಹಾಸ ಅಕದಮಿಯ ಗೌರವ ಪತಾಕೆ ಎತ್ತಿ ಹಿಡಿದಿರುವರು. 


                                           


                     ಹಾರ್ಧಿಕ ಅಭಿನಂದನೆಗಳು
                                      
ಎಚ್‌.ಶೇಷಗಿರಿರಾವ್
 ನಿರ್ದೇಶಕರು ಹಸ್ತಪ್ರತಿ ಅಭಿಯಾನ
                                    
  





ಕಾರ್ಯಕ್ರಮದ ವಿವರ ಹೀಗಿದೆ






                      






Thursday, December 4, 2014

ಆಳ್ವಾಸ್‌ ನುಡಿ ಸಿರಿ.





ಕನ್ನಡದ ಕಮನೀಯ ಉತ್ಸವ – ಆಳ್ವಾಸ್‌ ನುಡಿ ಸಿರಿ.
ಈ ಸಲ ಹೆಗ್ಗೋಡಿನ ನೀನಾಸಂ ಸಾಂಸ್ಕೃತಿಕ ಉತ್ಸವಕ್ಕೆ ಎಂಟು ದಿನಗಳ ಹೋದಾಗ ಅಲ್ಲಿನ ಬೆಳಗಿನಿಂದ ಸಂಜೆಯ ವರೆಗಿನ ಸಾಹಿತ್ಯ ಸಂಸ್ಕೃತಿ, ನಾಟಕ, ಉಪನ್ಯಾಸ ಮತ್ತು ವೈಚಾರಿಕ ವಾತಾವರಣ ತುಂಬ ಹಿಡಿಸಿತು. ನೂರಾರು ಜನರಿಗೆ ಹಳ್ಳಿಗಾಡಿನಲ್ಲಿ ಅವರು ಮಾಡಿದ ಅಚ್ಚು ಕಟ್ಟಾದ ವ್ಯವಸ್ಥೆ  ಅಚ್ಚರಿತಂದಿತ್ತು.  
ಅಲ್ಲಿಂದ ಕೊನೆಯ ದಿನ ಹೊರಡುವಾಗ ಗದಗಿನ ಗೆಳೆಯರೊಬ್ಬರು ಹೇಳಿದರು, “ ಸಾರ್‌ ನೀವು ಮುಂದಿನ ತಿಂಗಳು ಮೂಡುಬಿದ್ರೆಯಲ್ಲಿನ ನುಡಿ ಸಿರಿಗೆ ಹೋಗಲೇ ಬೇಕು “ ಎಂದು ಒತ್ತಾಯ ಮಾಡಿದರು ಅಲ್ಲದೆ ಅರ್ಜಿಯಂದರ ಪ್ರತಿಯನ್ನೂ ಕೊಟ್ಟರು. ನೋಡಿದಾಗ ಗೊತ್ತಾಯಿತು ಅದು ಬಹುತೇಕ ಶುಲ್ಕರಹಿತ ಕಾರ್ಯಕ್ರಮಎಂದು. ನಾಮ ಮಾತ್ರಕ್ಕೆ ೧೦೦ ಶುಲ್ಕ.. ಮನಿಆರ್ಡರ್‌ ಮಾಡಿದೆ.ನಂತರ  ಒಂದೇ ವಾರದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಂದಿತು. ಸರ್ವಾದ್ಯಕ್ಷರಾಗಿ ಡಾ. ಸಿದ್ದಲಿಂಗಯ್ಯ ಮತ್ತು ಉದ್ಘಾಟನೆ  ನಾ .ಡಿಸೋಜರದ್ದು.





ಶಿವಮೊಗ್ಗದವರೆಗೆ ರೈಲಿನಲ್ಲಿ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಮೂಡುಬಿದ್ರೆ ಮುಟ್ಟಿದೆವು ಊರು ಮೂರು ಮೈಲು ದೂರದಲ್ಲಿರುವಂತೆಯೇ ಪೋಸ್ಟರ್‌ಗಳು ಬ್ಯಾನರ್‌ಗಳು ಎಲ್ಲ ಕಡೆರಾರಾಜಿಸುತಿದ್ದವು.ಮೂಡುಬಿದ್ರೆಯಿಂದ ಮೂರು  ಕಿಮೀ ದೂರದಲ್ಲಿನ ವಿದ್ಯಾ ಗಿರಿಯಲ್ಲಿ ಕಾರ್ಯಕ್ರಮ. ವಿದ್ಯಾಗಿರಿ ಎಂಬ ಹೆಸರು ಅನ್ವರ್ಥಕ.ಅಲ್ಲಿ ಇರುವುದು ಬರೀ ಆಳ್ವಾ ಶಿಕ್ಷಣ ಸಂಸ್ಥೆಗಳ ಸಮೂಹ. ಅದು ಸರಿ ಸುಮಾರು ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡುವ ಕೇಂದ್ರ ಶಿಶುವಿಹಾರದಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ಎಲ್ಲ ಹಂತದ ಶಿಕ್ಷಣ ಜೊತೆಗೆ ವೃತ್ತಿ ಪರ ಶಿಕ್ಷಣವೂ ಇದೆ, ಒಂದು ರೀತಿಯಲ್ಲ ವಿಶ್ವ ವಿದ್ಯಾಲಯವನ್ನೇ ಹೋಲುತಿತ್ತು ಹೋದೊಡನೆ ವಸತಿ ವ್ಯವಸ್ಥೆಯಾಯಿತು. ಹಾಸ್ಟೆಲ್‌ಗಳಲ್ಲಿ ಅತಿಥಿಗಳಿಗೆ ವಸತಿ. 
 ಅದಕ್ಕೆಂದೆ ತಮ್ಮ ಸಂಸ್ಥೆಯ ೨೦ ಸಾವಿರ ವಿದ್ಯಾರ್ಥಿಗಳಿಗೆ ರಜೆ. ಅವರ ಜಾಗದಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸ್ವಯಂ ಸೇವಕರಾಗಿ ಎಲ್ಲ ಕಾರ್ಯವನ್ನು ಅಚ್ಚು ಕಟ್ಟಾಗಿ ಮಾಡುತಿದ್ದರು. ಒಂದು ಕೋಣೆಯಲ್ಲಿ ನಾಲ್ವರು. ನಾವು ಮೂವರು  ನಮಗೆ ಒಂದು ಕೋಣೆ ಕೊಡಲಾಯಿತು.ಅಲ್ಲಿಂದ ಕಾರ್ಯಕ್ರಮದ ಸ್ಥಳಕ್ಕೆ ಹೋಗಲು ಅವರದೇ ಬಸ್ಸುಗಳು.
ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ನಡೆಸಲಾಗುತಿತ್ತು. ಒಟ್ಟು ಐದು ವೇದಿಕೆಗಳು.  ರತ್ನಾಕರವರ್ಣೀ ಹೆಸರಿನ ಮುಖ್ಯ ವೇದಿಕೆ. ಉದ್ಘಾಟನೆ, ಸಮಾರೋಪ, ಕವಿನಮನ , ವಿಚಾರ ಗೋಷ್ಠಿಗಳಿಗೆ ಅದೇ ತಾಣ. ಸುಮಾರು ೨೦ ಸಾವಿರ ಜನ ಕೂಡ ಬಹುದಾದ ಮಳೆ ಗಾಳಿಗೆ ಜಗ್ಗದ ಸಭಾ ಮಂಟಪ. ಅದರ ಪಕ್ಕದಲ್ಲೇ ಕೃಷಿ ಮೇಳ. ಹಾಗೂ ಕರಕುಶಲ ಕಲಾ ವಸ್ತು ಸಂಗ್ರಹಾಲಯ. ಅದರ ಜೊತೆನೃತ್ಯ, ಯಕ್ಷಗಾನ ಮತ್ತು ತಾಳಮದ್ದಳೆಗೆ  ಮೀಸಲಾದ ಕು.ಶಿ ಹರಿದಾಸ ಭಟ್ಟ ವೇದಿಕೆ,ಕೆ.ವಿ. ಸುಬ್ಬಣ್ಣ ಬಯಲು ಮಂದಿರ ಪ್ರದರ್ಶನ ಕಲೆಗೆ ಮೀಸಲಾದುದು ಮತ್ತು ಲಘು ಸಂಗೀತಕ್ಕೆ ಬಿ.ವಿ. ಆಚಾರ್ಯ ಸಭಾಂಗಣ.ಅದಕ್ಕೆ ಹೊಂದಿಕೊಂಡಂತೆ ಆಹಾರ ಮಳಿಗೆಗಳು
ಸಮ್ಮೇಳನದ ಮುಖ್ಯ ಪರಿಕಲ್ಪನೆ- ವರ್ತಮಾದ ತಲ್ಲಣಗಳು. ಈ ಉದ್ದೇಶದ ಸುತ್ತ ಹಲವು ಗೋಷ್ಠಿಗಳು .ರಂಗಭೂಮಿ , ಕೃಷಿ ಪರಿಸರ ,ಭಾಷೆ ಮತ್ತು ಶಿಕ್ಷಣ,ಕಲೆ,ಮಾಧ್ಯಮ ರಾಜಕಾರಣ, ,ಸಾಹಿತ್ಯ ಸ್ತ್ರೀಸಂವೇದನೆ ಮತ್ತು ಆಧ್ಯಾತ್ಮ. ಇವುಗಳಲ್ಲಿ ಆಯಾ ರಂಗದ ಉದ್ದಾಮರಿಂದ ವಿಚಾರ ಮಂಡನೆ. ಜೊತೆಗೆ ವಿಶೇಷ ಉಪನ್ಯಾಸಗಳು ಪ್ರೇಕ್ಷಕರಿಗೆ ಚಿಂತನೆಗೆ ಹಚ್ಚಿದವು. ವಿಶೇಷವೆಂದರೆ ಸಾಹಿತ್ಯ ಸಮ್ಮೇಳನದಂತೆ ಇಲ್ಲ ವಿಚಾರ ಗೋಷ್ಠಿಗಳು ಸಭಿಕರ ಕೊರತೆಯಿಂದ ಭಣಭಣ ಗುಟ್ಟುತ್ತಲಿರಲಿಲ್ಲ.
ಕವಿ ಸಮಯ ಮತ್ತು ಕವಿನಮನ  ಎಂಬ ೨೦ ನಿಮಿಷದ ಕಿರು ಸಾಹಿತ್ಯಕಾರ್ಯಕ್ರಮ ಪ್ರತಿ ಗೋಷ್ಠಿಗಳ ನಡುವೆ ಅದರಲ್ಲಿ ಸುಬ್ಬು ಹೊಲೆಯಾರ್‌ ರಘುನಾಥ ಚ.ಹ.,ಬಿ.ಆರ್‌ಲಕ್ಷ್ಮಣ ರಾವ್, ರವಿಶಂಕರ ಒಡಂಬಟ್ಟು.  ಪ್ರೊ.ಎಚ್. ಎಸ್‌ ಶಿವಪ್ರಕಾಶ ಅವರ   ಕಾವ್ಯ ಮತ್ತು ಕವಿ ಪರಿಚಯ ಮಾಡಿ ಸನ್ಮಾನಿಸಲಾಯಿತು ಹೊಸ ಮತ್ತು ಹಿರಿಯ ಕವಿಗಳಿಗೆ ನೀಡಿದ ಸಮಾನ ಅವಕಾಶ ಜನಮನ ಗೆದ್ದಿತು.
ಕೊನೆಯ ದಿನ ಹನ್ನೊಂದನೆಯ ವರ್ಷದ ನೆನಪಿಗೆ ಹನ್ನೊಂದು ಜನ ಸಾಧಕರಿಗೆ ಸನ್ಮಾನ ಮಾಡಲಾಯಿತು ಕನ್ನಡ ನಾಡಿನ ವಿವಧ ರಂಗಗಳ ಸಾಧಕರು ಸನ್ಮಾನಕ್ಕೆ ಪಾತ್ರರಾದರು
 ಇನ್ನು ಸಭಾಂಗಣಗಳ ಅಲಂಕರಣ, ಕರಾವಳಿ ಕಲೆಗಳ ಸಂಗಮ. ಚಂಡೆ, ಡೋಲು, ಜಾಪದ ಕಲೆಗಳ ಪ್ರದರ್ಶನವಂತೂ ನಾದಮಯ ವಾತಾವರಣವನ್ನೇ ನಿರ್ಮಿಸುವಲ್ಲಿ ಯಶಸ್ವಿಯಾದವು .. ಇನ್ನು ತುಳು ಸಮ್ಮೇಳನ ದ ಸಮಯದಲ್ಲಿ ತುಳುನಾಡಿನ ಜಾನಪದ ವೈಭವ ಅತ್ಯಂತ ಸೊಗಸಾಗಿತ್ತು  ಭೂತಗಳು, ತಟ್ಟಿರಾಯರು, ಕೋಲಾಟ, ಚಂಡೆ, ಮದ್ದಳೆ ಒಂದೆ ಎರಡೇ ನೋಡಿಯೇ  ಅರಿಯ ಬೇಕು ಅವುಗಳ ವೈವಿದ್ಯ.. ಒಟ್ಟು ೭೦ ವಿಚಾರ ಗೋಷ್ಟಿಗಳು ಮತ್ತು ಸಾಂಸ್ಕೃತಿಕ  ಕಾರ್ಯಕ್ರಮಗಳು ಮೂರುದಿನದಲ್ಲಿ ಯಾವುದೇ ಗಡಿಬಿಡಿಇಲ್ಲದೆ ನಡೆದವೆಂದರೆ ವ್ಯವಸ್ಥಾಪಕರ ದೂರ ದೃಷ್ಟಿ ಮತ್ತುಸಂಘಟನಾ ಚತುರೆಗೆ ಸಲಾಂ  ಎನ್ನಲೇ ಬೇಕು ಉತ್ತರ ಕರ್ನಾಟಕದ ಗೀ ಗೀ ಪದಗಳು  ಮತ್ತು  ಮಲ್ಲಕಂಬಗಳು ಬಯಲಿನಲ್ಲಿ ನಡೆದರೂ ಜನರು ನಿಂತು ನೋಡುತಿದ್ದರು..
 ಇನ್ನು ಊಟೋಪಚಾರ. ಹಿಂದಿನ ಕಾಲದಲ್ಲಿ ಗಂಡಿನ ಬೀಗರಿಗೆ ಕೊಡುತಿದ್ದ ಗೌರವಾನ್ವಿತ ಆತಿಥ್ಯದ ನೆನಪನ್ನು ಹಳಬರಿಗೆ  ನೆನಪಿಸಿತು. ಇಲ್ಲಿ  ಊಟದ ಚೀಟಿ ಇಲ್ಲ, ಪಾಸು ಇಲ್ಲ, ನೀವು ಯಾರು ಎಂದು ವಿಚಾಣೆ  ಇಲ್ಲ. ಹಸಿದು ಬಂದವರಿಗೆಲ್ಲ ಎರಡನೆಯ ಮಾತಿಲ್ಲದೆ ಆಹಾರ. ಅದೂಹತ್ತಾರು ಕೌಂಟರ್‌ಗಳಲ್ಲಿ. ಸ್ವಯಂ ಸೇವಕರು ನಗು ಮುಖದಿಂದ ನೀಡುತಿದ್ದರು 
ಯಾವುದು ಎಷ್ಟು ಬೇಕೋ ಅಷ್ಟು ತಿನ್ನಬಹುದು. ಯಾವುದೇ ಮಿತಿಇಲ್ಲ.ಮೂರು ತರಹದ ತಿಂಡಿ, ಕುಡಿಯಲು  ಕಾಫಿ . ಟೀ ಮತ್ತು ಕಷಾಯ . ಬಹುಶಃ ಈ ರೀತಿಯ ಧಾರಳತನ, ಅತಿಥಿ ದೇವೋಭವ ಎನ್ನುವ ಕಳಕಳಿ ಯಾವುದೇ ಸಮ್ಮೇಳನದಲ್ಲಿ ಕಂಡಿಲ್ಲ. ಜೊತೆಗ ಸಮ್ಮೇಳನದ ಹಿಂದಿನ ದಿನ ಮತ್ತು ಮಾರನೆಯದಿವೂ ಊಟ , ತಿಂಡಿ. ..
ಇನ್ನು ಅವರು ಸ್ವಚ್ಛತೆಗೆ ನೀಡಿದ ಆದ್ಯತೆಯಂತೂ ಅತೀವ ಅಚ್ಚರಿ ದಾಯ೭ಕ. ಆಹಾರದ ವಿತರಣೆಯಾಗುತಿದ್ದಮತೆ ಅಡಕೆ ಹಳೇಯ ತಟ್ಟೆ , ಪ್ಲಾಸ್ಟಿಕ್‌ಲೋಟಗಳು ತತಕ್ಷಣ ವಿಲೆ ಆಗುತಿದ್ದವುಇನ್ನು ಅಹಾರ  ಪಡೆಯುವಲ್ಲಿಯೂ ಎಲ್ಲೂ ಗಡಿ ಬಿಡಿ ಗೊಂದಲ ಇಲ್ಲ. ಸಾಲಿನಲ್ಲಿ ನಿಂತುಪಡೆಯಲು ಐದು ನಿಮಿಷ ಸಾಕು ಆವ್ಯವಸ್ಥೆಯನ್ನ ನೋಡಿ ಜನರೂ ತಮ್ಮಿಂದ ತಾವೆ ಶುಚಿತ್ವ ಕಾಪಡುತಿದ್ದರು ಏನಿದ್ದರೂ ಅಲ್ಲಲ್ಲಿ ಇರಿಸಿದ್ದ ಕಸದ ಡ್ರಮ್‌ಗಳಿಗೆ ಹೋಗಿ ಹಾಕುತ್ತಿರುವುದು ಸಾಮಾನ್ಯ  ದೃಶ್ಯವಾಗಿತ್ತು ಅವು ತಂಬಿದ ತಕ್ಷಣವೆ  ಹೊರಗೆ ನಿಲ್ಲಿಸಿದ್ದ ಲಾರಿಗೆ ಸಾಗಿಸಲಾಗುತಿತ್ತು. ಕಸವಂತೂ ಕಣ್ಣೆ ಗೆ ಬೀಳುತ್ತಲೇ ಇರಲಿಲ್ಲ.
ಇದು ಒಂದುರೀತಿಯ ಹಾಲಿಡೆ ಕಾರ್ಯಕ್ರಮವಾಗಿತ್ತು ಬಹಳ ಜನ ಸಂಸಾರ ಸಮೇತವಾಗಿ ಬಂದಿದ್ದರು, ಜಾತಿ ಮತ, ಪ್ರಾದೇಶಿಕ ಬೇಧವಿಲ್ಲದೆ ಜನ ಸೇರಿದ್ದರು.ಕೊನಯ ದಿನ ಭಾನುವಾರ.ಬಹತೇಕ ಪ್ರತಿನಿಧಿಗಳೂ ಊರಿಗೆ ಹೊರಟರು. ಆದರೂ ಜನ ಜಂಗುಳಿಗೆ ಕಡಿಮೆ ಇಲ್ಲ. ಅದರಲ್ಲೈ ಅಲ್ಪಸಂಕ್ಯಾತ ಮಹಿಳೆಯರೂ ಬಹು ಸಂಖ್ಯೆಯಲ್ಲಿ ಬಂದು ಸಾಮಸ್ಕೃತಿ ಕಾರ್ಯ ಕ್ರಮಗಳ ಸೊಬಗು ಸವಿದು  ,ಸಾಲಾಗಿ ನಿಂತು ಆಕಾರ ಪಡೆಯುತಿದ್ದ ನೋಟ ಕೋಮು ಸಾಮರಸ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು.

ಅಲ್ಲಿನ ವಿಶೇಷತೆ ಎಂದರೆ ನಾವು ಇಳಿದುಕೊಂಡ ಯಾವುದೇ ಕೋಣೆಗೂ ಬೀಗ ಹಾಕುವ ಅಗತ್ಯವಿರಲಿಲ್ಲ. ಬರಿ ಬಾಗಿಲುಮುಂದು ಮಾಡಿ ಚಿಲಕಹಾಕಿ ಬಂದರೂ ಆಯಿತು. ಯಾವುದೇ ವಸ್ತುವು ಕಾಣೆಯಾದ ದೂರು ಇರಲಿಲ್ಲ. ಇದರ ಜೊತೆಗೆ ಕೋಣೆಗಳಿಗೆ ಒಳಗೆ ಚಿಲಕವೂ ಇರಲಿಲ್ಲ. ಕಾರಣ ಬಾಗಿಲು ಹಾಕಿಕೊಂಡು ಮುಚ್ಚಿದ ಕೋಣೆಯಲ್ಲಿ ನಿಷಿದ್ದ ಕಾರ್ಯ ಜರುಗ ಬಾರದೆಂಬುದಕ್ಕೆ ಅದು ಮುನ್ನೆಚ್ಚರಿಕೆಯಾಗಿರ ಬಹುದು. ಎಲ್ಲವೂ ಸ್ವಯಂ ನಿಯಂತ್ರಿತ . ಶಾಂತಿ ಮತ್ತು ಶಿಸ್ತು ನೆಲಸಲು ಕಾರಣ ಅಲ್ಲಿನ ಸುವ್ಯವಸ್ಥೆಯೇ ಕಾರಣ ಎನ್ನವಹುದು .ಅಲ್ಲಿ ವಿದ್ಯಾರ್ಥಿ ನಿಲಯದ ವಿಶೇಷವೆಂದರೆ ಅಲ್ಲಿನ ವಿದ್ಯಾರ್ಥಿಗಳು  ಮೊಬೈಲ್‌ ಮತ್ತು ಸಂಗೀತೋಪಕರಣಗಳನ್ನು  ಆವರಣದೊಳಗೆ ಬಳಸುವ ಹಾಗಿಲ್ಲ. ಅವರ ಅಧ್ಯಯನ ಮತ್ತು ಚಲನವಲನವೂ ನಿಯಮಬದ್ದ.. ಒಂದುರೀತಿಯಲ್ಲಿ ಹಿಂದಿನ ಗುರುಕುಲದ ರೀತಿ. ಅದಕ್ಕೇ ಕಾರಣ ವಿರಬಹುದು ಶಿಕ್ಷಣ ಗುಣ ಮಟ್ಟವೂ ಉತ್ತಮವಾಗಿದೆ.


ಇಷ್ಟು ಉತ್ಕೃಷ್ಟ ವ್ಯವಸ್ಥೆಗೆ ಕಾರಣ ಆಳ್ವಾ ಶಿಕ್ಷಣ ಸಂಸ್ಥೆಗಳಸ್ಥಾಪಕ  ಡಾ. ಮೋಹನ ಆಳ್ವ. ಅವರು ಮೂಲತಃ ಆಯುರ್ವೇದ ವೈದ್ಯರು. ಅದಕ್ಕೆ ಆಯುರ್ವೇಧ ಕಾಲೇಜು, ಔಷಧಿ ತಯಾರಿ, ಚಿಕಿತ್ಸೆ ,ಯೋಗ,, ಮೂಲಿಕಾವನ ಹೀಗೆ ಭಾರತೀಯ ವೈದ್ಯ ಪದ್ದತಿಗೆ ಪೂರಕವಾದ ಎಲ್ಲ ಕಾರ್ಯಗಳೂ ಯಶಸ್ವಿಯಾಗಿ ನಡೆದಿವೆ,ಈಗೊಂದು ದಶಕದ ಹಿಂದೆ ನುಡಿಸಿರಿಯ ಕನಸು ಕಂಡರು. ಜೊತೆಗೆ ಆಳ್ವ ವಿರಾಸತ್‌ ಎಂಬ ಉತ್ಸವವನ್ನೂ ಹಮ್ಮಿಕೊಂಡಿದ್ದಾರೆ.ಕೋಟಿ ಕೋಟಿ ವೆಚ್ಚವಾದರೂ ತಾವೇ ಭರಿಸುತ್ತಾರೆ. ಇವಲ್ಲಕ್ಕೂ ಒತ್ತಾಸೆ ಡಾ. ವೀರೇಂದ್ರ ಹೆಗಡೆಯವರ ಆಶೀರ್ವಾದ, ಗೆಳೆಯ ಅಮರನಾಥ ಸೆಟ್ಟರ ಒತ್ತಾಸೆ ನಾ. ದಾಮೋದರ ಶೆಟ್ಟರ ಸಾಹಿತ್ಯಿಕ ಸಲಹೆ. ಮತ್ತು ತುಳುನಾಡಿನ ಘಟಾನು ಘಟಿಗಳ ಕರಾವಳಿ ಗೆಳೆಯರದು.. ಇಲ್ಲಿ ರಾಜಕೀಯಕ್ಕೆ ಎಡೆಇಲ್ಲ. ಸಾಹಿತ್ಯ, ಸಂಸ್ಕೃತಿ ಮತ್ತು ನಾಡಿನ ಹಿರಿಮೆಯಲ್ಲಿ ಗೌರವವಿರುವರಿಗೆ ಮಾತ್ರ ಅವಕಾಶ.ಹಣಕ್ಕಾಗಿ ಸರ್ಕಾರದ ನೆರವು ಬೇಡುವುದಿಲ್ಲ. ದಾನಿಗಳೆದರು ಕೈ ಚಾಚುವುದು ಇಲ್ಲ. . ಒಂದು ಖಾಸಗಿ ವಿದ್ಯಾ ಸಂಸ್ಥೆಯು ಈ ರೀತಿಯ ರಾಷ್ಟ್ರಮಟ್ಟ ದ  ಸಮ್ಮೇಳನವನ್ನು ಇಷ್ಟು ಅದ್ದೂರಿಯಾಗಿ ಸುವ್ಯವಸ್ಥಿತವಾಗಿ ನಡೆಸುವುದು ಇತಿಹಾಸದಲ್ಲೇ ಕಂಡಿಲ್ಲ ಕೇಳಿಲ್ಲ . ಇಷ್ಟಾದರೂ ಅಹಂಕಾರವಿಲ್ಲ , ವೈಯುಕ್ತಿಕ ಪ್ರಚಾರದ ಹಂಬಲವಿಲ್ಲ, ಅಷ್ಟೇ ಏಕೆ ಹಲವಾರು ವರ್ಷದಿಂದ  ನುಡಿ ಸಿರಿ ಉತ್ಸವದ ಸಮಯದಲ್ಲಿ  ತಮ್ಮ ಸಂಸ್ಥೆಗಳ ಮತ್ತು ವಿವಿಧ ಕೋರ್ಸಗಳ  ಮಾಹಿತಿ ನೀಡಲು ತೆರೆಯುತಿದ್ದ  ಕೌಂಟರ್‌ ಕೂಡಾ ಈ ವರ್ಷದಿಂದ  ಇಲ್ಲವೇ ಇಲ್ಲ. ನಮ್ಮಲ್ಲಿ  ಬೃಹತ್‌ ಶಿಕ್ಷಣ ಸಂಸ್ಥೆಗಳು  ಇದೇ ಮಾದರಿಯನ್ನು ಅನುಸರಿಸಿದರೆ ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಮಳ ನಾಡಿನಾದ್ಯಂತ ಹರಡುವುದು ಖಂಡಿತ. ಭಾಷೆಯ ಬೆಳವಣಿಗೆಗೆ ಕರ್ನಾಟಕದತ್ತ ಕಣ್ಣು ಹಾಯಿಸುವ ಕಾಲವೂ ಬಂದೀತು
  










                                                                                                            

Saturday, November 29, 2014

ಹಸ್ತ ಪ್ರತಿ ಅಭಿಯಾನ



ಹಸ್ತಪ್ರತಿ ಸಂರಕ್ಷಣ ಕಾರ್ಯಾಗಾರ

ಹಸ್ತಪ್ರತಿ ನಮ್ಮ ಪ್ರಾಚೀನ ಜ್ಞಾನ ಸಂಪತ್ತಿನ ಭಂಡಾರ ಎಂಬ ಬಗ್ಗೆ ಎರಡು ಮಾತಿಲ್ಲ. ಅದಕ್ಕಾಗಿಯೇ ಹಲವು ಕಡೆ ಕನ್ನಡ ಸ್ನಾತಕೋತ್ತರ ಪಠ್ಯ ಕ್ರಮದಲ್ಲಿ ಆಕರ ಶಾಸ್ತ್ರ ಎಂಬ ಒಂದು ಪತ್ರಿಕೆಯನ್ನೂ ,ಎಂಫಿಲ್ ಪಠ್ಯ ಕ್ರಮದಲ್ಲೂ  ಹಸ್ತಪ್ರತಿಸಂರಕ್ಷಣೆ , ಡಿಜಲೀಕರಣ ಕುರಿತು ಅಧ್ಯಯನ ಮಾಡಬೇಕಿದೆ..ಗ್ರಂಥ ಸಂಪಾದನೆಯಲ್ಲೂ ಹಸ್ತಪ್ರತಿಗಳೇ ಮೂಲಆಕರ. ಇದೆಲ್ಲ ಗೊತ್ತಿದ್ದರೂ ಹಸ್ತಪ್ರತಿಗಳ ಕುರಿತು ಬಹಳ ಕಡೆ ದಿವ್ಯ ನಿರ್ಲಕ್ಷ್ಯ. ಹಸ್ತಪ್ರತಿಗಳ ಸಂರಕ್ಷಣೆ ಮಾಡುವದು ಹಾಗಿರಲಿ ತಾಳೆಯ ಗರಿಯ ವೀಕ್ಣೆಣೆಯನ್ನೂ ಮಾಡದೇಅಂಕಗಳಿಸುವ ಕಲೆ ಕರಗತವಾಗಿದೆ. ಬಹುತೇಕರಿಗೆ. ಇದಕ್ಕೆ ಕಾರಣಗಳು ಹಲವಾರು. ವ್ಯವಸ್ಥೆಯೇ ಹಾಗಿರುವಾಗ ವಿದ್ಯಾಥಿಗಳತ್ತ , ಬೊಟ್ಟು ಮಾಡುವುದು ಸೂಕ್ತವಲ್ಲ.  ಈ ದಿಶೆಯಲ್ಲಿ  ಬಿ. ಎಂ ಶ್ರೀ ಪ್ರತಿಷ್ಠಾನದ ಹಸ್ತಪ್ರತಿವಿಭಾಗವು ಬೆಕ್ಕಿಗೆ ಗಂಟೆ ಕಟ್ಟುವ ಮನ ಮಾಡಿದೆ.. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಸ್ತ ಪ್ರತಿಗಳ ಸಂರಕ್ಷಣೆಯಲ್ಲಿ ಕೈ ಮುಟ್ಟಿ ಕೆಲಸ ಮಾಡುವ ಅವಕಾಶ ಒದಗಿಸುವ ಕಾರ್ಯಾಗಾರ ಹಮ್ಮಿ ಕೊಂಡಿದೆ.
ಈಗಾಗ ಲೇ ಎಂ,.ಇ. ಎಸ್‌ ಮತ್ತು ಎಂ. ಎಲ್‌ ಎ ಕಾಲೇಜಿನ   ಎಂ.ಎ. ವಿದ್ಯಾರ್ಥಿಗಳಿಗೆ ಒಂದುವಾರದ ಪೂರ್ಣಾವಧಿಯ ತರಬೆತಿ ನೀಡಿದ ಹಿನ್ನೆಲೆಯಲ್ಲಿ ಈ ಸಲ ಬಸವನಗುಡಿಯ ನ್ಯಾಷನಲ್‌  ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಲು ನಿರ್ಧರಿಸಲಾಯಿತು. ಗಣೇಶನ ಮದುವೆಗೆ ನೂರೆಂಟು ವಿಘ್ನ. ಮೊದಲನೆಯದಾಗಿ ಈಗ ಸೆಮಿಸ್ಟರ್‌ ಪದ್ದತಿಇರುವುದರಿಂದ ನಿಗದಿತ ಅವಧಿಯಲ್ಲಿ ಪಠ್ಯ ಕ್ರಮ ಪೂರೈಸುವ ತರಾತುರಿ. ಎರಡನೆಯದಾಗಿ ಮಿತವಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಜೊತೆಗೆ  ನೆಟ್‌ ಪರೀಕ್ಷೆ, ಕಿರು ಪರೀಕ್ಷೆ. .ಈ ಎಲ್ಲ ತೊಡಕುಗಳಿಗೆ ಪರಿಹಾರ ನೀಡಿದರೆ ಕಾರ್ಯಾಗಾರದ ಕೆಲಸ ಮೊದಲಾಗುವ ಸಾಧ್ಯತೆ ಇದ್ದಿತು.ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿ. ಮೂಡಿಸಬೇಕಿತ್ತು.
ಈ ವಿಬಾಗದ ಮುಖ್ಯಸ್ಥರು ಮತ್ತು ಕಾಲೇಜಿನನಿವೃತ್ತ ಪ್ರಾಂಶುಪಾಲರು ಆಸಕ್ತಿ ತೋರಿದರೂ ಅಡೆ ತಡೆಗಳತ್ತ ಕೈ ತೋರಿದರು.
ಮೊಟ್ಟ ಮೊದಲನೆಯದಾಗಿ ವಿದ್ಯಾರ್ಥಿಗಳನ್ನು ಕೇಳಿದಾಗ ಅವರಿಗೆ ಆಸಕ್ತಿ ಇದೆ ಆದರೆ ಅವಕಾಶವಿಲ್ಲ.ನಿತ್ಯದ ಪಾಠಪ್ರವಚನಗಳ ಒತ್ತಡ. ಇದಕ್ಕೆ ಪರಿಹಾರ ಅವರಿಗೆ ಬಿಡುವಾಗಿದ್ದಾಗ ತರಬೇತಿ ನಡೆಸುವುದು.ಅಂದರೆ ಮದ್ಯಾಹ್ನ   ೨  ಗಂಟೆಯವರೆಗೆ ಅವರ ಕಾಲೇಜಿನ ಪಾಠ ಪ್ರವಚನಗಳು. ನಂತ ೨.೩೦ ಯಿಂದ ೫.೩೦ ವರೆಗೆ ಕಾರ್ಯಾಗಾರ. ಅದೃಷ್ಟಕ್ಕೆ ಕಾಲೇಜಿಗೂ ಮತ್ತು ತರಬೇತಿ ನೀಡುವ ಸ್ಥಳಕ್ಕೂ ಕೇವಲ ಹದಿನೈದು ನಿಮಿಷದ ಹಾದಿ ಆದ್ದರಿಂದ  ಮಧ್ಯಾಹ್ನ ೨.೩೦ ರಿಂದ  ತರಬೇತಿ ನಡೆಸಲು ನಿರ್ಧಾಆರ ಮಾಡಲಾಯಿತು
ಮೊದಲ ದಿನವೇ ಸಮಯ ತುಸು ಏರು ಪೇರಾಯಿತು. ಕಾಲಲೇಜಿನ ತರಗತಿಗಳು ಮುಗಿದ ನಂತರ ಊಟ ಮಾಡಿಕೊಂಡು ಬಿಸಿಲಲ್ಲಿ ಬರುವುದಕ್ಕೆ ಅರ್ದ ಗಂಟೆಗಿಂತ ಅಧಿಕ ಸಮಯದ ಅಗತ್ಯ..ಅದಕ್ಕಾಗಿ ಕಾಲೇಜಿನವರನ್ನು ತರಗತಿಯನ್ನು ೧೫ ನಿಮಿಷ ಮುಂಚಿತವಾಗಿ ಮುಗಿಸಲು ಕೇಳಿಕೊಳ್ಳಲಾಯಿತು  ಹಾಗೂ ಕಾರ್ಯಾಗಾರದ  ಪ್ರಾರಂಭವನ್ನು ೧೫ ನಿಮಷ ಮುಂದೂಡಲಾಯಿತು,
ನಂತರ  ತರಬೇತಿ ಶುಲ್ಕ ೨೫೦/-ರೂಪಾಯ ಕುರಿತು  ಗೊಣಗಾಟ ಕಂಡುಬಂದಿತು. ಅದಕ್ಕೆ ಪರಿಹಾರವಾಗಿ ಶುಲ್ಕವನ್ನು ತರಬೇತಿಯ ಅವಧಿಯಲ್ಲಿ ಯಾವಾಗ ಬೇಕಾದರೂ ಕೊಡಬಹದು ಮತ್ತು ಅದು ಹೊರೆ ಎನಿಸಿದರೆ ಸಂಸ್ಥೆಗ ನಿಗದಿ ಪಡಿಸಿದ ಶುಲ್ಕಕ್ಕೆ ರಸೀತಿ ಹಾಕಲಾಗುವುದು ಆದರೆ  ಮನವಿಯ ಮೇರೆಗೆ ಅನಾನುಕೂಲವಿದ್ದವರ ಶುಲ್ಕದ ಆಂಶಿಕ ಭಾಗವನ್ನು ನಿರ್ದೇಶಕರೇ ನೀಡುವುದಾಗಿ ತಿಳಿಸಿದರು. ಹಣದ ಕೊರತೆಯ ಕಾರಣದಿಂದ ಯಾವ ವಿದ್ಯಾಥಿಯೂ ವಂಚಿತನಾಗಬಾರದು ಎಂಬ ನಿಲವು ತೆಗೆದುಕೊಳ್ಳಲಾಯಿತು. ಮೊದಲ ದಿನ ೨೧ ಜನ ವಿದ್ಯಾರ್ಥಿಗಳು ಭಾಗವಹಿಸಿದರು.
ತರಬೇತಿ ಉದ್ಘಾಟನೆಗೆ ಸಂಸ್ಥೆಯ ಅಧ್ಯಕ್ಷರಾದ  ಡಾ. ಪಿ.ವಿ. ನಾರಾಯಣ , ಕಾಲೇಜಿನ ವಿಭಾಗದ ಮುಖ್ಯಸ್ಥರಾದ ಪ್ರೊ. ಲೀಲಾವತಿ,ಗಣಿತ ವಿಭಾಗದ ಪ್ರಾಧ್ಯಾಪಕಿ ಮತ್ತು ಕನ್ನಡ ವಿಭಾಗದ ಪ್ರಧ್ಯಾಪಕಿಯರಾದ  ಭಾಗವಹಿಸಿದರು. ವಿಶೇಷವೆಂದರೆ ವಿಜಯಾಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ರಾಮಮೂರ್ತಿ ಹಸ್ತಪ್ರತಿ ಕುರಿತ ಆಸಕ್ತಿಯಿಂದ ತಾವೂ ಶಿಬಿರಾರ್ಥಿಯಾಗಿ ಸಂರಕ್ಷಣಾ ಕೆಲಸ ಕಲಿತು ಹಸ್ತಪ್ರತಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ,ಮುಂದೆ ಬಂದರು..
ತರಬೇತಿಯ ಭಾಗವಾಗಿ ಸಾಧ್ಯವಾದರೆ ಎರಡು ದಿನಕೊಮ್ಮೆ ಸಂಜೆ ಅರ್ಧಗಂಟೆ  ಹಸ್ತಪ್ರತಿ ತಜ್ಞರ ವಿಶೇಷ ಉಪನ್ಯಾಸ ನಡೆಸಲು ಯೋಜನೆ ಹಾಕಿಕೊಳ್ಳಲಾಯಿತು ಮುಖ್ಯವಾಗಿ ವಿದ್ಯಾರ್ಥಿನಿಯರು ದೂರದಿಂದ ಮತ್ತು ಹೊರ ಊರಿನಿಂದ ಬರುವುದರಿಂದ ಅವರ ಅನುಕೂಲ ಗಮನಿಸಿಲು ನಿರ್ಧಾರಿಸಲಾಯಿತು. ನಿರ್ದೇಶಕರಾದ ಎಚ್‌.ಶೇಷಗಿರಿರಾಯರು ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಅಧ್ಯಯನದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ ಆಧುನಿಕತಂತ್ರಜ್ಞಾನದ ಅಳವಡಿಕೆಯಿಂದ ಡಿಜಿಟಲ್‌ ರೂಪದಲ್ಲಿ ಹಸ್ತಪ್ರತಿಗಳ ಗರಿಗಳನ್ನು ಆಸಕ್ತರು ಇದ್ದಲ್ಲಿಗೆ ಕಳುಹಿಸುವ ಸಾಧ್ಯತೆಯಿಂದ ಈ ರಂಗದಲ್ಲಿ ಆಶಾದಾಯಕ ಬೆಳವಣಿಗೆ ಯಾಗುವುದೆಂದು ತಿಳಿಸಿದರು. ಮುಖ್ಯ ಅತಿಥಿಯಾದ ಪ್ರೊ. ಲೀಲಾವತಿಯವರು ವಿದ್ಯಾಥಿಗಳ ಜ್ಞಾನಪರಿಧಿ ವಿಸ್ತಾರಗೊಳಿಸುವ ಮುಂದೆ ಸಂಶೋಧನೆಗೆ ಪೂರಕವಾದ ಹಸ್ತಪ್ರತಿಗಳ ಪರಿಚಯವಾಗುವುದು ತುಂಬ ಉತ್ತಮ ಎಂದರು,  ಅಧ್ಯಕ್ಷ ಭಾಷಣದಲ್ಲಿ ಡಾ. ನಾರಾಯಣರು ಕನ್ನಡ ಸಾಹಿತ್ಯದ ಪ್ರಾಚೀನತೆ ಮತ್ತು ಸಾಹಿತ್ಯ ಸಂಪತ್ತು ಕುರಿತು ತಿಳಿಸುತ್ತಾ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಹಸ್ತಪ್ರತಿಗಳ ಅಧ್ಯಯನ ಅತಿ ಮಹತ್ವದ ಪಾತ್ರ ನಿರ್ವಹಿಸುವುದನ್ನು ವಿವರಿಸಿದರು ಹಸ್ತಪ್ರತಿ ವಿಭಾಗದ ಶ್ರೀ ಗುರುಪ್ರಸಾದ, ಶ್ರೀಮತಿ ವೀಣಾ ಮತ್ತು ಶ್ತಿಮತಿ ಮಧುರಾ ಅವರು ಅಚ್ಚುಕಟ್ಟಾಗಿ ಕಾರ್ಯಾಗಾರ ನಡೆಯಲು ಅಗತ್ಯವಾದ ವ್ಯವಸ್ಥೆ ಮಾಡಿದ್ದರು. ಮಕ್ಕಳೂ ಅಷ್ಟೇ ಆಸಕ್ತಿಯಿಂದ ಮೊದಲ ಹಂತವಾದ ಗರಿಗಳ ವಿಂಗಡಣೆ ಮತ್ತು ಶುಷ್ಕ ಶುದ್ಧೀಕರಣದ ಕೆಲಸಗಳನ್ನು ಖುಷಿಖುಷಿಯಿಂದ ಕೈಗೆತ್ತಿಕೊಂಡರು.
  



ಎಚ್.ಶೇಷಗಿರಿರಾವ್