Friday, November 8, 2013

ಹಸ್ತಪ್ರತಿ ಅಧ್ಯಯನ ರಾಷ್ಟ್ರೀಯ ಸಮಾವೇಶ


      ಹಸ್ತಪ್ರತಿ ಅಧ್ಯಯನ  3ನೆಯ   ರಾಷ್ಟ್ರೀಯ ಸಮಾವೇಶ 
                      ತುಮಕೂರು
                     ೦8-11-2013













  

Monday, November 4, 2013

ಕುಠೀರ ರಾಜ್ಯೋತ್ಸವ


ರಾಜ್ಯೋತ್ಸವ ಎಲ್ಲ ಕನ್ನಡಿಗರ ಸಂಭ್ರಮದ ಹಬ್ಬ, ರಾಜ್ಯ ಸರ್ಕಾರದಿಂದ ಮೊದಲುಗೊಂಡು ವಿವಿಧ ಸಂಘಸಂಸ್ಥೆಗಳು ರಾಜ್ಯೋತ್ಸವವನ್ನು ಆಚರಿಸುತ್ತವೆ. ರಾಜ್ಯೋತ್ಸವವನ್ನು ಪ್ರಪ್ರಥಮವಾಗಿ ಅದ್ಧೂರಿಯಿಂದ ಆಚರಿಸಿದ ಕೀರ್ತಿ ಹಿರಿಯಸಾಹಿತಿ ಕಾದಂಬರಿ ಸಾರ್ವಭೌಮ ಅ.ನ.ಕೃ ಮತ್ತು ಅವರ ಗೆಳೆಯ ಸಾಹಿತಿಗಳಿಗೆ ಸಲ್ಲಬೇಕು. ೧೯೬೩ ರಲ್ಲಿ ಕೆಂಪಾಂಬುಧಿ ಕೆರೆಯ ಆವರಣದದಲ್ಲಿ  { ಇಂದಿನ ಬಿ. ಎಂ..ಟಿ..ಸಿ ನಗರಸಾರಿಗೆ ನಿಲ್ದಾಣದ ಪ್ರದೇಶದಲ್ಲಿ) ಒಂದು ವಾರ ಕನ್ನಡ ಸಾಹಿತ್ಯ,  ಕಲೆ ಸಂಸ್ಕೃತಿಗಳ ವೈಭವದ ಪ್ರದರ್ಶನದೊಂದಿಗೆ ರಾಜ್ಯೋತ್ಸವ  ನಡೆಯುತಿತ್ತು. ನಂತರ ಕನ್ನಡ ಹೋರಾಟಗಾರ  ವಾಟಾಳ್‌ ನಾಗರಾಜ್‌ ಸರ್ಕಾರಿ ಕಲೆಮತ್ತು ವಿಜ್ಞಾನ ಕಾಲೇಜಿನ ಮೈದಾನದಲ್ಲಿ ತಿಂಗಳು ಗಟ್ಟಲೆ ಆಚರಿಸುತ್ತ ಬಂದಿರುವುದು ಬೆಂಗಳೂರಿನ ಎಲ್ಲರೂ ಬಲ್ಲ ಸಂಗತಿ. 




ಈಗಂತೂ ಆವರಣೆಯ ಸಂಖ್ಯೆ ಬಹಳವಾಗಿದೆ. ಇತ್ತೀಚೆಗೆ ನವಂಬರ್‌ ತಿಂಗಳ;ಲ್ಲಿ  ದೀಢೀರನೆ ಕನ್ನಡತನ ಜಾಗೃತಿಗೊಂಡು ಆಚರಣೆಗೆ ಇಳಿಯುವವರಿಗೆ ಬರಿ ಅಭಿಮಾನ ಮಾತ್ರವೇ ಕಾರಣವಾಗಿರದೇ ಇನ್ನೂ ಅನೇಕ ಸಂಗತಿಗಳು ಪ್ರಚೋದನೆ ನೀಡುತ್ತವೆ.. ಕೆಲವು ಸಲವಂತೂ ಚಂದಾವಸೂಲಿ ತಲೆ ಬೇನೆ ತರುತ್ತದೆ. ಆದರೆ ಯಾವದೇ ಪ್ರತಿಫಲಾಪೇಕ್ಷೆ ಇಲ್ಲದೆ ಕನ್ನಡದ ಪ್ರೀತಿಗೆ ಸಮಾರಂಭ ಮಾಡುವವರೂ ಹಲವರಿದ್ದಾರೆ . ಅವರಲ್ಲಿ ವಿಭಿನ್ನವಾಗಿ ಆಚರಿಸುವ ರಾಜೇಶ್‌.ಅವರು ಗಂಗಾನಗರದ ಮಹಿಳಾ ಸಹಕಾರಿ ಬ್ಯಾಂಕ್‌ನ ಉದ್ಯೋಗಿ. ಚಿಕ್ಕಂದಿನಿಂದಲೇ ತಂದೆಯವರು ಕೆಲಸದಲ್ಲಿ ಇದ್ದ  ಬಿ ಇ ಎಲ್‌ ಕಾರ್ಕಾನೆಯಲ್ಲಿ ಆಚರಿಸುತಿದ್ದ ಅದ್ಧೂರಿಯ ರಾಜ್ಯೋತ್ಸವ ನೋಡಿ ಸ್ಪೂರ್ತಿ  ಬಂದು ತಾನೂ ಏನಾದರೂ ,ಮಾಡಬೇಕೆ<ಬ ಹಂಬಲ. ಪರಿಣಾಮ ಕಳೆದ ೧೯ ವರ್ಷದಿಂದ ಮನೆಯಲ್ಲಿಯೇ ಆಚರಣೆ.  ವಿಶೇಷವೆಂದರೆ.ಅದಕ್ಕೆ ಕುಟುಂಬದ ಎಲ್ಲರ ಸಹಕಾರ.   ಮನೆಯ ಮಗುವಿನ ಹುಟ್ಟು ಹಬ್ಬದಂತೆ ಆತ್ಮೀಯತೆ ಮತ್ತು ಪ್ರೀತಿ. ಬರಿ ಬಾವುಟ ಹಾರಿಸಿ ಸಿಹಿ ಹಂಚಿದರೆ ಆಗದು ಏನಾದರೂ ಹೊಸದು ಮಾಡುವ ಬಯಕೆ. ಅದಕ್ಕೆ ಆ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡಯುವ ಸ್ಥಳದ ವಿಶೇಷತೆ ಪ್ರತಿಬಿಂಬಿಸುವ ಸ್ನಾರಕದ ಮಾದರಿ ನಿರ್ಮಿಸಿ ಅದರಲ್ಲಿ ತಾಯಿ ಭುವನೇಶ್ವರಿಯನ್ನು ಸ್ಥಾಪಿಸುವರು
. ಅದರಿಂದ ಕನ್ನಡ ನಾಡಿನ ವಿವಿಧ ಪ್ರದೇಶಗಳ ಹಿರಿಮೆ ಸಾರಿದ ಹೆಮ್ಮ. ಚಿತ್ರದುರ್ಗದ ಸಮ್ಮೇಳನ ನಡೆದಾಗ ಬೆಟ್ಟದ ಮಾದರಿ ಇದ್ದರೆ, ಗದಗಿನಲ್ಲಿ ಸಮ್ಮೇಳ ನಡೆದ ವರ್ಷ ವೀರಬಾರಾಯಣ ದೇವಾಲಯದಮಾದರಿ ಹೀಗೆ ಪ್ರತಿವರ್ಷವೂ ವಿಭಿನ್ನ ಹಿನ್ನೆಲೆಯಲ್ಲಿ ಭುವನೇಶ್ವರಿ ರಾರಾಜಿಸುವಳು  ಮನೆಮಂದಿ ಎಲ್ಲ ಸೇರಿ ಆಚರಿಸುವ ಈ ಹಬ್ಬಕ್ಕೆ ಗೆಳಯರು , ಬಂಧುಗಳೂ ಬರುವರು. ಜೊತೆಯಲ್ಲಿ ಯಾರಾದರೂ ಒಬ್ಬ  ಸಾಹಿತಿಯ ಹಿತವಚನೆ.. ಇದು ಸಂಪೂರ್ಣ ಖಾಸಗಿ ಸಮಾರಂಭ.  ಇದುವರೆಗ ೧೯ ರಾಜ್ಯೋತ್ಸವಗಳು ಜರುಗಿವೆ.




 ಕನ್ನಡ ರಸಪ್ರಶ್ನೆ ಪ್ರವೀಣ, ಡಾ. ರಾಜಕುಮಾರ್‌ ,ವಿಮರ್ಶಕ ಡಾ. ಮೋಹನ ಕುಮಾರ್‌. ಸಾಹಿತಿಮುಕುಂದರಾಜ್‌. ಕವಿಯತ್ರಿ ಎಚ್ ಎಲ್‌.ಪುಷ್ಪಾ ,ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳಾದ ಡಾ.ವೀರಣ್ಣ  ಶ್ರೀ ರಂಗ ರಾಜು ಮೊಇದಲಾದ ಕನ್ನಡದ ನಾಡು ನುಡಿಗೆ ಸೇವೆ ಸಲ್ಲಿಸಿದವರು  ಸಮಾರಂಭದಲ್ಲಿ ಭಾಗಿಯಾಗಿ ಸಮಾರಂಭಕ್ಕೆ ಕಳೆ ನೀಡಿರುವರು. ಈವರ್ಷ ಕೊಡಗಿನಲ್ಲಿಸಾಹಿತ್ಯ ಸಮ್ಮೇಳನ  ಆಗುವುದರಿಂದ  ಅಲ್ಲಿನ ರಾಜಾ ಸೀಟ್‌ ಪ್ರತಿಕೃತಿ ನಿರ್ಮಿಸಿ ಅದರಲ್ಲಿ ತಾಯಿ ಭುವನೇಶ್ವರಿ ಕೂಡಿಸಲಾಗಿದೆ.
          ಈ ಕುಠೀರ ಕನ್ನಡ ಮ್ಮನ ಉತ್ಸವ ಎಲ್ಲರ ಮೆಚ್ಚುಗೆಗೆ ಅರ್ಹವಾಗಿದೆ.

                                     ಅಭಿನಂದನೆಗಳು  ರಾಜೇಶ್‌

Saturday, November 2, 2013

ಶುಭಾಶಯಗಳು

                                          Happy Deepavali

foto of diwali lamp  - Indian festival of lights - JPG



  H. seshagiriRao

Friday, November 1, 2013

ರಾಜ್ಯೋತ್ಸವದ ಶುಭಾಶಯಗಳು









 







                       ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು