Friday, May 31, 2013

ಆರರಿಂದ ಅರವತ್ತು- ಸರಣಿ- ನನ್ನ ಸಾವಿಗೆ ನೀವೆ ಹೊಣೆ !

 ನನ್ನ ಸಾವಿಗೆ ನೀವೆ ಹೊಣೆ !
ಕಾಲೇಜಿಗೆ ಮಧ್ಯಾಹ್ನದ ವಿರಾಮದ ಸಮಯ. ಜವಾನ ಬೆಲ್ಲು ಹೊಡೆದು ಕುಡಿಯುವ ನೀರನ್ನುಟೇಬಲ್‌ ಮೇಲೆ ತಂದಿಟ್ಟ. ಎಲ್ಲರೂ ಊಟಕ್ಕೆ ಧಾವಿಸಿದ್ದರು. ನಾನೂ ಲಂಚ್‌ ಬಾಕ್ಸ ತೆರೆದೆ. ಚಪಾತಿ ಪಲ್ಯ ಮತ್ತು ಚಟ್ಟಣಿ ಇತ್ತು ಸಾವಧಾನವಾಗಿ ತಿನ್ನತೊಡಗಿದೆ. ಊಟ ಮುಗಿಯಿತು. ಕೈ ತೊಳೆದು ಇನ್ನೇನು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದೆ, ಧಡಕ್ಕನೆ  ಸ್ವಿಂಗ್ ಬಾಗಿಲು ತೆಗದು ಕೊಂಡಿತು ಅಲ್ಲಿ ನಮ್ಮ ಗುಮಾಸ್ತ ಮಾದಯ್ಯ ನಿಂತಿದ್ದ
 ನಾನು ಅವನನ್ನು ನೋಡಿ ಹದಿನೈದು ದಿನಗಳಾಗಿದ್ದವು .ಅವನ ಕಣ್ಣುಗಳು ಕೆಂಡದ ಉಂಡೆಗಳಾಗಿದ್ದವು. ತಲೆ ಕೆದರಿತ್ತು.ಬಟ್ಟೆ ಗಳು ಮಾಸಿದ್ದವು .
ಏನು ಮಾದಯ್ಯ,   ಹೇಗಿದ್ದೀಯಾ? ಈಗ ಇಲ್ಲಿಗೆ ಯಾಕೆ ಬಂದೆ?
ಇವತ್ತು ಏನಾದರೂ ಒಂದು ಇತ್ಯರ್ಥವಾಗಲೇ ಬೇಕು , ಸಾರ್‌  ನಿಮ್ಮನ್ನು ಕೊನೆ ಮಾತು ಕೇಳಲು ಬಂದೆ..
ನನಗೆ ಸಹಾಯ ಮಾಡುವಿರಾ ಇಲ್ಲವಾ  ಹೇಳಿ ಬಿಡಿ
ನಾನು ಹೇಳುವುದು ಇದರಲ್ಲಿ ಏನು ಇಲ್ಲ. ನೀನುಂಟು ಇಲಾಖೆ ಉಂಟು , ಉತ್ತರಿಸಿದೆ.
 ಹಾಗಾದರೆ ಇದೆ ನಿಮ್ಮ  ಕೊನೆ ಮಾತೆ? ಮುಂದಿನ ಪರಿಣಾಮಕ್ಕೆ ನೀವೆ ಹೊಣೆಗಾರರು.!
 ಮಾದಯ್ಯ ನಮ್ಮಲ್ಲಿ ಎರಡನೆ ದರ್ಜೆ ಗುಮಾಸ್ತ  ಹದಿನೈದು ದಿನದ ಹಿಂದೆ ಅಮಾನತ್ತು ಆಗಿದ್ದ.
ಅವನ ಪರಿಚಯವಾದದ್ದು ಈ ಕಾಲೇಜಿಗೆ ಬಂದ ಮೇಲೆ. ಇನ್ನೂ ೨೫ ರ ಹರೆಯದ ಹುಡುಗ. ಅನುಕಂಪದ ಆಧಾರದ  ಮೇಲೆ ಬೇಗನೆ   ಕೆಲಸ ಸಿಕ್ಕಿತ್ತು. ಸ್ಥಳಿಕ. ರಾಜಕಾರಣಿಗಳ ಪರಿಚಯವಿತ್ತು ಬಹಳ ಉಡಾಫೆಯ ವರ್ತನೆ.
ನಾನು ಈ ಕಾಲೇಜಿಗೆ ಬಂದಾಗ ನನ್ನ ಕೋಣೆಯಲ್ಲಿನ ದೊಡ್ಡ ಟ್ರಜರಿ ನೋಡಿ ದಂಗಾದೆ.ಬಹು ಹಳೆಯ ಸಂಸ್ಥೆಯಾದ್ದರಿಂದ ಅದು ಇದ್ದಿತು. ಈಗ ಅದರ ಉಪಯೋಗ ಇರಲಾರದು ಎಂದುಕೊಂಡೆ.
ಆಗ ಮಾದಯ್ಯನೆ ವಿವರಣೆ ನೀಡಿದ್ದ. ಇಲ್ಲ ಸಾರ್‌, ಇದು ನಮಗೆ ಬಹಳ ಅಗತ್ಯ .. ಹಿಂದಿನ ಸಾಹೇಬರು ಲಕ್ಷ ಗಟ್ಟಲೆ ಹಣ ಡುತಿದ್ದರು.
ಯಾಕಯ್ಯಾ, ಈಗ ಬ್ಯಾಂಕು ಇದೆಯಲ್ಲಾ. ಅದರಲ್ಲಿ ಹಣ ಇಡುವ ಅಗತ್ಯ ಏನಿದೆ?
ಹಾಗಲ್ಲ  ಸಾರ್‌. ನಮ್ಮಕಾಲೇಜಿಗೆ ಲಕ್ಷಾಂತರ ರೂಪಾಯಿ ವಿದ್ಯಾರ್ಥೀ ವೇತನ ಬರುವುದು .ಎಲ್ಲ ಹಣ ಇದರಲ್ಲೆ ಇಟ್ಟು ಅವರು ಬಂದು ಬಂದಾಗ ಕೊಡಲು ಅನುಕೂಲ, ಎಂದ
ನನಗೆ ತಲೆ ಬುಡ ತಿಳಿಯಲಿಲ್ಲ.  ಆಗ ಸುಮ್ಮನಾದೆ.
ಕೆಲ ದಿನಗಳ ನಂತರ ಅದರ ಅಂತರಾಳದ ಅರಿವಾಯಿತು. ನಮ್ಮದು ಸಾವಿರಾರು ವಿದ್ಯಾರ್ಥಿಗಳು ಇರುವ ಕಾಲೇಜು. ಅವರಲ್ಲಿ ೯೦% ವಿದ್ಯಾರ್ಥಿ ವೇತನ ಕೊಡಲೆ ಬೇಕಾದ ಸಮುದಾಯಕ್ಕೆ ಸೇರಿದವರು.ಹಾಗಾಗಿ ಲಕ್ಷಾಂತರ ಹಣ ಬರುವುದು ನಿಜವಾಗಿತ್ತು.
ಅಲ್ಲಿ ನಾನು ಗಮನಿಸಿದ ವಿಶೇಷವೆಂದರೆ ದಾಖಲಾದವರಿಗೆಲ್ಲ  ಅವರು  ಕಾಲೇಜಿಗೆ ಬರಲಿ ಬಿಡಲಿ ವಿದ್ಯಾರ್ಥಿ ವೇತನ ಸಂದಾಯವಾಗುತಿತ್ತು.ಅರ್ಜಿ ಹಾಕಿದವರಿಗೆಲ್ಲ ತಪ್ಪದೆ ಹಣ ಬರುತಿತ್ತು. ನಂತರ ಗೊತ್ತಾಯಿತು. ಅವರು ಸಂಬಂಧಿಸಿದ ಇಲಾಖೆ ಯವರಿಗೆ ಒತ್ತಡಹಾಕಿ ಮಂಜೂರು ಮಾಡಿಸುವರು.
ನಂತರ ವಿದ್ಯಾರ್ಥಿಯ ಹಾಜರಾತಿ ಸರಿಯಾಗಿದ್ದರೂ ಅವನಿಗೆ ಏನೋ ಒಂದು ನೆಪ ಹೇಳಿ ತುಸು ಹಣ ಕಡಿತ ಮಾಡುವರು. ಹಾಜರಾತಿ ಕಡಿಮೆ ಇದ್ದರೆ ಮುಗಿಯಿತು ಅವರಿಗೆ ನಿನಗೆ ಹಾಜರಾತಿ ಇಲ್ಲ ಹಣ ವಾಪಸ್ಸು ಕಳುಹಿಸುವೆವು ಎಂದು ಧಮಕಿ ಹಾಕುವರು. ಅವನು ದಮ್ಮಯ್ಯ ಗುಡ್ಡೆ ಹಾಕಿದ ಮೇಲೆ ಅವನಿಗೆ ಅರ್ಧಹಣ  ಕೊಟ್ಟು ಸಹಿ ಮಾಡಿಸಿಕೊಳ್ಳುವರು. ಇನ್ನು ಕಾಲೇಜು ಬಿಟ್ಟವರದೂ ಹಣ ಇಲಾಖೆಗೆ ವಾಪಸ್ಸು ಕಟ್ಟುತ್ತಿರಲಿಲ್ಲ.. ವರ್ಷದ ಕೊನೆಯಲ್ಲಿ ದಾಖಲೆಗೆ ಸಹಿ ಹಾಕಿ ಹಣ ವಿತರಣೆಯಾದಂತೆ ತೋರಿಸುತಿದ್ದರು. ಇದರಲ್ಲಿ ಗುಮಾಸ್ತರು ಭಾಗಿ ಹೀಗಾಗಿ ನಗದು ಕೊಡುವುದು ಮಕ್ಕಳ  ಹಿತವೆನಿಸಿದರೂ ಮಕ್ಕಳಿಗೆ ಅನುಕೂಲ ಮಡಿಕೊಳ್ಳುವ ಹೆಸರಲ್ಲಿ  ಇವರಿಗೂ ಆದಾಯವಿತ್ತು. ಇದೆಲ್ಲ ಜನರಿಗೆ  ಗೊತ್ತಿದ್ದರೂ,.   ನಮ್ಮ ಕುಲ ಬಾಂಧವರು  ಎಂಬ ಕಕುಲಾತಿ  ಅವರಿಗೆ..
 ಈ ಸಲ ಅರ್ಜಿ ಹಾಕುವಾಗಲೆ ಕಾಲೇಜಿನ ಎಲ್ಲರಿಗೂ  ವಿದ್ಯಾರ್ಥಿ ವೇತನವನ್ನು  ಕ್ರಾಸ್ದ ಚೆಕ್‌ ಮೂಲಕ ಕೊಡುವುದಾಗಿಯೂ ಅವರು ನಿಗದಿತ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕೆಂದು ತಿಳಿಸಲಾಯಿತು.   ಆ ಕುರಿತು ಬ್ಯಾಂಕಿನವರಿಗೂ ಸಹಕರಿಸಲು ಕೋರಲಾಯಿತು. ಆದರೆ ಹೈಸ್ಕೂಲು ಮಕ್ಕಳಿಗೆ ಖಾತೆ ತೆರೆಯಲು ಆಗಲಿಲ್ಲ . ಅವರಿಗೆ ಬರುವ ಹಣ ಕೆಲವೆ ನೂರು ರೂಪಾಯಿಗಳು. ಆದರೆ ಅವರಿಗೂ ಬೇರರ್ ಚೆಕ್‌ ಮೂಲಕ ಹಣ ನೀಡಿದರೆ ಅದನ್ನು ಖಾತೆ ಇರುವ ನಮ್ಮ ಶಿಕ್ಷಕರು ದೃಢೀಕರಿಸಿದರೆ ಹಣ ನೀಡಲು ಬ್ಯಾಂಕಿನವರು  ಒಪ್ಪಿದರು.
ನನಗೂ ಸಮಸ್ಯೆ  ಪರಿಹಾರವಾಯಿತು. ನಮ್ಮ ಟ್ರೆಜರಿ ಯಲ್ಲಿ ಹಣ ಇಡುವ ಹೊಣೆ ತಪ್ಪಿತು.
ಈ ವಿಧಾನದಿಂದ ಮಕ್ಕಳು ಖುಷಿಯಾದರು. ಅವರಿಗೆ ಮೊದಲಿನಂತೆ ಕಡಿತವಾಗದೆ  ಪೂರ್ಣ ಹಣ ಕೈಗೆ ಬಂದಿತು. ಅವರ ಪೋಷಕರನ್ನು ಕರೆದು ತರಬೇಕಿದ್ದುದರಿಂದ ಮಕ್ಕಳು ಅಪವ್ಯಯ ಮಾಡುವುದಕ್ಕೆ ಕಡಿವಾಣ ಬಿದ್ದು ಅವರಿಗೂ ನೆಮ್ಮದಿಯಾಯಿತು .
 ವಿದ್ಯಾರ್ಥಿ ವೇತನ ಬಂದನಂತರ ಆ ಹಣವನ್ನು ಖಾತೆಗೆ ಜಮಾ ಮಾಡಿ ಎಲ್ಲರಿಗೂ ಚೆಕ್‌ ಮೂಲಕವೆ ಪಾವತಿ ಮಾಡಿದುದರಿಂದ ಅವ್ಯವಹಾರಕ್ಕೆ ಕಡಿವಾಣ ಬಿತ್ತು. ಆದರೆ ಕೆಲವೆ ದಿನಗಳ ನಂತರ ಅನೇಕ ಹೈಸ್ಕೂಲು  ವಿದ್ಯಾರ್ಥಿಗಳು ಅರ್ಜಿ ಹಾಕಿದರೂ  ವಿದ್ಯಾರ್ಥೀ ವೇತನ  ತಮಗೆ  ಬಂದಿಲ್ಲ ಎಂದು ದೂರಿದರು. ಹೊಸಬರದು ಮಾತ್ರವಲ್ಲ ಕೆಲವು ನವೀಕರಣ ದವೂ ಬಂದಿರಲಿಲ್ಲ. ನಮ್ಮ ಶಿಕ್ಷಕ್ಕರೊಬ್ಬರನ್ನು ಇಲಾಖೆಗೆ ಕಳುಹಿಸಲಾಯಿತು. ಸಲ್ಲಿಸಿದ ಅರ್ಜಿಗಳಿಗೆಲ್ಲಾ ಮಂಜೂರಾತಿ ದೊರಕಿತ್ತು. ದಾಖಲೆ ತರಿಸಿ ನೋಡಿದಾಗ ಅದು ನಿಜವಾಗಿತ್ತು ಎಲ್ಲರಿಗೂ ವಿದ್ಯಾರ್ಥಿ ವೇತನ ಬಂದಿತ್ತು ಮಾತ್ರವಲ್ಲ ಅವರಿಗೆ ಚೆಕ್‌ ಸಹಾ ತಲುಪಿಸಲಾಗಿದೆ.
 ಮಕ್ಕಳನ್ನು ಕರಸಿ ವಿಷಯ ತಿಳಿಸಿದಾಗ ತಾವು ಚೆಕ್‌ ಪಡೆದೆ ಇಲ್ಲ ಎಂದರು. ಅವರು ಮಾಡಿದ ಸಹಿ ತೋರಿಸಿದಾಗ ಅದು ನಮ್ಮ ಸಹಿಯಲ್ಲ ಎಂದು ನಿರಾಕರಿಸಿದರು
ಉಪನ್ಯಾಸಕರೊಬ್ಬರನ್ನು ವಿಚಾರಣೆ ನಡೆಸಿ ವರದಿ ನೀಡಲು ನೇಮಿಸಿದಾಗ ವಿವರ ಹೊರಬಂದಿತು.ಸುಮಾರು ನಲವತ್ತು ಹೈಸ್ಕೂಲು ಮಕ್ಕಳ ವಿದ್ಯಾರ್ಥಿ ವೇತನದ ಹಣ ದುರ್ಬಳಕೆ ಯಾಗಿದೆ. ಅವರ ಹೆಸರಿನಲ್ಲಿಚೆಕ್‌ ನೀಡಲಾಗಿದೆ. ದಾಖಲೆಗಳಲ್ಲಿ ಅವರ ಸಹಿ ಫೋರ್ಜರಿ ಮಾಡಲಾಗಿದೆ. ಬ್ಯಾಂಕಿನಲ್ಲಿ ವಿಚಾರಿಸಲಾಗಿ ಆ ಎಲ್ಲ  ಚೆಕ್‌ಗಳಿಗೆ ನಮ್ಮ ಲ್ಲಿನ ವೃತ್ತಿ ಶಕ್ಷಣ ಉಪನ್ಯಾಸಕರೊಬ್ಬರು ದೃಢೀಕರಿಸಿದ್ದಾರೆ. ಅವರನ್ನೂ ಕರೆಸಿ ವಿಚಾರಿಸಿದಾಗ ಅವರಿಗೆ ಗುಮಾಸ್ತರು ಸಹಿ ಮಾಡಲು ಕೇಳಿದಾಗ  ಒಂದೆ ದಿನ ಎಲ್ಲವಕ್ಕೂ ಸಹಿ ಮಾಡಿದ್ದಾರೆ. ಅವರು ವಿದ್ಯಾರ್ಥಿಗಳನ್ನು ನೋಡಿಯೆಇಲ್ಲ. ಹೇಗಿದ್ದರೂ ಪ್ರಿನ್ಸಿಪಾಲರ ಸಹಿ ಇದೆ ಎಂದು ಕೊಂಡು ಅವರೂ ಸಹಿ ಮಾಡಿದುದಾಗಿ ತಿಳಿದು ಬಂತು
 ಮಾದಯ್ಯ ಅವರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡಿರುವನು.
ಆ ಚೆಕ್ಕುಗಳನ್ನು ಬೇರೆ ಯಾವುದೋ ಹುಡುಗರಿಗೆ ಹೇಳಿ ನಗದು ಮಾಡಿಸಿದೆ. ಬ್ಯಾಂಕಿನವರು ಬೇರರ್ ಚೆಕ್‌ ಆದ್ದರಿಂದ ಹಣ ವೂ ಕೆಲವೆ ನೂರು ರೂಪಾಯಿಗಳಾದ್ದರಿಂದ ಶಿಕ್ಷಕರ ದೃಢೀ ಕರಣ ನೋಡಿ ಮರು ಮಾತಾಡದೆ ಹಣ ನೀಡಿದ್ದಾರೆ.
ಸಬಂಧಿಸಿದ ಗುಮಾಸ್ತರ ಕೈವಾಡದಿಂದ ನಲವತ್ತು ಮಕ್ಕಳಿಗೆ ವಂಚನೆ ಯಾಗಿದೆ. ಸುಮಾರು ಆರು ಸಾವಿರರೂಪಾಯಿ ನುಂಗಿಹಾಕಿರುವರು.
ಈ ಎಲ್ಲ ವಿಚಾರಗಳ ಸಮೇತ ಮಾದಯ್ಯನನ್ನು  ವಿಚಾರಿಸಿದರೆ. ಅವನು ತನ್ನತಪ್ಪು ಒಪ್ಪಿಕೊಂಡ.  ಎಲ್ಲರಿಗೂ ಹಣ ವಾಪಸ್ಸು ನೀಡುವುದಾಗಿ ತಿಳಿಸಿದ. ಸಂಬಳದ ಹಣದಲ್ಲಿ ಕಡಿತ ಮಾಡಲು ವಿನಂತಿಸಿದ.ಅದರಂತೆ ಬರಹದಲ್ಲಿ ಹೇಳಿಕೆಯನ್ನೂ ನೀಡಿದ. ವಿಷಯವನ್ನು ಇಲಾಖೆಯ ಗಮನಕ್ಕೆ ತರಲಾಯಿತು.
 ಈ ಮಧ್ಯ ಅವನು ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶೂಲ್ಕವನ್ನೂ ದುರುಪಯೋಗ ಪಡಿಸಿಕೊಂಡ ವಿಷಯ ಬೆಳಕಿಗೆ ಬಂತು. ಅದರಂದ ಸುಮಾರು ೫೬ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಬರಲೆ ಇಲ್ಲ. ನಾನೆ ಮಧ್ಯ ಪ್ರವೇಶಿಸಿ ಅವರಿಗೆ ಪರೀಕ್ಷೆಗೆ ತೊಂದರೆಯಾಗದಂತೆ ನೋಡಿಕೊಳ್ಳ ಲಾಯಿತು. ಇದರ ಪರಿಣಾಮವಾಗಿ ಮಾದಯ್ಯ ಅಮಾನತ್ತು ಆಗಿದ್ದ.
 ಈಗ ಹದಿನೈದು ದಿನದ  ಮೇಲೆ ಬಂದು ಏನಾದರೂ ತೀರ್ಮಾನ ಮಾಡಲು ಒತ್ತಾಯಿಸುತಿದ್ದ.
ಅವನ ವಿಷಯ ಇಲಾಖೆಯ ಗಮನಕ್ಕೆ ಹೋಗಿ ಅವರು ಕ್ರಮ ತೆಗೆದುಕೊಂಡಿರುವರು. ನಾನು ಏನೂ ಮಾಡಲಾರೆ. ಸುಮ್ಮನೆ ಮನಗೆ ಹೋಗು. ಇಲಾಖೆಯನ್ನೆ ಸಂಪರ್ಕಿಸು, ಎಂದು ತಿಳಿ ಹೇಳಿದ.
ನೀವು  ದೂರನ್ನು ವಾಪಸ್ಸು ಪಡೆಯದಿದ್ದರೆ  ನಾನು ಸಾಯುವೆ.  ಅದರ  ಹೊಣೆ  ನಿಮ್ಮದು" ಎನ್ನುತ್ತಾ ಜೇಬಿನಿಂದ ಚಿಕ್ಕಬಾಟಲಿ ತೆಗೆದ.
 ಆ ರೀತಿ ಹುಚ್ಚಚ್ಚಾರ ಮಾಡ ಬೇಡ. ಎಂದು ಹೇಳುತಿದ್ದಂತೆಯೆ , ಬಾಟಲಿಯ ಮುಚ್ಚಳ ತೆಗೆದು ಅದರೊಳಗಿರುವುದನ್ನು ಗಟಗಟನೆ ಕುಡಿದ.
 ಬೇಡ , , ಹಾಗೆ ಮಾಡ ಬೇಡ ಎನ್ನುತ್ತಾ ನಾನು ಕರೆಗಂಟೆಯನ್ನು ಬಾರಿಸಿದೆ. ಜವಾನರಿಬ್ಬರು ಧಾವಿಸಿ ಬಂದರು
ಅವರು ಅವನ ಕೈ ಹಿಡಿಯುವುದರೊಳಗೆ ಪೂರ್ಣ ಕುಡಿದು ಬಿಟ್ಟ.
ನಾನು ಗಾಬರಿಯಿಂದ ಹಿರಿಯ ಶಿಕ್ಷಕರನ್ನು ಕರೆಸಿದೆ. ಪೋಲಿಸರಿಗೆ ಫೋನು ಮಾಡಿದೆ. ವೈದ್ಯರನ್ನು ಕರೆಸಲು ತಿಳಿಸಿದೆ.
 ನನ್ನ ಕಣ್ಣೆದುರೆ ಒಬ್ಬ ವ್ಯಕ್ತಿ ಸಾಯುತ್ತಿರುವುದಕ್ಕೆ ಬಹಳ ವ್ಯಥೆಯಾಯಿತು.
ಅವನಿಗೆ ಏನಾದರೂ ಪ್ರಥಮ ಚುಕಿತ್ಸೆ ಕೊಡಲು ಹೇಳಿದೆ. ತೂರಾಡುತಿದ್ದ ಅವನನ್ನು ಅಲ್ಲಿಯೆ ಬೆಂಚಿನ ಮೇಲೆ ಕೂಡಿಸಿದರು. ಅಷ್ಟರಲ್ಲಿ ಪೋಲಿಸರು ಬಂದರು.
 ವಿಷಯ ತಿಳಿದ ಅವರು ಏನು  ಕುಡಿದೆ ? ಏಕೆ ಹೀಗೆ ಮಾಡಿದೆ ? ಎಂದರು.
ಅವನು  ಸರಿಯಾಗಿ ಮಾತು ಆಡಲೆ ಇಲ್ಲ.
"ಒಳ್ಳೆಯ ಮಾತಲ್ಲಿ ತಿಳಿಸುವೆಯಾ, ಇಲ್ಲವಾದರೆ ಸ್ಟೇಷನ್ನಿಗೆ ನಡೆ, ನಿನ್ನಮೇಲೆ ಆತ್ಮ ಹತ್ಯೆಯ ಕೇಸು ಹಾಕುವೆವು,"  ಗದರಿಸಿದರು.
ಇಲ್ಲ ಸಾರ್‌, ನಾನು ಏನೂ ಮಾಡಿಲ್ಲ. ಸ್ಟೇಷನ್ನಿಗೆ ಕರೆದು ಕೊಂಡುಹೋಗಬೇಡಿ, ಎಂದು ಗೋಗರೆದ.
ಅಲ್ಲಿಯೆ ಇದ್ದ ಬಾಟಲಿಯನ್ನು ಮೂಸಿ ನೋಡಿದರು. ಏನಯ್ಯಾ ಯಾವದೆ ವಾಸನೆ ಇಲ್ಲ, ಏನು ಕುಡಿದೆ ? ಯಾಕೆ ಕುಡಿದೆ ?ಎಂದು ಕೇಳಿದರು. 
ಬ್ಲಾಕ್‌ ಮೇಲ್‌ ಮಾಡುವೆಯಾ? ಒಳಗೆ ಹಾಕುವೆವು ನಡಿ ಸ್ಟೆಷನ್‌ಗೆ , ಬೆದರಿಸಿದರು 
ಅವನು ಕೈಮುಗಿದುಹೇಳಿದ ತಪ್ಪಾಯಿತುಸಾರ್ .
ಇಲ್ಲ ಸಾರ್‌, ವಿಷ ಕುಡಿದಿಲ್ಲ. ನಾನು ಕುಡಿದದ್ದು ಬರಿ ನೀರು, ಪ್ರಿನ್ಸಿಪಾಲರನ್ನು ಹೆದರಿಸಲು ಹಾಗೆ ಮಾಡಿದೆ, ಎಂದ.





Thursday, May 23, 2013

ಆರರಿಂದ ಅರವತ್ತು- ಸರಣಿ ( ಮರಿಯಲಾಗದ ಮರಿ)

ಮರೆಯಲಾರದ ಮರಿಸ್ವಾಮಿ ( ಮುಂದುವರಿ ದಭಾಗ)

ಮರಿಸ್ವಾಮಿಯವರದು  ಬಹು ವರ್ಣರಂಜಿತ ವ್ಯಕ್ತಿತ್ವ.  ಅವರ ತಂದೆ ಅವರ ಊರಿನಲ್ಲಿಯ ಸರಕಾರಿ ಶಾಲೆಯಲ್ಲಿ ನಾಲ್ಕನೆ ದರ್ಜೆ ನೌಕರರು.  ಕಿತ್ತು ತಿನ್ನುವ ಬಡತನ ಆದರೂ ಮಗ ಬಹು ಜಾಣ. ತುಂಬ ಬಡತನದಲ್ಲಿ ಬೆಳೆದವರು. ಕಷ್ಟ ಜೀವಿ. ಹೇಗೋ ಎಂ. ಎ ಮುಗಿಸಿದರು, ಅದೂ ಪ್ರಥಮ ವರ್ಗದಲ್ಲಿ . ನಂತರ ತಮ್ಮದೆ ಊರಿನಲ್ಲಿ ಉಪನ್ಯಾಸಕರಾಗಿ ನೌಕರಿ ಪಡೆದರು. ಉತ್ತಮ ಶಿಕ್ಷಕರು ಎಂಬ ಹೆಸರು ಗಳಿಸಿದರು.  ಗಟ್ಟಿ ಮುಟ್ಟಾದ ಶರೀರ. ಉತ್ತಮ ಕ್ರೀಡಾ ಪಟು. ಆಟ ಪಾಠಗಳೆರಡರಲ್ಲೂ ಎತ್ತಿದ ಕೈ. ವಾಲಿಬಾಲ್ನಲ್ಲಂತೂ ಸಾಕಷ್ಡು ಪ್ರೌಢಿಮೆ. ಹೀಗಾಗಿ ಹಳೆಯ ಗೆಳೆಯರ ಜೊತೆಗೂಡಿ ಊರಿನಲ್ಲಿ ಉತ್ತಮ ತಂಡ ಕಟ್ಟಿದರು. ಜತೆಗೆ ಕಾಲೇಜು ಮಕ್ಕಳಿಗೂ ತರಬೇತಿ ನೀಡಿದರು. ಕಟ್ಟು ಮಸ್ತಾದ , ಕಡೆದ ವಿಗ್ರಹದ ತರಹದ ದೇಹ,ಆಟೋಟಗಳಲ್ಲಿ ಮುಂದಾಳು, ಜತೆ ನಯವಿನಯ ಉಳಿಸಿಕೊಂಡಿದ್ದರು. ಹೀಗಾಗಿ ಊರಿನಲ್ಲಿಯೂ ತುಂಬ ಜನಪ್ರಿಯ.ಓದಿದ ಶಾಲೆಯಲ್ಲಿಯೇ ಕೆಲಸ. ಬಹು ಬೇಗ ಹೆಸರು ಬಂದಿತು. ಚಿಕ್ಕದಾಗಿ ವ್ಯವಹಾರಕ್ಕಿಳಿದರು.ಮೊದಲು ಫೈನಾನ್ಸ ಕಂಪನಿ. ಸವಿ ಮಾತು. ನಯವಾದ ನಡತೆ. ಬೇಗ ವ್ಯವಹಾರ ಕೈ ಹಿಡಿಯಿತು. ನಂತರ ಕೇಬಲ್ ವ್ಯವಹಾರಕ್ಕೆ ಕೈ ಹಾಕಿದರು. ಜನ ಬೆಂಬಲ ಇದ್ದೇ ಇತ್ತು. ಹಾಗಾಗಿ ಅಲ್ಲೂ ಭದ್ರವಾಗಿ ತಳ ಊರಿದರು.
ನಂತರ ಎಲೆಕ್ಟ್ರಾನಿಕ್ ಅಂಗಡಿ ತೆರದರು. ರೇಡಿಯೋ, ಟಿ ವಿ , ಫ್ರಿಝ್ ಅದೂ ಕಂತಿನ ಮೇಲೆ ಕೊಡುವ ಯೋಜನೆ ಹಾಕಿದರು.  ಹಣದ ಹೊಳೆ ಹರಿಯಿತು. ಬಂದ ಎಲ್ಲ ಅಧಿಕಾರಿಗಳ ಜೊತೆ ಬಾಂಧವ್ಯ ಬೆಳಸಿದರು. ವಿದ್ಯಾವಂತ, ವಿನಯ ಶೀಲ ಮೇಲೆ ಧಾರಾಳಿ.  ಸರಿ ಇನ್ನೇನು ಬೇಕು.  ಬಂದ ಅಧಿಕಾರಿಗಳೆಲ್ಲ ಬಂಧುಗಳೆ. ಜಿಲ್ಲಾ ಮಟ್ಟದ ಇಲಾಖಾ ಮುಖ್ಯಸ್ಥರನ್ನು ಹಿಡಿದು ಅವರ ಆಧೀನ  ನೌಕರರು ಇವರಿಂದ ಟಿವಿ. ಕೊಂಡರೆ ಅವರ ಸಂಬಳದಲ್ಲಿ ಪ್ರತಿ ತಿಂಗಳೂ ಹಿಡಿದು ಕೊಡುವ ಅವಕಾಶ ಕೊಡಲು ಕಚೇರಿ ಮುಖ್ಯಸ್ಥರಿಗೆ ಆದೇಶಗಳು ಹೋದವು.  ಸಹಜವಾಗಿ ನೌಕರರಿಗೆ ಸುಲಭ ಕಂತಿನ ಮೇಲೆ ಐಷರಾಮಿ ವಸ್ತುಗಳು ದೊರೆತವು. ಅಧಿಕ್ಕಾಗಿ ತನ್ನ ಆಧೀನ ನೌಕರರ ಜೀವನ ಮಟ್ಟ ಉತ್ತಮ ಪಡಿಸಿದ ತೃಪ್ತಿ. ಇವರಿಗೆ ವ್ಯಾಪಾರ ಅಭಿವೃದ್ಧಿ.  ಯಾರು ಯಾರಿಗೆ ಏನೇನು ಸಲ್ಲಬೇಕೋ ಅದು ಸಲ್ಲುತಲಿತ್ತು.  . ಸರ್ವರೂ ಸುಖಿಗಳು. ಇದರಿಂದ ಇನ್ನೂ ಹೆಚ್ಚನ ಅನುಕೂಲ ಪಡೆದವರು ಇದ್ದರು. ಅವರ ಬಳಿ ಈಗಾಗಲೆ ಟಿ..ವಿ ಇದ್ದರೂ ಸಾಲ ಕ್ಕೆ ಗೆ ಸಿಗುವುದೆಂಬ ಒಂದೆ ಕಾರಣಕ್ಕೆ ಕೊಳ್ಳುತ್ತಿದ್ದರು.  ನಂತರ ಅವರು ವಸ್ತುವಿನ ಬದಲಾಗಿ ನಗದು ಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಮಾನವಿಯತೆ ಆಧಾರದ  ಮೇಲೆ ಅರ್ಹರಿಗೆ ಸಹಾಯ ಮಾಡಿ ಇಲಾಖೆಯಿಂದ ಮರು ]ವಸೂಲಿಯನ್ನು ಮಾಢಿಕೊಳ್ಳುತ್ತಿದ್ದರು.  ಯಥಾರೀತಿ ಇವರು ಹೇಳಿದ ಬೆಲೆಗೆ ಅವರು ಮಾರುತ್ತಿದ್ದರು.ಲಾಭ ದ್ವಿಗುಣವಾಗುತ್ತಿತ್ತು.  ಸಾಮ , ದಾನ , ಭೇದ ಹೀಗೆ ಚಾಣಕ್ಯನು ಅರ್ಥ ಶಾಸ್ತ್ರದಲ್ಲಿ ಹೇಳಿದ ಎಲ್ಲ ಉಪಾಯಗಳ ಬಳಕೆಯಾಗಿ ವ್ಯವಹಾರ ಬಹು ಚೆನ್ನಾಗಿ ಕುದುರಿತು. ಹಣ ಹೆಚ್ಚಾದಂತೆ ಉದಾರತೆಯೂ ಹೆಚ್ಚಿತು. ಊರಿನಲ್ಲಿ ಯಾವುದೆ ಸಾರ್ವಜನಿಕ ಕಾರ್ಯ ಕ್ರಮವಾದರೂ ಉದಾರವಾದ ವಂತಿಕೆ. ತಮ್ಮ  ಪ್ರೀತಿಯ ಆಟಕ್ಕೆ ಸುಸಜ್ಜಿತ ಮೈದಾನ. ಆಟಗಾರರಿಗೆ ಸಮವಸ್ತ್ರ, ಬೇರೆ ಊರಿಗೆ ಪಂದ್ಯಾಟಗಳಿಗೆ ಹೋದಾಗ ಉಚಿತ ಊಟ, ತಿಂಡಿ ,ಪ್ರಯಾಣ. ತಮ್ಮ ಊರಿನಲ್ಲೆ ರಾಜ್ಯ ಮಟ್ಟದ ಪಂದ್ಯಾಟಗಳ ಸಂಘಟನೆ, ಆದಕ್ಕೆ  ಅದ್ಧೂರಿಯ ವ್ಯವಸ್ಥೆ, ಜನ ನಾಯಕರಿಗೆ, ಉನ್ನತ ಅಧೀಕಾರಿಗಳಿಗೆ ಆಲ್ಲಿ ವೇದಿಕೆ. ಅವರಿಗೆ ಸರ್ವೋಪಚಾರ . ಇದರಿಂದ ಇವರು ಮರಿಯಾಗಿದ್ದವರು ಮರಿಸ್ವಾಂಯ್ಯನವರು ಆದರು.ಅಧಿಕಾರಿಗಳೂ ಮತ್ತು ಶಾಸಕರ ವಿಶೇಷ ಪ್ರೀತಿಗೆ ಪಾತರ್ರಾದರು. ಇವೆಲೆದರನಡುವೆ ಕಾಲೇಜಿಗೆ ಹೋಗಿ ಪಾಠಮಡಲು ಪುರುಸೊತ್ತು ಎಲ್ಲಿ.ವಿದ್ಯಾರ್ಥಿಗಳ ಪ್ರೀತಿ ಹೆಗೋ ಗಳಿಸಿದರೂ ಒಳಗೊಳಗೆ ಅಪಸ್ವರ ಪ್ರಾರಂಭವಾಯಿತು. ಮೊದಲೆ ದೊಡ್ಡ  ಕಾಲೇಜು. ಒಂದೆ ವಿಷಯದಲ್ಲಿ ಇಬ್ಬರು ಮೂವರು ಉಪನ್ಯಾಸಕರು. ಇತರರಿಗೆ ಅಸೂಯೆ.ಅದರ ಫಲ ವಾಗಿ ದೂರುಗಳು ಹೊಗತೊಡಗಿದವು. ಮರಿಸ್ವಾಮಿ ವ್ಯವಹಾರೆ ಕುಶಲಿ. ಯಾಕೆ . ಇಲ್ಲದ ಉಸಾಬರಿ, ಇದ್ದೂರಿನ ಉದ್ಧಾರಕ್ಕೆ ಹೋಗಿ ಅಪವಾದ ಬೇಡ ಎನಿಸಿ ,  ಹತ್ತಿರದಲ್ಲೆ ಇದ್ದ ಚಿಕ್ಕ ಕಾಲೇಜಿಗೆ ತಾವಾಗಿಯೆ ವರ್ಗ ಮಾಡಿಸಿಕೊಂಡರು ಅಲ್ಲಿ ತಮ್ಮ ಧಾರಾಳತನದಿಂದ ಎಲ್ಲರ ಮನ ಮೆಚ್ಚಿಸಿದರು ವಿದ್ಯಾರ್ಥಿ ಗಳಿಗೆ ತೊಂದರೆಯಾಗ ಬಾರದೆಂದ ತಾವೆ ಹಣ ಕೊಟ್ಟು ಇನ್ನೊಬ್ಬರನ್ನು ಪಾಠ ಮಾಡಲು ವ್ಯವಸ್ಥೆ ಮಾಡಿದರು. ಅದಕ್ಕೆ ಎಲ್ಲರ ಮೌನ ಸಮ್ಮತಿ  ಇತ್ತು. ಪ್ರಿನ್ಸಿಪಾಲರು ಪರ ಊರಿನವರು. ಬಲವದ್‌ ವಿರೋಧ ಏಕೆ?. ಹೇಗಿದ್ದರೂ ಯಾರಿಗೂ ತೊಂದರೆಯಾಗುತ್ತಿಲ್ಲ ಎಂದು ಗಮನ ಹರಿಸಲಿಲ್ಲ. ಇವರೂ ಪಾಪ , ಪೂರ್ತಿ ಹೋಗದೆ ಇರುತ್ತಿರಲಿಲ್ಲ. ಯಾವಾಗಲಾದರೂ ಹೊದಾಗ ತುಸು ಹೊತ್ತು ಇದ್ದು ತರಗತಿಗೂ ಹೋಗಿ ಮಕ್ಕಳ ಪ್ರಗತಿಯ ಬಗ್ಗೆ ವಿಚಾರಿಸಿ ಸ್ವಲ್ಪ ಹೊತ್ತು ಪಾಠವನ್ನೂ ಮಾಡಿ ಬರುತ್ತಿದ್ದರು. ಅವರ ವಿಷಯದಲ್ಲಿ ಫಲಿತಾಂಶವೂ ಚೆನ್ನಾಗಿಯೇ ಬರುತ್ತಿಇತ್ತು. ಇದು ಅನೇಕ ವರ್ಷದಿಂದ ನಡೆದು ಬಂದ ಪದ್ದತಿ.ಎಲ್ಲರೂ ಬಲ್ಲ ರಹಸ್ಯ.
ಯಾವಾಗ ನಮ್ಮ ಕಾಲೇಜಿನಲ್ಲಿ ವಾರದಲ್ಲಿ ಮೂರುದಿನ ಪಾಠ ಮಾಡಬೇಕೆಂದು ನಿಯೋಜನೆಯಾಯಿತೋ ಎಲ್ಲರ ಕಣ್ಣು ನನ್ನ ಕಡೆ ತಿರುಗಿದವು. ಅವರು ನಿಯೋಜನೆ ಆದೇಶವನ್ನು ರದ್ದು ಮಾಡಿಸಲು ಪ್ರಯತ್ನಿಸಿದರು. ಫಲಕಾರಿಯಾಗಲಿಲ್ಲ. ಕೊನೆಗೆ ಬಂದು ನಮ್ಮಕಾಲೇಜಿನಲ್ಲಿ ವರದಿ ಮಾಡಿಕೊಂಡರು.
ಅಂದು ನನ್ನ ಛೇಂಬರಿಗೆ ಬಂದು ,” ಸಾರ್ ನಾನು ನಿಮ್ಮ ಕಾಲೇಜಿಗೆ ವಾರಕ್ಕೆ ಮೂರು  ದಿನ ಪಾಠ ಮಾಡಬೇಕಿದೆ.ನನ್ನ ವಿಷಯ ನಿಮಗೂ ಗೊತ್ತು. ಆ ಕಾಲೇಜಿನಲ್ಲಿ ಮಾಡಿದ ವ್ಯವಸ್ಥೆಯನ್ನೆ ಇಲ್ಲಿಯೂ ಮಾಡುವೆ.ನನಗೆ ಎಷ್ಟು  ಹಣ ಖರ್ಚಾದರೂ  ಚಿಂತೆ ಇಲ್ಲ  , ಯಾವಾಗಲಾದರು ಒಮ್ಮೆಬಂದು ಸಹಿ ಮಾಡುವೆ ಅವಕಾಶ ಕೊಡಿ “ ಎಂದು ವಿನಂತಿಸಿದರು.  ನಾನು ಬದಲಿ ವ್ಯವಸ್ತೆಗೆ ಒಪ್ಪಿಕೊಳ್ಳಲಿಲ್ಲ. ನಂತರ ಇತರ ಎಲ್ಲ ಉಪನ್ಯಾಸಕರೂ ಬಂದು ಅವರ ಪರವಾಗಿ ವಿನಂತಿ ಮಾಡಿಕೊಂಡರು.
. “ ಸಾರ್ ಅವರೂ ಎಷ್ಟೋ ವರ್ಷಗಳಿಂದ ಪಾಠವನ್ನೆ ಮಾಡುವುದಿಲ್ಲ. ಅದು ಇಲಾಖೆಗೂ ಗೊತ್ತು, ಶಾಸಕರೂ ಅವರ ಸ್ನೇಹಿತರು, ಹೇಗಿದ್ದರೂ ಬೋಧನೆಗೆ ತಂದರೆಯಾಗದಂತೆ ವ್ಯವಸ್ಥೆ ಮಾಡುವರು. ನಾವೂ ಕಮಕ್ ಕಮಕ್ ಎನ್ನವುದಿಲ್ಲ.’
ನಾನು ಅವರ ಎಲ್ಲ ಮಾತನ್ನೂ ಸಾವಧಾನವಾಗಿ ಆಲಿಸಿದೆ
ನಾನು ಸಂಧಿಗ್ದದಲ್ಲಿ ಬಿದ್ದೆ. ಅವನು ಬಹಳ .ಬಹಳ ಛಾತಿವಂತ ಮನುಷ್ಯ. ಶಾಸಕರ ಹೆಗಲ ಮೇಲೆ ಕೈ ಹಾಕುವ ಸಲಿಗೆ ಇದೆ.ಅದಿಕಾರಿಗಳೂ ಅವನ ಋಣ ಲ್ಲಿರುವವರೆ. ಆದರೆ ನಾನು ಈವರೆಗೆ ಪಾಲಿಸಿ ಕೋಡು ಬಂದ ತತ್ವಕ್ಕೆ ತಿಲಾಂಜಲಿ ಬಿಡಬೇಕಾಗಿತ್ತು ಅವನಲ್ಲಿನ  ಒಂದು ಸದ್ಗುಣ ಯಾವತ್ತು. ಯಾವದೆ ಕಾರಣಕ್ಕೂ ಕೆಟ್ಟ ಹೆಸರು ಮತ್ತು ಅಪನಂದೆಗೆ ಗುರಿಯಾಗಲು ಸಿದ್ಧರಿದ್ದಿಲ್ಲ. ಇಲಾಖೆ ಮತ್ತು ಸಮಾಜದಲ್ಲಿ ಗಣ್ಯ ಎನಿಸಿಕೊಂಡಿದ್ದ.
ಸಾರ್ವಜನಿಕರಲ್ಲಿ ಮತ್ತು ಇಲಾಖೆ ಯಲ್ಲಿ ನನಗೆ ತುಂಬ ಕರ್ತವ್ಯ ನಿಷ್ಠೆ ಮತ್ತು ಪ್ರಮಾಣಿಕತೆಯ ಬಗ್ಗೆ   ಹೆಸರಿತ್ತು.   ಸಾರ್ವಜಕನಿಕರು, ವಿದ್ಯಾರ್ಥಿಗಳಲ್ಲಿ ಗೌರವ ಇತ್ತು. ಈಗ ಎಲ್ಲರೂ ಇಬ್ಬರಲ್ಲೂ ಅಗಬಹುದಾದ ಸಂಘರ್ಷ ಹೇಗಿರಬುದು  ಎಂದು ಕಾತುರರಾಗಿದ್ದರು.ನನ್ನ ಆತ್ಮೀಯರಿಗೂ ಏನಾಗುವದೋ ಎಂಬ ಆತಂಕ.
 ಕೆಲವು ಸಮಯದ ನಂತರ ನಾನು ಅವರೊಬ್ಬರನ್ನೆ ಕರೆಸಿ ಮಾತ ನಾಡಿದೆ. ನಿಮಗೆ ನಮ್ಮ ಕಾಲೇಜಿಗೆ ನಿಯೋಜನೆಯಾಗಿದೆ. ಇಲ್ಲಿ ಬಂದು ವಾರದಲ್ಲಿ ಮೂರು ದಿನ  ಪಾಠ ಮಾಡಲೆ ಬೇಕು.. ನೀವು ಆ ಕಾಲೇಜಿನಲ್ಲಿ ಏನು ಮಾಡುವಿರಿ ಎಂಬುದು ನನಗೆ ಸಂಬಂಧಿಸಿದ ವಿಷಯವಲ್ಲ. ಆದರೆ ಇಲ್ಲಿ ನೀವು ನಿತ್ಯವೂ ಬರಲೇ ಬೇಕು. ಬಂದರೆ ಮಾತ್ರ ಹಾಜರಿ. ಇಲ್ಲವಾದರೆ ಗೈರುಹಾಜರಿ ಎಂದು ನಾನು ವರದಿ ಮಾಡುವೆ. ಆದರೆ ನಿಮಗಾಗಿ ಒಂದು ವಿಶೇಷ ಸೌಲಭ್ಯವನ್ನು ಕೊಡುವೆ. ಅದು ಕಾನೂನು ಬಾಹಿರವಲ್ಲ. ಆದರೆ ಕಾನೂನೇತೆತರ ಸೌಲಭ್ಯ. ನಿಮಗೆ ಇಲ್ಲಿ ಬಂದಾಗ ಕಾಲೇಜು ಅವಧಿ ಮುಗಿಯುವ ತನಕ ಕಾಲೇಜಿನಲ್ಲಿಯೇ ಇರಬೇಕು ಎಂದು ಕಡ್ಡಾಯ ಮಾಡುವುದಿಲ್ಲ. ನೀವು ಬಂದು ನಿಮ್ಮ ಪಾಠ ಮುಗಿಸಿಕೊಂಡು ಹೋಗಬಹುದ ಎಂದೆ. ಹೇಗಿದ್ದರೂ ಅವರು ಕಾರಿನಲ್ಲೆ ಕಾಲೇಜಿಗೆ ಬರುತಿದ್ದರು.  ನೀವು ಹೇಗೆ ಮಾಡುವಿರೋ ಗೊತ್ತಿಲ್ಲ . ನನಗೆ ವಿದ್ಯಾರ್ಥಿಗಳಿಂದ ಮತ್ತು ನಿಮ್ಮ  ಸಹೊದ್ಯೋಗಿಗಳಿಂದ ದೂರು ಬರಬಾರದು: ಎಂದು ಶಾಂತವಾಗಿ ಹೇಳಿದೆ.
 ಅದನ್ನು ನನಗೆ ಬಿಡಿ,ಸಾರ್ ಎಂದರು. ಎಲ್ಲ ಉಪನ್ಯಾಸಕರೂ ನನ್ನ ಆತ್ಮೀಯರೆ. ವ್ಯವಸ್ಥೆ ಮಾಡುವೆ  ಎಂದರು. ಮಾರನೆ ದಿನ ಎಲ್ಲ ಉಪನ್ಯಾಕರೂ ಬಂದು, ಸಾರ್ ನೀವು ಮರಿಯವರಿಗೆ ರಿಯಾಯಿತಿ ಕೊಡಿ . ನಾವೆಲ್ಲರೂ ಹೊಂದಿಕೊಂಡು ಹೋಗುತ್ತೇವೆ. ಎಂದರು. ನಂತರ ಅವರು ತರಗತಿಗೆ ದಿನವೂ ಬರಲು ಶುರು ಮಾಡಿದರು. ಅಷ್ಟೆ ಅಲ್ಲ ಇತರರು ಅವರು ಯಾವಾಗ ಬಂದರೂ ತಮ್ಮ ತರಗತಿಯನ್ನು ಬಿಟ್ಟುಕೊಟ್ಟು  ನಂತರ ತಾವು  ಅವರ ತರಗತಿ ತೆಗೆದು ಕೊಳ್ಳುತ್ತಿದ್ದರು. ಅವರ ಈ ಸಹಕಾರದಿಂದ ಅವರು ವಾರದಲ್ಲಿ ಮೂರುದಿನ  ಕಾರಿನಲ್ಲೆ ಬಂದು ಎರಡು ತಾಸು ಪಾಠ ಮುಗಿಸಿ ಹಾಜರಿ ಹಾಕಿ ಹೊರಡುತ್ತಿದ್ದರು.ಕೆಲ  ದಿನಗಳ ತರುವಾಯ ತರಗತಿಗೆ ಹೋಗಿ ವಿದ್ಯಾರ್ಥಿಗಳನ್ನು ಪಾಠ ಹೇಗೆ ಸಾಗಿದೆ ಎಂದು ವಿಚಾರಸಿದೆ.ಅವರು ಒಳ್ಳೆಯ ಅಭಿಪ್ರಾಯ ಕೊಟ್ಟರು.  ಯಾವುದೇ ಸಮಸ್ಯೆಇರಲಿಲ್ಲ. ಆದರೂ ಅವರು ವಾರಕ್ಕೆ  ಪ್ರತಿ ತರಗತಿಗೆ ನಾಲಕ್ಕು ಅವಧಿಯ ಬದಲು ಮೂರೆ ಅವಧಿಗೆ ಪಾಠ ಮಾಡುತ್ತಿದ್ದರು. ಉಳಿದ ಒಂದು ಅವಧಿಯಲ್ಲಿ ಬೇರೆ ಯಾರೋ ಹೆಚ್ಚುವರಿಯಾಗಿ ತೆಗದು ಕೊಳ್ಳುತಿದ್ದರು. ಅದನ್ನು ನಾನು  ಕೆದಕಲು ಹೋಗಲಿಲ್ಲ.
ಅಂತೂ ಅವರು ನಮ್ಮ ಕಾಲೇಜಿನಲ್ಲಿ ವಾರಕ್ಕೆ ಮೂರುದಿನ ತಪ್ಪದೆ ಹಾಜರಾಗುತ್ತಿದ್ದರು. ಪಾಠ ಮುಗಿಸಿದ ತಕ್ಷಣ ಹೊರಡತಿದ್ದರು. ಅರು ತಿಂಗಳ ಕಾಲ ಅಂತೂ ಅವರಿಂದ ಪಾಠ ನೆಡೆಯಿತು ತಂಗಳ ನಂತರ ವಿದ್ಯಾರ್ಥಿಗಳನ್ನು ಅವರ ಬೋಧನೆಯ  ಬಗ್ಗೆ ವಿಚಾರಿಸಿದೆ. ಎಲ್ಲರೂ ಒಕ್ಕೊರಳಿನೀಂದ ತುಂಬ ಉತ್ತಮವಾಗಿ ಪಾಠಗಳು ಸಾಗಿವೆ. ನಮಗೆ ಈ ವಿಷಯದ ಬಗ್ಗೆ ಯಾವುದೆ  ಸಮಸ್ಯೆ  ಇಲ್ಲ ಎಂದು ತುಂಬು ಆತ್ಮ ವಿಶ್ವಾಸ ವ್ಯಕ್ತ ಪಡಿಸಿದರು. ನನಗೆ ಬೇಕಾದದ್ದಾರೂ ಏನು. ಅವರು ಬರುತ್ತಿದ್ದಾರೆ. ಪಾಠ ಮಾಡುತ್ತಿದ್ದಾರೆ .ಅಷ್ಟು ಸಾಕು ಎಂದು ಸುಮ್ಮನಾದೆ. ವರ್ಷದ ಕೊನೆ ಬಂದಿತು. ಅವರ ನಿಯೋಜನೆಯ ಅವಧಿ ಮುಗಿಯಿತು. ಯಾವುದೆ ಕಿರಿಕಿರಿ ಇಲ್ಲದೆ ಅವರು ಸ್ವಸ್ಥಾನಕ್ಕೆ ಮರಳಿದರು.
 ಅವರು ಕೊಟ್ಟ ಮಾತಿನಂತೆ ಮಕ್ಕಳಿಗೆ ಉತ್ತಮವಾಗಿ ಬೋಧಿಸಿದ್ದರು. ಫಲಿತಾಂಶವೂ ಚೆನ್ನಾಗಿಯೆ ಬಂದಿತು. ಆದರೆ ನಮ್ಮ ಜಿಲ್ಲೆಯಲ್ಲಿ ಗುಲ್ಲೋ ಗುಲ್ಲು. ಮರಿಸ್ವಾಮಿ ಆವರಿಂದ  ಪಾಠ ಮಾಡಿಸಿದ ಪ್ರಿನ್ಸಿಪಾಲರು  ಇತ್ತೀಚಿನ ವರ್ಷಗಳಲ್ಲಿ    ಇವರೊಬ್ಬರೆ ಎಂಬ ಮಾತು ಎಲ್ಲ ಕಡೆ ಹರಡಿತು. ಅದು ಹೊಗಳಿಕೆಯೋ , ಟೀಕೆಯೋ ಎಂದು ತಲೆ ಕೆಡಿಸಿಕೊಳ್ಳಲು ನನಗಂತೂ  ಅವಧಾನವಿರಲಿಲ್ಲ.ನಂತರ ನನಗೂ ವರ್ಗವಾಯಿತು. ನಿವೃತ್ತಿಯೂ ಆಯಿತು. ಆ ಊರನ್ನೂ ಬಿಟ್ಟೆ.ಅವರು ಇತ್ತೀಚೆಗ ಭೂವ್ಯವಹಾರ ಮಾಡಿ  ಕೋಟಿಗಟ್ಟಲೆ ಸಂಪಾದಿಸುತ್ತಿರುವರು , ಬೆಂಗಳೂರಲ್ಲಿ ಲೇ ಔಟು ಮಾಡಿಸಿದ್ದಾರೆ ಎಂಬ ಸುದ್ದಿ ಆಗಾಗ ಬರುತ್ತಿತ್ತು. ನನಗೆ ಇಷ್ಟೆಲ್ಲ ಇದ್ದರೂ ಅವರಿಗೆ ಸರ್ಕಾರಿ ಚಾಕರಿಯ ಮೋಹದ ಹಿಂದಿನ ಮರ್ಮ ಅರ್ಥ ವೇ ಅಗುತ್ತಿಲ್ಲ. ಅವರಿಗೆ ನಂತರ ಪ್ರಾಂಶುಪಾಲರಾಗಿ ಬಡ್ತಿಯೂ ದೊರೆಯಿತು. ಅವರು ಕೆಲಸ ಮಾಡುತ್ತಿರುವ ಕಾಲೇಜಿನಲ್ಲೆ ಹುದ್ದೆ ದೊರೆಯಿತು.
                           ಅವರಿಗಿದ್ದ ಪ್ರಭಾವ, ಅವರ ಧಾರಾಳತನ ಮತ್ತು ಊರಲ್ಲಿ ಅವರಿಗಿರುವ ಸ್ಥಾನ, ಮಾನ  ಕಾಲೇಜಿನ ಏಳಿಗೆಗೆ ಸಾದನವಾಯಿತು. ಅವರಿಗೆ ಈಗ ಪಾಠ ಮಾಡುವ ರಗಳೆ ಇರಲಿಲ್ಲ. ಖಾಲಿ ಇದ್ದ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಿಸಿದರು. ಶಾಲೆಗೆ ಎಲ್ಲ ಮೂಲ ಭೂತ ಸೌಕರ್ಯಗಳನ್ನ್ನು ಅನುದಾನ ಬರಲಿ ಬಿಡಲಿ ತಮ್ಮ ಹಣ ಕೈಯಿಂದ ಹಾಕಿ ಒದಗಿಸಿದರು. ಸಿಬ್ಬಂದಿಯವರೂ ಸಹಾ ಅವರು ಬಂದರೋ . ಇಲ್ಲವೋ ಎಂಬುದನ್ನೂ ಪರಿಗಣಿಸದೆ ತಮ್ಮ ಕರ್ತವ್ಯವನ್ನು ಕಮಕ್ ಕಿಮಕ್ ಎನ್ನದೆ ಮನ ಮುಟ್ಟಿ ಮಾಡುತ್ತಿದ್ದರು. ಯಾರಾದರೂ ಬಾಲ ಬಿಚ್ಚಿದರೆ ಅವರಿಗೆ ದೂರದ ಊರಿಗೆ ವರ್ಗಾವಣೆ ಯಾಗುವುದು ಖಚಿತ ವಾಗಿತ್ತು.  ಮರಿಸ್ವಾಮಿ ವಾರಕ್ಕೆ ಒಂದುಸಲ ಕಾಲೇಜಿಗೆ ಭೇಟಿ ನೀಡಿ ಅರ್ದ ಗಂಟೆ ಇದ್ದು  ಸಹಿ ಮಾಡಿ ಹೊರಡುತ್ತಿದ್ದರು. ಕಾಲೇಜಿನ ಯಾವ ಕೆಲಸವಿದ್ದರೂ ಕೋಲಾರದಲ್ಲಾಗಲಿ , ಬೆಂಗಳೂರಲ್ಲಾಗಲಿ ಫೋನು ಮೂಲಕವೋ ಇಲ್ಲವೆ ಖುದ್ದಾಗಿಯೋ ಹೋಗಿ ಮಾಡಿಸುತ್ತಿದ್ದರು.ವರ್ಷಕ್ಕ ಎರಡು ಸಾರಿ ಅದ್ಧೂರಿಯ ಕಾರ್ಯಕ್ರಮಗಳು. ಮಕ್ಕಳಿಗೆ ಉಚಿತ ಪುಸ್ತಕ . ಪ್ರವಾಸ, ಎಲ್ಲದಕ್ಕೂಉತ್ತೇಜನ ನೀಡುತ್ತಿದ್ದರು. ಅವರು ಸಂಬಳವನ್ನೂ ಪ್ರತಿ ತಿಂಗಳೂ ತೆಗೆದು ಕೊಳ್ಳುತ್ತಿರಲಿಲ್ಲ. ಆರು ತಿಂಗಳಿಗೋ, ವರ್ಷಕ್ಕೋ ಒಂದೆಸಲ  ಹಣ ಪಡೆಯುತ್ತಾರಂತೆ .ಅಷ್ಟೆ  ಅಲ್ಲ ಸಿಬ್ಬಂದಿಯಲ್ಲಿ ಯಾರಿಗೆ ಯಾವುದೆ ತೊಂದರೆ ಯಾದರೆ , ಸಮಸ್ಯೆಯಾದರೆ ಅದನ್ನು ಪರಿಹರಿಸುತ್ತಿ ದ್ದರು.ಹೀಗಾಗಿ ಅವರ ಬಗ್ಗೆ ಎಲ್ಲರಿಗೂ ಭಯ , ಭಕ್ತಿ. ಶಾಲಾ ಆವರಣದಲ್ಲಿ ಉತ್ತಮ ತೋಟ ಮಾಡಿಸಿದರು. ಯಾರಾದರು ಯಾವುದೆ ಒಳ್ಳೆಯ ಸಲಹೆ ನೀಡಿದರೂ ಅವರಿಗೆಅದನ್ನು ಅನುಷ್ಠಾನ ಮಾಡಲು ಅನುಮತಿ ಜತೆಗೆ ಅಗತ್ಯ ಸಹಾಯ ಲಭಿಸುತ್ತಿತ್ತು. ಅದರಿಂದ  ಅವರ ಕಾಲೇಜು  ಎಲ್ಲ ಕಾಲೇಜುಗಳ ಮಧ್ಯ ಎದ್ದು ಕಾಣವ ಹಾಗೆ ಆಗಿತ್ತು. ಉತ್ತಮ ಫಲಿತಾಂಶವೂ ಬರುತ್ತಿತ್ತು. ಇಲಾಖೆಯ ಅಧಿಕಾರಿಗಳೂ , ಸ್ಥಳಿಯ ಶಾಶಕರು ಭೇಟಿ ನೀಡಿ, ಬೆನ್ನು ತಟ್ಟಿ ಹೋಗುತ್ತಿದ್ದರು.ಇದೆಲ್ಲ ಮಾಡಿದವರು ಕಾಲೇಜಿಗೆ ಸರಿಯಾಗಿ ಬಾರದ ಮರಿಸ್ವಾಮಿ. ಈ ವಿಷಯ ನನ್ನ ಕಿವಿಗೆ  ಅಲ್ಪ ಸ್ವಲ್ಪ ಬಿದ್ದಿತ್ತು.ಅಲ್ಲಿನ  ವ್ಯವಸ್ಥೆನೋಡಿ ಬಾಯಿಕಟ್ಟಿತು.ಅವರು ತಮ್ಮ ಸಿಬ್ಬಂದಿಯನ್ನೆಲ್ಲ ಕರೆಸಿ ನನಗೆ ಪರಿಚಯ ಮಾಡಿಸಿದರು.
 ಅವರಿಗೆಲ್ಲ ಹೇಳಿದರು,” ನನ್ನಿಂದ ಆರು  ತಿಂಗಳು ತಪ್ಪದೆ ಪಾಠ ಮಾಡಿಸಿದವರು ನನ್ನ ಸೇವೆಯಲ್ಲಿ ಇವರೊಬ್ಬರೆ. ಅವರಿಂದ ನಾನು ಬಹಳ ಕಲಿತೆ. ಅದಕ್ಕೆ ನನಗೆ ಅವರೆಂದರೆ ಬಹಳ ಗೌರವ ಎಂದರು”
. ನಾನು ಆ ಸಮಯದಲ್ಲಿ ಕಠಿನವಾಗಿ ನಡಸಿಕೊಂಡಿದ್ದೆ, ಬೇಸರವನ್ನೂ ಉಂಟು ಮಾಡಿದ್ದೆ. ಸಹಜವಾಗಿ ಅಸಮಾಧಾನವಿರಬಹುದು ಎಂದು ಕೊಂಡಿದ್ದೆ. ಆದರೆ ಅದರ ಬಗ್ಗೆ  ನಾನು   ಹೆಚ್ಚು ಯೋಚನೆಯನ್ನು ಮಾಡಿರಲೇ ಇಲ್ಲ.ಅವರಲ್ಲಿ ಮೂರು ಮಂದಿ  ನನ್ನ ಹಿಂದಿನ ಸಹೋದ್ಯೋಗಿಗಳು ಇದ್ದರು. ಅವರೆಲ್ಲ ಬಂದು
“ಸಾರ್, ನಾವು ನಿಮ್ಮನ್ನು ಸದಾ ನೆನಸುತ್ತಿದ್ದೇವೆ.ನಿಮ್ಮ ಉತ್ತೇಜನದಿಂದ ಸ್ನಾತಕೋತ್ತರ ಪದವಿ ಪಡೆದೆವು. ಈಗ ಉಪನ್ಯಾಸಕರಾಗಿ ಬಡ್ತಿ ಬಂದಿದೆ. ಸದಾ ನಿಮ್ಮ ವಿಷಯ ಮಾತನಾಡುತ್ತಿರುತ್ತೇವೆ. ನಿಮ್ಮ ಕಾಲವೆ ಕಾಲ. ಅದು ಮರಳಿ ಬಾರದು” ಎಂದು ಸಂತಸ ವ್ಯಕ್ತಪಡಿಸಿದರು .
 ಅವರು ಆತ್ಮೀಯತೆಯಿಂದ ಎಲ್ಲವನ್ನೂ ತೋರಿಸಿ ಕೊನೆಗೆ ಒಂದು ಚಿಕ್ಕ ಕಾಣಿಕೆಯನ್ನೂ ಕೊಟ್ಟರು.
  “ ಅದೇನು ? ಇದೆಲ್ಲ ಬೇಡ”   ಎಂದೆ..
“ ಇಲ್ಲ , ಸಾರ್ ನಮ್ಮ ಪ್ರೀತಿಗೆ ಕೊಡುವೆವು, ನಿಮಗೆ ತಕ್ಕದ್ದನ್ನೆ ಕೊಟ್ಟಿರುವೆವು ಮನೆಗೆ ಹೋಗಿ ನೋಡಿ ,“  ಎಲ್ಲರೂ ಒಕ್ಕೊರಳಿನಿಂದ ವಿನಂತಿಸಿದರು
. “ನಾನು ನಿಮ್ಮಂತೆ ಇಲ್ಲ . ನಿಜ. ಕಾಲೇಜಿಗೆ ಸರಿಯಾಗಿ ಬರಲಾಗುತ್ತಿಲ್ಲ. ಆದರೆ ನೀವು ಮಕ್ಕಳ ಏಳಿಗೆಗೆ ಮಾಡುತ್ತಿದ್ದ ಕೆಲಸವನ್ನು  ನಾನೂ ಮೆಚ್ಚಿದ್ದೆ. ಈಗ  ಅದನ್ನೆ ನನ್ನದೇ ಆದ ರೀತಿಯಲ್ಲಿ  ಅನುಕರಿಸುತ್ತಿದ್ದೇನೆ.  ಎಲ್ಲ ದೂರ ನಿಯಂತ್ರಣದಿಂದಲೆ ಸುಗಮವಾಗಿ ಸಾಗಿದೆ. ನಾನು ನಿಯಮಾನಸಾರ ಅಕ್ಷರಶಃ ನಡೆಯುತ್ತಿಲ್ಲ. ಆದರೆ ನಿಮ್ಮ ಉದ್ದೇಶಗಳನ್ನು ಸಾಕಾರಗೊಳಿಸಿದ್ದೇನೆ. ಅದಕ್ಕೆ ನಿಮ್ಮ ಆಶೀರ್ವಾದ ಪಡೆಯಲು ಕರೆಸಿದೆ, ” ಎಂದು ತಲೆ ಬಾಗಿದರು.

ನನಗೆ ಏನು ಹೇಳ ಬೇಕೋ ತಿಳಿಯಲಿಲ್ಲ. ನಮ್ಮಲ್ಲಿ ಸಪ್ತಾಹಿಕ, ಪಾಕ್ಷಿಕ , ಮಾಸಿಕ ಪ್ರಿನ್ಸಿಪಾಲರು ಆಗಲೂ ಇದ್ದರು. ಈಗಲೂ ಇದ್ದಾರೆ. . ಸಂಬಳದ ಸಮಯಕ್ಕೆ ಬಂದು ಬಿಲ್ಲಿಗೆ ಸಹಿ ಮಾಡಿ ಬಂದಿರುವ ಅನುದಾನವನ್ನೆಲ್ಲ ಬಾಚಿಕೊಂಡು ಹೊರಡುವರು.
ನಾನು ಪ್ರಿನ್ಸಿಪಾಲ, ನನ್ನನ್ನು ಕೇಳುವುದಕ್ಕೆ ನೀವು ಯಾರು? ಎಂದು ದಬಾಯಿಸಿ , ಕೊನೆಗೆ  ಅಪನಿಂದೆಗೆ, ಅಮಾನತ್ತಿಗೆ ಒಳಗಾದವರು ಬಹಳ.
ಆದರೆ ಇಲ್ಲಿನ ಪರಿಸ್ಥಿತಿ ಬೇರೆ. ಬೆಳಗಿನಿಂದ ಸಂಜೆಯ ತನಕ ಮೂಗಿಗೆ ಕವಡೆ ಹಚ್ಚಿಕೊಂಡು ದುಡಿದರೂ ಅಂದು ಕೊಂಡ ಕೆಲಸವನ್ನು ಮಾಡಲಾಗದೆ ಕೆಟ್ಟ ಹೆಸರು ಪಡೆದು   ನೊಂದುಕೊಂಡ  ಸಜ್ಜನರನ್ನು  ಹಲವರನ್ನು ಕಂಡಿರುವೆ. ಬಾರದಿದ್ದರೂ ಬೆಸ್ಟ್ ಪ್ರಿನ್ಸಿಪಾಲರು ಎನಿಸಿ ಕೊಂಡದನ್ನು ನೋಡಿದ್ದು ಇದೆ ಮೊದಲು. ಆಗ ಅಂದು ಕೊಂಡೆ.  ಎ.ಜಿ ಗಾರ್ಡಿನರನ ” ನಾಯಿಯ ಪಾಡು”  ಪ್ರಬಂಧದಲ್ಲಿ ಹೇಳಿದಂತೆ ನಿಯಮಗಳನ್ನು ಅಕ್ಷರಸಃ ಪಾಲಿಸುವರು ಅನೇಕ ಜನರಿದ್ದಾರೆ. ಆದರೆ ಆಶಯ ನೆರವೇರದೆ ವಿರುದ್ಧ ಪರಿಣಾಮವಾಗುವುದು.ಸಾಧನೆಯಷ್ಟೆ ಸಾಧನಾ ವಿಧಾನವು ಮುಖ್ಯ. ಎಂಬ  ನಂಬಿಕೆ ನಮ್ಮಲ್ಲಿದೆ. ಆದರೆ “End justifies the means “ ಎನ್ನುವದರ ಸಾಕ್ಷಾತ್ಕಾರ ವಾಗಿದೆ ಇವರ ವಿಷಯದಲ್ಲಿ . ಅವರು ಬರುವುದೆ ಆಗೀಗ. ಅದರೆ ಎಲ್ಲ ಕಾಲೇಜಿನಲ್ಲಿ ಸರಿಯಾಗಿದೆ. ಯಾವದು ಸರಿ? ಯಾವದು ತಪ್ಪು ? ಎಂಬ ಜಿಜ್ಞಾಸೆ ನನ್ನಲ್ಲಿ ಹುಟ್ಟಿಕೊಂಡಿದೆ. ಅದಿನ್ನೂ ಪರಿಹಾರವಾಗಬೇಕಿದೆ. ಮನೆಗೆ ಹೋಗಿ ಅವರು ಕೊಟ್ಟ, ಕಾಣಿಕೆ ನೋಡಿದೆ. ಅದು ಒಂದು ಪುಟ್ಟ ಭಗವದ್ಗೀತೆ. ನೋಡಿ ಮುಖದಲ್ಲಿ ಮುಗಳ್ನಗು ಮೂಡಿತು.

Monday, May 20, 2013

ಆರರಿಂದ ಅರವತ್ತು-ಸರಣಿ-ಮರೆಯಲಾಗದ ಮರಿ.


ಮರೆಯಲಾಗದ  ಮರಿಸ್ವಾಮಿ                                                
ಕೋಲಾರ ಜಿಲ್ಲೆಯಲ್ಲಿ ನಾಲ್ಕುವರ್ಷ ಕೆಲಸ ಮಾಡಿದೆ.ಅಲ್ಲಿ ನನ್ನ ಷಡ್ಡಕ ಇಂಜನಿಯರು. ಮನೆಕಟ್ಟುವುದು ಅವರ ಹವ್ಯಾಸ.ಮೊದಲು ೨೦x೩೦ ರ ನಿವೇಶನದಲ್ಲಿ ಚಿಕ್ಕ ಚೊಕ್ಕ ಮನೆ ಕಟ್ಟಸಿದ.ನಂತರ. ಅದರ ಮೇಲೆ  ಮಹಡಿ.  ಕಾಸು ಕೈ ಸೇರಿದಂತೆ ದೊಡ್ಡ ಮನೆ ಅವಶ್ಯವೆನಿಸಿತು. ಸರಿ ಕಟ್ಟಲು ಮೊದಲು ಮಾಡಿದ .  ಹಣದ ಅಡಚಣೆಯಾಯಿತು ಎಂದು, ಆಗ ಕೈಸಾಲ ಪಡೆದ. ನಂತರ ಅದನ್ನು ಹಿಂತಿರುಗಿಸದೆ , ಹೇಗೂ ನಿಮಗೆ ಮನೆ ಇಲ್ಲ. ನಿವೃತ್ತರಾದ ಮೇಲೆ ಎಲ್ಲಿಗೆ ಹೋಗುತ್ತೀರಿ. ನಿಮ್ಮದು ಅಂತ ಒಂದು ಗೂಡು ಇರಲಿ ನನ್ನ ಮನೆ ಕೊಡುವೆ . ಉಳಿದ ಹಣ ಆದಾಗ ಕೊಡಿ ಎಂದು ಒತ್ತಾಯ ಮಾಡಿದ.  ಅದಕ್ಕೆ ಹೆಂಡತಿಯ ಒತ್ತಾಸೆ ಬೇರೆ. ಮೂವತ್ತು ವರ್ಷ ಸರಕಾರಿ ಸೇವೆ ಮಾಡಿದರೂ ನನ್ನ ಮನೆ , ಜಾಗ ಅಂತ ಏನೂ ಇರಲಿಲ್ಲ.ಮೂವತ್ತು ವರ್ಷದ ಹಿಂದೆ ಹುಟ್ಟೂರು ಬಿಟ್ಟವನು ನಮ್ಮ ಊರು ಬಿಟ್ಟ ಮೇಲೆ ಎಲ್ಲ ಊರು ನಮ್ಮವೆ. . ಶೆಟ್ಟಿ ಇಳಿದಲ್ಲಿ ಪಟ್ಟಣ ಎನ್ನುವಂತೆ ,ಯಾವ ಊರಾದರೇನು ವರ್ಗ ವಾದೊಡನೆ ಗುಡುಗುಂಟಿ ಜೋಗೇರರಂತೆ ಸಮಾನು ಸರಂಜಾಮು ಹೆಂಡತಿ ಮಕ್ಕಳ ಸಮೇತ ಸಮೇತ ಹೊಸ ಊರಲ್ಲಿ ನೌಕರಿಗೆ ಹಾಜರಾಗುತ್ತಿದ್ದೆ. ಮಡದಿಯೂ ಸಹಾ” “ಕಂತೆಗೆ ಬೊಂತೆ. ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ಎಂದುಕೊಂಡು ಹಾಯಾಗಿದ್ದರು.ನಾನು ಇಂಗ್ಲಿಷ್ ಉಪನ್ಯಾಸಕನಾಗಿದ್ದರೂ  ಹಳ್ಳಿಗಳಲ್ಲೆ ಸುತ್ತಿದರಿಂದ ಮಕ್ಕಳಿಗೆ ಸರಕಾರಿ ಶಾಲೆ. ಕನ್ನಡ ಮಾಧ್ಯಮದಲ್ಲೆ ಓದು. ಯಾವದೆ ಚಿಂತೆ ಇಲ್ಲದೆ ಕೋಶ ಓದುತ್ತಾ ದೇಶ ಸುತ್ತಿದೆ. ಆದರೆ ವಿಧಿ ಲೀಲೆ ಕೊಟ್ಟ. ಹಣ ಕೈ ಬಿಟ್ಟರೆ ಹೇಗೆ? ಎಂದು ಕೊಂಡು  ಇನ್ನಷ್ಟು ಹಣ ಕೊಟ್ಟ  ಪರಿಣಾಮವಾಗಿ ಆ ಪುಟ್ಟ ಮಹಡಿ ಮನೆ ಅಯಾಚಿತವಾಗಿ ನನಗೆ ಬಂದಿತು. ಮನೆ ಕಟ್ಟುವಾಗಿನ ಯಾವುದೆ ಕಟು ಅನುಭವ ನನಗಾಗಲೆ ಇಲ್ಲ. ಅಲ್ಲಿಂದ ವರ್ಗ ವಾದಾಗ ಒಂದು ಮನೆ ನನಗೆ ಇಟ್ಟು ಕೊಂಡು ಇನ್ನೊಂದನ್ನು ಬಾಡಿಗೆಗೆ ನೀಡಿದೆ.ಇದು ಹದಿನೈದು ವರ್ಷದ ಹಿಂದಿನ ಮಾತು. ಇಂದಿನ ನಿವೇಶನದ ಬೆಲೆಗೆ ಅಂದು ಪುಟ್ಟ ಮನೆಯೆ ಬಂದಿತು.
 ನಾನೋ ಕುವೆಂಪು ಅವರ,  ಓ ನನ್ನ ಚೇತನ,  ಆಗು  ನೀ  ಅನಿಕೇತನ,  ಮನೆಯನೆಂದು ಕಟ್ಟದಿರು , ಕೊನೆಯನೆಂದು ಮುಟ್ಟದಿರು ,  ಎಂಬ ಮಾತನ್ನು ಅಕ್ಷರಶಃ  ಆನುಸರಿಸಿಸಿದವನು.  ಆದರೂ ಮನೆ ಅಂತ ಒಂದು ನನ್ನ ಪಾಲಿಗೆ ಬಂದಿತು.ನಿವೃತ್ತನಾದ ಮೇಲೆ ಅಲ್ಲಿ  ಹೋಗಿ ನೆಲಸಿದೆ. ಆದರೆ ಅಲ್ಲಿರಲು ಬಿಡಬೇಕಲ್ಲ ಮಕ್ಕಳು. ಒಬ್ಬೊಬ್ಬರು ಒಂದಕಡೆ.  ಮಕ್ಕಳಿಗಿಂತ ಹೆಚ್ಚಾಗಿ ಮೊಮ್ಮಕ್ಕಳಿಗಾಗಿ ನಾವು ಹೋಗಲೆ ಬೇಕಾಯಿತು. ಆ ಮನೆಯಲ್ಲಿ ನಾವೂ ಇದ್ದದ್ದೆ  ಕಡಿಮೆ.ಅಮೇರಿಕಾಗೆ ಹೋದರಂತು ಅಲ್ಲೆ  ಆರು ತಿಂಗಳ ವಾಸ. ಅದಕ್ಕೆ ಈ ಹಿಂದೆ ನನ್ನ ಜತೆ ಕೆಲಸಮಾಡಿದ್ದ  ಗುಮಾಸ್ತರಿಗೆ ಮನೆ ಉಸ್ತುವಾರಿ ವಹಿಸಿ ನಾವು ಊರು ಸುತ್ತುತ್ತಿದ್ದೆವು. 
ಮೊನ್ನೆ ನನಗೆ ಅವರಿಂದ ಫೋನು ಬಂದಿತು “ ಸಾರ್ ಈಗ ಗ್ಯಾಸ ಕಂಪನಿಯವರು ಹೊಸ ನಿಯಮ ಮಾಡಿದ್ದಾರೆ.  ಆರು ತಿಂಗಳು ಬಳಸದೆ ಇದ್ದರೆ ರದ್ದು ಮಾಡುತ್ತಾರೆ.  ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗಿದೆ.  ಅಮೇರಿಕಾದಿಂದ ಬಂದ ನಂತರವೂ ನೀವು ಇತ್ತಕಡೆ ಬರಲೇ ಇಲ್ಲ ಎಂದರು.
 “ ಹೌದು  . ನಿಮ್ಮ ಮಾತು ನಿಜ “ ನಾನು ಒಪ್ಪಿದೆ. ಅದು ನಮಗೆ ಒಂದು ರೀತಿಯ ಹಾಲಿಡೆ ಹೋಂ ಆಗಿದೆ. ಮೊಮ್ಮಕ್ಕಳಿಗೆ ರಜೆ ಇದ್ದಾಗ ವಾರದ ಮಟ್ಟಿಗೆ ಅಲ್ಲಿ ಎಲ್ಲರೂ ಸೇರುತ್ತಿದ್ದೆವು.. ನಾವೂ ಅಲ್ಲೆ ಸದಾ ಇರುವುದು ಆಗದ ಮಾತು , ಇದ್ದ ಮಾತು ಅವರಿಗೆ ಹೋಗಿ ತಿಳಿಸಿ  “ ಎಂದೆ
ವಿಚಾರಿಸಿದ ನಂತರ ಮಾಹಿತಿ ಬಂತು , “ ನೀವೆ ಖುದ್ದಾಗಿ ಬರ ಬೇಕಂತೆ , ಸಾರ್”
 ನಾವು ಅಲ್ಲಿ ಹೆಚ್ಚು ಹೋಗುವುದಿಲ್ಲ , ನಿಜ. ಆದರೆ ಹೋದಾಗಲಾದರೂ ಗ್ಯಾಸ್  ಬೇಕಲ್ಲ. ಅನಿವಾರ್ಯವಾಗಿ ಹೊರಟೆ.
 ಆ ಊರು ತಲುಪಿದಾಗ ಸರಿಯಾಗಿ ಕಚೇರಿಯ ಸಮಯ. ನನ್ನ ಗೆಳೆಯರು ಕಾಲೇಜಿನಲ್ಲಿ ಗುಮಾಸ್ತರು. ಅವರ ಮನೆಗೆ ಹೋದೆ.ಅವರ ಶ್ರೀಮತಿ , ಸಾರ್,  ಈಗತಾನೆ ಹೋದರು , ಫೋನು ಮಾಡುತ್ತೇನೆ ಎಂದರು. ಅವರು ತಮ್ಮ ಪ್ರಿನ್ಸಿಪಾಲರ ಅನುಮತಿ ಪಡೆದು ಅರ್ಧಗಂಟೆಯಲ್ಲಿ ಬರುವುದಾಗಿ ತಿಳಿಸಿದರು.ಅಲ್ಲಿಯ ತನಕ ಏನು ಮಾಡುವುದು, ಅಮ್ಮಾ ನಾನು ನಮ್ಮ ಮನೆಕಡೆ ಹೋಗಿಬರುವೆ , ಅಂದು ಹೊರಟೆ.
 ನಮ್ಮ ಮನೆಯಲ್ಲಿದ್ದ ಬಾಡಿಗೆದಾರರ  ಮನೆ ಬಾಗಿಲಿಗೆ ಬೀಗ ಹಾಕಿತ್ತು.  ಮೇಲಿರುವ ನಮ್ಮ ಮನೆಯ ಬೀಗ ತೆಗೆದು ಒಳಹೋದೆ. ಮನೆ ಸ್ವಚ್ಛವಾಗಿತ್ತು . ಹತ್ತಿರದಲ್ಲಿ ಇರುವ ನಮ್ಮ ನಾದಿನ ಆಗಾಗ ಬಂದು ಶುಚಿ ಮಾಡಿ ಹೋಗುವಳು.ನಾವಿರುವ ಚೆನ್ನೈ ಮತ್ತು ಬೆಂಗಳೂರಿನ ಮನೆಗಳು  ಬಾಡಿಗೆಯವಾದರೂ ವಿಶಾಲವಾಗಿವೆ. ಆದರೂ ಇಲ್ಲಿನ ಚಿಕ್ಕ ಮನೆಗೆ ಬಂದಾಗ ಏನೋ ಒಂದು ಥರ ನೆಮ್ಮದಿ ಎನಿಸುವುದು.ಪುಟ್ಟ ಪಟ್ಟಣದ ಈ ಚಿಕ್ಕ ಮನೆಯ ಕೊಡುವ ಖುಷಿಯೇ ಬೇರೆ.  ಆರಾಮಾಗಿ ಮಂಚದ ಮೇಲೆ ಅಡ್ಡಾದೆ. ತುಸು ಮಂಪರು ಬಂದಿರಬಹುದು.  ಯಾರೋ  ಬಾಗಿಲುತಟ್ಟಿದ ಹಾಗಾಯಿತು. ಎದ್ದು ಹೋಗಿ ಬಾಗಿಲು ತೆರದೆ.  ಹೊಸಬರು ನಿಂತಿದ್ದರು. “ನಮಸ್ಕಾರ ಸಾರ್”  ಎಂದರು.
“ನಮಸ್ಕಾರ ಯಾರು ಬೇಕು ?” ಎಂದೆ
 “ ನೀವೆ ಬೇಕು,ನಮ್ಮ ಸಾಹೇಬರು ಕರೆದು ತರಲು ಕಾರು ಕಳಿಸಿದ್ದಾರೆ “ ಎಂದ .
 ಕೆಳಗೆ ನೋಡಿದ . ಮನೆಯ ಮುಂದೆ ಬೂದು ಬಣ್ಣದ ಅಲ್ಟೋ ಕಾರು ನಿಂತಿತ್ತು.
ನನಗೆ ತಲೆ ಬುಡ ಗೊತ್ತಾಗಲಿಲ್ಲ. ನಾನು ನಿವೃತ್ತನಾಗಿ ಹತ್ತು ವರ್ಷವಾಯಿತು. ಯಾರಪ್ಪ ಈ ಸಾಹೆಬರು ಎಂದುಕೊಂಡೆ.
” ’ಯಾರ್ರಿ ,  ನಿಮ್ಮ ಯಜಮಾನರು ?ನನಗೆ ಯಾರೂ ಗೊತ್ತಿಲ್ಲವಲ್ಲ. ನನ್ನನ್ನು  ಕಾಣುವ ಅಗತ್ಯ ಯಾರಿಗೂ ಇಲ್ಲ. ನೀವು ಪರಪಾಟಾಗಿ  ಇಲ್ಲಿಗೆ ಬಂದಿರುವರಿ.ವೆ . ನಿಮಗೆ ಬೇಕಾದ ವ್ಯಕ್ತಿ ನಾನಲ್ಲ. ಎಂದೆ.
ಸರ್, ನೀವು ಮಾಜಿ ಪ್ರಿನ್ಸಿ ಪಾಲು ತಾನೆ. ನಮ್ಮ ಪ್ರಿನ್ಸಿಪಾಲರು ನಿಮ್ಮನ್ನು ಕರೆದು ಕಂಡು ಬಾ ಎಂದಿದ್ದಾರೆ “ ಎಂದ .
ಆಗ ಝಗ್ಗನೆ ತಲೆಯಲ್ಲಿ  ದೀಪ ಹೊತ್ತಿತು. ನಮ್ಮ ಗೆಳೆಯ ಗುಮಾಸ್ತರಾಗಿದ್ದ ಕಾಲೇಜಿನಿಂದ ಬಂದಿದ್ದಿತು ಕರೆ.
 ಮನೆಗೆ ಕೀಲಿ ಹಾಕಿ ಕಾರು ಏರಿದೆ.  ಕಾರು ಕಾಲೇಜಿನ ಮುಂದೆ ನಿಂತಿತು. ನಾನು ಕೆಲಸ ಮಾಡಿದ ಕಾಲದಲ್ಲೂ ಅ ಕಾಲೇಜು ಅದು ಇದ್ದಿತು. ಅಲ್ಲಿಗೆ ನಾನು ಆಗಾಗ ಭೇಟಿ ನೀಡಿದ್ದೆ.
 ಕಾರಿನಿಂದ ಇಳಿದು ಕಾಲೇಜಿನ ಒಳಗೆ ಹೋದೆ.ಅದು ಸರಕಾರಿ  ಕಾಲೇಜು. ಸುತ್ತಲೂ ಮರ ಗಿಡ.  ಪರಿಸರ ಹಸಿರು ಮಯ. ಧೂಳು, ಕಸ ತುಸುವೂ ಇರಲಿಲ್ಲ.  ಹೊಸದಾಗಿ ಸುಣ್ಣ ಬಣ್ಣ ಮಾಡಿಸದಂತಿತ್ತು.  ಅವರ ಕಚೇರಿಗೆ ಹೋದೆ. ಯಾವದೋ ಕಾರ್ಪೊರೇಟ್ ಆಫೀಸಿಗೆ ಹೋದಂತೆ ಎನಿಸಿತು. ಸರಕಾರಿ ಕಚೇರಿಯೇ ಎಂಬ ಅನುಮಾನ ಮೂಡಿತು.ನೂನು ಹೋದೊಡನೆ ಪ್ರಿನ್ಸಿಪಾಲರು ಧಡಕ್ಕನೆ ಎದ್ದುನಿಂತು ಸ್ವಾಗತಿಸಿದರು. ಅವರು ಬೇರೆ  ಯಾರೂ ಅಲ್ಲ . ಹದಿನೈದುವರ್ಷದ  ಹಿಂದೆ ನನ್ನ ಜೊತೆ  ಕೆಲಸ  ಕೆಲಸ ಮಾಡಿದ ರಾಜ್ಯಶಾಸ್ಟ್ರ ಉಪನ್ಯಾಸಕ  ಮರಿಸ್ವಾಮಿ
 ಅವರು ಬಹಳ ಆದರದಿಂದ ಸ್ವಾಗತಿಸಿ ಸಾರ್, ಕುಳಿತು ಕೊಳ್ಳಿ ಎಂದು ತಮ್ಮ ಆಸನ ತೋರಿಸಿದರು.ನನಗೆ ಕಕಮಕ ಆಯಿತು. ನಾನು ಪ್ರಿನ್ಸಿಪಾಲನಾಗಿದ್ದಾಗ  ಬೇರೆ ಯಾರು ನನ್ನ  ಕುರ್ಚಿಯಲ್ಲಿ ಕುಳಿತು ಕೊಳ್ಳಲು ಅವಕಾಶವಿರಲಿಲ್ಲ. ಒಂದು ಊರಲ್ಲಿ ಶಾಸಕರೊಬ್ಬರಿಗೆ  ನನ್ನ ಕುರ್ಚಿಯಲ್ಲಿ ಕೂಡಿಸಲಿಲ್ಲ ಎಂದು ಅಸಮಾಧಾನವಾಗಿ ಕೊನೆಗೆ ಅಲ್ಲಿಂದ ನನ್ನ ವರ್ಗಾವಣೆಯಾಗಿತ್ತು. ಅದು ನನಗೆ ನೆನಪಿಗೆ ಬಂದಿತು.
 ಮುಗುಳುನಗುತ್ತಾ ನಯವಾಗಿ ಹೇಳಿದೆ.”ಅದುನಿಮ್ಮ ಸ್ಥಾನ . ನಾನು ಅಲ್ಲಿ ಕುಳಿತುಕೊಳ್ಳಬಾರದು “
 “ಇಲ್ಲ ಸಾರ್, ನೀವು ಕುಳಿತರೆ ಅದಕ್ಕೆ ಬೆಲೆ ಬರುತ್ತದೆ.” ಬಹು  ವಿನೀತರಾಗಿ ಕೋರಿದರು.
 ನಾನು ಬೇಡ ಎಂದು ಅವರ ಎದುರಿನ ಕುರ್ಚಿಯಲ್ಲಿ ಕುಳಿತೆ.ಅವರು ನಿಂತೆ ಇದ್ದರು.
ದಯಮಾಡಿ ಕುಳಿತುಕೊಳ್ಳಿ ,ಎಂದೆ.
“ಇಲ್ಲ ,ಸಾರ್, ತಾವು ದೊಡ್ಡವರು, ತಮ್ಮ ಎದುರಿಗೆ ನಾನು ಕುಳಿತು ಕೊಳ್ಳಲಾರೆ “ ಎಂದರು
.” ನಾನು ವಯಸ್ಸಿನಲ್ಲಿ ಹಿರಿಯ ನಿಜ. ಆದರೆ ನೀವು ಈಗ ಹಿರಿಯ  ಸರ್ಕಾರಿ ಅಧಿಕಾರಿಗಳು. ಇಲ್ಲಿನ ಮುಖ್ಯಸ್ಥರು. ನಿಮ್ಮ ಸ್ಥಾನದಲ್ಲಿ ಕುಳಿತರೆ, ಅದು ನನಗೆ  ಅಗೌರವ ತೋರಿದಂತಲ್ಲ.ಅದರಿಂದ ನನಗೆ ಹೆಮ್ಮೆ . ನಮ್ಮ ಕಿರಿಯ ಸಹೋದ್ಯೋಗಿ ಹಿರಿಯ ಸ್ಥಾನ ಅಲಂಕರಿಸಿರುವದನ್ನು  ನೋಡಿದ ತೃಪ್ತಿ ನನಗಾಗುವುದು, ಇಷ್ಟು ಮಾತ್ರ ಅಲ್ಲ. ನೀವು ಇನ್ನೂ ಉನ್ನತ ಸ್ಥಾನ ಕ್ಕೆ  ಏರಬೇಕು. ನಿಮಗಿರುವ ಹಿನ್ನೆಲೆ , ನಿಮ್ಮಸಾಧನೆ ಸಾಮಾನ್ಯವಲ್ಲ  ಎಂದಾದರು ಒಂದು ದಿನ, ನೀವು ಶಾಸಕರಾದರೂ  ಅಚ್ಚರಿಯಿಲ್ಲ.  ನನಗಂತೂ ಬಹು ಸಂತೋಷವಾಗುವುದು´ ಎಂದೆ. ಅವರು ಮುಜುಗರ ಪಡುತ್ತಾ ಕುರ್ಚಿಯಲ್ಲಿ ಕುಳಿತರು..
 ಅಷ್ಟರಲ್ಲಿ ನನ್ನ ಗೆಳೆಯರಾದ ಗುಮಾಸ್ತರು ಒಳ ಬಂದು, “ ನಮಸ್ಕಾರ ಸಾರ್, ತಪ್ಪು ತಿಳಿಯ ಬೇಡಿ” ಎಂದರು.
“ಏನ್ರಿ ಇದೆಲ್ಲ “ ಎಂದೆ.
“ ಸಾರ್ , ಅರ್ಧ ಗಂಟೆ ಹೊರಗೆ ಹೋಗಲು ಅನುಮತಿ ಕೊಡಿ,  ಎಂದು ಕೇಳಿದೆ.
 ಏಕೆ, ಎಂದು ಕೇಳಿದರು.
”ನಮ್ಮ ಹಳೆಯ ಪ್ರಿನ್ಸಿಪಾಲರು ಬಂದಿದ್ದಾರೆ ಅವರನ್ನು ಮಾತನಾಡಿಸಿ ಬರುವೆ”  ಎಂದಾಗ
“ ನೀವೊಬ್ಬರೆ ಮಾತನಾಡಿಸಿದರೆ ಸಾಕಾ, ಅವರು ಪಾದಧೂಳಿ ನಮ್ಮಕಾಲೇಜಿಗೂ ಬೀಳಲಿ,  ಎಲ್ಲರಿಗೂ ಒಳ್ಳೆಯದಾಗುವುದು ,     ಕಾರು ಕಳುಹಿಸುವೆ,  ಎಂದರು, ನಿಮಗೆ ತೊಂದರೆ ಯಾಯಿತೇನೋ ?” ಎಂದು ಹಲುಬಿದರು.
ನನ್ನ ನೆನಪು ಹದಿನೈದು ವರ್ಷದ ಹಿಂದೆ ಹೋಯಿತು. ನಾನು ಅಲ್ಲಿನ ಕಾಲೇಜಿಗೆ ಪ್ರಿನ್ಸಿಪಾಲನಾಗಿ ಹೋದಾಗ ಅಲ್ಲಿ ಅನೇಕ ಉಪನ್ಯಾಸಕ ಹುದ್ದೆಗಳು   ಖಾಲಿ ಇದ್ದವು.ಮಕ್ಕಳಿಗೆ ಪಾಠ ಪ್ರವಚನದ ತೊಂದರೆ  ಬಹಳವಾಗಿತ್ತು.  ಖಾಲಿ ಹುದ್ದೆ ತುಂಬಲು ಸರ್ಕಾರಕ್ಕೆ ಹಲವು ಹದಿನೆಂಟು ತೊಂದರೆಗಳು.
 ತಮ್ಮ ಊರಿಗೆ ಕಾಲೇಜು ತರುವುದು ತಮ್ಮ ದೊಡ್ಡ ಸಾಧನೆ ಎಂದು ಕೊಂಡ ಜನಪ್ರತಿನಿಧಿಗಳು ಅನುಕೂಲ ಇದೆಯೋ ಇಲ್ಲವೋ ನೋಡದೆ , ಅವರಿಗಿಂತ ನಾವೇನು ಕಡಿಮೆ , ಎಂದು ಚಿಕ್ಕ ಪುಟ್ಟ ಪಟ್ಟಣಗಳಿಗೂ ಕಾಲೇಜು ಮಂಜೂರಿ ಮಾಡಿಸಿಕೊಂಡರು ಬಂದರು. ಅಲ್ಲಿಗೆ ಅವರ ಹೊಣೆ ಮುಗಿಯಿತು.ಅಲ್ಲೆ ಇದ್ದ ಹೈಸ್ಕೂಲುಗಳನ್ನು ಮೇಲದರ್ಜೆಗೆ ಏರಿಸಿದರೆ ಆಯಿತು.ಪ್ರಿನ್ಸಿಪಾಲರಿದ್ದರೆ , ಉಪನ್ಯಾಸಕರಿಲ್ಲ. ಉಪನ್ಯಾಸಕರಿದ್ದರೆ ಗುಮಾಸ್ತರಿಲ್ಲ.  ಕಟ್ಟಡದ ಕಥೆ ಹೇಳುವ ಹಾಗೆ ಇಲ್ಲ, ಇದ್ದದ್ದರಲ್ಲೆ ಪಾಳಿಯ ಮೇಲೆ ಕೆಲಸ. ಮೊದಲು  ಗುತ್ತಿಗೆಯ ಮೇಲೆ ಉಪನ್ಯಾಸಕರನ್ನು ನೇಮಿಸಿಕೊಂಡರು. ನಿಗದಿತ ಮೊತ್ತದ ವೇತನ ನೀಡಲಾಗಿತ್ತು. ನಂತರ ಅವರು ಸುಪ್ರೀಮ್ ಕೋರ್ಟಿಗೆ ಹೋದರು. ಪೂರ್ಣ ವೇತನ ನೀಡಲೇ ಬೇಕೆಂಬ ಆದೇಶವಾಯಿತು .ಕೈ ಸುಟ್ಟುಗೊಂಡ ಸರ್ಕಾರ ಅವರಿಗೆ ಹಣ ನೀಡಿ ಕೈ ತೊಳೆದದು ಕೊಂಡಿತು.ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ . ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳಿಗೆ ಖೋತಾ ಆಯಿತು.ನಂತರ.ಹೈಸ್ಕೂಲಿನ ಅರ್ಹ ಶಿಕ್ಷಕರಿಗೆ  ಆರ್ಟಿಕಲ್ ೩೨ ಮೇಲೆ ನೇಮಕವಾಯಿತು.  ಅದೇ ಸಂಬಳಕ್ಕೆ ದೂರದ  ಊರಿನ ಕಾಲೇಜಿನಲ್ಲಿ ಕೆಲಸ. ನೆಲಸಿದ್ದ ಊರು, ಹೆಂಡತಿ ಮಕ್ಕಳನ್ನು ಬಿಟ್ಟು ದೂರದ ಊರಿಗೆ ಹೋಗಲು ಬಹಳ ಜನ ಬಯಸಲಿಲ್ಲ.  ಹತ್ತಿರವಿದ್ದವರು  ಮಾತ್ರ ಬಂದರು . ದೂರ ವಿದ್ದವರು ಬರಲಿಲ್ಲ.   ಅಲ್ಲದೆ ಇಂಗ್ಲಿಷ್,, ಅರ್ಥಶಾಸ್ತ್ರ ಮತ್ತು ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ  ಪಡೆದ ಹೈಸ್ಕೂಲು ಶಿಕ್ಷಕರು ವಿರಳ.. ಹೀಗಾಗಿ ಪ್ರಿನ್ಸಿಪಾಲರಿಗೆ ಫಜೀತಿ. ಸರ್ಕಾರ ಸಿಬ್ಬಂದಿ ಕೊಡಲ್ಲ. ವಿದ್ಯಾರ್ಥಿಗಳು ಪೋಷಕರು ಬಿಡಲ್ಲ.. ಅದಕ್ಕೆ ಕಂಡು ಕೊಂಡ ಸುಲಭ ಉಪಾಯ ನಿಯೋಜನೆ.   ಹೇಗಿದ್ದರೂ ಉಪನ್ಯಾಸಕರಿಗೆ ಪೂರ್ತಿ ಕೆಲಸದ ಅವಧಿ ಅಂದರೆ ವಾರಕ್ಕೆ ೧೬ ತಾಸು ಬಹುತೇಕ  ಕಾಲಿಜಿನಲ್ಲಿಅಷ್ಟು ಕೆಸದ ಹೊರೆ  ಇರಲೇ ಇಲ್ಲ.ಗ್ರಾಮಾಂತರೆದ  ಕಾಲೇಜುಗಳಲ್ಲಿ ಎರಡೆ ತರಗತಿಗಳು . ಅಂದರೆ ಉಪನ್ಯಾಸಕರಿಗೆ ೮  ಗಂಟೆಯ ಕೆಲಸದ ಹೊರೆ. ಹಾಗಾಗಿ ಅವರು ಒಂದು ವಿಧದದಲ್ಲಿ ರಾಜರು . ಕೆಲಸ ಕಡಿಮೆ .  ವೇತನ ಸಮಾನ. ಅದಕ್ಕೆ   ಇಲಾಖೆ ಯೋಜನೆಯೊಂದನ್ನು ರೂಪಿಸಿತು.  ಕಡಿಮೆ ಕೆಲಸದ ಅವಧಿ ಇರುವ ಕಾಲೇಜಿನ ಉಪನ್ಯಾಸಕರನ್ನು ಹತ್ತಿರದ ಕಾಲೇಜಿನಲ್ಲಿ ಮೂರು ದಿನ ಕೆಲಸ ಮಾಡಲು ಹೆಚ್ಚುವರಿ ಭತ್ಯ ನೀಡಿ ನಿಯೋಜನೆ ಮಾಡುವುದು.ಹಣ ಕಾಸಿನ ಸೌಲಭ್ಯ ನೀಡಿದ್ದರಿಂದ ಉಪನ್ಯಾಸಕರೂ ಗೊಣಗಲಿಲ್ಲ.
 ಪ್ರತಿ ವರ್ಷದ ಪ್ರಾರಂಭದಲ್ಲೆ ಜಿಲ್ಲಾ ಉಪನಿರ್ದೇಶಕರು ಎಲ್ಲ ಕಾಲೇಜುಗಳ ಉಪನ್ಯಾಸಕರ ಸಭೇ ಕರೆದು ಅಲ್ಲಿಯೇ ಅಗತ್ಯಕ್ಕೆ ಅನುಗುಣವಾಗಿ ನಿಯೋಜನೆ ಮಾಡುತ್ತಿದ್ದರು. ಆದಷ್ಟು ಹತ್ತಿರದ ಕಾಲೇಜಿಗೆ ಕೊಡುತ್ತಿದ್ದರು.ಹಾಗಾಗಿ ಹೆಚ್ಚಿನ ಸಮಸ್ಯೆ ಇರಲಿಲ್ಲ.
 ನಾನು ಕೆಲಸ ಮಾಡುತ್ತಿದ್ದ ಊರಿನಲ್ಲಿಯೇ ಎರಡು ಕಾಲೇಜು ಇದ್ದವು. ಒಂದರಲ್ಲಿ ಮರಿಸ್ವಾಮಿ ರಾಜ್ಯ ಶಾಸ್ತ್ರ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು . ನಮ್ಮ ಕಾಲೇಜಿನಲ್ಲಿನ  ಹುದ್ದೆ ಖಾಲಿ ಇತ್ತು. ಹಾಗಾಗಿ ಅವರನ್ನು ಒಂದು ವರ್ಷದ ಮಟ್ಟಿಗೆ ನಮ್ಮ ಕಾಲೇಜಿಗೆ ವಾರಕ್ಕೆ ಮೂರುದಿನ ಕೆಲಸ ಮಾಡಲು ನಿಯೋಜಿಸಲಾಯಿತು.
                                                                                                                                                                                        -ಮುಂದುವರಿಯುವುದು

Saturday, May 18, 2013

ಆರರಿಂದ ಅರವತ್ತು- ಸರಣಿ-ಬೇಲಿಯೇ ಹೊಲ ಮೇದರೆ

 ಹೀನ ಸುಳಿ ಬೋಳಿಸಿದರೂ ಹೋಗದು ( ಚಂದೂಪುರ)
ಮಂಡ್ಯ  ಜಿಲ್ಲೆಯಲ್ಲಿ ವರ್ಗವಾದ ಒಂದೆ  ವರ್ಷದಲ್ಲೆ ನಾನು ಪ್ರಭಾರೆ ಪ್ರಿನ್ಸಿಪಾಲನಾಗ ಬೇಕಾಯಿತು. ಆ ಹುದ್ದೆ ನನಗೆ ಹೊಸದೇನೂ ಅಲ್ಲ . 1981  ರಿಂದಲೆ ಅನೇಕ ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದೆಎಲ್ಲರೂ ಜತೆಯವರೆ ಆದ್ದರಿಂದ ಕೆಲಸ ಸುಗಮವಾಗಿ ಸಾಗಿತ್ತು. ಅವರೆಲ್ಲ ನಾನು ನೀತಿ ನಿಯಾಮ ಪಾಲನೆಯಲ್ಲಿ ಬಿಗಿ ಎಂದು ಬಲ್ಲವರಾಗಿದ್ದರು ಹಾಗಾಗಿ ತೊಂದರೆ ಏನೂ ಅಗಲಿಲ್ಲ. ಆ ವರ್ಷ ತಾಲೂಕು ಮಟ್ಟದ ಕ್ರಿಡಾಕೂಟವನ್ನು ಭಾರತಿನಗರದಲ್ಲಿ ನಡೆಸಲು ಇಲಾಖೆ ತೀರ್ಮಾನಿಸಿತ್ತು. ಮೊದಲಲ್ಲಿ ಜಿಲಾ ಮಟ್ಟದಲ್ಲಿ ಒಂದೆ ಕಡೆ ಎಲ್ಲರಿಗೂ ಕ್ರೀಡಾ ಕೂಟ ನಡೆಸುವರು. ಅದು ನಮ್ಮ ಕಾಲದಲ್ಲಿ. ಆಗ ಹೈಸ್ಕೂಲುಗಳ ಸಂಖ್ಯೆ ಕಡಿಮೆ ಇತ್ತು . ಆದರೆ ಈಗ ಊರಿಗೊಂದು ಹೈಸ್ಕೂಲುಗಳಾದ್ದರಿಂದ ಮೊದಲು ತಾಲೂಕು ಮಟ್ಟದಲ್ಲಿ ನಡೆಸಿ ಅದರಲ್ಲಿ ಗೆದ್ದವರಿಗೆ ಮಾತ್ರ ಜಿಲ್ಲಾ  ಮಟ್ಟದಲ್ಲಿ  ಬಾಗವಹಿಸಲು ಅವಕಾಶ ನೀಡುವರು.
 ನಮ್ಮದು ಸಹ ಶಿಕ್ಷಣ ಶಾಲೆ . ಆದ್ದರಿಂದ ಬಾಲಕರ ಮತ್ತು ಬಾಲಕಿಯರ ಎರಡೂ ತಂಡಗಳನ್ನು ಕಳಿಸಬೇಕಿತ್ತು. ನಮ್ಮಲ್ಲಿನ  ಮಕ್ಕಳು ಹಳ್ಳಿಗಾಡಿನವರಾದ್ದರಿಂದ  ಗಟ್ಟಿಮುಟ್ಟಾಗಿದ್ದರು. ನಮ್ಮಲ್ಲಿ ಒಳ್ಳೆಯ ಆಟದ ಮೈದಾನ ಇತ್ತು ಕ್ರೀಡಾ ಸಾಮಗ್ರಿಗಳೂ ಇದ್ದವು. ಆದರೆ ಒಂದೆ ಒಂದು ಕೊರತೆ. ಎಂದರೆ ದೈಹಿಕ ಶಿಕ್ಷಕರು ಇರಲಿಲ್ಲ. ಅದರಿಂದ ಆಟದ ಅವಧಿಯಲ್ಲಿ ಮಕ್ಕಳಿಗೆ ಕ್ರೀಡಾಸಾಮಗ್ರಿ ಕೊಟ್ಟರೆ ತಾವೆ ಆಡಿಕೊಳ್ಳುತಿದ್ದರು ಜತೆಗೆ ಆ ಅವಧಿಯಲ್ಲಿ ಬಿಡುವಿರುವ ಸಹ ಶಿಕ್ಷಕರೂ ಅವರಿಗೆ  ಮಾರ್ಗದರ್ಶನ ನೀಡುವರು. ನಮ್ಮಲಿನ ಶಿಕ್ಷಕೆರೆಲ್ಲ ಯುವಕರು. ಎಲ್ಲರೂ ಗುತ್ತಿಗೆ ಆಧಾರದ ಮೇಲೆ ನೇಮಕವಾದವರು. ಅವರಿಗೆ ನಿಗದಿತ ಮೊತ್ತವನ್ನು ಸಂಭಾವನೆಯಾಗಿ ಕೊಡುವರು. ಬೇರೆ ಯಾವುದೆ ಸೌಲಭ್ಯವಿರಲಿಲ್ಲ. ಆದರೆ ಅದೆ ತಾನೆ ಕಾಲೇಜಿನಿಂದ ಹೊರಬಂದವರು ಉತ್ಸಾಹದಿಂದ ಕೆಲಸ ಮಾಡುತಿದ್ದರು. ಕೆಲವುರು ಅಲ್ಲಿಯೆ ರೂಮು ಮಾಡಿಕೊಂಡು ಇದ್ದರು. ವಾರಕೊಮ್ಮೆ ತಮ್ಮೂರಿಗೆ ಹೋಗಿ ಬರುವರು.ಅವರಲ್ಲಿಬೆಟ್ಟಯ್ಯ ಮತ್ತು ನಾಗರಾಜ ಎನ್ನುವ ಯುವಕರು ಮಕ್ಕಳಿಗೆ ಶಾಲೆಬಿಟ್ಟ ಮೇಲೆ ತರಬೇತಿ ನೀಡುವ ಹೊಣೆ ವಹಿಸಿಕೊಂಡರು.ಕುರುಡನಿಗೆ ಬೇಕಾದದ್ದು ಕಣ್ಣು ಯಾವ ದೇವರಿಗೆ ಕೈ ಮುಗಿದರೆ ತಾನೆ ಏನು. ಒಟ್ಟಿನಲ್ಲಿ ಮಕ್ಕಳಿಗೆ ಸಹಾಯವಾಗ ಬೇಕು ಮತ್ತು ಶಾಲೆಗೆ ಹೆಸರು ಬರಬೇಕು. ಅದರಿಂದ ಕ್ರೀಡಾಚುವಟಿಕೆಯ ಜವಾಬ್ದಾರಿ ಅವರಿಗೆ ಪೂರ್ಣ ವಾಗಿ ವಹಿಸಲಾಗಿತ್ತು. ನಮ್ಮ  ಕಾಲೇಜು ಇರುವುದು ಗೌಡರ ಪ್ರದೇಶದಲ್ಲಿ. ಅಲ್ಲಿ ಅವರದೆ ರಾಜ್ಯ. ನಮ್ಮ ಬೆಟ್ಟಯ್ಯ ಸಹಾ ಊರಿನ ಯಾವುದೊ  ಒಬ್ಬ  ಕುಲಬಾಂಧವನ ಮನೆಯ ಕೋಣೆಯಲ್ಲೆ ಉಳಿದು ಅಲ್ಲಿಯೆ ಊಟವನ್ನು ಮಾಡುತಿದ್ದರು. ಎಲ್ಲರೂ ಬಾಂಧವರಾದ್ದರಿಂದ ಅವರು ಬಹಳ ಸುಲಭ ವಾಗಿನಮಕ್ಕಳನ್ನು ನಿಯಂತ್ರಿಸುವರು. ಮತ್ತು ಅವರು ಉತ್ತಮ ಗಣಿತದ ಶಿಕ್ಷಕರು. ಹಾಗಾಗಿ ನಾನು ನಿಶ್ಚಿಂತೆಯಿಂದ ಕ್ರೀಡಾ ತರಬೇತಿಯ ಹೊಣೆ ಅವರಿಗೆ ಕೊಟ್ಟೆ. ಅವರು ಅದನ್ನು ಖುಷಿ ಖುಷಿ  ಯಿಂದಲೆ ಮಾಡುತಿದ್ದರು.
ಕ್ರೀಡಾ ತರಬೇತಿ ಬಲು ಜೋರಿನಿಂದಲೆ ಸಾಗಿತ್ತು. ಕೆಲವರು ತರಬೇತಿ ಸಮಯದಲ್ಲಿ ಅವರು ತುಸು ಎಲ್ಲೆ ಮೀರಿ ವರ್ತಿಸುವರು ಎಂದು ಒಬ್ಬಿಬ್ಬರು ಸೂಚ್ಯವಾಗಿ ಹೇಳಿದರು. ಮೊದಲೆ ಯುವಕರು, ಅಟದ ಉತ್ಸಾವ. ಅದರಲ್ಲೂ ಎಲ್ಲ ತಮ್ಮವರೆ ಎನ್ನುವ ಆತ್ಮ ವಿಶ್ವಾಸ.ಅದರಿಂದ ಒರಟಾಗಿ ಮಾತನಾಡಿರಬಹುದು ಎಂದು ಕೊಂಡೆ. ಅಲ್ಲದ ಯಾವುದೆ ಆಧಾರವಿಲ್ಲದೆ  ನಾನು ಅವರಿವರ ಮಾತಿಗೆ ಕಿವಿಗೊಟ್ಟರೆ ಸುಮ್ಮನೆ ಇಲ್ಲದ ಗುಲ್ಲಾಗುವುದು.  ಅದರೂ ತುಸು ಎಚ್ಚರಿಕೆಯೀಂದ ಇರಬೇಕು ಎಂದು ಕೊಂಡೆ. ಅವರ ಬಗ್ಗೆ ಮಾತನಾಡಿದವರೂ ಖಚಿತವಾಗಿ ಏನನ್ನು ಹೇಳಲು ಸಿದ್ದರಿರಲಿಲ್ಲ.
 ಕ್ರೀಡಾ ಸ್ಪರ್ಧೆಯು ಮೂರುದಿನ ನಡೆಯುವುದೆಂದು ವೇಳಾ ಪಟ್ಟಿ ಬಂದಿತು. ಹಾಗೆ ನೋಡಿದರೆ ಅ ಸ್ಥಳ  ನಮ್ಮ ಕಾಲೇಜಿಗೆ ಅತಿ ದೂರವೇನೂ ಇರಲಿಲ್ಲ. ಬಸ್‌ನಲ್ಲಿ  ಒಂದು ಗಂಟೆಯ ಹಾದಿ ಮಾತ್ರ. ಆದರೆ ಬಸ್ಸಿನ ಅನುಕೂಲ ಚೆನ್ನಾಗಿರಲಿಲ್ಲ.ಆದ್ದರಿಂದ ಇಲ್ಲಿಂದ ಓಡಾಡುವ ಸಾಧ್ಯತೆ ಇರಲಿಲ್ಲ. ಅದಕ್ಕೂ ಮಿಗಿಲಾಗಿ ಹಿಂದಿನ ವರ್ಷವೆಲ್ಲ ಅಲ್ಲಿಯೇ ರಾತ್ರಿ ತಂಗುತಿದ್ದರು. ಮೇಲಾಗಿ ಅಲ್ಲಿ ವಸತಿ ವ್ಯವಸ್ಥೆಯೂ ಚೆನ್ನಾಗಿತ್ತು.ನಮ್ಮ ಮನೆಯೂ ಕೂಡಾ  ಕ್ರೀಡಾ  ಕೂಟ ನಡೆವ  ಕಾಲೇಜಿಗೆ ಅತಿ ಸಮೀಪದಲ್ಲೆ ಇತ್ತು.ಹಾಗಾಗಿ ಹುಡುಗರ ಮತ್ತು ಹುಡುಗಿಯರ ಎರಡೂ ತಂಡಗಳನ್ನೂ ಕಳುಹಿಸುಲು ವ್ಯವಸ್ಥೆಯಾಯಿತು ಮತ್ತು ಬೆಟ್ಟಯ್ಯ ನಾಯಕರಾಗಿ ಎಲ್ಲರನ್ನೂ ನೋಡಿಕೊಳ್ಳ ಬೇಕಿತ್ತು. ಆಟಗಾರರ ಪ್ರವಾಸ ಭತ್ಯ ಮತ್ತು ದಿನ ಭತ್ಯವನ್ನು ಅವರಿಗೆ ನೀಡಲಾಯಿತು.ನಮ್ಮಲ್ಲಿನ ಶಿಕ್ಷಕಿಬ್ಬರೂ ಅವರ ಜತೆ ಹೋಗಬೇಕು ಎಂದಾಗ ಅವರು ದಿನವೆಲ್ಲ ಅಲ್ಲಿರುವುದಾಗಿಯೂ ರಾತ್ರಿ ಮನೆಗೆ ಹೋಗಲೇ ಬೇಕೆಂದು ತಿಳಿಸಿದರು. ಅದಕ್ಕಾಗಿ ಇನ್ನೊಬ್ಬ ಶಿಕ್ಷಕರನ್ನೂ ನಿಯೋಜಿಸಲಾಯಿತು. ಅಲ್ಲದೆ  ಯಾವ ಮಕ್ಕಳ ಅಟವು ಮುಗಿಯುವುದೋ ಅವರನ್ನು ಅದೆ ದಿನ ವಾಪಸ್ಸು ಕಳುಹಿಸಬೇಕು ಅದರಲ್ಲೂ ಹುಡುಗಿಯರನ್ನು ಅವರಿಗಾಗಿ ಇರುವ ಪ್ರತ್ಯೇಕ ವಸತಿಯ ಸ್ಥಳದಲ್ಲೆ ಬಿಡಬೇಕೆಂದೂ ಸೂಚನೆ ನೀಡಲಾಯಿತು.ಅವರನ್ನು ಬೆಳಗೆ ಹೊತ್ತಿಗೆ ಮುಂಚೆಯ ಭರತೀ ನಗರಕ್ಕೆ ಕಳುಹಿಸಲಾಯಿತು. ನಾನು ಯಥಾರೀತಿ ಕಾಲೇಜಿಗೆ ಬಂದೆ. ಅಲ್ಲಿನ ಕೆಲಸ ಮುಗಿಸಿ ಸಂಜೆ  ಮನೆಗೆ ಹಿತಿರುಗಿದೆ. ಆಗಲೆ ಆರು ಗಂಟೆಯ  ಮೇಲಾಗಿತ್ತು ನಮ್ಮ  ಹುಡುಗರು  ಹೇಗಿದ್ದಾರೆಂದು ಅರಿಯಲು  ಆಟದ ಮೈದಾನದ ಹತ್ತಿರ ಹೋದೆ.
ನಮ್ಮಹುಡುಗರು ತಂಡದ ಆಟದಲ್ಲಿ ಗೆದ್ದಿದ್ದರು.. ಹುಡುಗಿಯರು ಸೋತಿದ್ದರು.ಅಟೊಟಗಳ ಸ್ಪರ್ಧೆ ಕೊನೆಯ ದಿನ ಇತ್ತು.ನನಗೆ ಆ ದಿನ ಆಟ ಮುಗಿದವರು ಮೊದಲೆ ತಿಳಿಸಿದ ಪ್ರಕಾರ ಊರಿಗೆ ವಾಪಸ್ಸು ಏಕೆ ಹೋಗಲಿಲ್ಲ ಎಂದು ಗೊತ್ತಾಗಲಿಲ್ಲ.  ಹುಡುಗಿಯರನ್ನೆ ಕೇಳಿದಾಗ ಅವರು ಹೆದರುತ್ತಾ ಬೆಟ್ಟಯ್ಯಸರ್‌ ಅವರು ಈ ದಿನ ಊರಿಗೆ ಹೋಗುವುದು ಬೇಡ.ಎಲ್ಲ ಹುಡಗಿಯರನ್ನು ಸಿನೆಮಾಕ್ಕೆ ಕರೆದು ಕೊಂಡು ಹೋಗುವುದಾಗಿ ತಿಳಿಸಿದ್ದರು. ರಾತ್ರಿ ಇಲ್ಲಿಯೆ ವಸತಿ ಮಡಬೆಕಾಗುವುದೆಂದು ಆದರೆ ಇಲಾಕಖೆ ನೀಡಿದ ರೂಮಿಗೆ ಹೋಗದೆ ತಾವು ಬೇರೆ  ಕಡೆ ಮಾಡುವ ರೂಮಿಗೆ ಬರಬೇಕೆಂದು ಒತ್ತಾಯ ಮಾಡಿದ್ದರು.ಅಲ್ಲದೆ ಇನ್ನು ಮೂರುದಿನ ಅವರು ಹೇಳಿದಂತೆ ಎಲ್ಲರೂ ಕೇಳ ಬೇಕು. ಇಲ್ಲದಿದ್ದರೆ ಅವರಿಗೆ ಗತಿ ಕಾಣಿಸುವುದಾಗಿ ಬೆದರಿಸಿದ್ದರು. ಅದರಿಂದ ಹುಡುಗಿಯರು ಗಾಬರಿಯಾಗಿದ್ದರು.   ನನ್ನನ್ನು ನೋಡಿದೊಡನೆ ಅಳ ತೊಡಗಿದರು. ಈ ಮೊದಲು ಅವರು ಅಸಭ್ಯವಾಗಿ ನಡೆದುಕೊಂಡಿದ್ದರು . ಆದರೆ ಪ್ರಾಂಶುಪಾಲರಿಗೆ ಹೇಳಿದರೆ ಫೇಲು ಮಾಡುವುದಾಗಿ ಹೆದರಿಸಿದ್ದರಂತೆ.
ಈಗ ಅವರ ವರ್ತನೆ ಎಲ್ಲೆ ಮೀರಿದ್ದರಿಂದ ಹುಡುಗಿಯರು ಗಾಬರಿಯಾಗಿದ್ದರು. ಹುಡುಗಿಯರಿಗೆ ಸಮಾಧಾನ ಮಾಡಿದೆ. ಅವರಿಗೆ ಹೀಲಿ ಕಳುಹಿಸಿದೆ. ಅವರು ಬಂದುನನ್ನನ್ನು ಕಾಣಲು ತಯಾರಿರಲಿಲ್ಲ.  ಇನ್ನೇನು ಮಾಡುವುದು  ನನ್ನ ಮನೆಗೆ  ಹುಡುಗಿಯರನ್ನು ಕರೆದೊಯ್ದೆ. ಮತ್ತೊಮ್ಮೆ ಬಂದುದುಕಾಣವಂತೆ ಅವರಿಗೆ ಮಾಹಿತಿಕಳುಹಿಸಿದೆ.ಅವರು ಬರಲಿಲ್ಲ. ಎನೆಂದರು ಎಂದು ಅವನ್ನು ಹೇಳಲು  ಹುಡುಗ  ಹಿಂದೆ ಮುಂದೆ ನೋಡಿದ. ಬಹಶಃ ಅವನಿಗೂ ಇದ್ದ ವಿಷಯ ಹೇಳಲು ಹೆದರಿಕೆ.ಸುಮಾರು ಹದಿನೈದು ಜನ ಹುಡುಗಿಯರು. ಅವರನ್ನ ಅವರ ಪಾಡಿಗೆ ಬಿಡಲು ಮನಬಾರದಾಯಿತು. ಅವರನ್ನು ನಮ್ಮ ಮನೆಗೆ ಕೆದುಕೊಂಡು ಹೋದೆ. ಅಲ್ಲಿಯೆ ಅವರಿಗೆ ಊಟ ಹಕಿಸಿ . ಮಲಗಲುವ್ವಸ್ಥೆ ಮಾಡಿದೆ.ಅಷ್ಟರಲ್ಲಿ ಒಬ್ಬ ಹುಡುಗ ಬಂದು ಬೆಟ್ಟಯ್ಯ ಮಾಷ್ಟ್ರು ಬರ ಹೇಳಿದ್ದಾರೆ ಎಲ್ಲ ಹುಡುಗಿಯರೂ ಬರಬೇಕೆಂದು ಕರೆದ.ಆದರೆ ಅವರು ಭಯದಿಂದ ನಡುಗತೊಡಗಿದ್ದರು.ಅವರು ಮೈದಾನದಲ್ಲಿ ಮುಂದೆ ನಿಂತು ಕೂಗಡುತ್ತಿರುವುದಾಗಿ ತಿಳಿಯಿತು . ತಾವು ಕರೆದುಕೊಂಡ ಬಂದ  ಹುಡುಗಿಯರ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರವಿಲ್ಲ ಎಂಬುದು ಅವರ ವಾದ. ಅವರು ಏನಾದರೂ ಮಾತನಾಡಲಿ ಹುಡುಗಿಯರನ್ನು ಅವರಲ್ಲಿಗೆ ಕಳುಹಿಸುವುದ ಆಗದ ಮತು ಎಂದು ನಿರ್ಧರಿಸಿದೆ. ಅದರಂತೆ ಅವರಿಗೆ ಮಾಹಿತಿ ಕಳುಹಿಸಲಾಯಿತು. ಪಾಪದ ಹುಡುಗಿಯರು ಇರುವ ಹಾಲಿನಲ್ಲೆ  ಹೇಗೋ ಹೊಂದಾಣಿಕೆ ಮಾಡಿಕೊಂಡು ಮಲಗಿದರು. ಬೆಳಗ್ಗೆ ಎದ್ದು ಅವರ ದೈನಂದಿನ ಕೆಲಸ ಮುಗಿದ ಮೇಲೆ ಹೋಟಲಿನಿಂದ ತಿಂಡಿ ತರಿಸಿ ಕೊಟ್ಟು ನನ್ನ ಜತೆ ಯಲ್ಲಿಯೇ ಕಾಲೇಜಿಗೆ ಕರೆದು ಕೊಂಡು ಹೋದೆ. ಅ ದಿನ ಎಲ್ಲರೂ ಮನೆಯಲ್ಲಿ ವಿಶ್ರಾಂತಿ ಪಡೆಯಲು ಅವರಿಗೆ ತಿಳಿಸಲಾಯಿತು.
 ಪಂದ್ಯಾವಳಿ ಮುಗಿದ ಮಾರನೆಯ ದಿನ ಬೆಟ್ಟಯ್ಯ ಕಾಲೇಜಿಗೆ ಬಂದವರೆ ಕಚೇರಿಗೆ ಬಂದು ಕೂಗಾಡಲು ಶುರು ಮಾಡಿದರು.ಅವರ ಗೌರವಕ್ಕೆಕುಂದು  ಬಂದಿರುವುದಾಗಿ ಕೋಪ ಗೊಂಡಿದ್ದರು. ಅವರ ಕೆಲಸದಲ್ಲಿ ಕೈ ಹಾಕಿ ಮಧ್ಯದಲ್ಲೆ ಮಕ್ಕಳನ್ನು ಕರೆತರಲು ನನಗೆ ಯಾವ ಅಧಿಕಾರವಿದೆ. ಒಂದು ಸಲ ಜವಾಬ್ದಾರಿ ಕೊಟ್ಟ ಮೇಲೆ  ಮುಗಿಯಿತು ಮೂರುದಿನ ಯಾರೂ ಮಾತನಾಡಬಾರದು  ಎಂಬುದ ಅವರ ವಾದ.
ಇತರ ಶಿಕ್ಷಕರು ಅವರನ್ನು ಸಮಾಧಾನ ಮಾಡಲು ಬಹಳ ಪ್ರಯತ್ನಿಸಿದರು ಆದರೆ  ಸಮಾಧನವಾಗಲೆ ಇಲ್ಲ.ಯಾವುದೋ ಊರಿನಿಂದ ಬಂದವನಿಗೆ ಇಷ್ಟು ಅಹಂಕಾರವಿರುವಾಗ ಅದೆ ಜಿಲ್ಲೆಯವರಾದ ತಾವು ಸುಮ್ಮನಿರುವುದು ಸಾಧ್ಯವೆ ?
 ಒಂದೆ ಸಮನೆ ಅವರ ಕಿರುಚಾಟ ನಡೆದೆ ಇತ್ತು.ಮಕ್ಕಳು ಗಂಪು ಗೂಡಿದರು. ಎಲ್ಲರಿಗೂ ಬಿಟ್ಟಿ ಮನರಂಜನೆ.
 ಇತರರು ಮೂಕ ಪ್ರೇಕ್ಷಕರಾಗಿ ಮಿಕಿ ಮಿಕಿ ನೋಡುತ್ತಾ ನಿಂತರು. ಅವರದು ಒಂದೆ ಮೂಲ ಪ್ರಶ್ನೆ. ತಾವು ಏನೋ ಮಾಡುವರೆಂದು ಅನುಮಾನದಿಂದ ತಮ್ಮ ವಶದಲ್ಲಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಮ್ಮ ಮನೆಯಲ್ಲಿ ಒಂದು ರಾತ್ರಿಯೆಲ್ಲ ಮಲಗಿಸಿ ಕೊಂಡರಲ್ಲಾ ಪ್ರಿನ್ಸಿಪಾಲರೂ ಮತ್ತು ಕಾಲೇಜಿಗೆ ಹೋಗುವ ಅವರ ಮಗನೂ ಗಂಡಸರುತಾನೆ . ಅವರು ಮಾಡಿದರೆ ಕೆಲಸ ಸರಿ , ನಾನು  ಅದನ್ನೆ ಮಾಡಿದರೆ  ತಪ್ಪಾ?. ಎಂಬುದು ಅವರ ವಾದ. ಅದೂ ಅಲ್ಲದೆ ಬರಿ ಪ್ರಭಾರಿ ಅಧಿಕಾರಿ. “ತೀನ್ ದಿನ  ಕಾ ಸುಲ್ತಾನ್ “
ಯಾವುದೆ ಒಂದು ಇತ್ಯರ್ಥ ವಾಗುವ ವರಗೆ ತಾವು ಸುಮ್ಮನಿರುವುದಿಲ್ಲ ಎಂದು ಶಿಕ್ಷಕರೆದರು ಸಮರ್ಥಿಸಿಕೊಂಡರು.ಇನ್ನು ಅಸಭ್ಯ ಮತ್ತು ಅವಾಚ್ಯ ಪದಗಳ ಬಳಕೆಯಂತೂ ತಡೆಯಿಲ್ಲದೆ ಸಾಗಿತ್ತು.
ಇದ್ದುದರಲ್ಲೆ ಜವಾನರು ಸಮಾಧಾನ ಮಾಡಲು ಪ್ರಯತ್ನಿಸಿದರು. ನೀವು ಜಾತಿ ತಪ್ಪಿ ಹುಟ್ಟಿರುವಿರಿ. ಇದು ನನಗಾದ ಅವಮಾನವಲ್ಲ ನಮ್ಮವರಿಗೆಲ್ಲ ಆದ ಅವಮಾನ ಎಂದು ಸಮಸ್ಯೆಯನ್ನು ಸಾರ್ವತ್ರೀಕರಣ ಗೊಳಿಸಲು ಯತ್ನಿಸಿದರು
 ಎಲ್ಲ ಮಕ್ಕಳನ್ನೂ ತಮ್ಮ ತಮ್ಮ ತರಗತಿಗಳಿಗೆ ಹೋಗುವಂತೆ ತಿಳಿಸಿದೆ. ಶಿಕ್ಷಕರನ್ನೂ ಪಾಠ ಪ್ರವಚನದಲ್ಲಿ ತೊಡಗುವಂತೆ ವಿನಂತಿಸಲಾಯಿತು. ಅವರೆಲ್ಲ ಹೋದ ಮೇಲೂ ಇವರ ಜೋರು ಒಂದ ತಾಸಿನ ತನಕ ಹಾಗೆಯೆ ಸಾಗಿತು.
ನಾನು ಏನೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಮಾತನಾಡಿದರೆ ಕೈ ಕೈ ಮಿಲಾಯಿಸುವ ಸಂಭವವೂ ಇತ್ತು.
 ನಂತರ ಹಿರಿಯ ಸಹಾಯಕರನ್ನು ಕರೆದು ಸಲಹೆ ಕೇಳಿದೆ.
ಅವರು ಗಾಬರಿ ಗೊಂಡಿದ್ದರು.  “ಈ ಮನುಷ್ಯ ಒರಟ. ಸ್ಥಳಿಯ. ಪ್ರಬಲ  ಕೋಮಿಗೆ ಸೇರಿದವನು. ಯಾವುದಕ್ಕೂ ಹೇಸದವನು.ನೀವೋ ದೂರದಿಂದ ಬಂದಿದ್ದೀರಿ.ನಿಮ್ಮ ಬೆಂಬಲಕ್ಕೆ ಯಾರೂ ಇಲ್ಲ. ಸುಮ್ಮನೆ ಇದ್ದುಬಿಡಿ. ಏನಾದರೂ ಒದರಿಕೊಳ್ಳಲಿ . ಕೊನೆಗೆ ತಾನೆ ಸುಮ್ಮನಾಗುವನು. . ಏನೂ ಆಗಿಲ್ಲ ಎನ್ನುವಂತೆ ಇದ್ದರೆತನ್ನಂದ ತಾನೆ  ಸರಿಯಾಗುವುದು’ ,ತಮ್ಮಲ್ಲಿನ ಹೆದರಿಕೆಯನ್ನು ನನಗೂ ಹರಡವಂತೆ ಹೇಳಿದರು.
ನಾನು ಮಧ್ಯಾಹ್ನದ ತನಕ ಯೋಚಿಸಿದೆ. ಅಷ್ಟರಲ್ಲಿ ಅವರು ಜಾಗ ಖಾಲಿ ಮಾಡಿದ್ದರು ಮಹಿಳಾ ಸಿಬ್ಬಂದಿಯಂತೂ ಕಂಗಾಲಾಗಿದ್ದರು.
 ಇದು ನನಗಾದ ಅವಮಾನವೆಂದು ಕೊಳ್ಳಲಿಲ್ಲ. ಇದು ಸಂಸ್ಥೆಯ ಲ್ಲಿ ಶಾಂತಿ ಸುವ್ಯವಸ್ಥೆ ಕಾಪಡುವ ಹೊಣೆ ನನ್ನದಾಗಿತ್ತು. ಅಲ್ಲದೆ ಆ ಹೆಣ್ಣು ಮಕ್ಕಳು ತಮಗಾದ ಕಿರುಕಳವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದರು. ಈಗ ಅವರ ದುರ್ವತನೆಯನ್ನು ಕಡೆಗಣಿಸಿದರೆ, ಅವರ ದುಸ್ಸಾಹಸಕ್ಕೆ ಪುಟಸಿಗುತಿತ್ತು.ಒಂದು ಮಾತಂತೂ ನಿಜ. ಅವರು ದುಡುಕಿ ನನ್ನಮೇಲೆ ಹಲ್ಲೆ ಮಾಡಿದರೂ ಯಾರೂ ರಕ್ಷಣೆಗೆ ಬರುತ್ತಿರಲಿಲ್ಲ.
ಕೊನೆಗೆ ಒಂದು ತೀರ್ಮಾನಕ್ಕೆ ಬಂದೆ. ನಡೆದ ಘಟನೆಯನ್ನು ಅಧಿಕೃತವಾಗಿ  ಎಲ್ಲ ಸಿಬ್ಬಂದಿಯ ಸಭೆಯಲ್ಲಿ ಚರ್ಚಿಸಿ ಅವರ ಸಲಹೆಯಂತೆ ಮುಂದುವರಿಯಲು ತೀರ್ಮಾನಿಸಿ ಶಿಕ್ಷಕರ ಸಭೆಯನ್ನು ಕರೆಯಲಾಯಿತು.
 ಸಭೆ ಸೇರಿತು. ಎಲ್ಲರೂ ಬಂದು ಕುಳಿತರು ಆ ವ್ಯಕ್ತಿ ಸುತ್ತೋಲೆ ನೋಡಿದ್ದರೂ ಸಭೆಗೆ ಬರಲಿಲ್ಲ. ಸಭೆಯಲ್ಲಿ ಶ್ಮಶಾನ ಮೌನ.ನಾನು ವಿವರಿಸುವ ಅಗತ್ಯವೆ ಇರಲಿಲ್ಲ. ಎಲ್ಲರೂ ಪ್ರತ್ಯಕ್ಷ ದರ್ಶಿಗಳಾಗಿದ್ದರು. ಆದರೆ ಯಾರೂ ನಡೆದ ಘಟನೆಯನ್ನು ಖಂಡಿಸಲು ಅದು ಸರಿಯಲ್ಲ ಎಂದು ಹೇಳುವ ಧೈರ್ಯ ತೋರಲಿಲ್ಲ. ಸುಮ್ಮನೆ ತಲೆ ತಗ್ಗಿಸಿಕುಳಿತಿದ್ದರು.
 ನಾನೂ ಅವರಿಂದ ಏನನ್ನೂ ನಿರೀಕ್ಷಿಸುವಂತಿರಲಿಲ್ಲ. ಆದ್ದರಿಂದ ಹೆಚ್ಚು ಮಾತನಾಡಲಿಲ್ಲ ಆದರೆ ಈ ದಿನ ನೆಡೆದ ಘಟನೆಯನ್ನು ವಿವರವನ್ನು ಅದನ್ನು ಚರ್ಚಿಸಲು ಕರೆದ ಸಭೆಗೂ ಅವರು ಬಂದಿಲ್ಲ ಎಂಬುದನ್ನು ದಾಖಲು ಮಾಡಲಾಯಿತು. ಯಾವುದೆ ಕಾರಣಕ್ಕೂ ಮಕ್ಕಳ ಏಳಿಗೆಗೆ ಮಾರಕವಾಗುವ ಈ ರೀತಿಯ ಘಟನೆಯನ್ನು ಖಂಡಿಸಲಾಯಿತು.ಸಭಾ  ನಢೆವಳಿಯ ಪುಸ್ತಕವನ್ನು ಭದ್ರವಾಗಿಟ್ಟುಕೊಂಡು ಹಿರಿಯ ಸಹಾಯಕರೊಡನೆ ಅಂದು ಸಂಜೆ ಬಾರತಿ ನಗರದ ಆರಕ್ಷಕ ಠಾಣೆಗೆ ಹೋಗಿ ದೂರು ನೀಡಲಾಯಿತು. ಅಲ್ಲಿ ವೈಯುಕ್ತಿಕ ವಾಗಿ ಏನನ್ನೂ ನಮೂದಿಸದೆ ಶಾಂತಿ ಭಂಗವಾಗದಂತೆ ಕ್ರಮಕ್ಕಾಗಿ ಕೋರಲಾಯಿತು.
 ಮರನೆ ದಿನವೂ ಆ ವ್ಯಕ್ತಿ ಗುರ್‌ ಎನ್ನತ್ತಲೆ  ಇದ್ದ. ಕೈಕಾಲು ಮುರಿಯುವ ಮಾತು ಸಿಬ್ಬಂದಿಯ ಎದುರು ಸಾಗಿತ್ತು. ನಾನು ಮಧ್ಯಾಹ್ನದ ಮೇಲೆಗೆ ವಿವರವಾದ ವರದಿಯನ್ನು ಸಿದ್ಧಮಾಡಿ ಉಪನಿರ್ದೇಶಕರು ಮತ್ತು ಸಹ ನಿರ್ದೇಶಕರಿಗೆ ರವಾನಿಸಿದೆ
 ಬೆಟ್ಟಯ್ಯನವರು ತಮ್ಮ  ವಾಗ್ದಾಳಿ ಕಡಿಮೆ ಮಾಡಿದ್ದರು ಅವರ ಯಾವುದೆ ಮಾತಿಗೂ ಪ್ರತಿಪ್ತಿಕ್ರಿಯೆ ನೀಡದಿರುವುದು ಅವರಿಗೆ ನಿರಾಸೆ ಉಂಟುಮಾಡಿತ್ತು.. ಅದೃಷ್ಟಕ್ಕೆ ಬೇರೆ ಯಾವ ಸಹೋದ್ಯೋಗಿಯೂ ಅವರಿಗೆ ಒತ್ತಾಸೆ ನೀಡಲಿಲ್ಲ.  ಮೂರೆ ದಿನದಲ್ಲಿ ಎಲ್ಲ ತಣ್ಣಗಾಯಿತು . ಬಹಶಃ ಆರಕ್ಷಕರು ಅವರನ್ನು ಕರೆದು ಎಚ್ಚರಿಸಿರಬಹುದು. ಒಂದೆ ವಾರದಲ್ಲಿ ಸಹ ನಿರ್ದೇಶಕರಿಂದ ಅವರಿಗೆ ವಿವರಣೆ ಕೇಳಿ  ನೋಟೀಸು  ಬಂದಾಗ ಅವರು ಮೆತ್ತಗಾದರು. ನಮ್ಮ ಕಾಲೇಜನ್ನುತಂದವರಾದ , ಜಿಲ್ಲಾ ಪಂಚಾಯತ್‌ ಸದಸ್ಯರ ಬಂಗಲೆ ನಮ್ಮ ಕಾಲೇಜಿನ ಪಕ್ಕದಲ್ಲೆ ಇತ್ತು.ಅವರು ಬಹು ಪ್ರಭಾವಶಾಲಿ.. ಮೇಲಾಗಿ ಅವರ ಹೆಂಡತಿಯ ತಮ್ಮ ಮಂತ್ರಿಗಳು. ಆ ಭಾಗದಲ್ಲಿ ಅವರ ಮಾತೆ ವೇದ ವಾಕ್ಯ. ಹಿಂದಿನವರೆಲ್ಲ ಪ್ರತಿಯೊಂದಕ್ಕೂ ಅವರಲ್ಲಿಗೆ ಹೋಗುವರು. ಅವರು ನೀಡಿದ ತೀರ್ಮಾನವೆ  ಅಂತಿಮ. ನಾನು ಈ ಸಮಸ್ಯೆಯನ್ನು ಅವರ  ಗಮನಕ್ಕೆ ತರಲೆಇಲ್ಲ.ಮತ್ತು ಅವರಿಂದ ಯಾವ ಸಹಾಯವನ್ನು ಬಯಸಲಿಲ್ಲ ಇದು ನನಗೆ ವೈಯುಕ್ತಿಕ ಸಮಸ್ಯೆ ಎನಿಸಲಿಲ್ಲ. ಇದು ಸಂಸ್ಥೆಯ ಸಮಸ್ಯೆ ಅದಕ್ಕೆ ನಾನೆ ಸೂಕ್ತ  ಪರಿಹಾರ ಕಂಡುಕೊಳ್ಳ ಬೇಕು ಎಂದು ನನ್ನ ನಿಲುವು.  ಹೊರಗಿನವರ  ಹಸ್ತಕ್ಷೇಪದ ಅಗತ್ಯ ಇರಲಿಲ್ಲ. ಮೇಲಾಗಿ ಅವರು ನನ್ನ ಕೆಲಸದ ಬಗ್ಗ ಮೆಚ್ಚುಗೆ ಹೊಂದಿದ್ದರು. ಅಲ್ಲದ ಈಗಾಗಲೆ ಮುಂಬಡ್ತಿ ಯ ಅಂಚಿನಲ್ಲಿರುವ ನನ್ನನ್ನೆ ಇದೆ  ಕಾಲೇಜಿಗೆ ಹಾಕಬೇಕೆಂದು ಮಂತ್ರಿಗಳಿಂದ ಮಿನಿಟ್ಸ್ ಹಾಕಿಸಿದ್ದರಂತೆ. ನನಗೆ ಯಾವದೆ ನಿರ್ಧಿಷ್ಟ  ಜಾಗದ  ಬಯಕೆ ಇರಲಿಲ್ಲ. ಊರು ಬಿಟ್ಟು ಆರು ನೂರು ಮೈಲು ಬಂದವನಿಗೆ ಯಾವ  ಊರಾದರೇನು. ಎಲ್ಲ ಊರು ನಮ್ಮವೆ.
 ಬಹಶಃ ಆ ವ್ಯಕ್ತಿ ಯ ಅದೃಷ್ಟ ಗಟ್ಟಿಇರಬಹುದು. ನನಗೆ ಮುಂಬಡ್ತಿಯ ಆದೇಶ ಬಂದಿತು . ನನ್ನನ್ನು ಅದೆ ತಾಲೂಕು ಕೇಂದ್ರದ ದೊಡ್ಡ  ಕಾಲಾಜಿಗೆ  ನೇಮಿಸಿದ್ದರು. ಅದು ಮೈಸೂರಿಗೆ ನಿತ್ಯ ಓಡಾಡ ಬಹುದಾದ  ಸ್ಥಳ. ಬಹು ಬೇಡಿಕೆ ಇರುವ ಜಾಗ. ಆದರೆ ಒಂದು ವಿಶೇಷ ಕಾರಣಕ್ಕೆ ನನಗೆ ನೀಡಿದ್ದರು. ಅದು ಸಮಸ್ಯೆಯಸಾಗರ.  ನೀರಲ್ಲಿ ಮುಳುಗಿದವನಿಗೆ ಚಳಿಏನು ಮಳೆಏನು ಎಂದು ಹೊರಡಲುಸಿದ್ದನಾದೆ. ಒಂದು ದಿನ ಸಂಜೆ ಸದರಿ ವ್ಯಕ್ತಿಯು ಜಿಲ್ಲಾ ಪಂಚಾಯತ್‌ ಸದಸ್ಯರೊಂದಿಗೆ ನಮ್ಮ ಮನೆಯ ಹತ್ತಿರ ಬಂದರು.ಆ ನಾಯಕರು  ಅವರ ಕಾಲೇಜಿನಲ್ಲಿಯೆ  ನನಗೆ ಸಿಗದಕ್ಕೆ ವಿಷಾದಿಸಿದರು. ಹಾಗೆಯೆ ಹೋಗುವ ಮುಂದೆ  ಆ ವ್ಯಕ್ತಿಗೆ ಮುಂದೆ ತಯೊಂದರೆಯಾಗದಂತೆ ನೋಡಿಕೊಳ್ಳ ಬೇಕೆಂದು ವಿನಂತಿಸಿದರು.ಮಾತೆತ್ತಿದರೆ ಗುಡುಗುವ  ಅವರು ಮೃದುವಾಗಿ ಮಾತನಾಡಿರುವುದು ಅದೆ ಮೊದಲ ಸಲ . ನನಗೂ ಹೋಗು ವಾಗಲೂ ಹಠ ಬೇಡ ಎನಿಸಿತು. ಪೋಲೀಸರಿಗೆ ಇದನ್ನು ಕೈ ಬಿಡುವಂತೆ ಅವರೆ ಹೇಳಲು ತಿಳಿಸಿದೆ. ಇನ್ನು ಇಲಾಖೆಯಯಲ್ಲಿ ಈ ವಿಷಯವನ್ನು ನಾನು ಮುಂದುವರಿಸುವುದಿಲ್ಲ ಎಂದು ಭರವಸೆ ಕೊಟ್ಟೆ. ಅವರು ಗುತ್ತಿಗೆ ನೌಕರರಾದುದರಿಂದ ವಿಚಾರಣೆ ನಡೆದರೆ ಕಷ್ಟವಾಗತಿತ್ತು ಅವರ ಮೇಲಿನ ಅಶಿಸ್ತಿನ ಆರೋಪ ಸಾಬೀತಾಗುತಿತ್ತು.  ಹೊಸ ಹೊಣೆ ಹೊರಲು ಹೊರಟಿರುವ ನನಗೆ ಹಳೆಯ ಕೊಳೆ ಏಕೆ ಎಂದು ಕೊಂಡು ನಾನು ಅವರ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ಈ ವಿಷಯದ ಎಲ್ಲ ದಾಖಲೆಗಳನ್ನು ಹೋಗುವಾಗ ನನ್ನ ವಶಕ್ಕೆ ತೆಗೆದು ಕೊಂಡೆ.
ಅಂತೂ ಎಲ್ಲವೂ ಸುಖಾಂತ್ಯವಾಯಿತು. ಮೂರು ನಾಲಕ್ಕು ವರ್ಷ ವಾಗಿರಬಹುದು ನಂತರ ಆ ವ್ಯಕ್ತಿಯ ಹೆಸರು ಪತ್ರಿಕೆಯಲ್ಲಿ ಬಂದಿತು . ಬೇರೊಂದು ಶಾಲೆಯಲ್ಲಿ  ಇದೆ ಅರೋಪದ ಮೇಲೆ ಅಮಾನತ್ತಾಗಿದ್ದರು   “ಹೀನ ಸುಳಿ ಬೋಳಿಸಿದರೂ  ಹೋಗದು”  ಎಂಬ ಗಾದೆ ನೆನಪಿಗೆ ಬಂದಿತು





Thursday, May 16, 2013

ಆರರಿಂದ ಅರವತ್ತು ಸರಣಿ.-ಸಾವು ಗೆದ್ದ ಶ್ಯಾಮ್ಯುಯಲ್


ಸಾವು ಗೆದ್ದ ಶ್ಯಾಮ್ಯುಯಲ್
ಶ್ಯಾಮ್ಯುಯಲ್ ನಮ್ಮಲ್ಲಿ ಹೈಸ್ಕೂಲು ವಿಭಾಗದಲ್ಲಿನ ಕ್ರಾಫ್ಟ ಮಾಸ್ಟರ್‌. ಆಗಲೆ ಐವತ್ತರ ಮೇಲೆ ವಯಸ್ಸು.ತೋಟಗಾರಿಕೆ ಅವರ ಬೋಧನಾ ವಿಷಯ.ನಮ್ಮಲ್ಲಿನ ವಿಶೇಷ ಶಿಕ್ಷರೆಂದರೆ ಕ್ರಾಫ್ಟ್‌  , ಡ್ರಿಲ್‌ ಮತ್ತು ಹಿಂದಿ ಶಿಕ್ಷಕರು. ಮೊದಲಿನ ಎರಡು ವಿಷಯಗಳಿಗೆ ಪರೀಕ್ಷೆ ಇಲ್ಲ. ಹಿಂದಿ ಆಟ  ಕುಂಟು ಲೆಕ್ಕಕ್ಕೆ ಇಲ್ಲ. ಹೀಗಾಗಿ ಮಕ್ಕಳು ಅವನ್ನು ಗಂಭೀರವಾಗಿ ತೆಗೆದುಕೊಳ್ಳುವುದೂ ಇಲ್ಲ. ಶಿಕ್ಷಕರೂ ಕೂಡಾ ಅಷ್ಟಕಷ್ಟೆ. ಎಸ್‌ಎಸ್‌ಎಲ್ ಸಿ ಮಕ್ಕಳಿಗಂತೂ ಎರಡನೆ ಅವಧಿಯಲ್ಲಿನ  ಕ್ರಾಫ್ಟ ಪಿರಿಯೆಡ್‌ ಲೆಕ್ಕ ಇಂಗ್ಲಿಷ್‌ಗೆ ವಿಷಯದ ವಿಶೇಷ ತರಗತಿಗೆ ಮೀಸಲು. ಹಾಗಾಗಿ ಅವರು ಜಾಲಿ ಬರ್ಡ್ಸ .     ಸಾಧಾರಣವಾಗಿ ಶಾಲಾ ಆವರಣದ ಶಚಿತ್ವ ಮತ್ತು ಶಿಸ್ತಿನ ಉಸ್ತುವಾರಿ ಅವರ ಹೊಣೆ.ನಮ್ಮ ಮಾಷ್ಟರು ಅಂತೂ ಹಸು. ಏನೆ ಹೇಳಿದರೂ ಇಲ್ಲ ಎನ್ನುವ ಮಾತೆ ಇಲ್ಲ. ಆಯಿತು ಸಾರ್ ಎನ್ನುವರು. ಆದರೆ ಹೇಗೆ ಮಾಡುವರು , ಯಾವಾಗ ಕೆಲಸ ಮುಗಿಸುವರು ಅದು ಅವರಿಗೆ ಮಾತ್ರ ಗೊತ್ತು. ಅಲ್ಲದೆ ಅವರದು ಇನ್ನೊಂದು ಗುಣ. ಯಾವುದೆ ಕಾರಣಕ್ಕೂ ಮೂರು ಮಾರು ದೂರ ನಿಂತೆ ಮಾತನಾಡುವರು. ಮೊದಲು ಅದು ಅವರ ವಿನಯದ ಲಕ್ಷಣ ಎಂದುಕೊಂಡಿದ್ದೆ. ನಂತರ ತಿಳಿಯಿತು ಅವರು ಸದಾ  ಸೇವಿಸುವ ದ್ರವದ ವಾಸನೆ ಎದುರಿನವರಿಗೆ ಗೊತ್ತಾಗಬಾರದೆಂದು ಮುನ್ನೆಚ್ಚರಿಕೆ.ಆದರೆ ಮನುಷ್ಯ ಹೆಚ್ಚು ಮಾತನಾಡುತ್ತಿರಲಿಲ್ಲ. ತಾನಾಯಿತು ತನ್ನ ಪಾಡಾಯಿತು. ಅದೂ ಅಲ್ಲದೆ ಇದು ಇಂದು ನಿನ್ನೆಯದಲ್ಲ ಹತ್ತಾರು ವರ್ಷದಿಂದ ನಡೆದು ಬಂದ ರೂಢಿ.  ನಾನೂ ಹೇಳಿದ ಕೆಲಸ ಮಾಡುವರಲ್ಲ ಸಾಕು ಎಂದು ಕಂಡು ಸುಮ್ಮನಾದೆ.
 ಕಾಲೇಜು ಆವರಣವನ್ನು ಹಸಿರು ಮಯಮಾಡುವುದು ನನ್ನ ಹವ್ಯಾಸಗಳಲ್ಲಿ ಒಂದು . ಅದಕ್ಕಾಗಿ ಹೆಚ್ಚಿನ ಅನುದಾನ ಇರುವುದಿಲ್ಲ. ಆದರೆ ನಾನೆ ಅವರಿಗೆ ಲಾಲ್ ಬಾಗಿನಿಂದ ನರ್ಸರಿಯಲ್ಲಿ ಸಸಿಗಳನ್ನು ತರಿಸಿಕೊಟ್ಟೆ. ನಮ್ಮ ಸಸ್ಯ ಶಾಸ್ತ್ರದ ಉಪನ್ಯಾಸಕರಾದ ರಾಜು ಹೇಗಿದ್ದರೂ ಬೆಂಗಳೂರಿನಿಂದ ನಿತ್ಯ ಬರುವರು. ಅವರಿಗೆ ಆ ಕೆಲಸ ನೀಡಲಾಯಿತು.  ಶಿವಾನಂದ  ಇಂಗ್ಲಿಷ್‌ ಉಪನ್ಯಾಸಕರು ಹಳ್ಳಿಯ ಹಿನ್ನೆಲೆಯವರು. ಕಬ್ಬು ಕಡಿದು ಕೂಲಿಮಾಡಿ ಓದಿದವರು. ಅವರಿಗೆ ಮರಗಿಡ ಎಂದರೆ ಬಹು ಪ್ರಿತಿ . ಅವರನ್ನು ಎನ್‌ಎಸ್‌ಎಸ್‌ ಅಧಿಕಾರಿಯನ್ನಾಗಿ ಮಾಡಿ ಶಾಲಾ ವನದ ಹೊಣೆ ಹೊರಸಿದೆ. ಜತೆಗೆ ನಮ್ಮ ಮಾಷ್ಟರ್‌ ಇದ್ದೆ ಇದ್ದರು. ಬರಿ ಹಣ ಇದ್ದರೆ ಮಾತ್ರ ಹಸಿರು ಬೆಳೆಸುವುದು ಸುಳ್ಳು ಮಾತು ಅದಕ್ಕೆ ಪರಿಸರದ ಪ್ರೀತಿ ಅಗತ್ಯ. ಮಕ್ಕಳಿಗೆ ಸ್ಪೂರ್ತಿ ಮೂಡಿಸಲು  ಪ್ರತಿ ತರಗತಿಯಮಕ್ಕಳೂ ಐದು ಕುಂಡಗಳಲ್ಲಿ ಅಲಂಕಾರಿಕ ಸಸ್ಯಗಳನ್ನು ಬೆಳೆಸ ಬೇಕು. ಅವನ್ನು ತರಗತಿಯ ಮುಂದೆ ಇಟ್ಟು ನಿತ್ಯ ನೀರುಣಿಸಿ ಕಾಪಾಡಬೇಕು. ವಾರ್ಷಿಕೋತ್ಸವದ ಸಮಯದಲ್ಲಿ ಉತ್ತಮವಾದವಕ್ಕೆ  ಮೂರು ಬಹುಮಾನ ನೀಡಲಾಗುವುದು ಎಂದು ತರಗತಿಗೆ ಹೋಗಿ ತಿಳಿಸಲಾಯಿತು. ಅದರ ಮೇಲ್ವಿಚಾರಣೆಯನ್ನು ತರಗತಿಯ ಶಿಕ್ಷಕರಿಗೆ ವಹಿಸಲಾಯಿತು.ಮಕ್ಕಳು  ವಂತಿಗೆ ಹಾಕಿಕೊಂಡು ಪಾಟುಗಳನ್ನು  ತಂದು ಎಲ್ಲೆಲ್ಲಿಂದಲೋ ಅಲಂಕಾರಿಕ ಸಸಿ ತಂದು ನೆಟ್ಟರು. ಬಹು ಖುಷಿಯಿಂದ ಬೆಳಸಿದರು. ಮೂರೆ ತಿಂಗಳಲ್ಲಿ ಕಾಲೇಜಿನಲ್ಲಿ ಹಸಿರು ಮೂಡಿತು. ಅಷ್ಟೆ ಅಲ್ಲ ಬಣ್ಣದ ಹೂಗಳು ನಗ ಹತ್ತಿದವು.
ಸ್ಯಾಮ್ಯಯಲ್‌ ತಮ್ಮ ರಾಜ್ಯದಲ್ಲಿ ಅತಿಕ್ರಮಣ ವಾಗಿದೆ ಎಂದು ತುಸು ಕಸವಿಸಿ ಗೊಂಡರು  ಇತರೆ ಸಹೋದ್ಯೋಗಿಗಳು , ನೋಡಿ ನಿನ್ನ ಸೇವಾ ಅವಧಿಯಲ್ಲಿ ಇಷ್ಟು  ಬೆಳೆಸಿದ್ದೀರಾ ಅಂದರೆ  ಇದಕ್ಕೆಲ್ಲಾ ತಾಂತ್ರಿಕ ಸಲಹೆ ನೀಡಿದ್ದು ಯಾರು? ಎಂದು ಕೇಳಿ ನೆಮ್ಮದಿ ಪಡೆಯುವರು. ಆದರೆ ಆಸಕ್ತಿ ಮಾತ್ರ ಅಷ್ಟಕಷ್ಟೆ. ಅದೆ ರೀತಿ ಹೊರಗಿನ  ಆವರಣದಲ್ಲೂ ನೂರಾರು ಮರಗಳನ್ನು ನೆಡಲಾಯಿತು. ಆವರಣದ ಗೇಟಿಗೆ ಮೊದಲಬಾರಿಗೆ ಬಲವಾದ ಬೀಗ ಹಾಕಲಾಯಿತು.ದನಗಳ ದಾಳಿ ತಪ್ಪಿಸಲು.ಒಂದು ವಿಕೆಟ್‌ ಗೇಟ್‌ ನಿರ್ಮಿಸಿ ಜನರು ಮಾತ್ರ ಬರಲು  ಅವಕಾಶ ನೀಡಲಾಯಿತು.
ಶ್ಯಾಮ್ಯುಯಲ್‌ ಅವರ ಇನ್ನೊಂದು ಚಾಳಿ ತಡವಾಗಿ ಬರುವುದು ಮತ್ತು ಬೇಗ ಹೋಗುವುದು ಮತ್ತು ಪದೇ ಪದೇ ರಜ ಹಾಕುವುದು. ಕಾರಣ ವಿಚಾರಿಸಿದಾಗ ಅವರು ಅರೆಕಾಲಿಕ ವೈದ್ಯರೂ ಅಹುದು, ಹಳ್ಳಿಗಳ ಮೇಲೆ ಹೋಗುವರು , ಅಲ್ಲದೆ ಅವರ ಮನೆಗ ಸುತ್ತಲ ಹಳ್ಳಿಗಳ ರೋಗಿಗಳು ಬರುವುದರಿಂದ ಸಮಯ ಸಿಕ್ಕದು , ಎಂದು ತಿಳಿಯಿತು. ಅವರನ್ನು ಕರೆಸಿ ಅವರು ಸರಕಾರಿ ನೌಕರರು ಮೊದಲು ಕೆಲಸಕ್ಕೆ ಆದ್ಯತೆ. ಇನ್ನುಳಿದವಕ್ಕೆ ನಂತರ.. ಸತತ ಗೈರು ಹಾಜರಿಯನ್ನು ಸಹಿಸಲಾಗುವುದಿಲ್ಲ ಎಂಬ ಎಚ್ಚರಿಕೆ ಅವರನ್ನು ತುಸು ಹಾದಿಗೆ ತಂದಿತು.
 ಒಂದು ಸಲ ಎರಡು ದಿನವಾದರೂ ಆಸಾಮಿ  ಪತ್ತೆ ಇಲ್ಲ. ಅವರ ಊರಿನಿಂದ ಬರುತ್ತಲಿದ್ದವರನ್ನು ಕೇಳಿದಾಗ ಅವರು ಅಪಘಾತವಾಗಿ ನರ್ಸಿಂಗ್ ಹೋಮಿನಲ್ಲಿ ದಾಖಲಾಗಿದ್ದಾರೆ ,ಎಂದರು.
 ಪಾಪ ಹೇಗಾಯಿತು ? ಯಾವಾಗ ಆಯಿತು? ಎಂಬ ಪ್ರಶ್ನೆಗೆ ಮುಗುಳುನಗೆ ಉತ್ತರವಾಗಿತ್ತು.ಒಬ್ಬ ವ್ಯಕ್ತಿ ಅಪಾಯದ ಅಂಚಿನಲ್ಲಿದ್ದಾಗ ಇವರು ನಗುವರಲ್ಲ ಎಂದು ಬೇಸರವಾಯಿತು. ಅವರು ಹೇಳಿದರು.
ಪೆಟ್ಟು ಬಿದ್ದದ್ದು ಅಫಘಾತದಲ್ಲಿ ಅಲ್ಲ . ಅವರು ರಾತ್ರಿ ಹೆಚ್ಚು ಕುಡಿದು ಯಾರ ಕೈನಲ್ಲೋ ಹೊಡೆಸಿಕೊಂಡು ಆಸ್ಪತ್ರೆ ಸೇರಿದ್ದರು.
ಮಾಡಿದ್ದು ಉಣ್ಣೋ ಮಾರಾಯ, ವಿದ್ಯಾವಂತನಾದವನೂ ಈ ರೀತಿ ಮಾಡಿದರೆ ಏನು ಹೇಳುವುದು.
 ಎರಡು ದಿನ ಆದ ಮೇಲೆ ನಾನೂ ಇನ್ನೊಬ್ಬ ಉಪನ್ಯಾಸಕರ ಜೊತೆ ಅವರನ್ನು ನೋಡಲು ಹೋದೆ. ಅವರ ತಲೆಗೆ ಮೈ ಕೈಗೆ ಪೆಟ್ಟಾಗಿತ್ತು. ಹೆಚ್ಚು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.ಅದು ಅವರುತಮ್ಮ ಬಳಿ ಬಂದ ರೋಗಿಗಳಿಗೆ ಕಾಯಿಲೆ ತೀವ್ರವಾದರೆ ಕಳುಹಿಸುವ ಆಸ್ಪತ್ರೆ.  ಮುಲಾಜಿಗೆ ಅವರನ್ನು ದಾಖಲು ಮಾಡಿಕೊಂಡಿದ್ದರು. ಅಲ್ಲಿ ಸೌಕರ್ಯ, ಸೌಲಭ್ಯ ಇರಲಿಲ್ಲ. ಅವರಿಗೆ ಇನ್ನೂ ಉತ್ತಮ ಚಿಕಿತ್ಸೆಯ ಅಗತ್ಯವಿದೆ ಎನಿಸಿತು. ಅದನ್ನು ಅವರ ಮನೆಯವರಿಗೆ ಹೇಳಿ ಬಂದೆವು. ಎರಡು ದಿನ ಕಳೆಯಿತು. ಆಗ ಸುದ್ಧಿ ಬಂದಿತು. ಆ ನರ್ಸಿಂಗ್‌ ಹೋಂ ನವರು ಅವರನ್ನು ಚಿಕಿತ್ಸೆ ಮಾಡುವುದು ಆಗದು ಎಂದು ಡಿಸ್‌ಛಾರ್ಜ  ಮಾಡಿದ್ದರು. ಅವರನ್ನ ಮನೆಯಲ್ಲಿ ಹಾಕಿಕೊಂಡು ಮುಂದಿನದಕ್ಕೆ ಕಾಯುತ್ತಿದ್ದರು. ಅವರು ಕೋಮಾದಲ್ಲಿದ್ದಾರೆ. ಹೆಂಡತಿ ಅವಿದ್ಯಾವಂತೆ, ಮಕ್ಕಳು ನಿರುದ್ಯೋಗಿಗಗಳು, ನಂಟರು ಯಾರೂ ಹತ್ತಿರ ಸುಳಿದಿಲ್ಲ. ಅಂತಿಮ ಕ್ಷಣಕ್ಕಾಗಿ ಕಾಯುತ್ತಿರುವರು ಎಂದರು..
ಸರಕಾರಿ ನೌಕರನೊಬ್ಬನಿಗೆ ಈ ಸ್ಥಿತಿ ಬರಬಾರದು,ಯಾಕೆ ಹೀಗೆ ? ಎನಿಸಿತು ಸಿಬ್ಬಂದಿಯ ಸಭೆ ಕರೆದು ಶ್ಯಾಮ್ಯುಯಲ್ ಸಾವು ಬದುಕಿನ ಹೋರಾಟದಲ್ಲಿದ್ದಾರೆ ಅವರಿಗೆ ತಜ್ಞರಿಂದ ಚಿಕಿತ್ಸೆ ಕೊಡಿಸಬಹುದು. ನಿಮಾನ್ಹಸ್‌ ಗೆ ಹೋದರೆ ಬದುಕುವ ಅವಕಾಶವಿದೆ ಏಕೆ ಹೋಗುತ್ತಿಲ್ಲ? ಎಂದೆ.
ಅವರು ತಮ್ಮ ಚಟದಿಂದಾಗಿ ಸಾಲ ಸೋಲ ಹೆಚ್ಚು ಮಾಡಿದ್ದಾರೆ. ಯಾರಿಗೂ ವಾಪಸ್ಸು ಕೊಟ್ಟಲ್ಲ. ಮೇಲಾಗಿ ಸಹವಾಸ ಸರಿಯಿಲ್ಲ. ಮನೆಯವರು ರೋಸಿ ಹೋಗಿದ್ದಾರೆ. ಅವರಿಗೆ ಯಾರೂ ಸಹಾಯಮಾಡುವವರಿಲ್ಲ. ಹೇಗಿದ್ದರೂ ಸಾಯುವರು, , ಸುಮ್ಮನೆ ಬೆಂಗಳೂರಿಗೆ ಸೇರಿಸುವದರಿಂದ  ದುಡ್ಡ ದಂಡ , ಮೇಲಾಗಿ ಅವರಲ್ಲಿ ದುಡ್ಡೂ  ಇಲ್ಲ . ಕಾರಣ ಕೊಟ್ಟರು.
ಪರಿಸ್ಥಿತಿ ನೊಡಿ ಪಿಚ್‌ ಎನಿಸಿತು. ನಾನು ಎಲ್ಲರನ್ನೂ ಉದ್ದೇಶಿಸಿ ಹೇಳಿದೆ. ಅವನು ನಮ್ಮ ಸಹೋದ್ಯೋಗಿ ಏನಾದರೂ ಮಾಢಲೆ ಬೇಕಲ್ಲ?
 ಯಾರೂ ಮಾತನಡಲಿಲ್ಲ  ಒಬ್ಬಿಬ್ಬರು,ಈ ವರೆಗ ನಾವುಕೊಟ್ಟಿದ್ದನ್ನೆ ವಾಪಸ್ಸು ಕೊಟ್ಟಿಲ್ಲ. ಅವನಾಗಿ ಮಾಡಿಕೊಂಡದ್ದು. ಅನುಭವಿಸಲಿ, ಎಂದರು
ಇನ್ನು ಸುಮ್ಮನಿರುವುದ ತರವಲ್ಲ , ಆಧಿಕಾರಿಯಾಗಿಅಲ್ಲದಿದ್ದರೂ ಒಬ್ಬಮನುಷ್ಯನಾಗಿ ಮಾಡಲೇ ಬೇಕಾದ  ಸಮಯ ಎಂದು ಅವರಿಗೆಲ್ಲ ಹೇಳಿದೆ.
ಅವನು ಎಂಥವನು ಎನ್ನುವುದ ಈಗ ಲೆಕ್ಕಕಿಲ್ಲ. ಒಬ್ಬವ್ಯಕ್ತಿ ಸಾವಿ ಅಂಚಿನಲ್ಲಿದ್ದಾನೆ.  ಏನು ಕೊಟ್ಟರೂ ಜೀವ ಹೋದ ಮೇಲೆ ಬರಲುಸಾಧ್ಯವಿಲ್ಲ. ನಾವೆಲ್ಲ ಸೇರಿ ಅವನಿಗೆ ಹೆಚ್ಚಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡ ಬೇಕು,
ಚಿಕಿತ್ಸೆಗೆ ೪೦-೫೦ ಸಾವಿರ ರೂಪಾಯಿ ಬೇಕು. ಎಲ್ಲಿಂದ ತರುವುದು ನಾವು ಏನು ಮಾಡಲು ಸಾಧ್ಯ . ಆಗಲೆ ಅವನಿಗೆ ಕೊಟ್ಟು ಕೈ ಸುಟ್ಟು ಕೊಂಡದ್ದೇವೆ.. ಸರಿಯಾಗಿ ಇದ್ದಾಗಲೆ ಕೊಡದವ ಈಗ ಕೊಡುವನೆ. ದೇವರು ಇಟ್ಟಹಾಗೆ ಆಗುವುದು , ಎಂದು ಕೈ ಚೆಲ್ಲಿದರು.
ಆದರೆ ನನಗೆ ಏನಾದರೂ ಪರಿಹಾರ ಹುಡುಕಲೇ ಬೇಕು . ಅವನ ಜೀವ ಉಳಿಸಲು ಕೊನೆಯಪ್ರಯತ್ನ ಮಾಡಬೇಕು ಎನಿಸಿತು.
ನೋಡಿ ಅವರು ಎಂಥಹವರು ಎಂಬುದು ಮುಖ್ಯವಲ್ಲ. ಇದು ಜೀವದ , ಬದುಕಿನ ಪ್ರಶ್ನೆ . ನಾವಲ್ಲದೆ ಯಾರು ಸಹಾಯ ಮಾಡುವರು? ಅವರಿಗೆ ಕೊಟ್ಟ ಹಣ ಮರಳಿಸುವ ಹೊಣೆ ನನ್ನದು. ನಾನು ಐದು ಸಾವಿರ ಕೊಡುವೆ. ನೀವೆಲ್ಲರೂ ಕೊಡಿ. ಹೇಗಿದ್ದರೂ ಮೆಡಿಕಲ್‌ ರಿಇಂಬರ್ಸ ಮೆಂಟ್‌ ನಾನೆ ಮಾಡಬೇಕು. ಆಗ ನಾನು ಕೊಡುವೆ . ಅಕಸ್ಮಾತ್‌ ಗುಣ ವಾಗದಿದ್ದರೆ ಸರಕಾರದ ಸೌಲಭ್ಯಗಳು ಅವನ ಮನೆಯವರಿಗೆ ಬರುವವು. ಅದನ್ನು ನಾನೆ ಡ್ರಾ ಮಾಡಿ ಕೊಡಬೇಕು. ಅದರಲ್ಲಿ ಎಲ್ಲರ ಹಣ ವಾಪಸ್ಸು ಮಾಡಿಸುವೆ. ಈ ಬಗ್ಗೆ ಅವರ ಕುಟುಂಬದ ಒಪ್ಪಿಗೆ ಪಡೆಯುವೆ., ಎಂದೆ .ನಿಮ್ಮಹಣ ಕ್ಕೆ ನಾನು ಗ್ಯಾರಂಟಿ ಕೊಡುವೆ,ದಯಮಾಡಿ ಸಹಕರಿಸಿ, ವಿನಂತಿಸಿದೆ.
ಎಲ್ಲರೂ ಮುಖ  ಮುಖ ನೋಡಿಕೊಂಡರು ಹೊಸದಾಗಿ ಬಂದಿರುವ ನಾನೆ ಸಹಾಯ ಮಾಡಲು ಸಿದ್ಧನಾದಾಗ ಹತ್ತಾರು ವರ್ಷ ಜತೆಯಲ್ಲಿ ಕೆಲಸ ಮಾಡಿದ ಅವರಿಗೂ ಮನಕರಗಿತು. ಅಲ್ಲಿಯೇ ಸುಮಾರು ನಲವತ್ತು ಸಾವಿರ ಹನ ಸಂಗ್ರಹವಾಯಿತು.ಆದರೆ ಅವರ ಮನೆಯಲ್ಲಿ ಜವಾಬ್ದಾರಿ ಹೊರುವವರು ಯಾರೂ ಇರಲಿಲ್ಲ. ನಮ್ಮ ಶಾಲೆಯ  ಹಿರಿಯ ಸಹಾಯಕ ಅಬ್ದುಲ್‌ ಕರೀಂ ಅದೇ ಊರಿನವರು. ಅವರಿಗೆ ಬೇಂಗಳೂರಿನಲ್ಲಿ ನಿಮಾನ್ಹನ್ಸ ಆಸ್ಪತ್ರೆಯಲ್ಲಿ ಪರಿಚಿತರಿದ್ದರು. ಅವರಿಗೆ ಆಸ್ಪತ್ರೆಗೆ  ಸೇರಿಸುವ ಮತ್ತು ಹಣವನ್ನು ಔಷಧಿ ಉಪಚಾರಕ್ಕಾಗಿ ಮಾತ್ರ ಬಳಸುವಂತೆ ತಿಳಿಸಲಾಯಿತು. .
ತಕ್ಷಣ ಶ್ಯಾಮ್ಯುಯಲ್‌ ಅವರ  ಅವರ ಹೆಂಡತಿಯನ್ನು ಕರೆಸಿ ವಿಷಯ ತಿಳಿಸಿದಾಗ ಅವರು  ಎರಡು ಮಾತಿಲ್ಲದೆ ಒಪ್ಪಿ ಕೈ ಮುಗಿದರು.
ನಮ್ಮ ಹಿರಿಯ ಸಹಾಯಕರಿಗೆ ಆ ಆಸ್ಪತ್ರೆಯಲ್ಲಿ ಪರಿಚಿತರಿದ್ದರು. ಅವರಿಗೆ ಆಸ್ಪತ್ರೆ ಸೇರಿಸುವ ಹೊಣೆ ವಹಿಸಲಾಯಿತು. ಜತೆಗೆ ಎರಡುದಿನ ಬೆಂಗಳೂರಿನಲ್ಲಿದ್ದ ಕಚೇರಿಯ ಕೆಲಸವನ್ನೂ ಮಾಡಿಕೊಂಡು ಬರಲು ತಿಳಿಸಲಾಯಿತು. ಆ ಅವಧಿಯನ್ನು ಅನ್ಯ ಕರ್ತವ್ಯ ಎಂದು ಪರಿಗಣಿಸುವುದಾಗಿ ತಿಳಿಸಿದೆವು.
 ಈ ಎಲ್ಲ ಬೆಳವಣಿಗೆಯನ್ನು ಅರಿತ ಅವರ ಊರಿನವರೊಬ್ಬರು ಉಚಿತವಾಗಿ ಕಾರಿ ಕೊಡಲು ಒಪ್ಪಿದರು. ಅರೆ ಪ್ರಜ್ಙಾವಸ್ಥೆಯಲ್ಲಿದ್ದ ಅವರನ್ನು ಬೆಂಗಳೂರಿಗೆ ಸಾಗಿಸಲಾಯಿತು.
 ಕರೀಂ ಸಾಹೇಬರು ದಿನವೂ ದೂರವಾಣಿಯ ಮೂಲಕ ಅಲ್ಲಿನ ಬೆಳವಣಿಗೆ ತಿಳಿಸಿದರು. ಎಲ್ಲ ವ್ಯವಸ್ಥೆಯನ್ನು ಮಾಡಿ ಮೂರು ದಿನಗಳಲ್ಲಿ ಹಿಂತಿರುಗಿದರು. ಅವರಿಗೆ ಪ್ರಜ್ಞೆ  ಬಂದಿತ್ತು ಗುಣ ಮುಖರಾಗುತಿದ್ದರು.
ಇಪ್ಪತ್ತು ದಿನದ ನಂತರ ಶ್ಯಾಮ್ಯುಯಲ್‌ ಹೆಂಡತಿಯೊಡನೆ ಕಾಲೇಜಿಗೆಬಂದರು.ತುಂಬ ಇಳಿದು ಹೋಗಿದ್ದರು.
ಈಗ ಕಾಲೇಜಿಗೆ ಯಾಕೆ ಬಂದಿರಿ . ವಿಶ್ರಾಂತಿ ತೆಗೆದುಕೊಳ್ಳಬೇಕು ಮನೆಗ ಹೋಗಿ , ಎಲ್ಲರದೂ ಒಕ್ಕೊರಳಿನ ಒತ್ತಾಯ.
ಅವರು ಕಣ್ತುಂಬಾ ನೀರು ತಂದುಕೊಂಡು ಕೈ ಮುಗಿದು ಮನೆಗೆ ಮರಳಿದರು.
 ತಿಂಗಳೊಪ್ಪತ್ತಿನಲ್ಲಿ ಪೂರ್ಣ ಗುಣ ಮುಖರಾದರು. ಕಾಲೇಜಿಗೂ ಹಾಜರಾಗ ತೊಡಗಿದರು. ಅವರಿಗೆ ಹೆಚ್ಚು ಶ್ರಮ ಮಾಡಿಕೊಳ್ಳದೆ ಅರಾಮಾಗಿ ಇರಲು ವ್ಯವಸ್ಥೆ ಮಾಡಲಾಯಿತು. ನಮ್ಮ ಗುಮಾಸ್ತರನ್ನು ಖುದ್ದಾಗಿ ಕಳುಹಿಸಿ ಅವರ ವೈದ್ಯಕೀಯ ವೆಚ್ಚದ ಬಿಲ್ಲು ಮಾಡಿಸಲಾಯಿತು. ಹಣವೂ ಬಂದಿತು. ಅದು ಬಂದ ತಕ್ಷಣ  ಅವರು ಎಲ್ಲ ಹಣವನ್ನು ನನ್ನಮೇಜಿನ ಮೇಲೆ ಇರಿಸಿ ದಯಮಾಡಿ ಎಲ್ಲರೀಗೂ ಅವರವರ  ಬಾಕಿಯನ್ನು ವಾಪಸ್ಸು ಮಾಡಲು ತಿಳಿಸಿದರು. ನಾನು ನಮ್ಮ  ಗುಮಾಸ್ತರನ್ನು ಕರೆದು ಅವರಲ್ಲಿದ್ದ ದಾಖಲೆಯ ಪ್ರಕಾರ ಹಣ ಹಿಂತಿರುಗಿಸಲು ತಿಳಿಸಿದೆ. ಸಂಜೆ ಗೆ ನಮ್ಮ ಗುಮಾಸ್ತರು ಬಂದರು.
 ಸಾರ್‌, ಯಾರೂ ಹಣ ಪಡೆಯಲು ಒಪ್ಪತ್ತಿಲ್ಲ. ಅವರಿಗೆ ವಾಪಸ್ಸು ಮಾಡುವುದು  ಬೇಡ ವಂತೆ, ಎಂದರು. ಎಲ್ಲರನ್ನೂ ನನ್ನ ಛೇಂಬರಿಗೆದೆ.
  ಕರೆಸಿ ಯಾಕೆ ಹೀಗೆ? , ಹಣ ಬಂದಿದೆ. ಏನೂ ತೊಂದರೆಇಲ್ಲ ವಾಪಸ್ಸು ಪಡೆಯಿರಿ.
ಇಲ್ಲ ಸಾರ್ ಏನೋ ಆಗ ಹಾಗೆ ಅಂದಿದ್ದವು. ಆದರೆ ಅವರ ಪ್ರಾಣ ಉಳಿಯಿತಲ್ಲ ಅದೆ ನಮಗೆ ದೊಡ್ಡದು. ಹಣ ಬೇಡ. ಅದನ್ನು ಅವರು ತಮ್ಮ ಆರೈಕೆಗೆ ಬಳಸಲಿ, ಎಂದರು
ಶ್ಯಾಮ್ಯುಯಲ್ ಕರೆಸಿದೆ. ಅವರ ಜತೆ ಹಂಡತಿಯೂ ಇದ್ದರು. ವಿಷಯ ತಿಳಿಸಿದೆ. ಅವರು ಅಳ ತೊಡಗಿದರು. ಹೇಗಾದರೂ ಮಾಡಿ ವಾಪಸ್ಸು ಕೊಡಿಸಿ, ಹೊತ್ತಿನಲ್ಲಿ ಕೊಟ್ಟು ಉಪಕಾರ ಮಾಡಿರುವುರು . ಜೀವ ಉಳಿಸಿರುವರು,ಎನ್ನುತ್ತಾ ಬಿಕ್ಕತೊಡಗಿದರು,
ಅವರು ಬೇಡ ಎನ್ನುತ್ತಿದ್ದಾರೆ , ಇವರು ಕೊಡುವೆ ಎನ್ನುತಿದ್ದಾರೆ , ನನಗೆ ಏನೂ ಮಾಡಲು ತೋಚಲಿಲ್ಲ.
ತುಸು ಹೊತ್ತಿನ ನಂತರ ಹೇಳಿದೆ. ನಾನು ಒಂದು ಮಾತು ಹೇಳುವೆ. ನೀವೆಲ್ಲರೂ ಕೇಳ ಬೇಕು. ಏನಂತಿರಾ ?
ಆಯ್ತು ಸಾರ್‌ ನೀವೆ ತೀರ್ಮಾನ ಮಾಡಿ. ಅದರಂತೆ ನಡೆದುಕೊಳ್ಳುವೆವು.
ಸರಿ , ಕೊಡದಿದ್ದರೆ  ಶ್ಯಾಮ್ಯುಯಲ್‌ ಗೆ ಸಂಕೋಚ. ನಿಮಗೆ ಪಡೆಯಲು ಮನಸ್ಸಿಲ್ಲ. ಅದಕ್ಕೆ ಒಂದು ಕೆಲಸ ಮಾಡೋಣ. ಎಲ್ಲರೂ ತಾವು ಕೊಟ್ಟ ಹಣದಲ್ಲಿ ಅರ್ಧ ಮಾತ್ರ ಹಿಂದೆ ಪಡೆಯಲಿ. ಇನ್ನುಳಿದ ಇಪ್ಪತ್ತು ಸಾವಿರವನ್ನು ಸ್ಯಾಮ್ಯುಯಲ್‌ ಆರೈಕೆಗೆ ಬಳಸಲಿ. ಎಲ್ಲರೂ ತೃಪ್ತಿಯಿಂದ ತಲೆ ಯಾಡಿಸಿದರು.
ಶ್ಯಾಮ್ಯುಯಲ್‌ ಹೊಸ ಮನುಷ್ಯನೆ ಆದ.  ಈ ವಿಷಯ ತಮ್ಮಚರ್ಚಿ ನಲ್ಲೂ ತಿಳಿದರಂತೆ. ನನಗೆ ಹಾರ್ಟ ಆಪರೇಷನ್‌ ಆದಾಗ ನಿತ್ಯವೂ  ಅಸ್ಪತ್ರೆಗೆ ನೋಡಲು ಬಿಡದಿದ್ದರೂ  ಭೇಟಿ ಕೊಡುತಿದ್ದರಂತೆ. ಅಲ್ಲದೆ ಚರ್ಚಿನಲ್ಲೂ ನನ್ನ ಆರೋಗ್ಯಕ್ಕಾಗಿ ವಿಶೇಷ  ಸಾಮೂಹಿಕ ಪ್ರಾರ್ಥನೆ ಮಾಡಿಸಿದರಂತೆ..ಕಾಲನ ಪಿಸಿಕೊಂಡ ಶ್ಯಾಮ್ಯುಯಲ್‌ನಂತರ ನಿವೃತ್ತರಾಗುವ ವರೆಗೂ ನೆಮ್ಮದಿಯ ಜೀವನ  ನಡೆಸಿದರು.